ಪುಟ:ನಡೆದದ್ದೇ ದಾರಿ.pdf/೨೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೪೮ ನಡೆದದ್ದೇ ದಾರಿ ಇನ್ನೂ ಬಂದಿಲ್ಲ. ಆದರ ಬರೋ ಹಾಂಗ ಕಾಣಸ್ತದ, ನಾಳೆ ಬರಬಹುದು. ಅದಕ್ಕೆ ಮೊದಲ ಡಾಕ್ಟರನ್ನ ಕರೆಸಿ ಗುಳಿಗಿ-ಔಷಧ ತಗೊಳ್ಳೂದು ಛಲೋ ಸ್ವಲ್ಪ ನನ್ನ ಕಾಲು ಒತ್ತು. ಹಣೆಗೆ ಒಂದಿಷ್ಟು ವಿಕ್ಸ್ ವೈಪೊರಬ್ ಹಚ್ಚಿ ತಿಕ್ಕು. ಒಂದಿಷ್ಟು ರವಾದ ಪಾಯಸಾ ಮಾಡಿಕೊಡು. ಬಿಸಿನೀರು ಕಾಯಿಸಿಕೊಂಡು ಬಾ. ಲೀವ್ ಲೆಟರ್ ಕಳಸು ನಿನ್ನ ಸುಡುಗಾಡು ಬ್ಯಾಂಕಿಗೆ.... ಆಹ್ ! ಓಹ್ ! ಅಮಾ ! ಆದೇನು ಥರ್ಮಾಮೀಟರ್ ಹಚ್ಚಿ ನೋಡತೀ, ನಾರ್ಮಲ್ ಆದನು ? ನಿನ್ನ ತಲಿ, ನನಗ ಜ್ವರಾ ಬರತಾವ ಆನಸ್ಸಿಕದ ಅಂತ ಹೇಳ್ತಿನಲ್ಲs ? ಹೋಗು ಮೊದಲ ಡಾಕ್ಟರನ್ನ ಕರಕೊಂಡ ಬಾ...." “ಅಲ್ಲ... ಸರೋಜಿ, ಯಾವಾಗ ಸಣ್ಣಮುಖಾ ಮಾಡಿಕೊಂಡು ಕೂಡ್ಲಿಕ್ಕೆ ಏನ ಧಾಡಿ ಆಗೇದ ನಿನಗ ? ನನ್ನಂಥಾ ದೊಡ್ಡ ಅಧಿಕಾರದಾಗಿರೋ ಗಂಡ ಇದ್ದಾನ, ಮಕ್ಕಳು ಸೆಟಲ್ ಆಗ್ಯಾರ. ದೊಡ್ಡ ಮನಿ, ಕಾರು, ವಸ್ತ್ರಾ-ವಡಿವಿ ಎಲ್ಲಾ ಆವ. ನನ್ನಂಥಾ ಗಂಡ ಸಿಗ್ಲಿಕ್ಕೆ ನೀ ಪುಣ್ಯಾ ಮಾಡೀದಿ. ನನ್ನಿಂದ ನಿನಗ ಎಷ್ಟ ಉಪಕಾರ ಆಗೇದ, ಉಪಯೋಗ ಆಗೇದ, ಎಂದರೆ ತಿಳಕೋತೀಯೇನು ?

“ಮಮೀ ಇನ್ನೂ ನಿದ್ದೀ ಮಂಪರಿನ್ಯಾಗ ಇದ್ದಾಂಗ ಕಾಣಸ್ತದ", ಹೊರಗಿನಿಂದ ಮಗಳ ದನಿ. “ಆದರ ಇನ್ನೂ ಎಷ್ಟೊತ್ತು ಅಂತ dead body ಇಟಗೊಂಡು ಕೂಡೋದು ? ಮುಂದಿನ ಕೆಲಸ ಆಗಬೇಕಲ್ಲ ? ರಾಜೂ, ನೀ ಹೋಗಿ ಸಾವಕಾಶ ನಿನ್ನ ತಾಯಿಯವರನ್ನ ಹೊರಗ ಕರಕೊಂಡು ಬಾ. ನಿನ್ನ ತಂದೆಯವರ ದೇಹದ ಹತ್ತಿರ ಐದ ಮಿನಿಟು ಕೂಡಿಸು. ಎಲ್ಲಾ ಶಾಸ್ತ್ರ ಆಗಬೇಕಲ್ಲ. ಆದಷ್ಟು ಸಂಕ್ಷಿಪ್ತ ಮಾಡಿದ್ರಾತು. -ಹಿರಿಯರೊಬ್ಬರ ಅನುಕಂಪವೂರಿತ ಸೂಚನೆ. “ಅಯ್ಯೋ ದೇವರೆ, ಮಮೀ ಇದನ್ನೆಲ್ಲಾ ಹ್ಯಾಂಗ ತಡಕೋಬೇಕು!" ಮಕ್ಕಳ ಅಳಲು. - “ಏನು ಮಾಡೋದರೆಪಾ, ಆ ಪುಣ್ಯಾತ್ಮನ ಆಯುಷ್ಯ ಮುಗೀತು. ದೇವರ ಪಾದಾ ಸೇರಿದ್ರು. ಹೊರಗಿನ ಮಂದೀಗೇ ಇದು ತುಂಬಿಬಾರದ ಹಾನಿ ಅನಸ್ತದ. ಅಂಥಾದ್ರಾಗ ನಿಮ್ಮ ತಾಯಿಗೆ ಹ್ಯಾಂಗನಸ್ತಿರಬೇಕು, ಪಾಪ, ಗಂಡ ಅಂದರ ದೇವರು ಅಂತ ತಿಳಿಕೊಂಡ ಹೆಣ್ಮಗಳು." “ಅಣ್ಣಾ, ನೀನು ಹೋಗಿ ಗಟ್ಟಿ ಮನಸ್ಸು ಮಾಡಿ ಮಮೀನ್ನ ಎಬ್ಬಿಸಿ ಕರಕೊಂಡ ಬಾ" -ಮಗಳ ಅಳುದನಿ.