ಪುಟ:ಭಾರತ ದರ್ಶನ.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೨೬

ಭಾರತ ದರ್ಶನ

ಯೂರೋಪಿನಲ್ಲಿ ಪಾಂಡಿತ್ಯವೆಂದರೆ ಗ್ರೀಕ್, ಹೀಬ್ರೂ ಮತ್ತು ಲ್ಯಾಟಿನ್ ಭಾಷೆಗಳ ಪಾಂಡಿತ್ಯ. ಆ ಪಂಡಿತರ ದೃಷ್ಟಿಯಲ್ಲಿ ಪ್ರಪಂಚವೆಂದರೆ ಮೆಡಿಟೆರೇನಿರ್ಯ ತೀರದ ಪ್ರಪಂಚ, ಈ ಪ್ರಪಂಚದ ಮೂಲತತ್ವವು ಪುರಾತನ ರೋಮನರ ಉದ್ದೇಶಕ್ಕಿಂತ ಹೆಚ್ಚು ಭಿನ್ನವಿರಲಿಲ್ಲ. ಆಗಾಗ ಮಾತ್ರ ಸ್ವಲ್ಪ ಮಾರ್ಪಾಡಾಗುತ್ತಿತ್ತು. ಅವರ ಇತಿಹಾಸ ಮತ್ತು ಭೌಗೋಲಿಕ ರಾಜಕೀಯವು ಈ ತತ್ವಕ್ಕೆ ಅಧೀನವಾಗಿತ್ತು. ಸಂಸ್ಕೃತಿ ಮತ್ತು ನಾಗರಿಕತೆಯ ಬೆಳೆವಣಿಗೆ ಮಾತ್ರವಲ್ಲದೆ ಅವರ ವೈಜ್ಞಾನಿಕ ಬೆಳೆವಣಿಗೆಗೆ ಸಹ ಈ ತತ್ವವು ಅಡ್ಡ ಬಂದಿತು. ಅವರ ಮನಸ್ಸಿನಲ್ಲೆಲ್ಲ ಪ್ಲೇಟೋ ಮತ್ತು ಅರಿಸ್ಟಾಟೆಲ್ಹಿಂದಿನ ಕಾಲದ ಏಷ್ಯನರ ಅನೇಕ ಅದ್ಭುತ ಕಾವ್ಯಗಳು ಅವರ ಕಿವಿಗೆ ಬಿದ್ದರೂ ಅವನ್ನು ಸುಲಭವಾಗಿ ಒಪ್ಪುತ್ತ ಇರಲಿಲ್ಲ. ಅದನ್ನು ಎದುರಿಸಿ, ಹೇಗೋ ತಮ್ಮ ಹಿಂದಿನ ಚಿತ್ರದ ಚೌಕಟ್ಟಿನೊಳಗೇ ಸೇರಿಸಿಬಿಡುವ ಮನೋಭಾವನೆ ಇತ್ತು. ವಿದ್ವಾಂಸರ ಮನೋಭಾವನೆಯೇ ಈ ರೀತಿ ಇರುವಾಗ ನಿರಕ್ಷರ ಕುಕ್ಷಿಗಳಾದ ಯೂರೋಪಿಯನ್ ಜನಸ್ತೋಮವು ಪೂರ್ವ ಪಶ್ಚಿಮಗಳೆರಡಕ್ಕೂ ಮೂಲ ಭಿನ್ನತೆ ಇದ್ದೇ ಇದೆ ಎಂದು ನಂಬಲೇ ಬೇಕು. ಯೂರೋಪಿನ ಔದ್ಯೋಗೀಕರಣ, ಅದರಿಂದ ಲಭಿಸಿದ ಅಪಾರ ಧನಸಂಪತ್ತು ಸಾಮಾನ್ಯ ಜನರ ಮನಸ್ಸಿನಲ್ಲಿ ಈ ಭಿನ್ನತೆಯ ಕಲ್ಪನೆಯನ್ನು ಇನ್ನೂ ಹೆಚ್ಚು ಮಾಡಿತು. ಒಂದು ವಿಚಿತ್ರ ತರ್ಕ ಪದ್ಧತಿಯಿಂದ ಪುರಾತನ ಗ್ರೀಸ್ ಆಧುನಿಕ ಯೂರೋಪ್ ಮತ್ತು ಅಮೆರಿಕಾಗಳಿಗೆ ಪಿತೃಸ್ಥಾನವೋ ಮಾತೃ ಸ್ಥಾನವೋ ಆಯಿತು. ಆದರೆ ಪ್ರಪಂಚದ ಪೂರ್ವೆತಿಹಾಸದ ಹೊಸ ಜ್ಞಾನವು ಕೆಲವು ವಿದ್ವಾಂಸರ ಮನಸ್ಸಿನಲ್ಲಿದ್ದ ಈ ಭಾವನೆಗಳನ್ನು ತಲೆಕೆಳಗೆ ಮಾಡಿತು. ಆದರೆ ಸಾಮಾನ್ಯ ಜನತೆಯಲ್ಲಿ ಅವರ ಯುಗಾಂತರದ ಅಭಿಪ್ರಾಯಗಳೇ ಶಾಶ್ವತ ಉಳಿದವು. ಒಮ್ಮೊಮ್ಮೆ ಕೆಲವು ಕಲ್ಪನೆಗಳು ಮೇಲೆ ಮೇಲೆ ಸುಳಿದು ಅವರ ಮನಸ್ಸಿನ ಚಿತ್ರದ ಹಿಂದೆ ಮರೆಯಾಗುತ್ತುದ್ದವು.

ಯೂರೋಪ್ ಮತ್ತು ಅಮೆರಿಕ ಔದ್ಯೋಗೀಕರಣದಲ್ಲಿ ಬಹಳ ಮುಂದುವರಿದು, ಏಷ್ಯ ಈ ವಿಚಾ ರದಲ್ಲಿ ಹಿಂದೆ ಬಿದ್ದಿದೆಯೇ ಹೊರತು ಬೇರೆ ಅರ್ಥದಲ್ಲಿ ಪಾಶ್ಚಾತ್ಯ ಪೌರ್ವಾತ್ಯ ಎಂಬ ಪದಭೇದಗಳ ಉಪಯೋಗ ನನಗೆ ಹಿಡಿಯುವುದಿಲ್ಲ, ಈ ಔದ್ಯೋಗಿಕರಣವು ಪ್ರಪಂಚದ ಇತಿಹಾಸದಲ್ಲೇ ಹೊಸದು. ಇನ್ನಾವುದಕ್ಕೂ ಸಾಧ್ಯವಾಗದಷ್ಟರ ಮಟ್ಟಿಗೆ ಪ್ರಪಂಚದ ಸ್ಥಿತಿಯನ್ನೆ ವ್ಯತ್ಯಾಸಗೊಳಿಸಿದೆ. ಇನ್ನೂ ವ್ಯತ್ಯಾ ಸಗೊಳಿಸುತ್ತಿದೆ. ಆಧುನಿಕ ಯುರೋಪ್ ಮತ್ತು ಅಮೆರಿಕಗಳ ನಾಗರಿಕತೆಗೂ ಗ್ರೀಕ್ ನಾಗರಿಕತೆಗೂ ಯಾವ ಸಜೀವ ಸಂಬಂಧವೂ ಇಲ್ಲ. ಸುಖಜೀವನವೇ ಮಾನವನ ಬಾಳ್ವೆಯ ನಿಜವಾದ ಮುಖ್ಯ ಗುರಿ ಎಂಬ ಆಧುನಿಕ ಭಾವನೆಯು ಗ್ರೀಕ್‌ರದು. ಉಳಿದೆಲ್ಲ ಪುರಾತನ ಸಂಸ್ಕೃತಿಗಳಿಗೆ ಇದು ತೀರ ಅಪರಿ ಚಿತ, ಗ್ರೀಕರು, ಭಾರತೀಯರು, ಚೀಣೀಯರು, ಇರಾಣಿಗಳು ಎಲ್ಲರೂ ಜೀವನದಲ್ಲಿ ಒಂದು ಸಮತೂಕ ಮತ್ತು ಸಮರಸತೆಯನ್ನು ಕೊಟ್ಟು, ನಮ್ಮ ಎಲ್ಲ ಕಾರ್ಯಗಳಿಗೆ ಹಿನ್ನೆಲೆಯಾದ ಒಂದು ಜೀವನ ಧರ್ಮ ಮತ್ತು ದರ್ಶನದ ಅನ್ವೇಷಣೆಯಲ್ಲಿದ್ದರು. ಈ ಆದರ್ಶವು ಜೀವನದ ಪ್ರತಿಯೊಂದು ಅಂಗದಲ್ಲಿ ಸಾಹಿತ್ಯ ದಲ್ಲಿ ಕಲೆಯಲ್ಲಿ--ಸಂಸ್ಥೆಗಳಲ್ಲಿ ಎದ್ದು ನೋಡಿ ಒಂದು ಸಮಸ್ಥಿತಿಯನ್ನು ಸಾಮರಸ್ಯವನ್ನು ಉ೦ಟುಮಾಡುತ್ತದೆ. ಪ್ರಾಯಶಃ ಈ ಕಲ್ಪನೆಗಳು ಪೂರ್ಣ ಸಾಧುವಲ್ಲದಿರಬಹುದು ; ಜೀವ ನದ ವಾಸ್ತವಚಿತ್ರವು ಬೇರೆ ಇದ್ದಿರಬಹುದು. ಆದರೂ ಇಂದಿನ ಯೂರೋಪ್ ಮತ್ತು ಅಮೆರಿಕದ ದೃಷ್ಟಿ ಗೂ ಪುರಾತನ ಗ್ರೀಕರ ಜೀವನ ದೃಷ್ಟಿ ಮತ್ತು ಪ್ರವೇಶಕ್ಕೂ ಇರುವ ಅಜಗಜಾಂತರವನ್ನು ಗಮನಿಸುವುದು ಒಳ್ಳೆಯದು. ಆಧುನಿಕ ಜೀವನದ ಕಠಿನ ವಿಧ್ವಂಸಕ ಜ್ವಾಲೆಯಿಂದ ತಪ್ತ ಜೀವ ನಕ್ಕೊಂದು ತಂಪನ್ನೆ ರಚಲು, ಅಥವ ತಮ್ಮ ಅಂತರಾತ್ಮದ ಯಾವುದೊ ಯಾತನೆಗೆ ಸಮಾಧಾನ ಕೊಡಲು ಅಮೆರಿಕನರು ಯುರೋಪಿಯನ್ರು ತಮ್ಮ ವಿರಾಮ ಕಾಲದಲ್ಲಿ ಗ್ರೀಕರನ್ನು ಸ್ತೋತ್ರ ಮಾಡುತ್ತಾರೆ ಮತ್ತು ಅವರೊಂದಿಗೆ ದೂರದ ಸಂಬಂಧವನ್ನು ಕಲ್ಪಿಸಿಕೊಳ್ಳುತ್ತಾರೆ.

ಪೂರ್ವದಲ್ಲಾಗಲಿ, ಪಶ್ಚಿಮದಲ್ಲಿ ಆಗಲಿ ಪ್ರತಿಯೊಂದು ದೇಶಕ್ಕೆ ಮತ್ತು ಜನಕ್ಕೆ ಒಂದು ವ್ಯಕ್ತಿತ್ವವಿದೆ ; ಒಂದು ಸಂದೇಶವಿದೆ; ಮತ್ತು ಆ ವ್ಯಕ್ತಿತ್ವವು ಜೀವನದ ಸಮಸ್ಯೆಗಳನ್ನು