ಪುಟ:ಭಾರತ ದರ್ಶನ.djvu/೩೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೧೦

ಭಾರತ ದರ್ಶನ

ದಯಾನಂದ, ವಿವೇಕಾನಂದ ಮತ್ತು ಇತರರನೇಕರು ಹೊಸ ವಿಚಾರ ಮಂಥನವನ್ನು ಆರಂಭಿಸಿದ್ದರು, ಇಂಗ್ಲಿಷ್ ಸಾಹಿತ್ಯಲಹರಿಯಿ೦ದ ಅಮೃತಪಾನಮಾಡಿ ಪುಷ್ಟಿಗೊಂಡಿದ್ದರೂ ಪ್ರಾಚೀನ ಭಾರತದ ಋಷಿಗಳ ಮತ್ತು ಮಹಾಪುರುಷರ ಆದರ್ಶ ಸಾಧನೆಗಳು, ಉನ್ನತ ಭಾವನೆಗಳು, ಬಾಲ್ಯದಿಂದ ಕಿವಿಗೆ ಬಿದ್ದು ಸ್ಫೂರ್ತಿಗೊಳಿಸಿದ ಅವರ ಇತಿಹಾಸ ಮತ್ತು ಸಂಪ್ರದಾಯಗಳು ಅವರ ಮನಸ್ಸನ್ನು ತುಂಬಿದ್ದವು.

ಈ ಸಂಪ್ರದಾಯಗಳು ಮುಸ್ಲಿಂ ಜನತೆಗೂ ಚಿರಪರಿಚಿತವಿದ್ದುದರಿಂದ ಅವರಿಗೂ ಸಾಮಾನ್ಯ ವಿದ್ದವು. ಆದರೆ ಈ ಸಂಪ್ರದಾಯಗಳಿಗೂ ಹಿಂದೂಧರ್ಮಕ್ಕೂ ಸಂಬಂಧವಿದ್ದ ಕಾರಣ ಅವುಗಳ ಸಂಪರ್ಕ ಮತ್ತು ಪ್ರೋತ್ಸಾಹ ಇಸ್ಲಾಂ ಧರ್ಮಕ್ಕೆ ವಿರುದ್ದ ವೆಂಬ ಭಾವನೆ ಮುಸ್ಲಿಂ ಉನ್ನತವರ್ಗ ದವರಲ್ಲಿ ಬೆಳೆಯಲಾರಂಭಿಸಿತು. ತಮ್ಮ ರಾಷ್ಟ್ರೀಯ ಮೂಲವನ್ನು ಹೊರಗಡೆ ಹುಡುಕಲಾರಂಭಿಸಿ ದರು. ಭಾರತದಲ್ಲಿ ಆನ್ಲೈನ್ ಮತ್ತು ಮೊಗಲರ ಕಾಲದಕಡೆ ನೋಡತೊಡಗಿದರು, ಆದರೆ ಇದರಿಂದ ಅವರ ಮನಸ್ಸಿನ ದಾಹ ತೃಪ್ತಿಗೊಳ್ಳಲಿಲ್ಲ. ಆ ಕಾಲಗಳೆರಡೂ ಹಿಂದೂ ಮುಸ್ಲಿಮರಿಬ್ಬರಿಗೂ ಸಾಮಾನ್ಯ ವಿದ್ದವು. ಅದು ಪರಕೀಯರ ಧಾಳಿ ಎಂಬ ಭಾವನೆಯೇ ಹಿಂದೂಗಳ ಮನಸ್ಸಿನಲ್ಲಿರಲಿಲ್ಲ. ಮೊಗಲ ರಾಜರುಗಳನ್ನು ಭಾರತದ ರಾಷ್ಟ್ರೀಯ ರಾಜರುಗಳೆಂದೇ ಭಾವಿಸಿದ್ದರು, ಅವರಂಗಜೇಬ ನೊಬ್ಬ ಮಾತ್ರ ಈ ಭಾವನೆಗೆ ಹೊರತಾದನು. ಹಿಂದೂಗಳು ಬಹಳ ಮೆಚ್ಚಿದ ಅಕೃರನನ್ನು ಈಚೆಗೆ ಮುಸ್ಲಿಮರು ಅಲ್ಲಗಳೆಯುತ್ತಿದ್ದಾರೆ. ಕಳೆದವರ್ಷ ಅಕೃರನ ಹುಟ್ಟು ಹಬ್ಬದ ನಾಲ್ಕನೆಯ ಶತ ಮಾನೋತ್ಸವವನ್ನು ಅನೇಕ ಮುಸ್ಲಿಮರು ಸಹ ಸೇರಿ ಎಲ್ಲರೂ ಆಚರಿಸಿದರೂ ಭಾರತದ ಐಕ್ಯತೆಯ ಲಾಂಛನನೆಂಬ ಕಾರಣದಿಂದ ಮುಸ್ಲಿಂಲೀಗ್ ಆ ಉತ್ಸವದಲ್ಲಿ ಭಾಗವಹಿಸಲಿಲ್ಲ.

ಭಾರತೀಯ ಮುಸ್ಲಿಂ ಮಧ್ಯಮವರ್ಗದ ಕೆಲವರು ಈ ರೀತಿ ತಮ್ಮ ಸಂಸ್ಕೃತಿಮೂಲವನ್ನು ಬೇರೆಕಡೆ ಹುಡುಕಲಾರಂಭಿಸಿ ಇಸ್ಲಾಂ ಧರ್ಮವು ಬಾಗದಾದ್, ಸ್ಪೇನ್, ಕಾನ್ಸ್ಟಾಂಟಿನೋಪಲ್, ಮಧ್ಯ ಏಷ್ಯ ಮತ್ತು ಇತರ ಭಾಗಗಳನ್ನು ಜಯಿಸಿ ಹಿಂದು ಸಂಘಟಿತ ಶಕ್ತಿಯಾಗಿದ್ದ ಕಾಲದ ಇತಿ ಹಾಸದ ಕಡೆ ತಿರುಗಿದರು. ಇತಿಹಾಸದಲ್ಲಿ ಆಸಕ್ತಿ ಸದಾ ಇದ್ದೇ ಇತ್ತು; ಮತ್ತು ನೆರೆಯ ಮುಸ್ಲಿಂ ದೇಶಗಳೊಡನೆ ಸಂಪರ್ಕವೂ ಇತ್ತು. ಮಕ್ಕಾಕ್ಕೆ ಹಾಜ್ ಯಾತ್ರಿಕರು ಅನೇಕರು ಹೋಗಿ ಬರುತ್ತಿದ್ದುದರಿಂದ ಅನೇಕ ದೇಶಗಳ ಮುಸ್ಲಿಮರು ಅಲ್ಲಿ ಕಲಿಯುತ್ತಿದ್ದರು. ಆದರೆ ಈ ಎಲ್ಲ ಸಂಪರ್ಕವೂ ತಾತ್ಕಾಲಿಕವೂ, ಅತ್ಯಲ್ಪವೂ ಇದ್ದುದರಿಂದ ಭಾರತೀಯ ಮುಸ್ಲಿಮರ ಸಾಮಾನ್ಯ ದೃಷ್ಟಿಯು ವ್ಯತ್ಯಾಸವಾಗದೆ ಭಾರತದ ಒಳಗೇ ಇತ್ತು. ದೆಹಲಿಯ ಆಫ್ಘನ್ ದೊರೆಗಳು ಅದರಲ್ಲೂ ಮುಖ್ಯವಾಗಿ ಮಹಮ್ಮದ್ ತಗಲಖ್ ಕೈರೊಪಟ್ಟಣದ ಖಲೀಫನನ್ನು ಒಪ್ಪಿದ್ದನು. ಕಾನ್ಸ್ಟಾಂಟ ನೋಪಲಿನ ಆಟೋಮನ್ ಚಕ್ರವರ್ತಿಗಳು ಅನಂತರ ಖಲೀಫರಾದರೂ ಭಾರತದ ಮುಸ್ಲಿಮರು ಅವರನ್ನು ಒಪ್ಪಿರಲಿಲ್ಲ. ಭಾರತದ ಮೊಗಲ್ ಚಕ್ರವರ್ತಿಗಳು ಭಾರತದ ಹೊರಗೆ ಯಾವ ಖಲೀಫ ನನ್ನಾ ಗಲಿ, ಧರ್ಮಗುರುವನ್ನಾಗಲಿ ಒಪ್ಪಲಿಲ್ಲ. ಮೊಗಲ್ ಚಕ್ರಾಧಿಪತ್ಯವು ಸಂಪೂರ್ಣ ಕುಸಿದು ಬಿದ್ದ ಮೇಲೆ ಮಾತ್ರ ಹತ್ತೊಂಭತ್ತನೆಯ ಆದಿಭಾಗದಲ್ಲಿ ಭಾರತದ ಮಸೀದಿಗಳಲ್ಲಿ ತುರ್ಕಿಯ ಸುಲ್ತಾನನ ಹೆಸರು ಕೇಳಿ ಬರಲಾರಂಭಿಸಿತು. ಸಿಪಾಯಿದಂಗೆಯ ನಂತರ ಇದಕ್ಕೆ ಹೆಚ್ಚು ಪುರಸ್ಕಾರ ದೊರೆಯಿತು.

ಈ ರೀತಿ ಭಾರತೀಯ ಮುಸಲ್ಮಾನರು ಇತರ ದೇಶಗಳ ಇಸ್ಲಾ೦ಧರ್ಮದ ಪ್ರಾಚೀನ ಉನ್ನತಿ ಸ್ಮರಣೆಯಿಂದ ಮತ್ತು ಏಕೈಕ ಸ್ವತಂತ್ರ ಮುಸ್ಲಿಂ ರಾಜ್ಯವಾಗಿ ಉಳಿದಿದ್ದ ತುರ್ಕಿಯ ಸ್ಮರಣೆಯಿಂದ ಮನಸ್ಸಿಗೆ ಸ್ವಲ್ಪ ಸಮಾಧಾನ ಪಡೆಯಿಸಿದರು. ಈ ಭಾವನೆಗೂ ಭಾರತೀಯ ರಾಷ್ಟ್ರೀಯ ಭಾವನೆಗೂ ಯಾವ ವಿರೋಧವೂ ಇರಲಿಲ್ಲ. ಅಡ್ಡಿ ಯೂ ಆಗಲಿಲ್ಲ. ಇಸ್ಲಾಂ ಇತಿಹಾಸವು ಅನೇಕ ಹಿಂದುಗಳಿಗೆ ತಿಳಿದಿದ್ದು ಅವರ ಗೌರವಕ್ಕೆ ಪಾತ್ರವಾಗಿತ್ತು. ಏಷ್ಯದಲ್ಲಿ ತುರ್ಕಿ ಜನರು ಯೂರೋ ಪಿಯನರ ಆಕ್ರಮಣಕ್ಕೆ ಬಲಿಯಾಗುತ್ತಿದ್ದುದರಿಂದ ತುರ್ಕಿಯ ಮೇಲೆ ಸಹಾನುಭೂತಿಯಿತ್ತು.