ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
ಯುಗಾಂತರಗಳು
೧೨೭

ತನ್ನದೇ ಒಂದು ವೈಶಿಷ್ಟ್ಯ ಮಾರ್ಗದಿಂದ ಬಿಡಿಸಲು ಯತ್ನಿಸಿದೆ. ಗ್ರೀಸಿಗೂ ಒಂದು ನಿರ್ದಿಷ್ಟ ಸ್ಥಾನವಿದೆ ; ಆ ದಾರಿಯಲ್ಲಿ ಅದು ಅತ್ಯುನ್ನತ ಸ್ಥಾನ; ಅಂತೆಯೇ ಭಾರತ, ಚೀಣ ಮತ್ತು ಇರಾಣ, ಪ್ರಾಚೀನ ಭಾರತಕ್ಕೂ ಪ್ರಾಚೀನ ಗ್ರೀಸಿಗೂ ಎಷ್ಟೊ ಅಂತರವಿದ್ದರೂ ಪ್ರಾಚೀನ ಭಾರತ ಮತ್ತು ಚೀನಗಳ ಮಧ್ಯೆ ಎಷ್ಟೋ ಭಿನ್ನತೆ ಇದ್ದರೂ ಒಂದೇ ಭಾವನಾದೃಷ್ಟಿ ಇರುವಂತೆ ಕೆಲವು ವಿಷಯಗಳಲ್ಲಿ ಸಾಮ್ಯವಿದೆ. ಎಲ್ಲರಿಗೂ ಒಂದು ವಿಶಾಲವಾದ, ಸಹನೆಯ ಅಸಂಸ್ಕೃತ ದೃಷ್ಟಿ ಇತ್ತು. ಜೀವನೋತ್ಸಾಹವಿತ್ತು ಮತ್ತು ಸನಾತನ ಜನಾಂಗದ ಅನುಭವ ಪೂರ್ಣ ವಿವೇಕವಿತ್ತು. ಪ್ರತಿಯೊಂದು ಜನಾಂಗವೂ ತನ್ನ ಅಂತಃ ಪ್ರವೃತ್ತಿಗನುಗುಣವಾಗಿ, ತನ್ನ ಪ್ರಾಕೃತಿಕ ಸನ್ನಿವೇಶಗಳ ಪ್ರಭಾವವನ್ನನುಸರಿಸಿ ವಿಕಾಸಹೊಂದಿತು, ಮತ್ತು ಇತರ ದೃಷ್ಟಿಗಳಿಗಿಂತ ತನಗೆ ಯುಕ್ತ ತೋರಿದ ಜೀವನದ ಯಾವುದೋ ಒಂದು ದೃಷ್ಟಿಗೆ ಪ್ರಾಶಸ್ತ್ರ ಕೊಟ್ಟಿತು. ಈ ಪ್ರಾಶಸ್ಯವು ಪ್ರತಿಯೊಂದು ಜನಾಂಗಕ್ಕೂ ಬೇರೆಯಾಗಿತ್ತು. ಗ್ರೀಕ್ ಜನಾಂಗವು ವಾಸ್ತವಜೀವನಕ್ಕೆ ಪ್ರಾಶಸ್ತ್ರ ಕೊಟ್ಟರು. ತಮ್ಮ ಸುತ್ತಮುತ್ತಲಿನ ಸೌಂದಯ್ಯದಲ್ಲಿ ಅಥವ ಅವರೇ ಸೃಷ್ಟಿಸಿದ ಸೌಂದರದಲ್ಲಿ ಆನಂದವನ್ನು ಅನುಭವಿಸುತ್ತಿದ್ದರು. ಭಾರತೀಯರು ಸಹ ವಾಸ್ತವ ಜೀವನದಲ್ಲಿ ಈ ಆನಂದವನ್ನೂ ಮತ್ತು ಸಾಮರಸ್ಯವನ್ನೂ ಪಡೆದರು; ಆದರೆ ಅದರ ಜೊತೆಗೆ ಅವರ ದೃಷ್ಟಿಯು ಇನ್ನೂ ಆಳವಾದ ಜ್ಞಾನಾರ್ಜನೆಯ ಕಡೆಗೆ ನೆಟ್ಟಿತ್ತು ಮತ್ತು ಅವರ ಮನಸ್ಸು ವಿಚಿತ್ರ ಪ್ರಶ್ನೆಗಳ ಕಡೆಗೆ ಹರಿಯುತ್ತಿತ್ತು. ಚೀಣೀಯರು ಈ ಪ್ರಶ್ನೆಗಳನ್ನು, ಅವುಗಳ ರಹಸ್ಯವನ್ನು ಅರಿತುಕೊಂಡು ಅವುಗಳ ಜಟಿಲತೆಯಲ್ಲೇ ಸಿಕ್ಕಿಕೊಳ್ಳದ ವಿವೇಕವನ್ನು ತೋರಿಸಿದರು. ತನ್ನ ತನ್ನ ವೈಶಿಷ್ಟದ ಮಾರ್ಗದಲ್ಲಿ ಪ್ರತಿಯೊಂದು ಜನಾಂಗವೂ ತನ್ನ ಜೀವನದ ಪೂರ್ಣತೆಯನ್ನು ಮತ್ತು ಸೌಂದರ್ಯವನ್ನು ವ್ಯಕ್ತಗೊಳಿಸಲು ಪ್ರಯತ್ನ ಪಟ್ಟಿತು. ಭಾರತ ಮತ್ತು ಚೀನದೇಶಗಳ ತಳಹದಿಯು ಬಲವಾಗಿತ್ತು ; ಅವಕ್ಕೆ ಹೆಚ್ಚಿನ ಸಹನ ಸಾಮರ್ಥ್ಯವಿತ್ತು ಎಂಬುದು ಚರಿತ್ರೆಯಿಂದ ದೃಢವಾಗಿದೆ. ಬಹಳ ತೊನೆದಾಡಿ, ಹೀನಸ್ಥಿತಿಗೆ ಬಂದು, ಭವಿಷ್ಯವು ಅನಿಶ್ಚಿತವಿದ್ದರೂ ಇನ್ನೂ ಜೀವಂತವಾಗಿವೆ. ಪುರಾತನ ಗ್ರೀಸ್ ಎಷ್ಟೇ ವೈಭವ ದಿಂದ ಮೆರೆದರೂ ಅತ್ಯಲ್ಪ ಕಾಲ ಬಾಳಿತು. ಆ ಸಂಸ್ಕೃತಿಯು ತನ್ನ ಅದ್ಭುತ ಸಾಧನೆಗಳಲ್ಲಿ, ಅನಂತರ ಬಂದ ಸಂಸ್ಕೃತಿಗಳ ಸಂಸ್ಕಾರದಲ್ಲಿ, ತನ್ನ ಕ್ಷಣಿಕ, ಉಜ್ಜಲ ತುಂಬು ಜೀವನದ ನೆನಪಿನಲ್ಲಿ ಉಳಿಯಿತೆ ವಿನಾ ದೀರ್ಘಕಾಲ ತಾನೇ ಬಾಳಲಿಲ್ಲ. ಪ್ರಾಯಶಃ ಪ್ರಸಕ್ತ ಜೀವನಕ್ಕೆ ಹೆಚ್ಚು ಬೆಲೆ ಕೊಟ್ಟು ದರಿಂದ ಬೇಗಪ್ರಾಚೀನತೆಯ ಪದರಿನಲ್ಲಡಗಿಹೋಯಿತು.

ಇಂದಿನ ಯುರೋಪಿನ ಜನಾಂಗಗಳು ತಾವು ಹೆಲೆನಿಕ್ ಸತ್ವದ ಶಿಶುಗಳೆಂದು ಹೆಮ್ಮೆಗೊಳ್ಳುತ್ತಿದ್ದರೂ ಪ್ರಾಯಶಃ ಭಾರತವೇ ಪುರಾತನ ಗ್ರೀಸಿನ ಸತ್ವಕ್ಕೆ ದೃಷ್ಟಿಗೆ ಹೆಚ್ಚು ಹತ್ತಿರವಿದೆ. ನಮ್ಮ ಆನುವಂಶೀಯ ನಿಶ್ಚಿತ ಭಾವನೆಗಳು ನಮ್ಮ ವಿಚಾರಪೂರ್ಣದೃಷ್ಟಿಯನ್ನು ಮಬ್ಬುಗೊಳಿಸಿರುವುದರಿಂದ ಇದನ್ನು ನಾವು ಮರೆತಿದ್ದೇವೆ. ಭಾರತವು ಧರ್ಮ, ದರ್ಶನ, ಧ್ಯಾನ ಮತ್ತು ತತ್ವವಿಚಾರ ಗಳಲ್ಲಿ ಮಗ್ನವಾಗಿದೆ ; ಈ ಪ್ರಪಂಚದ ವಿಷಯವು ಅದಕ್ಕೆ ಬೇಕಿಲ್ಲ; ಪರಲೋಕ ಮತ್ತು ಜನ್ಮಾಂತರಗಳ ಕನಸು ಕಾಣುತ್ತ ಮೈಮರೆತಿದೆ ಎಂಬ ಪ್ರತೀತಿ ಇದೆ. ಪ್ರಾಯಶಃ ಈ ರೀತಿ ಹೇಳುವರು, ಭಾರತವು ಮುಂದೆಯೂ ಅದೇರೀತಿ ಚಿಂತಾಮಗ್ನವಾಗಿದ್ದರೆ, ಕಲ್ಪನಾ ಪ್ರಪಂಚದಲ್ಲೇ ಇದ್ದರೆ ಯಾರ ಅಡ್ಡಿಯೂ ಇಲ್ಲದೆ ಪ್ರಪಂಚದ ಸುಖವನ್ನೆಲ್ಲ ತಮ್ಮದನ್ನಾಗಿ ಅನುಭವಿಸ ಬಹುದು, ಜೀವನದ ಪೂರ್ಣತೆಯನ್ನು, ಜೀವನಾನಂದವನ್ನು ನಿರಾತಂಕವಾಗಿ ಸವಿಯಬಹುದು ಎಂಬ ಅಭಿಲಾಷೆಯಿಂದ ಹೇಳುತ್ತಿರಬಹುದು. ನಿಜ, ಇಂಡಿಯ ಆ ರೀತಿಯಲ್ಲಿ ಇದ್ದುದೂ ನಿಜ, ಅದಕ್ಕಿಂತ ಹೆಚ್ಚಾಗಿ ಬಾಳಿದ್ದೂ ನಿಜ. ಬಾಲ್ಯಾವಸ್ಥೆಯ ನಿಷ್ಕಾ ಪಟ್ಯವನ್ನೂ, ಉದಾಸೀನತೆಯನ್ನೂ ಭಾರತವು ಅರಿತಿದೆ; ಯೌವನದ ಭಾವೋದ್ರೇಕವನ್ನೂ ಪರವಶತೆಯನ್ನೂ ಅರಿತಿದೆ ; ಬಹು ಕಾಲದ ಸುಖ ದುಃಖಗಳ ಅನುಭವದಿಂದ ಬರುವ ಪರಿಪಕ್ವ ಜೀವನದ ತುಂಬು ವಿವೇಕವನ್ನು ಅರಿತಿದೆ; ಮತ್ತು ಪುನಃ ತನ್ನ ಬಾಲ್ಯಾವಸ್ಥೆಯನ್ನು, ಯೌವನವನ್ನು, ಪರಿಪಕ್ವ ಜೀವನವನ್ನು