||
ಧನವಿರಲು ಧರ್ಮಮಾರ್ಗವ ಬಿಟ್ಟು ಮದವೇರಿ
ತನಗಾರು ಸರಿಯಿಲ್ಲವೆಂದು ಗರ್ವಿಸುತಿರಲು
ಮನೆಗೆ ಯಾಚಕರು ಬರಲವರಿಗೊಂದರೆಕಾಸು ಕೊಡದೆ ಹೊರಯಿಕೆ ಹಾಕಿಸಿ
ಮನಕೆ ಬಂದಂತೆ ಸುಜ್ಞಾನಿಗಳ ನಿಂದಿಸುತ
ಘನಮಹೋನ್ನತದ ಬಲುದುರ್ಜನರ ಚಾರಿತ್ರ
ವನು ಪೇಳಲಭವಲ್ಲ ನಿಜಲಿಂಗ ಭವಭಂಗ ಶರಣಜನವರದ ಜಯತು | ೮೩ ||
ಸಲೆ ನಂಬಿದರೊಳೆರಡನೆಣಿಸುವರು ಕೈವಿಡಿದು
ಸಲಹಿ ದೊಡ್ಡವನ ಮಾಡಿದನ ಲೆಕ್ಕಿಸದಿಹರು
ಬಲುಸವಿಯ ಬಾಯಿಂದ ಪೋಣಿಸುವರಾತ್ಮದೊಳಗವಗುಣವ ಸೇರಿಸಿಹರು
ಹೊಲೆಮನದ ವಿಶ್ವಾಸಘಾತಕರು ಪಾತಕರು
ಕುಲಹೀನರುಗಳು ಖಳರು ತಾವೇ ತಾವಾಗಿ
ನೆಲಸಿಹರು ಭೂಮಿಯೊಳು ನಿಜಲಿಂಗ ಭವಭಂಗ ಶರಣಜನವರದ ಜಯತು | ೮೪ ||
ನೀತಿಯನು ಹಿಡಿಯಲೊಲ್ಲರು ಗುರುಹಿರಿಯರುಗಳ
ಮಾತ್ರ ಕೇಳರುತಿ ಸಜ್ಜನರನು ದೂಷಿಸುತಿಹರು
ಮಾತಪಿತರನು ಬೈದು ಬಳಲಿಸುವ ದುರ್ಜನರೊಳೆಂತು ಜೀವಿಸಲುಬೇಕು
ಭೂತ೩ನಾಯಕ ನೀನು೩ ಮೋಕ್ಷದಾಯಕನೆಂದು
ನಾ ತಿಳಿದು ನಿನ್ನ ಪಾದಾಬ್ಬವನು ನಂಬಿದೆನು
ಓತು ಸಲಹುವುದಯ್ಯ ನಿಜಲಿಂಗ ಭವಭಂಗ ಶರಣಜನವರದ ಜಯತು | ೮೫
||
ಶಿವ ನಿಮ್ಮ ಚರಣಾರವಿಂದವನು ನೆರೆ ನಂಬಿ
ಭವಕಡಲನುತ್ತರಿಸಿ ನಿತ್ಯಪದವಿಯ ಸಾಧ
ನವ ಮಾಡಬೇಕೆಂಬ ಸದ್ಗುಣವು ಪಿರಿದು ಸುಕೃತವ ಮಾಡಿದರಿಗಲ್ಲದೆ
ಕವಲುಗೊಂಡಿಹ ಮನದ ನರಕಿಗಳಿಗೆಲ್ಲರಿಗೆ
ಧವಳಾಂಗ ನಿನ್ನ ನಾಮಾಮೃತವು ಬರಲುಂಟೆ