ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೨೮
ಭಾರತ ದರ್ಶನ

ಪುನರುಜ್ಜಿವನಗೊಳಿಸಿಕೊಂಡಿದೆ. ಯುಗಾಂತರಗಳ ಕಾಲಮಾನ ಮತ್ತು ದೇಶ ವಿಸ್ತಾರದ ಅಸಾಧ್ಯ ಜಡತ್ವದಿಂದ ಕುಗ್ಗಿದೆ; ಶುಷ್ಕ ಪದ್ಧತಿಗಳು ದುಸ್ಸಂಪ್ರದಾಯಗಳು ದೇಹದೊಳಗೆ ಮನೆ ಮಾಡಿವೆ, ಅನೇಕ ಪರೋಪಜೀವಿಗಳು ಅಂಟಿಕೊಂಡು ರಕ್ತವನ್ನೇ ಹೀರುತ್ತಿವೆ ; ಆದರೆ ಇವುಗಳೆಲ್ಲದರ ಹಿಂದೆ ಯುಗಾಂತರದ ಅದ್ಭುತ ಶಕ್ತಿ ಇದೆ ಮತ್ತು ಪ್ರಾಚೀನ ಜನಾಂಗದ ಸುಷುಪ್ತ ವಿವೇಕವಿದೆ. ಏಕೆಂದರೆ ನಾವು ಅತಿ ಪುರಾತನರು ; ಅನಂತ ಶತಮಾನಗಳು ನಮ್ಮ ಕಿವಿಯಲ್ಲುಸುರುತ್ತಿವೆ ; ಗತಕಾಲದ ಸ್ಮರಣೆಯ ಕನಸುಗಳೂ ಇನ್ನೂ ನಮ್ಮನ್ನು ಆವರಿಸಿದ್ದರೂ ನಮ್ಮ ಯೌವನದ ಶಕ್ತಿಯನ್ನು ಪುನಃ ಪುನಃ ಪಡೆಯುವ ಮಾರ್ಗವೂ ನಮಗೆ ಗೊತ್ತಿದೆ.
ಈ ಅನಂತ ಕಾಲಯಾನದಲ್ಲಿ ಭಾರತಕ್ಕೊಂದು ಜೀವಶಕ್ತಿಯನ್ನು ಕೊಟ್ಟು, ಶಕ್ತಿಯುತವಾಗಿ ಉಳಿಸಿರುವುದು ಯಾವುದೋ ಒಂದು ರಹಸ್ಯ ತತ್ವವಲ್ಲ, ಅಲೌಕಿಕ ಜ್ಞಾನವಲ್ಲ, ಆದರೆ ಒಂದು ಕರುಣಾಪೂರ್ಣಮಾನವೀಯತೆ, ಒಂದು ವಿವಿಧ ಸ್ನೇಹಪೂರ್ಣ ಸಂಸ್ಕೃತಿ, ಜೀವನದ ಮತ್ತು ಜೀವನ ರಹಸ್ಯ ಮಾರ್ಗಗಳ ಆಳವಾದ ಜ್ಞಾನ. ಈ ಜ್ಞಾನದ ಅದ್ಭುತ ಶಕ್ತಿಯು ಶ್ರೇಷ್ಠ ಸಾಹಿತ್ಯ ಮತ್ತು ಕಲೆ ಯಲ್ಲಿ ಕಾಲಕಾಲಕ್ಕೆ ಹರಿದು ಬಂದಿದೆ. ನಮಗೆ ದೊರೆತಿರುವ ಸಾಹಿತ್ಯ ಮತ್ತು ಕಲಾವಸ್ತುಗಳು ಅತ್ಯಲ್ಪ ; ಹೆಚ್ಚಿನಭಾಗ ಇನ್ನೂ ಭೂಗತವಾಗಿದೆ ಅಥವ ಪ್ರಕೃತಿಯಿಂದಲೂ ಮಾನವನ ದೌರ್ಜನ್ಯ ದಿಂದಲೂ ಹಾಳಾಗಿದೆ. ಎಲಿಫಾಂಟ ಗುಹೆಗಳ ತ್ರಿಮೂರ್ತಿವಿಗ್ರಹದ ಆಳವಾದ ಜ್ಞಾನಪೂರ್ಣವೂ ಅರ್ಥಪೂರ್ಣವೂ ಆದ ತೇಜಃ ಪುಂಜವಾದ ಕಣ್ಣುಗಳನ್ನು ನೋಡಿದರೆ, ನಮ್ಮನ್ನು ಪರವಶರನ್ನಾಗಿ ಮಾಡುವ ಭರತಮಾತೆಯ ಬಹುಮುಖ ವಿಗ್ರಹವೇ ಇರುವಂತೆ ತೋರುತ್ತದೆ, ಅಜಂತ ಚಿತ್ರಕಲೆಯಲ್ಲಿ ವಿಶೇಷ ಕೋಮಲತೆ ಇದೆ, ಮಾಧುರ ವಿದೆ ; ಜೀವನ ಮತ್ತು ಸೌಂದಯ್ಯ ಪ್ರೇಮವಿದೆ. ಆದರೂ ಯಾವುದೋ ಪರವಸ್ತು ವಿನ ಗಾಢವಾದ ಭಾವನೆ ಇರುವಂತೆ ಇದೆ.
ಭೂಗೋಳ ದೃಷ್ಟಿ ಯಿಂದ, ಹವಾಗುಣದಿಂದ ಭಾರತಕ್ಕೂ ಗ್ರೀಸಿಗೂ ಬಹಳ ವ್ಯತ್ಯಾಸವಿದೆ, ಇಂಡಿಯದಲ್ಲಿರುವಂತೆ ಅಲ್ಲಿ ನಿಜವಾದ ನದಿಗಳೇ ಇಲ್ಲ, ದೊಡ್ಡ ಕಾಡುಗಳಿಲ್ಲ, ಗಿಡಗಳಿಲ್ಲ, ಸಮುದ್ರವು ತನ್ನ ಅಪಾರತೆಯಿಂದ, ಉಬ್ಬರವಿಳಿತಗಳಿಂದ ಭಾರತೀಯರ ಮೇಲಿನ ಪರಿಣಾಮಕ್ಕಿಂತ ಹೆಚ್ಚು ಪರಿಣಾಮವನ್ನು ಗ್ರೀಕರ ಮೇಲೆ ಮಾಡಿತು. ಪ್ರಾಯಶಃ ಸಮುದ್ರತೀರದ ಭಾರತೀಯರ ಮೇಲೆ ಸ್ವಲ್ಪ ಹೆಚ್ಚು ಪರಿಣಾಮ ಆಗಿರಬಹುದು, ಭಾರತೀಯ ಜೀವನವು ವಿಶಾಲವಾದ ಮೈದಾನಗಳ, ಉನ್ನತ ಪರ್ವತಗಳ, ಮಹಾನದಿಗಳ ಮತ್ತು ಘೋರಾರಣ್ಯಗಳ ವರ್ಷಿಯ ಜೀವನ, ಗ್ರೀಸಿನಲ್ಲೂ ಕೆಲವು ಪರ್ವತಗಳಿದ್ದವು. ಭಾರತೀಯರು ತಮ್ಮ ದೇವತೆಗಳಿಗೆ, ಋಷಿಗಳಿಗೆ ಹಿಮಾಲಯದಲ್ಲಿ ಮನೆ ಮಾಡಿಕೊಟ್ಟಂತೆ ಗ್ರೀಕರು ತಮ್ಮ ದೇವತೆಗಳಿಗೆ ಒಲಿಂಪಸ್ ಪರ್ವತದಲ್ಲಿ ಮನೆ ಮಾಡಿದರು. ಇಬ್ಬರಲ್ಲೂ ಇತಿಹಾಸದಿಂದ ಬೇರ್ಪಡಿಸಲಾಗದಂತೆ ಕಲ್ಪನೆಯನ್ನು ವಾಸ್ತವಿಕತೆಯಿಂದ ಬೇರೆ ಮಾಡಲಾಗದಂತೆ ಪುರಾಣಗಳು ಹುಟ್ಟಿದವು. ಪುರಾತನ ಗ್ರೀಕರು ಕೇವಲ ಭೋಗ ಜೀವಿಗಳೂ ಆಗಿರಲಿಲ್ಲ, ವಿರಕ್ತರೂ ಆಗಿರಲಿಲ್ಲ, ಜೀವನ ಸುಖವು ಕೆಟ್ಟು ದು, ನೀತಿಬಾಹಿರವಾದುದು ಎಂದ್ರ ವಿಮುಖರಾಗಲು ಯತ್ನಿ ಸಲಿಲ್ಲ. ಆಧುನಿಕರಂತೆ ಸುಖಲೋಲುಪತೆಯೇ ಸರ್ವಸ್ವ ಎಂದು ಅದನ್ನೇ ಬೆನ್ನು ಹತ್ತಿಯೂ ಹೋಗಲಿಲ್ಲ. ಯಾವ ಪ್ರತಿಬಂಧಕಗಳೂ ಇಲ್ಲದೆ ದೊಡ್ಡ ಮಾರ್ಗದಲ್ಲಿ ಜೀವನ ನಡೆಸಿದರು ; ಯಾವ ಕೆಲಸಕ್ಕೆ ಕೈ ಹಾಕಿದರೂ ಪೂರ್ಣ ಶ್ರದ್ದೆಯಿಂದ ಕಾರ್ಯ ನಿರ್ವಹಿಸುತ್ತಿದ್ದರು ; ಮತ್ತು ಈ ರೀತಿಯಲ್ಲಿ ಹೇಗೋ ನಮ್ಮ ಇಂದಿನ ಸ್ಥಿತಿಗಿಂತ ಹೆಚ್ಚು ಉತ್ಸಾಹಿಗಳಿದ್ದಂತೆ ತೋರು ಇದೆ. ಭಾರತದಲ್ಲಿ ಸಹ ಅದೇ ಬಗೆಯ ಒಂದು ಜೀವನೋತ್ಸಾಹ ವಿದ್ದಂತೆ ನಮ್ಮ ಪ್ರಾಚೀನ ಸಾಹಿತ್ಯದಿಂದಲೂ ತಿಳಿಯುತ್ತದೆ. ಗ್ರೀಸಿನಲ್ಲಿ ಇದ್ದಂತೆ ಭಾರತದಲ್ಲಿ ಸಹ ಜೀವನದಲ್ಲಿ ಒಂದು ವಿರಕ್ತ ಭಾವವೂ ಇತ್ತು. ಆದರೆ ಅದು ಕೇವಲ ಸ್ವಲ್ಪ ಜನರಲ್ಲಿ ಮಾತ್ರ ಇತ್ತು, ಜನ ಸಾಮಾನ್ಯ ತಗೆ ಹರಡಲಿಲ್ಲ. ಜೈನ ಮತ್ತು ಬೌದ್ಧ ಧರ್ಮಗಳ ಪ್ರಭಾವದಿಂದ ಈ ಭಾವನೆಗೆ ವಿಶೇಷ ಪ್ರಾಮುಖ್ಯತೆ ದೊರೆತರೂ ಜನ ಜೀವನದ ಹಿನ್ನೆಲೆಯಲ್ಲಿ ಯಾವ ವಿಶೇಷ ಮಾರ್ಪಾಟೂ ಆಗಲಿಲ್ಲ.