ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೪ ವೈಶಾಖ ಹಜಾರದಲ್ಲಿ ಮಲಗಿ ಕಣ್ಣು ಮುಚ್ಚಿದರೂ ಇವರಿಬ್ಬರು ಹೆಂಗಸರು ಪರಸ್ಪರ ಹೊಂದಿ ನಡೆಯದಿದ್ದುದು, ಮುಂದೇನು? ಎಂಬ ಆತಂಕಕ್ಕೆ ಎಡೆಮಾಡಿಕೊಟ್ಟಿತ್ತು. ಅಷ್ಟೇ ಸಾಲದೆಂಬಂತೆ ಸುಶೀಲ ಐದೈದು ನಿಮಿಷಕ್ಕೊಮ್ಮೆ ನಡುಮನೆಯಿಂದ ಹೊರಬಂದು, ಅಣ್ಣ ಮಲಗಿದ್ದಾನೆಯೆ, ಇಲ್ಲವೆ ಎಂದು ಪರೀಕ್ಷಿಸಿ ಹೋಗುತ್ತಿದ್ದುದು ಅವರ ಕಾತರವನ್ನು ಹೆಚ್ಚಿಸಿತ್ತು. ಮೊದಲ ಬಾರಿ ಇಣಿಕಿ ನೋಡಿ 'ನಿದ್ದೆ ಬಂತಕಿಟ್ಟಣ' ಪಿಸುಗುಟ್ಟಿರಬೇಕು. ಚಿಂತೆಯಲ್ಲಿ ಮುಳುಗಿದ್ದುದರಿಂದ ಕೇಳಿಸಿದರೂ ಉತ್ತರ ಕೊಡುವ ಗೋಜಿಗೆ ಅವರು ಹೋಗಿರಲಿಲ್ಲ. ಎರಡನೆಯ ಸಲ 'ಕಿಟ್ಟಣ್ಣ'ಒಂದೇ ಪದ ಪ್ರಯೋಗ ಕೊಂಚ ಏರಿದ ದನಿ. ಮೂರನೆಯ ಸರ್ತಿ ಅವರು ಮಲಗಿದ್ದ ಸ್ಥಳಕ್ಕೆ ಬಂದು ಪರೀಕ್ಷೆ... ಈಗಲೀಗ ಸುಶೀಲಳ ವರ್ತನೆ ಶಾಸ್ತ್ರಿಗಳಿಗೆ ಅನುಮಾನ ತೀವ್ರಗೊಂಡಿತು. ಕಣ್ಣು ಮುಚ್ಚಿದರೂ ಮೈಯೆಲ್ಲ ಕಿವಿಯಾಗಿ, ಇದರಲ್ಲಿ ಏನೋ ರಹಸ್ಯವಿದೆಯೆಂದು ಅರೆಗಣ್ಣು ತೆರೆದು ನೋಡುತ್ತ, ಅವಳ ಒಂದೊಂದು ಚಲನವಲನದ ಮೇಲೂ ಗಮನವಿಟ್ಟು ವೀಕ್ಷಿಸುತ್ತಿದ್ದರು. ಸುಮಾರು ಸಮಯ ಹೀಗೆ ಸಂದಿರಬೇಕು. ಇದು ಕೇವಲ ತಮ್ಮ ಕಲ್ಪನೆ ಇರಬೇಕೆಂದೂ ಈ ಚಿಲ್ಲರೆ ವಿಷಯಕ್ಕೆ ವಿಶೀಷಾರ್ಥ ಕಲ್ಪಿಸುವುದು ಅಸಾಧುವೆಂದೂ ಅವರು ತಮ್ಮ ಮನಸ್ಸಿಗೆ ಹೇಳಿಕೊಳ್ಳುತ್ತ, ಇನ್ನೇನು ನಿದ್ರಾದೇವಿಗೆ ವಶವಾಗುವುದರಲ್ಲಿದ್ದರು. ಅಷ್ಟರಲ್ಲಿ-ನಡುಮನೆಯಿಂದ ಹೊರಬಂದ ಒಂದು ಬೆಳಕು ಅವರ ಮುಚ್ಚಿದ ರೆಪ್ಪೆಗೂ ಚುರುಕು ಮುಟ್ಟಿಸಿದಂತಾಗಿ ಕಿರುಗಣ್ಣು ತೆರೆದು ಸೂಕ್ಷ್ಮವಾಗಿ ನಿರುಕಿಸಿದರು. ನಡುಮನೆಯಿಂದ ಹೊರಬಂದ ಸುಶೀಲ ದೀವಿಗೆ ಹಿಡಿದು ರುಕ್ಕಿಣಿ ಸರಸಿಯರು ಮಲಗಿದ್ದ ಕೋಣೆಯತ್ತ ಕಳ್ಳ ಹೆಜ್ಜೆಯಿಡುತ್ತ ಸಾಗಿದ್ದಳು. ಅವಳು ಅಲ್ಲಿಗೆ ಯಾಕಾದರೂ ಹೋಗುತ್ತಿದ್ದಾಳೆ ಎಂಬ ಚಿಂತೆ ಶಾಸ್ತಿಗಳನ್ನು ಕವಿಯಿತು. ಕಣ್ಣುಗಳನ್ನು ಪೂರ್ಣ ತೆಗೆದಾಗ ಅವರು ಕಂಡ ದೃಶ್ಯ ಅವರನ್ನು ಸೋಜಿಗಗೊಳಿಸಿತ್ತು... ಸುಶೀಲಳ ಒಂದು ಕೈಯಲ್ಲಿ ಸಣ್ಣ ದೀವಿಗೆ, ಇನ್ನೊಂದು ಕೈಯಲ್ಲಿ ಕತ್ತರಿ!- ಯಾಕೆ ಈ ಸಂಭ್ರಮ? ಕತ್ತರಿ ಹಿಡಿದು ಈ ನಿಶಿರಾತ್ರಿಯಲ್ಲಿ ಆ ಕೋಣಿಗೆ ಹೋಗಿ ಇವಳು ಮಾಡುವುದಾದರೂ ಏನು? ನೋಡೋಣಎಂದು ಸದ್ದಾಗದಂತೆ ಎದ್ದು ಅವಳನ್ನು ಹಿಂಬಾಲಿಸಿದರು. ರುಕ್ಕಿಣಿಯ ಕೋಣೆಯ ಒಳಬಾಗಿಲಿನ ತಾಪಾಳು ಎಂದೋ ಮುರಿದುಹೋಗಿತ್ತು, ಅದನ್ನು ಒರಟಾಗಿ ಹಾಕಲು ಹೋಗಿ ಮುರಿದಿದ್ದವನು ತಮ್ಮ ಮಗ ವಿಶ್ವೇಶ್ವರ!- ಅದನ್ನು ರಿಪೇರಿ ಮಾಡಿಸಬೇಕು ಎನ್ನುವಷ್ಟರಲ್ಲಿ ಅವನೇ ತೀರಿಕೊಂಡಿದ್ದ. ಅನಂತರ ಅದರ ರಿಪೇರಿಯ ಅಗತ್ಯ ಹಿಂದೆ ಸರಿದಿತ್ತು... ಆದ್ದರಿಂದಲೆ ಸುಶೀಲೆ ಮೆಲ್ಲನೆ