ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು “ರಂಗ್‌ಚೋರಿ, ರಂಗ್‌ಟೋರಿ...” ಅನ್ತ ಒಬ್ಬರಿಗೊಬ್ರು ಕದ್ದ ಮಾಡಕ್ಕೆ ಸುರು ಮಾಡಿದ್ರು... “ಇವುಕೆ ಇನ್ನೆನು ಬ್ಯಾರೆ ಕೇಮೆ ಇಲ್ಲ. ಇಂತೋರಿಂಥೇಯ ಊರಿಗೆ ಕೇಡು” ಅನ್ನುಸಿ, ಲಕ್ಕ ಅಲ್ಲಿಂದ ಕಾಲುಕಿತ್ತ. ಜಪ್ಪಯ್ಯನ ಮಠ ಬಳಸ್ತಾ ಇರೂವಂಗೆ ಮಠದ ಅಯ್ಯನೋರು ವೊರಗೆಲ್ಲೂ ಕಾಣಿಸ್ತಿಲ್ಲ. ವೊಕಮಂಟಪಲ್ಲಿ ಅವರು ಕುಂತುಕೊತಿದ್ದ ಕಾಲಮಣ್ಣೆ ಹಾಸ್ಟ ಚಿಂಕೆ ಚರ್ಮದ ಮ್ಯಾಲೆ ಕೈಯಾಡಿಸ್ತ ಏನೋ ಯೋಚಣೇಲಿ ಮುಳುಗಿ, ನಂಜೇಗೌಡ ಕುಂತಿದ್ದು ಕಾಣಿಸ್ತು. ನಂಜೇಗೌಡಂದು ಆದ್ದಿನ ಕಣ್ಣು. ಆದ ತಪ್ಪಿಸಿ ವೋಗಾದು ಸಾದ್ಯವ?- ಲಕ್ಕ ಯೋಚಿಸ್ತ ನಿಂತ, ಮಠದಯೋರು ಸಿವಪಾದಪಾರ ಇಸ್ಕಾದಲ್ಲಿ ಲಕ್ಕಂಗೆ ಅಪಾರ ಗೌರವ. ಸ್ವಾಮಿಗಳೆ ವಯಸ ಆಗಿದ್ರೂವೆ ಕೆಂಪಕೆಂಪಗೆ ಯಾವುತ್ತೂ ಒಳ್ಳೆ ತಾಮ್ರದ ಜೆಂಬು ವೋಳೆಯೂವಂಗೆ ತಳತಳಗುಟ್ಟೋ ಮೊಕ, ಅಗಲಾದ ಅಣೆ, ಅದ ತುಂಬದಂಗೆ ಮೂರು ಬೆಟ್ಟಿನ ಈಬೂತಿ... ಆ ಮೊಕ ನ್ಯಾಡಕ್ಕೆ ಒಂದು ಚೆಂದ ಆದ್ರೆ ಜನಕೆ ಈ ಸ್ವಾಮಿಗೊಳು ವೊರಗಡೆ ಕಾಣಿಸೋದೆ ಅಪರ್ಪ. ಮೂಡು ಕೆಂಪಾಗಕ್ಕೂ ಮುಂಗಾಗಿ ತಾನಮಾಡಿ ದ್ಯಾವರ ಕ್ಲಾಣೆ ಸೇರು ಅಂದ್ರೆ ಅವರಲ್ಲಿಂದ ವೋರೀಕೆ ಬರೂವೋಟರಲ್ಲಿ ಸ್ವಾಮಿ ನೆತ್ತಿ ದಾಟಿ ಒಂದು ಮಾರು ಇಳುದಿರಿದ್ದ... ಇನ್ನು ಅವರೂಟ-ಒಂದು ಕೂಸು ಮಾಡಕ್ಕಿಂತಲೂ ಕಮ್ಮಿಯಂತೆ... ಒಂದೀಟು ಅಣ್ಣು ಅಂತ್ತು. ಒಂದು ಮುಕ್ಕಾಲು ಗಳಾಸು ಹಾಲು- ಈ ತಪಸೀಲ ಲಕ್ಕಂಗೆ ಊಟ್ಟಿದ್ದೋಳು ಅಡುಗೆ ಮಾದಮ್ಮ...ಆಮ್ಯಾಕೆ ದಪ್ಪ ದಪ್ಪ ಮಸ್ತಕ ಓಡ್ತಾ ಕುಂತಿರಾದು. ಸಿವರಾತ್ರಿ, ಬಸವಜಯಂತಿ ಇಂತ ಅಬ್ಬಗಳಲ್ಲೇಯ ಜನ ಯೆಚ್ಚಾಗಿ ಅವರ ಕಾಣಬೇಕಾರೆ!... ಆದ್ರೆ ನಂಜೇಗೌಡ್ರಂತ ವಸಿ ಮಂದಿ ಭಕ್ತರೆ, ಅವ್ರ ಸಮೀಪಾನೆ ಓಡಾಡೂ ಅವಕಾಸ!... ಅಯ್ಯನೋರ ಇಸ್ವಾಸವ ನಂಜೇಗೌಡ್ರ ತನ್ನ ವರ್ಚಸ್ಸ ಊರಿನಾಗೆ ಎಚ್ಚಿಸಿಗಳಕ್ಕೆ ಚೆಂದಾಗಿ ಬಳಸ್ತಿದ್ದ. ಬುದ್ದಿಬುದ್ದಿವಂತ ಸ್ವಾಮಿಗೋಳು ಯೋಳ ಕೆಲಸವ ಕಾಲ್ಪಲಿ ತೋರಿದ್ರ ಕಯ್ಯಲ್ಲಿ ಮಾಡ್ಕ, ಆಸಾದ ಅಂತಿದ್ರಿಂದ ಊರಲ್ಲಿ ಗೌಡನ ಆಟಕ್ಕೆ ತಡೆ ಅನ್ನಾದೆ ವೊಂಟೋಗಿತು... ಗೌಡನ ಇಡ್ಲಿ ಮಲ್ಲಿಗೆ ಊವು ಬಂದರೇಯ ಅಯ್ಯನೋರ ಪೂಜೆ- ಅಂತಾವ ಜನ ಆಡಿಕೊತ್ತಿದ್ರು... ಅದ್ಯಾವ ಮಾಯದಲ್ಲೋ ನಂಜೇಗೌಡನ ದ್ರುಸ್ಟಿ ಲಕ್ಕನ ಕಡೀಕೆ ವೋಳು. ಲಕ್ಕ ತಬ್ಬಿಬ್ಬಾದ, “ಅದ್ಯಾಕೊ ಲಕ್ಕ ಹೊರಗೇ ನಿಂತೆ. ಇತ್ತತ್ತ ಬಾ” ಗೌಡ ಕರದೇ 0 %