ಆಳಿಕೆಯಲ್ಲಿಯೇ ಅರಬರು ಸಿ೦ಧದೇಶಕ್ಕೆ ದಂಡೆತ್ತಿ ಬಂದರು. ಭರತ ಖಂಡಕ್ಕೆ ಸಿ೦ಧದೇಶವೆಂಬುದೊ೦ದು ಬಹು ಆಯಕಟ್ಟಿನ ಸ್ಥಳವು. ಪರರಾಯರ ಕೈಗೆ ಶಿಲುಕಲು ಇರಬೇಕಾದಷ್ಟು ಅನುಕೂಲಗಳೆಲ್ಲ ಈ ದೇಶದ ಪಾಲಿಗೆ ಬಂದಿರುವದರಿಂದ ಹಿಂದುಸ್ಥಾನವೆ೦ಬ ಮೊಸಳೆಯನ್ನು ಕೊಲ್ಲಲಿಕ್ಕೆ ಸಿ೦ಧದೇಶವೆಂಬ ಮೂಗಿನ ಮೇಲೆ ಮೊದಲು ಪ್ರಹಾರ ಮಾಡಿದರಾಯಿತು. ಕೈ ಹಿಡಿದು ಜಗ್ಗಿದ ಮೇಲೆ ಇಡೀ ಮೈಯೆಲ್ಲ ಕೈ ಸೇರುವ೦ತೆ ಹಿ೦ದೂದೇಶವು ಕೈಗೆ ಬ೦ತೆ೦ತಲೇ ಎಣಿಕೆ. ಹಿಂದಣ ಕಾಲದ ಇತಿಹಾಸವನ್ನು ನಾವು ಇನ್ನೊಮ್ಮೆ ಸಿಂಹಾವಲೋಕನ ಮಾಡಿದರೆ, ಈ ದಾರಿಯಿಂದಲೇ ಮಹಾ ಮಹಾ ದಾಳಿಗಾರರು ಹಿಂದುಸ್ಥಾನವನ್ನು ಹೊಕ್ಕು ಹಿಂದೂಜನರನ್ನು ಜರ್ಝರಿತರನ್ನಾಗಿ ಮಾಡಿರುವದು ಸ್ಪಷ್ಟವಾಗುತ್ತದೆ. ಹಿಂದಕ್ಕೆ ಹಲವು ಬಾರಿ ಪಾರಶೀಕರೂ ಸಿಂಧಪ್ರಾ೦ತವನ್ನು ಗೆಲ್ಲಬೇಕೆಂದು ದಾಳಿ ಮಾಡಿದರೂ, ತತ್ಕಾಲಕ್ಕೆ ಅಲ್ಲಿನ ಹಿಂದೂವೀರರು ತಮ್ಮ ಮೈ ನೆತ್ತರವನ್ನು ಬಸಿದು ಹಿಂದೂದೇಶವನ್ನು ಪರರಾಯರಿಂದ ಕಾಯ್ದುಕೊಂಡರು. ಮುಂದೆ ಮುಸಲ್ಮಾನೀ ಧರ್ಮವು ಮೂರ್ತರೂಪಕ್ಕೆ ಬಂದು, ಅಲ್ಲಿಯ ಖಲೀಪರ ಆಳ್ವಿಕೆಯಲ್ಲಿ ಸಹ ಬಹು ದಿನಗಳಿ೦ದ ಸಿ೦ಧಪ್ರಾಂತವನ್ನು ನುಂಗಿ ನೀರು ಕುಡಿಯುವ ತಮ್ಮ ಹಟವನ್ನು ಅರಬರು ಪಟ್ಟಾಗಿ ಸಾಧಿಸಲು ಪಣತೊಟ್ಟವರಂತೆಯೇ ಒಂದಲ್ಲ ಎರಡಲ್ಲ ಅನೇಕ ದಾಳಿಗಳನ್ನಿಟ್ಟರು; ಆದರೆ ಆ ಕಾಲಕ್ಕೆ ಮುಸಲ್ಮಾನರಿಗೆ ಸಿ೦ಧಪ್ರಾಂತದ ನೆರೆಯಲ್ಲಿದ್ದುಕೊ೦ಡು ಆಗಾಗ್ಗೆ ದಂಡೆತ್ತಿ ಬರಲಿಕ್ಕೆ ತಕ್ಕ ಅನುಕೂಲ್ಯವಿರದ್ದರಿಂದ ತೊಂದರೆಯಾಗಿತ್ತು; ಅವರ ಅದೃಷ್ಟದಿ೦ದ ಇರಾಣದೇಶವು ಅರಬರ ಅ೦ಕೆಗೀಡಾಗಲು, ಸಿ೦ಧಪ್ರಾಂತದ ನೆರೆಯಲ್ಲಿ ಕಾಲೂರಿ ನಿಲ್ಲಲಿಕ್ಕೊಂದು ನೆಲೆ ದೊರೆಯಿತು. ಈ ಕಾಲಕ್ಕೆ ಮಹಮ್ಮದೀಯ ಧರ್ಮವು ಸಿಂಹಲದ್ವೀಪದ ವರೆಗೆ ಹಬ್ಬಿಕೊ೦ಡಿದ್ದಿತು. ಖಲೀಪವಾಲೀದ ಎ೦ಬವರು ಬಗದಾದದಲ್ಲಿ ರಾಜ್ಯವಾಳುತ್ತಿದ್ದರು. ಒಮ್ಮೆ ಸಿ೦ಹಲದ್ವೀಪದ ರಾಜನಿಂದ ತಮ್ಮ ಖಲೀಪರಿಗೆ ಮುಟ್ಟಸಲಿಕ್ಕೆಂದು ಬಹು ಅಮೂಲ್ಯವಾದ ರತ್ನ ಹಾಗೂ ಮುತ್ತುಗಳ ಕಾಣಿಕೆಯನ್ನು ಮುಸಲ್ಮಾನ ಪ್ರಯಾಣಿಕರು ಜಲಮಾರ್ಗದಿಂದ ಒಯ್ಯುತ್ತಿ
ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೫೧
ಗೋಚರ