________________
ಸಮಗ್ರ ಕಾದಂಬರಿಗಳು ಕೆಲಸ ಮಾಡುತ್ತಿದ್ದ ಸುಶೀಲ, ಯಾವ ಮಾಯದಲ್ಲೋ ಅಣ್ಣ ಹೇಳಿದ್ದನ್ನು ಆಲಿಸಿ, ದುಡದುಡನೆ ಧಾವಿಸಿ ಬಂದು, - “ಕೈ ಬಿಡುವಿರಲಿಲ್ಲ, ಕಿಟ್ಟಣ್ಣ, ನೀರು ಕಾಯಿಸಿಟ್ಟಿದೀನಿ. ಇನ್ನೇನು ಹಾಕ್ತಿನಿ. ಅವಳು ಬೇಗ ಒಳಗೆ ಬಂದು ತಾನೆ ಏನು ಮಾಡೋದಿದೆ?... ಎಲ್ಲಾ ಹೊರೇನು ನಾನು ತಾನೆ ಹೊತ್ತಿರೋದು” -ಅರಳು ಸಿಡಿಯೋ ತರ ಸಿಡಿದಿದ್ದಳು. ಕೃಷ್ಣಶಾಸ್ತ್ರಿಗಳು ತಲೆಬಾಗಿ ನಿಂತ ಸೊಸಯತ್ತ ಕರುಣಾಪೂರಿತವಾಗಿ ಒಮ್ಮೆ ದೃಷ್ಟಿ ಚೆಲ್ಲಿ, ಮಾತಿಲ್ಲದೆ ಒಳಗೆ ನಡೆದಿದ್ದರು. ಸುಶೀಲ ಅವರು ಕೈಕಾಲು ತೊಳೆಯಲು ನೀರು ಕೊಟ್ಟಳು. ಅನಂತರ “ಬೇಗ ಬೇಗ ಸಂಧ್ಯಾವಂದನೆ ಮುಗಿಸಿ, ಊಟಕ್ಕೆ ಏಳು” ಎಂದು ಒತ್ತಾಯಿಸಿದಳು. “ಮೊದಲು ರುಕ್ಕಿಣಿಗೆ ನೀರಾಗಲಿ” ಎಂದರು ಶಾಸ್ತ್ರಿಗಳು. ಇದರಿಂದ ಅವಳ ನರನರವೂ ಬುಸುಗುಟ್ಟುವಂತಾಯಿತು. ಅವಳ ಅಸಹಾಯಕತೆಗೆ ಸೊಪ್ಪುಹಾಕದೆ, ಸಂಧ್ಯಾವಂದನೆ ಪೂಜಾದಿಗಳು ಮುಗಿದರೂ ರುಕ್ಕಿಣಿಗೆ ನೀರಾಗುವವರೆಗೂ ತೂಗುಮಣೆಯ ಮೇಲೆ ಕುಳಿತು, ಸರಸಿಯನೂ ತಮ್ಮ ಪಕ್ಕದಲ್ಲೇ ಕೂರಿಸಿಕೊಂಡು, ಮೆಲ್ಲನೆ ತೂಗಿಕೊಳ್ಳುತ್ತ, ಯಾವುದೋ ಕ್ಲಿಷ್ಟವಾದ ಸಮಸ್ಯೆಯ ಸುಳಿಯಲ್ಲಿ ಸಿಕ್ಕಿದವರಂತೆ ತೋರುತ್ತಿದ್ದರು... ಸಂಜೆಯ ವೇಳೆ ನೀರೆರೆದುದರಿಂದ ರುಕ್ಕಿಣಿಯ ತಲೆಗೂದಲು ಶೀಘ್ರವಾಗಿ ಆರುವಂತಿರಲಿಲ್ಲ. ಆಗ್ಗಿಷ್ಟಿಕೆಯ ಕೆಂಡಕ್ಕೆ ಸಾಂಬ್ರಾಣಿ, ಹಾಲುಮಡ್ಡಿ ಸುರಿದು, ಅದರ ಮೇಲೆ ಬಿದಿರುಕುಕ್ಕೆಯನ್ನು ದಬ್ಬ ಹಾಕಿ, ಆ ಕುಕ್ಕೆಯ ಸಂದಿಸಂದಿಯಲ್ಲೂ ಪರಿಮಳಭರಿತ ಧೂಪದಲ್ಲಿ ತಲೆಗೂದಲನ್ನು ಚೆಲ್ಲಿ ಅದನ್ನು ಆರಿಸಿಕೊಳ್ಳಲು ಇಲ್ಲೇನು ನನ್ನ ತಾಯಿ ಇದ್ದಾಳೆಯ?- ಎಂಬ ಮರುಕ ಆ ಕ್ಷಣಕ್ಕೆ ರುಕ್ಕಿಣಿಯಲ್ಲಿ ಅಂಕುರವಾಯಿತು. ನಿಟ್ಟುಸಿರಿಡುತ್ತ, ಟವೆಲಿನಿಂದ ಆದಷ್ಟು ಚೆನ್ನಾಗಿ ತೇವವನ್ನು ಒರೆಸಿ, ಆದರೆ ಇನ್ನೂ ಉಳಿದ ಹಸಿಯನ್ನು ಸ್ಪರ್ಶದಿಂದ ಗುರುತಿಸಿ, ಅದನ್ನು ತೀಡಿ ತನ್ನ ಉದ್ದನೆ ಕೂದಲಿನ ತುದಿಯಲ್ಲಿ ಸಣ್ಣದಾದ ಕಿರಿಗಂಟು ಹಾಕಿದ್ದಳು... ಮುಟ್ಟು ಕಳೆದ ಐದನೇ ನೀರು ಎರೆಯುವಾಗಲೂ ಸಂಜೆಯಷ್ಟು ತಡಮಾಡದಿದ್ದರೂ ಮಧ್ಯಾಹ್ನ ದಾಟಿಸಿಯೇ ನೀರು ಎರೆದಿದ್ದಳು ಸುಶೀಲ!... ಊಟ ಮುಗಿದುದೇ ಸಮ, ಮೊದಲು ಮಲಗಿದವಳು ಸರಸಿ, ಅತ್ತೆ ಯಾವ ಕೋಪಕ್ಕೊ ಅಷ್ಟು ಬಿಸಿನೀರು ಎರೆದಿದ್ದುದ್ದರಿಂದ ಸರಸಿಯ ಪಕ್ಕದಲ್ಲಿ ಮಲಗಿದ ರುಕ್ಕಿಣಿಗೂ ತುಸು ವೇಳೆಯಲ್ಲಿ ನಿದ್ರೆ ಆವರಿಸಿತ್ತು. ಕೃಷ್ಣಶಾಸ್ತ್ರಿಗಳು