________________
ಹಸಿವು / ಕಾಯುತ್ತಲಿದ್ದ ಕರಿಯ.... ೨೧೫ ಇಬ್ಬರು ಹುಡುಗಿಯರಿಗೂ ಬಟ್ಟೆಬರೆ, ಪುಸ್ತಕ, ಮತ್ತಿತರ ಆವಶ್ಯಕ ಸಾಮಾನುಗಳನ್ನೆಲ್ಲಾ ಗೌಡರೇ ಕೊಡಿಸಿದರು. ಹೊರಡುವವರೆಗೂ ಎಲ್ಲಿಲ್ಲದ ಸಂಭ್ರಮ, ಗಡಿಬಿಡಿ ಇಬ್ಬರಿಗೂ. ಎಲ್ಲ ಗೆಳತಿಯರನ್ನು, ಪ್ರೊಫೆಸರುಗಳನ್ನು, ಪರಿಚಿತರನ್ನು ಭೆಟ್ಟಿಯಾಗಿ ಬರುವುದು, ಆ-ಈ ಸರ್ಟಿಫಿಕೇಟುಮಾರ್ಕ್ಸ್ ಕಾರ್ಡುಗಳನ್ನು ಹೊಂದಿಸಿಕೊಳ್ಳುವುದು, ಸೀರೆಗಳಿಗೆ ಇಸ್ತ್ರಿ ತೀಡುವುದು, ಒಂದೇ ಎರಡೇ, ನೂರೆಂಟು ಕೆಲಸಗಳು, ಸಾಕಷ್ಟು ವಯಸ್ಸಾಗಿದ್ದ ಗೌಡರು ದೊಡ್ಡ ಮನಸ್ಸಿನಿಂದ ಲಕ್ಷ್ಮಿಯನ್ನೂ ಮಗಳಂತೆಯೇ ಭಾವಿಸಿ ಸ್ವತಃ ಅವಳ ಬೇಡಿಕೆಗಳನ್ನು ಪೂರೈಸಿದರು. ತಾನೇ ಹೋಗಿ ಮೂವರಿಗೂ ಟ್ರೇನಿನಲ್ಲಿ ಸೀಟು ರಿರುಲ್ವೇಶನ್ ಮಾಡಿಸಿಕೊಂಡು ಬಂದರು. ಉಂಡಿ -ಅವಲಕ್ಕಿಗಳ ಡಬ್ಬಿಗಳು, ಚಟ್ಟಿ ಪುಡಿಉಪ್ಪಿನಕಾಯಿಯ ಬಾಟ್ಲಿಗಳು ತಯಾರಾದವು. ಕರಿಯ ಎಲ್ಲದಕ್ಕೂ ಮೂಕಪ್ರೇಕ್ಷಕನಾಗಿದ್ದ. ಈಗೀಗ ಮಗಳು ಆತನೊಡನೆ ಮುಖಕೊಟ್ಟು ಮಾತನಾಡುವುದನ್ನೇ ನಿಲ್ಲಿಸಿದ್ದಳು. ಹೊರಡುವ ದಿನ ಆತನೂ ಕಂಬಳಿ ಹೊದ್ದು ಸ್ಟೇಶನ್ನಿನ ವರೆಗೆ ಹೊರಡಲು ತಯಾರಾದಾಗ ಮಾತ್ರ, 'ಬ್ಯಾಡ ಅಪ್ಪ, ಹ್ಯಾಂಗೂ ಕಾಕಾ ಅವು (ಆಕೆ ಗೌಡರನ್ನು ಹಾಗೆ ಸಂಬೋಧಿಸುತ್ತಿದ್ದಳು) ಮುಂಬೈ ತನಕಾ ಬಾರಲ್ಲ, ನೀಯೇನು ಸ್ಟೇಶನ್ನಿಗೆ ಬರಬ್ಯಾಡ,' ಅಂತ ಖಂಡಿತವಾಗಿ ಹೇಳಿದಳು. ಹೌದಲ್ಲ, ಸ್ಟೇಶನ್ನಿಗೆ ಅವಳ ಸ್ನೇಹಿತರು ಯಾರಾರು ಬರುವವರಿದ್ದಾರೋ, ತಾನು ಹೋಗುವುದು ಸರಿಯಾಗಲಿಕ್ಕಿಲ್ಲ, ಮಗಳು ಹೇಳಿದ್ದು ಬರಾಬ್ಬರಿ, ಅಂತಂದುಕೊಂಡ. “ಓಗಿ ಬಾ ಮಗಾ, ಚೆಂದಾಗಿ ಓದಿ ದಾಗ್ಗರಾಗು, ಬಗವಂತ ನಿನ್ನ ಕಾಪಾಡ್ಡಿ,' ಅಂತ ಅವಳನ್ನು ಹರಸಿದ. 'ಮುಂಬಯಿಯೇನು ದೂರಲ್ಲ ಕರಿಯಾ, ಹ್ಯಾಂಗೂ ನಮ್ಮ ಮಗಾ ರಮೇಶ ಅಲ್ಲೇ ಆದಾನಲ್ಲಾ, ಸುಜಾತಾನೂ ಜೋಡೀ ಆದಾಳು. ನಿನ್ಮಗಳು ಆರಾಮ ಇರಾಳು. ನೀಯೇನೂ ಚಿಂತಿ ಮಾಡಬ್ಯಾಡ', ಅಂತ ಗೌಡರು ಸಂತಯಿಸಿದರು. ಮಗಳನ್ನು ಹೊತ್ತ ಕಾರು ಕಣ್ಮರೆಯಾಗುವವರೆಗೂ ನೋಡುತ್ತಿದ್ದ ಕರಿಯ ಕಾರಿನ ಧೂಳೂ ಕಾಣಿಸದಂತಾದಾಗ ಶೂನ್ಯವಾಗಿ ತನ್ನ ಮನೆಗೆ ಬಂದ. ನಾಲ್ಲೂ ಗೋಡೆಗಳು ಕಿತ್ತು ತಿನ್ನುವಂತೆನಿಸಿ ಗಟ್ಟಿಯಾಗಿ ಕಣ್ಣು ಮುಚ್ಚಿಕೊಂಡ. ಒಳಗೆ-ಹೊರಗೆ ಎಲ್ಲ ಬರಿದೋ ಬರಿದೆನಿಸಿ ತಡೆಯಲಾಗದೆ ಬಿಕ್ಕಿ ಬಿಕ್ಕಿ ಅತ್ತುಬಿಟ್ಟ. ಹಾಗೆ ಹೋದ ಕರಿಯನ ಮಗಳು ಮೊದಲ ವರ್ಷದ ಪರೀಕ್ಷೆ ಮುಗಿಯುವ ವರೆಗೂ ವಿಜಾಪುರಕ್ಕೆ ಬರಲೇ ಇಲ್ಲ. ಅವಳಿಗೆ ಸ್ಕಾಲರ್ಶಿಪ್ಪು-ಫೀಶಿಪ್ಪು ಇತ್ಯಾದಿ