ರವಿಕೊಟಿಸನ್ನಿಭನೆ ನಿಜಲಿಂಗ ಭವಭಂಗ ಶರಣಜನವರದ ಜಯತು || ೮೬
||
ಮಲಯಜದ ಪರಿಮಳ ಸೂಕರಗೆ ತಿಳಿಯುಂಟೆ
ಜಲಜಾತಪರಿಮಳವು ಮರಿಕಗೆ ತಿಳಿಯುಂಟೆ
ಚೆಲುವ ಮುತ್ತಿನ ಸರವು ಮರ್ಕಟಗೆ ತಿಳಿಯುಂಟೆ ಮಧುರಸ್ವರ ಗೂಗೆಗುಂಟೆ
ಲಲಿತವೀಣೆಯ ಧ್ವನಿಯು ಕೊಣಂಗೆ ತಿಳಿಯುಂಟೆ
ಮಲಹರನೆ ನಿನ್ನ ಭಜನೆಯ ಮಾಡುವರೆ ಪೂರ್ವ
ದಲಿ ಪಡೆಯದರಿಗುಂಟೆ ನಿಜಲಿಂಗ ಭವಭಂಗ ಶರಣಜನವರದ ಜಯತು || ೭
||
ಅರಗಿಳಿಗಳಂತೆ ಮರಕುಟಿಕಗೆ ಮಾತಾಡುವುದೆ
ತುರಗನಂದದಲಿ ಗಾರ್ದಭನು ನಲಿದಾಡುವುದೆ
ಮೆರೆವ ಹಂಸನ ತೆರದಿ ಬಕನು ನೀರುಳು ಕೀರವನ್ನು ಸೇವಿಸಬಲ್ಲುದೆ
ವರಕೊಕಿಲನ ತೆರದಿ ಕಾಕ ಧ್ವನಿದೊರುವುದೆ
ಪರಮಭಕ್ತರು ನಿನ್ನ ಧ್ಯಾನವನು ಮಾಪ್ಟಂತೆ
ನರಕಿಗಳಿಗರಿವುಂಟೆ ನಿಜಲಿಂಗ ಭವಭಂಗ ಶರಣಜನವರದ ಜಯತು || ೮೮
||
ಕುರಿಗಳಿಗೆ ಕಬ್ಬಿನೊಳಗಿಹ ರಸವು ಬರಲುಂಟೆ
ಖರಗಳಿಗೆ ತೆಂಗಿನೊಳಗಿಹ ನೀರು ಬರಲುಂಟೆ
ಹರಿದು ರಕ್ತವ ಕುಡಿವ ಉಣ್ಣಿಗಳಿಗೆಲ್ಲ ಗೋವಿನ ಕ್ಷೀರ ಬರುವುದುಂಟೆ
ಹರನೆ ಶಿಭವಹರನೆ ಯಮಹರನೆ ಸ್ಮರಹರನೆ ಪುರ
ಹರನೆ ಶಿರಕರನೆ ನಿನ್ನಯ ದಿವ್ಯ ಸ್ಮರಣೆಯದು
ಬರಲುಂಟೆ*[ಪಾತಕಿಗೆ] ನಿಜಲಿಂಗ ಭವಭಂಗ ಶರಣಜನವರದ ಜಯತು || ೮೯
||
ಶಿಲೆಯ ಮೇಲರವಿಂದವುವಿಸಿ ತೋರುವುದೆ
ಚೆಲುವ ಮುಕ್ತಾಫಲವು ಬೆಂಚೆಯೊಳಗಿರುತಿಹುದೆ?೪