ಪುಟ:ಉನ್ಮಾದಿನಿ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಉನ್ಮಾದಿನಿ ರಾಮಗೋಪಾಲ - ದುರ್ಗಾವತಿಯು ನನ್ನ ಕಿರೇ ತಮ್ಮನಾದ ನವೀನ ಗೋಪಾಲನ ಮಗಳು, ನವೀನಗೋಪಾಲನು ಒಬ್ಬ ಹೆಸರ್ಗೊಂಡ ಬ್ರಹ್ಮ ಎಂಬು ದನ್ನು ನೀವು ತಿಳಿದಿರಬಹುದೆಂದು ತೋರುತ್ತಿದೆ.” ತರ್ಕಾಲಂಕಾರ :-I: ನಿನ್ನ ಕರೇ ತಮ್ಮನು ಬ್ರಹ್ಮಧರ್ಮಾವಲಂಬಿಯಾಗಿ, ಸಪರಿವಾರವಾಗಿ ಮನೆಯನ್ನು ಬಿಟ್ಟು ಹೋದವೆಂದು ನಮ್ಮ ಸ್ವರ್ಗಸ್ಥರಾದ ಮಾವಂದಿರು ಹೇಳುತಲಿದ್ದುದನ್ನು ಕೇಳಿರುವೆನು. ರಾಮಗೋಪಾಲ :-IC ದರ್ಗಾವತಿಯು ಹುಟ್ಟಿದ ಒಂದೂವರೆ ವರ್ಷದ ಲಿಯೇ ನವೀನಗೋಪಾಲನಿಗೆ ಒದು ಗಂಡು ಮಗು ಹುಟ್ಟಿತು. ತಾಯಿಯೇ ಆ ಮಗು ವನ್ನು ಮುಂದಕ್ಕೆ ತಂದಳು, ಅದು ಮೊದಲ್ಗೊಂಡು ಮಕ್ಕಳು ಇಲ್ಲದ ನನ್ನ ಹೆಂಡ ತಿಯು ದುರ್ಗಾವತಿಯನ್ನು ಸಾಕಿ ದೊಡ್ಡವಳನ್ನಾಗಿ ಮಾಡಿದಳು. ನನಗೋಪಾ ಲನು ಪಿತ್ರಾರ್ಜಿತವಾದ ಆಸ್ತಿಯನ್ನೆಲ್ಲಾ ನನಗೆ ಮಾರಿಬಿಟ್ಟು, ಸಪರಿವಾರವಾಗಿ ಮನೆ ಯನ್ನು ಬಿಟ್ಟು ಹೋಗುವಾಗ, ದುರ್ಗಾವತಿಗೆ ಐದುವರ್ಷವಿರಬಹುದು. ಅವಳು ದೊಡ್ಡಮ್ಮನನ್ನು ಬಿಟ್ಟು ತನ್ನ ತಾಯಿತಂದೆಗಳೊಡನೆ ಹೋಗುವುದಕ್ಕೊಪ್ಪಲಿಲ್ಲ. ನನ್ನ ಹೆಂಡತಿಯ ಅವಳನ್ನ ಗಲಿರುವುದಕ್ಕೆ ಸಮ್ಮತಿಸಲಿಲ್ಲ. ಆಗಿನಿಂದಲೂ ದುರ್ಗಾ ವತಿಗೆ ತಾಯಿತಂದೆಗಳ ಸಂಬಂಧವು ತಪ್ಪಿತು. ಅವಳು ನನ್ನನ್ನೇ ತನ್ನ ತಂದೆಯೆಂದೂ ನನ್ನ ಗತಿಸಿಹೋದ ಹೆಂಡತಿಯನ್ನೇ ತನ್ನ ಗರ್ಭಧಾರಿಣಿಯೆಂದೂ ತಿಳಿದುಕೊಂಡಿದ್ದಳು. ತರ್ಕಾಲಂಕಾರ :- ಒಳ್ಳೆಯದಾಯಿತು. ಆ ಮಗುವಿಗೆ ಇಷ್ಟು ಏಕಾಂತ ವಾಗಿ ಮದುವೆ ಮಾಡಲೇಕೆ ? 1' - ರಾಮಗೋಪಾಲ :-ಅದಕ್ಕೆ ಒಂದು ಕಾರಣವುಂಟು, ನನ್ನ ಹೆಂಡತಿಯು ಹೊದ ಮೊದಲ್ಗೊಂಡು ನವೀನಗೋಪಾಲನು ತನ್ನ ಮಗಳನ್ನು ಕಳುಹಿಸಿಕೊಡಬೇ ಕೆಂದು ಕೇಳುತ್ತಿರುವನು. ನನಗೆ ಸ್ವಲ್ಪ ಆಸ್ತಿಯುಂಟು. ಅದರಮೇಲಿನ ಆಸೆಯಿಂದ ಅವನು ಹುಡುಗಿಯನ್ನು ಇಲ್ಲಿಯೇ ಇಟ್ಟು ಕೊಂಡಿರುವುದಕ್ಕೆ ಸಮ್ಮತಿಸಿರುವನು. ಆದರೆ ನಮ್ಮ ಹಿಂದೂಮತದ ಪ್ರಕಾರ ಆ ಮಗುವಿಗೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಮದು ವೆಮಾಡುವುದಕ್ಕೆ ಅವನಿಗೆ ಒಪ್ಪಿತವಿಲ್ಲ. ಅವನು ಬಂದು ರಚ್ಚೆಗೊಂಡು ಗದ್ದಲಿಸಿ ಮದುವೆ ಮಾಡದಹಾಗೆ ಅಡಗಿಸುವನು, ಅದುಕಾರಣ ಮದುವೆಯನ್ನು ಗೋಷ್ಠಿ ವಾಗಿ ಮಾಡಬೇಕಾಗಿರುವುದು.” ತರ್ಕಲಂಕಾರ ಮಹಾಶಯರು ಸ್ವಲ್ಪ ಯೋಚಿಸಿ, ಅನಂತರ ಎರಡು ಮೂರು ತಡವೆ ನಸ್ಯ ಗ್ರಹಣವಾಗಿ ಹುಡುಗಿಗೆ ಎಷ್ಟು ವರ್ಷವೆಂದು ಕೇಳಿದರು,