ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೨೨೨
ಭಾರತ ದರ್ಶನ

ಈಗಲೂ ಸಹ ಗೆದ್ದ ಜನರನ್ನು ನಿರ್ನಾಮ ಮಾಡುವುದು ಅಥವ ಗುಲಾಮಗಿರಿಗೆ ತಳ್ಳುವುದು. ಆರ್ಯರು ಈ ಮಾರ್ಗವನ್ನು ಅನುಸರಿಸಲಿಲ್ಲ; ಆದರೆ ಉಚ್ಚವರ್ಗದ ಉನ್ನತ ಮಟ್ಟವನ್ನು ಕಾಪಾಡಿಕೊಂಡು ಬರಲು ಎಲ್ಲ ಬಗೆಯ ಎಚ್ಚರಿಕೆಯನ್ನೂ ತೆಗೆದುಕೊಂಡು, ಅಷ್ಟು ಹೆಚ್ಚಳವನ್ನು ಮಾತ್ರ ಕಾಪಾಡಿ ಕೊಂಡು, ಸಾಮಾನ್ಯ ನಿಯಮಗಳ ಅನುಸಾರವಾಗಿ ಒಂದು ಆಯಕಟ್ಟಿನ ಒಳಗೆ ಪ್ರತಿಯೊಂದು ಪಂಗಡವೂ ತನ್ನ ಉದ್ಯಮವನ್ನು ಸಾಗಿಸುತ್ತ, ತನ್ನ ಅಭಿಲಾಷೆ ಮತ್ತು ಪದ್ಧತಿಗಳಿಗನುಸಾರವಾಗಿ ಜೀವನ ನಡೆಸಲು ಅನುಕೂಲವಾಗುವಂತೆ ಬಹು ಪಂಗಡದ ಸಮಾಜ ಒಂದನ್ನು ನಿರ್ಮಿಸಲಾಯಿತು. ಇನ್ನೊಂದು ಪಂಗಡವನ್ನು ದ್ವೇಷಿಸಬಾರದು. ಅದರ ಆಡಳಿತದೊಳಗೆ ಪ್ರವೇಶ ಮಾಡಬಾರದು. ಎಂಬುದೊಂದೇ ನಿಜವಾದ ನಿಷೇಧವಿತ್ತು. ಹೊಸಬರು ತಮ್ಮದೇ ಪಂಗಡಗಳನ್ನು ಕಟ್ಟುವದಕ್ಕೂ, ಹಳೆಯ ಪಂಗಡಗಳಲ್ಲಿ ಅಸಮಾಧಾನಗೊಂಡವರು ತಮ್ಮದೇ ಒಂದು ಪಂಗಡವನ್ನು ನಿರ್ಮಿಸಿಕೊಳ್ಳು ವದಕ್ಕೂ ಸ್ವಾತಂತ್ರ್ಯವಿತ್ತು. ಪ್ರತಿಯೊಂದು ಗುಂಪಿನಲ್ಲಿ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಪ್ರಜಾಸತ್ತೆ ಇತ್ತು. ಗುಂಪಿನ ಯಾಜಮಾನ್ಯವು ಚುನಾವಣೆಯಿಂದ ದೊರೆಯುತ್ತಿತ್ತು. ಮುಖ್ಯ ವಿಷಯಗಳಲ್ಲಿ ಯಜಮಾನರು ಇಡೀ ಗುಂಪಿನ ಅಭಿಪ್ರಾಯ ಪಡೆದು ತೀರ್ಮಾನಕ್ಕೆ ಬರುತ್ತಿದ್ದರು.

ಈ ಪಂಗಡಗಳೆಲ್ಲವೂ ಯಾವುದಾದರೊಂದು ವ್ಯಾಪಾರ ಅಥವ ಉದ್ಯಮವನ್ನು ಅವಲಂಬಿಸಿ ನಿರ್ಮಿಸಿದ ಪಂಗಡಗಳು. ಒಂದು ಬಗೆಯ ವಣಿಕಸಂಘ ಅಥವ ಉದ್ಯೋಗ ಸಂಘಗಳು. ಪ್ರತಿಯೊಂದು ಸಂಘದಲ್ಲೂ ಒಗ್ಗಟ್ಟು ಇದ್ದುದಲ್ಲದೆ ತನ್ನ ಸದಸ್ಯರಲ್ಲಿ ಯಾರಾದರೂ ಕಷ್ಟಕ್ಕೀಡಾದರೆ ಆತನಿಗೆ ರಕ್ಷಣೆ ಕೊಟ್ಟು ಸಹಾಯ ಮಾಡುತ್ತಿದ್ದವು. ಒಂದೊಂದು ಪಂಗಡಕ್ಕೂ ಇತರ ಪಂಗಡಗಳ ನಿಕಟ ಬಾಂಧವ್ಯವಿತ್ತು. ಪ್ರತಿಯೊಂದು ಪಂಗಡವೂ ತನ್ನ ಆಯಕಟ್ಟಿನೊಳಗೆ ಅಭಿವೃದ್ಧಿಯಾದರೆ ಇಡೀ ಸಮಾಜವೇ ಸಂತುಷ್ಟಿ ಯಿಂದ ಸಮಗ್ರವಾಗಿ ಮುಂದುವರಿಯುವುದೆಂದೇ ಮೂಲತತ್ವವಾಗಿತ್ತು. ಇದಲ್ಲದೆ ಈ ಎಲ್ಲ ಗುಂಪು ಗಳಲ್ಲಿ ಒಂದು ದೃಢವಾದ ಐಕಮತ್ಯವನ್ನುಂಟುಮಾಡಲು ಒಂದೇ ಸಂಸ್ಕೃತಿ, ಒಂದೇ ಬಗೆಯ ಸಂಪ್ರದಾಯಗಳು; ಅದೇ ರಾಷ್ಟ್ರಪುರುಷರು ಮತ್ತು ಆಚಾರ್ಯ ಪುರುಷರು. ನಾಲ್ಕು ದಿಕ್ಕುಗಳಲ್ಲೂ ಯಾತ್ರಾಸ್ಥಳಗಳು. ಈ ರೀತಿ ರಾಷ್ಟ್ರೀಯ ಸಂಸ್ಥೆಗಳನ್ನು ಏರ್ಪಡಿಸಿ ಒಂದೇ ದೇಶದವರೆಂಬ ರಾಷ್ಟ್ರ ಭಾವನೆಯನ್ನು ಬೆಳೆಸಿದರು. ಈ ರಾಷ್ಟ್ರಭಾವನೆಗೂ ಇಂದಿನ ರಾಷ್ಟ್ರೀಯಭಾವನೆಗೂ ಬಹಳ ಅಂತರ ವಿದೆ. ರಾಜಕೀಯದೃಷ್ಟಿಯಿಂದ ದುರ್ಬಲವಿದ್ದರೂ ಸಾಮಾಜಿಕ ದೃಷ್ಟಿಯಿಂದ, ಸಂಸ್ಕೃತಿಯ ದೃಷ್ಟಿ ಯಿಂದ ಅದು ಬಹಳ ಬಲವಾಗಿತ್ತು. ಅದರ ರಾಜಕೀಯ ದೌರ್ಬಲ್ಯದಿಂದ ದೇಶವು ತನ್ನ ಸ್ವಾತಂತ್ರ ವನ್ನು ಕಳೆದುಕೊಂಡಿತು. ಸಾಮಾಜಿಕಶಕ್ತಿಯಿಂದ ಪರಕೀಯರನ್ನೂ ಜೀರ್ಣಮಾಡಿಕೊಂಡು ಸುಲಭವಾಗಿ ಪುನರುಜ್ಜೀವನಗೊಂಡಿತು; ಅನಂತಮುಖಿಯಾದ್ದರಿಂದ ಪರದಾಸ್ಯವನ್ನೂ ಸಂಕಟ ವನ್ನೂ ನುಂಗಿಕೊಂಡು ಅಮರವಾಗಿ ಉಳಿಯಿತು.

ಈ ರೀತಿ ಜಾತಿಯು ಕರ್ತವ್ಯ ಕರ್ಮ ಮತ್ತು ಉದ್ಯೋಗವನ್ನವಲಂಬಿಸಿ ಹುಟ್ಟಿದುದು. ಯಾವ ಒಂದು ಬಂಧನವೂ ಇಲ್ಲದೆ, ಎಲ್ಲ ಪಂಗಡಗಳಿಗೂ ಪೂರ್ಣವಿಕಾಸ ಸ್ವಾತಂತ್ರ್ಯವನ್ನು ಕೊಟ್ಟು ಎಲ್ಲ ವನ್ನೂ ಒಳಗೊಂಡ ಒಂದು ಸಮಷ್ಟಿ ಸಮಾಜವಾಗಿತ್ತು. ಅದರಲ್ಲಿ ಏಕಪತ್ನೀತ್ವ, ಬಹುಪತ್ನೀತ್ವ ಮತ್ತು ಬ್ರಹ್ಮಚರ್ಯ ಎಲ್ಲವೂ ಇದ್ದವು. ಇತರ ಸಂಪ್ರದಾಯ, ಆಚಾರ ಮತ್ತು ವ್ಯವಹಾರಗಳಿಗೆ ಮನ್ನಣೆಕೊಟ್ಟಂತೆ ಅವುಗಳಿಗೂ ಅವಕಾಶ ದೊರೆತಿತ್ತು. ಯಾವ ಅಲ್ಪ ಸಂಖ್ಯಾಕ ಪಂಗಡವೂ ಬಹು ಸಂಖ್ಯಾಕರ ಅಡಿಯಾಳುತನಮಾಡಬೇಕಾದ್ದಿರಲಿಲ್ಲ. ತನ್ನದೇ ಒಂದು ಗುಂಪನ್ನು ಮಾಡಿಕೊಳ್ಳು ವಷ್ಟು ಸಂಖ್ಯೆಯಿದ್ದರೆ ತನ್ನದೇ ಪ್ರತ್ಯೇಕ ವೈಶಿಷ್ಟ್ಯ ಜೀವನವನ್ನು ನಡೆಸಲು ಅವಕಾಶವಿತ್ತು. ಒಂದೊಂದು ಪಂಗಡಕ್ಕೂ ಮಧ್ಯೆ ಜನಾಂಗ, ಧರ್ಮ, ವರ್ಣ, ಸಂಸ್ಕೃತಿ ಮತ್ತು ಬೌದ್ಧಿಕ ವ್ಯತ್ಯಾಸಗಳು ಎಷ್ಟು ಬೇಕಾದರೂ ಇರಲು ಅವಕಾಶವಿತ್ತು.

ಪ್ರತಿಯೊಬ್ಬ ವ್ಯಕ್ತಿಗೂ ಒಂದು ಪಂಗಡವಿತ್ತು. ಆ ಪಂಗಡದ ಕೆಲಸ ಕಾರ್ಯಗಳಿಗೆ ಅಡ್ಡಿ ಯಾಗದಂತೆ ತಾನು ಏನುಬೇಕಾದರೂ ಮಾಡಲು ಸ್ವಾತಂತ್ರ್ಯವಿತ್ತು. ಆದರೆ ಆ ಗುಂಪನ್ನು ಒಡೆ