ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೧೩

ಸಿಂಧಪ್ರಾಂತಕ್ಕೆ ಅರಬರ ದಾಳಿ.

ಮುಂದಕ್ಕೆ ನಡೆದಿರಲು ದಾರಿಯಲ್ಲಿಯೇ ಲಲಿತಾದಿತ್ಯನು ಮಡಿದುದರಿಂದ ಅವನ ಮಹತ್ವಾಕಾಂಕ್ಷೆಯು ಅಲ್ಲಿಗೇನೇ ಕೊನೆಯಾಯಿತು. ಲಲಿತಾದಿತ್ಯನ ತರುವಾಯ ಆತನ ಮುಮ್ಮಗನಾದ ಜಯಾಪೀಡನು ನಿಜವಾಗಿಯೇ ತನ್ನಜ್ಜನ ಹಸರುಳಿಸಿದನು. ಜಯಾಪೀಡನು ಶೂರನಿದ್ದುದರಿಂದ ಪಂತಗೌಡರನ್ನು ಸೋಲಿಸಿದ್ದಲ್ಲದೆ ಕನೋಜದ ಅಮೂಲ್ಯವಾದ ಸಿ೦ಹಾಸನವನ್ನು ಕಾಶ್ಮೀರಕ್ಕೆ ತಂದನು. ಈತನು ಸ್ವತಃ ವಿದ್ವಾಂಸನಿದ್ದುದರಿಂದ ಈತನಾಳಿಕೆಯಲ್ಲಿ ಕಾಶ್ಮೀರದೇಶವು ಸರಸ್ವತಿಯ ವಿಹಾರಭೂಮಿಯಾಯಿತು. ಆದರೆ ಮುಂದೆ ಆತನಿಗೆ ಅಹಂಕಾರವು ಒಂದು ಮುತ್ತಿದರಿಂದ ಪ್ರಜೆಗಳ ಶಾಪ ತಗಲಿ ಮಡಿದು ಹೋದ ನಂತರ ಉತ್ಪಲಮನೆತನದವರು ಕಾಶ್ಮೀರದ ಪಟ್ಟವನ್ನು ತಮ್ಮ ವಶಕ್ಕೆ ತೆಗೆದುಕೊಂಡು ಅಳತೊಡಗಿದರು.

ಸಿ೦ಧಪ್ರಾಂತಕ್ಕೆ ಅರಬರ ದಾಳಿ:- ಹರ್ಷವರ್ಧನನು ಉತ್ತರದ ಚಕ್ರವರ್ತಿಯಾಗಿ ಆಳುತ್ತಿರುವಾಗ ಸಿ೦ಧದೇಶವನ್ನು ಮೌರ್ಯ ವಂಶದ ಸಾಹಸೀರಾಯನೆಂಬ ಶೂದ್ರ ರಾಜನಾಳುತ್ತಿದನು. ಈತರು ಬೌದ್ಧ. ಈತನ ಪ್ರಜೆಗಳೂ ಬೌದ್ಧರು. ಈತನಿಗಾರೂ ಮಕ್ಕಳಿಲ್ಲದ್ದರಿಂದ ಈತನ ತರುವಾಯ ಮಂತ್ರಿಯಾದ ಚಚನೆಂಬ ಬ್ರಾಮ್ಹಣನು ಸಿ೦ಧ ರಾಜ್ಯವನ್ನು ಬಲುಮೆಯಿಂದ ತಾನೇ ಅಳತೊಡಗಿದನು. ಚಚನು ದುಷ್ಟ ಬುದ್ಧಿಯಿದ್ದರೂ ರಾಜತಂತ್ರಗಾರ. ಕರ್ತೃತ್ವಶಾಲಿ. ಈತನು ತನ್ನ ಪರಾಕ್ರಮ ದಿಂದ ಉತ್ತರದಲ್ಲಿಯ ಹಲವು ರಾಜ್ಯಗಳನ್ನು ತನ್ನ ರಾಜ್ಯಕ್ಕೆ ಒಳಪಡಿಸಿಕೊಂಡು ನೆಲೆಯಾಗಿ ಆಳಿದನು. ಈತನು ವೈದಿಕಧರ್ಮಾಭಿಮಾನಿಯಿದ್ದುದರಿಂದ ಬೌದ್ಧ ಧರ್ಮವನ್ನು ದೇಶಾಂತರಕ್ಕೆ ಓಡಿಸಲು ಪ್ರಯತ್ನ ಪಟ್ಟನು. ಮತ್ತೆ ಕೆಲಮಟ್ಟಿಗೆ ಆತನ ಮನೀಷೆಯೂ ಸಾರ್ಧಕವಾಯಿತೆನ್ನಲಿಕ್ಕೆ ಕಾರಣಗಳಿವೆ. ಚಚನ ತರುವಾಯ ಆತನ ಮಗನಾದ ದಾಹರನು ಪಟ್ಟವೇರಿದನು. ದಾಹರನು ಬಲಾಢ್ಯನು. ತನಗೆ ಪಟ್ಟ ದೊರೆತೊಡನೆ ಬಂಧುಬಳಗ ನಮ್ಮವರು ತಮ್ಮವರೆಂಬವರನ್ನು ದೂರಕ್ಕೆ ದೂಡದೆ, ಅವರನ್ನೆಲ್ಲ ತನ್ನ ಹೊಟ್ಟೆಯಲ್ಲಿಟ್ಟುಕೊಂಡು ಅವರಿಗೆ ಬೇರೆ ಬೇರೆ ರಾಜ್ಯಗಳನ್ನಾಳಲು ಕಲ್ಪಿಸಿಕೊಟ್ಟನು. ಈತನ