ವಿಷಯಕ್ಕೆ ಹೋಗು

ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು ೪೫೯ ಆಕೆಯನ್ನು ಎಡದಿಂದ ನೋಡುತ್ತಿದ್ದೆನು. ಆಕೆಯ ಥಳಥಳದ ಲಾವಣ್ಣ ದಿಂದ ಕೂಡಿದಂಥ, ತಳಕುಒಳಕು ಮಾತುಗಳನ್ನು ಕೇಳಿ, ಅತಾಶ ಯುಕ್ತನಾಗಿ, ನಾನು ಮಾಡಿದ ಉಪಚಾರಗಳಲ್ಲಿ ಏನಾದರೂ ಕುಂದುಕೊರತ ಗಳಿದ್ದರೆ, ಅದನ್ನು ಕ್ಷಮಿಸಬೇಕೆಂದು ಬೇಡಿಕೊಂಡನು. ಆಗ ಆ ನವೀನ ಯುವತಿಯು ನನ್ನನ್ನು ನೋಡಿ, ಈ ನಿನ್ನ ಉಪಚಾರದಮಾತಗಳನ್ನು ಕೇಳುವುದಕ್ಕಾಗಿ, ನಾನು ಬರಲಿಲ್ಲ. ಆದರೆ ನನ್ನ ಬಿನ್ನಹವನ್ನು ಲಾಲಿಸಿ, ನೀನು ನನ್ನನ್ನು ಇಲ್ಲಿಗೆ ಬರಮಾಡಿಕೊಂಡುದಕ್ಕಾಗಿ, ನಾನು ನಿನಗೆ ವಂದನೆ ಗಳನ್ನು ಆಚರಿಸುವನು. ಇನ್ನು ಈ ಮಾತುಗಳನ್ನು ತೊರೆದು, ಉತ್ಸಾಹ ದಿಂದ ಕಾಲವನ್ನು ಕಳೆವಂತೆ, ನಮ್ಮನ್ನು ನಿಯೋಗಿಸು, ಎನಲು ನಾನು ಆಹಾರಪದಾರ್ಥಗಳನ್ನು ತರಿಸಿದೆನು, ಕಡಲೆ ನಾವು ಮೂವರು ಒಂದು ಕಡೆಯಲ್ಲಿ ಕುಳಿತು ಸರಸಸಲ್ಲಾಪಗಳಿಂದ ಮಾತನಾಡುತ್ತಾ, ಊಟಮಾಡಿ ದೆವು. ಬಳಿಕ ನಾನು ಆಕಗೆ ಎದುರಾಗಿ ಕುಳಿತುಕೊಂಡಿದ್ದುದರಿಂದ, ಅವಳ ಹುಸಿನಗೆಯಿಂದ ನನ್ನ ಮುಖವನ್ನು ನೋಡಲಾರಂಭಿಸಿವಳು. .ಅದರಿಂದ ಬಲಾತ್ಕಾರವಾಗಿ ಆಕಯಬಳಗ ಹೊರಟುಹೋದ, ಮನಸ್ಸನ್ನು ನಾನು ಪುನಹ ಹಿಂದಿರುಗಿಸಲಾರದೆ ಹೋದನು, ನನ್ನಂತೆ ಆಕಯು ಮೋಹ ಯುಕ್ತಳಾಗಿ, ನನ್ನನ್ನೇ ನೋಡುತ್ತಿದ್ದರೂ ವಿನೋದಕರವಾದ ಮಾತು ಗಳನ್ನು ಧಾರಾಳವಾಗಿ ಆಡುತ್ತಿದ್ದಳು. ಹೀಗೆ ನಾವಿಬ್ಬರೂ ನೋಡುತ್ತಿರುವಾಗ, ಮತ್ತೊಬ್ಬಳು, ಏನನ್ನೂ ಹೇಳದೆ, ಸುಮ್ಮನೆ ನಕ್ಕು ನನ್ನ ಸಖಿಯು ಬಹು ರೂಪವತಿ ಯಂದು, ನಾನು ನಿನ್ನ ಸಂಗಡ ಹೇಳಿದೆನಲ್ಲವೆ. ಅದರಿಂದ ನನ್ನ ಮೇಲಿನ ಮೊಹವು ಕಡಿಮೆಯಾಗುವುದೆಂದು, ನಾನು ಹೇಳಿದಂತ ನೀನು ಮಾಡಿದೆ ಯಲ್ಲಾ ! ಎನಲು ಅದಕ್ಕೆ ನಾನು ನೀನು ಮೊದಲೇ ಹೇಳಿದಂತೆ, ಗೌರವ ದಿದ ಬರಮಾಡಿಕೊಳ್ಳದೆಹೋದರೆ, ನಿಮ್ಮಿಬ್ಬರಿಗೂ ಕೋಪಬರುವುದಲ್ಲಾ ! ಎಂದನು. ಹೀಗಿರುವಲ್ಲಿ ದಾಕ್ಷಾರಸದಿಂದುಂಟಾದುದೆ ಕದಿಂದ, ನವೀನ ಯುವತಿಯ ನಾನು, ನಮ್ಮಗಳ ಮೋಹವನ್ನು ಹೊರಡಿಸಿದೆವು. ಆಗ ಮತ್ತೊಬ್ಬಳು ಅಸೂಯೆವಟ್ಟು ನಮ್ಮಗಳ ಮೇಲೆ ಬಹಳವಾಗಿ ಕೋಪಿಸಿ ಕೊಂದೆ, ನಾನು ಪುನಹ ಬರುವೆನೆಂದು ಹೊರಕ್ಕೆ ಹೋದಳು. ಕೂಡಲೆ