ತಮ್ಮ ಸನಾತನ ಸಂಪ್ರದಾಯಗಳಿಗೆ ಅಂಟಿಕೊಂಡ ಒಂದು ಸಣ್ಣ ಪಂಗಡವಾಗಿ ಪ್ರತ್ಯೇಕವಾಗಿಯೇ ಉಳಿದಿರುವುದು ಒಂದು ಆಶ್ಚರ್ಯ, ಅಂತರ್ಜಾತೀಯ ವಿವಾಹಗಳೂ ನಡೆದಿದ್ದರೂ ಅವು ಅತಿ ವಿರಳ, ಭಾರತೀಯರಲ್ಲಿ ಸಾಮಾನ್ಯವಾಗಿ ತಮ್ಮ ತಮ್ಮ ಮತದಲ್ಲಿ ಮದುವೆಯಾಗುವುದು ಸಾಮಾನ್ಯವಾದುದರಿಂದ ಈ ಪದ್ದತಿಯು ಏನೂ ಹೊಸದಾಗಿ ಕಾಣಲಿಲ್ಲ. ಅವರ ಸಂಖ್ಯೆಯೂ ಹೆಚ್ಚು ಬೆಳೆದಿಲ್ಲ, ಎಲ್ಲ ಒಟ್ಟು ಸೇರಿ ಒಂದು ಲಕ್ಷ ಜನ, ವ್ಯಾಪಾರ ಉದ್ಯಮದಲ್ಲಿ ನಿಸ್ಸಿಮರು, ಅವರಲ್ಲನೇಕರು ಭಾರತದ ಕೈಗಾರಿಕೆಗಳ ನಾಯಕರು, ಇರಾಣದೊಂದಿಗೆ ಅವರಿಗೆ ಯಾವ ಸಂಪರ್ಕವೂ ಇಲ್ಲ, ಅವರೆಲ್ಲ ಪೂರ್ಣ ಭಾರತೀಯರು. ಆದರೆ ಅವರು ಪೂರ್ವ ಸಂಪ್ರದಾಯಗಳನ್ನೂ ಅವರ ಪೂರ್ವ ಜನ್ಮಭೂಮಿಯ ಸ್ಮರಣೆ ಯನ್ನೂ ಬಿಟ್ಟಿಲ್ಲ.
ಇರಾಣದಲ್ಲಿ ಇತ್ತೀಚೆಗೆ ಇಸ್ಲಾ೦ಯುಗದ ಪೂರ್ವದ ತಮ್ಮ ನಾಗರಿಕತೆಯ ಕಡೆ ನೋಡುವ ಆಶೆಯು ಬಲಗೊಳ್ಳುತ್ತಿದೆ. ಇದಕ್ಕೂ ಧರ್ಮಕ್ಕೂ ಯವ ಸಂಬಂಧವೂ ಇಲ್ಲ. ಅದು ಕೇವಲ ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ದೃಷ್ಟಿ ಯದು ; ಅತಿ ಪ್ರಾಚೀನ ಕಾಲದಿಂದ ನಿರರ್ಗಳವಾಗಿ ಪ್ರವಹಿಸಿದ ಸಂಸ್ಕೃತಿ ಸಂಪ್ರದಾಯಗಳಲ್ಲಿ ಲಾಭ ಪಡೆದು ಹೆಮ್ಮೆಗೊಳ್ಳುವ ದೃಷ್ಟಿಯದು.
ಪ್ರಪಂಚದ ಘಟನೆಗಳು ಮತ್ತು ಸಮಷ್ಟಿ ಪ್ರಶ್ನೆಗಳು ಪುನಃ ಏಷ್ಯದ ಜನಾಂಗಗಳ ಒಕ್ಕೂಟಕ್ಕೆ ದಾರಿ ತೋರುತ್ತಿವೆ. ಯುರೋಪಿನ ಪ್ರಭುತ್ವವನ್ನು ಒಂದು ಕೆಟ್ಟ ಕನಸಿನಂತೆ ಮರೆತು ಪ್ರಾಚೀನ ಕಾಲದ ಹಳೆಯ ಸ್ನೇಹ ಮತ್ತು ಒಟ್ಟನ ಸಾಹಸಗಳು ಪುನಃ ಸ್ಮರಣೆಗೆ ಬರುತ್ತಿವೆ. ಸ್ವಲ್ಪ ದಿನಗಳ ಲ್ಲಿಯೇ ಭಾರತವು ಚೀನಾದೊಡನೆ ಬಾಂಧವ್ಯ ಬೆಳೆಸಿದಂತೆ ಇರಾಣದೊಡನೆಯೂ ಮೈತ್ರಿಯನ್ನು ಬೆಳೆಸುವುದರಲ್ಲಿ ಅನುಮಾನವಿಲ್ಲ.
ಎರಡು ತಿಂಗಳ ಹಿಂದೆ ಭಾರತಕ್ಕೆ ಬಂದ ಇರಾಣ ಸಂಸ್ಕೃತಿ ಗೋಷ್ಠಿ ಯ ನಾಯಕನು ಅಲಹಾ ಬಾದಿನಲ್ಲಿ “ಇರಾಣಿಗಳೂ ಭಾರತೀಯರೂ ಇರಾಣದ ಒಂದು ಕತೆಯಲ್ಲಿ ಪೂರ್ವಕ್ಕೊಬ್ಬ ಪತ್ನಿ ಮತ್ತೊಬ್ಬ ಹೋಗಿ ಅಗಲಿದ ಸಹೋದರರಂತೆ. ಅವರ ವಂಶೀಕರು ಪರಸ್ಪರ ಪರಿಚಯವನ್ನೆ ಮರೆತಿದ್ದರು, ಅವರಿಬ್ಬರಲ್ಲೂ ಉಳಿದಿರುವ ಪದ್ದತಿ ಎಂದರೆ ಅವರ ಮುರಳಿ ಗಾನದ ಕೆಲವು ಹರಕು ಗೀತೆಗಳ ಹಳೆಯ ರಾಗಗಳು. ಅನೇಕ ಶತಮಾನಗಳ ನಂತರ ಆ ರಾಗ ಶ್ರವಣದಿಂದ ಪುನಃ ಪರಸ್ಪರ ಪರಿಚಯವಾಗಿ ಪುರ್ನಮಿಲನವಾಯಿತು. ಅದೇ ರೀತಿ ನಾವು ಸಹ ನಮ್ಮ ಕೊಳಲಗಾನದಿಂದ ಪುರಾತನ ಗೀತೆಗಳನ್ನು ನುಡಿಸಲು ಬಂದಿದ್ದೇವೆ. ಭಾರತೀಯ ಸಹೋದರರೇ ಆ ಗೀತೆಗಳನ್ನು ಕೇಳಿ ನಿಮ್ಮ ಇರಾಣಿ ಸಹೋ ದರರನ್ನು ಗುರುತಿಸಿ ನಮ್ಮನ್ನು ಅಪ್ಪಿಕೊಳ್ಳಿ” ಎಂದು ಹೇಳಿದನು.
೭ ಭಾರತ ಮತ್ತು ಗ್ರೀಸ್
ಯೂರೋಪಿನ ಎಲ್ಲ ಸಂಸ್ಕೃತಿಗಳಿಗೆ ಪುರಾತನ ಗ್ರೀಸ್ ತೌರುಮನೆ ಎಂದು ಪ್ರಸಿದ್ದಿಯಾಗಿದೆ. ಪೌರ್ವಾತ್ಯ ಕ್ಕೂ ಪಾಶ್ಚಿಮಾತ್ಯಕ್ಕೂ ಇರುವ ಮೂಲ ಭಿನ್ನತೆಯ ವಿಷಯವಾಗಿ ಎಷ್ಟೋ ಗ್ರಂಥ ಗಳು ಹುಟ್ಟಿದೆ. ಇದು ನನಗೆ ಅರ್ಥವಾಗುವುದಿಲ್ಲ, ಅದೆಲ್ಲ ಬಹುಮಟ್ಟಿಗೆ ಯಾವ ವಿಚಾರವೂ ಇಲ್ಲದೆ, ವಿಜ್ಞಾನ ದೃಷ್ಟಿ ಯಿಲ್ಲದೆ ಅಸ್ಪಷ್ಟ ಭಾವನೆಗಳಿಂದ ಬರೆದದ್ದು. ಅನೇಕ ಯೂರೋಪಿಯು ವಿದ್ವಾಂಸರು ಮೊನ್ನೆ ಮೊನ್ನಿನವರೆಗೆ ಉತ್ತಮ ವಸ್ತು ಯಾವುದಿದ್ದರೂ ಗ್ರೀಸ್ ಮತ್ತು ರೋಮಿನಿಂದ ಬಂದುದೇ ಇರಬೇಕು ಎಂದು ಭಾವಿಸಿದ್ದರು. ಸರ್ ಹೆನ್ರಿ ಮೇನ್ ಎಲ್ಲೋ ಒಂದೆಡೆ ಕುರುಡು ಪ್ರಕೃತಿ ಶಕ್ತಿ ಯೊಂದನ್ನು ಬಿಟ್ಟರೆ ಪ್ರಪಂಚದಲ್ಲಿ ಗ್ರೀಕ್ ಜನ್ಯ ವಸ್ತು ವಿನಾ ಬೇರೆ ಯಾವುದಕ್ಕೂ ಚಲನಶಕ್ತಿಯೇ ಇಲ್ಲ ಎಂದಿದ್ದಾನೆ. ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳಲ್ಲಿ ಮಹಾ ಪಂಡಿತರಾದ ಯೂರೋಪಿನ ವಿದ್ವಾಂಸ ರಿಗೆ ಭಾರತ ಮತ್ತು ಚೀನಾದೇಶಗಳ ಪರಿಚಯವೇ ಇರಲಿಲ್ಲ. ಆದರೂ ಪ್ರೊಫೆಸರ್ ಇ.ಆರ್. ಡಾಡ್ಸ್ “ ಗ್ರೀಕ್ ಸಂಸ್ಕೃತಿಯ ಉದಯ ಪೌರ್ವಾತ್ಯ ಹಿನ್ನೆಲೆಯಲ್ಲಿ, ಯೂರೊಪಿಯನ್ ಮಹಾ ಪಂಡಿತರ ಮನಸ್ಸಿನಲ್ಲಿ ಮಾತ್ರವಲ್ಲದೆ ಈ ಹಿನ್ನೆಲೆಯು ಯಾವಾಗಲೂ ಸಂಬಂಧ ಕಡಿಮೆ ಬೀಳಲಿಲ್ಲ.” ಎಂದಿದ್ದಾನೆ.