ಯಲು ಆತನಿಗೆ ಅಧಿಕಾರವಿರಲಿಲ್ಲ; ತಕ್ಕಷ್ಟು ಹಿಂಬಾಲಕರಿದ್ದರೆ ತನ್ನದೇ ಒಂದು ಪ್ರತ್ಯೇಕ ಪಂಗಡ
ಕಟ್ಟ ಜೀವಿಸಲು ಅವಕಾಶವಿತ್ತು. ಆದರೆ ಯಾವ ಗುಂಪಿನೊಳಗೂ ಹೊಂದಿಕೊಳ್ಳದಿದ್ದರೆ ಪ್ರಾಪಂಚಿಕ
ವ್ಯವಹಾರದಿಂದ ದೂರವಾಗುತ್ತಿದ್ದನು. ಆಗ ಜಾತಿ, ಪಂಗಡ ಮತ್ತು ಪ್ರಪಂಚದಿಂದ ದೂರನಾಗಿ
'ಸಂನ್ಯಾಸಿ' ಯಾಗಿ ದೇಶಾಟನೆಮಾಡಿ ಹೇಗಾದರೂ ಜೀವಿಸಬಹುದಿತ್ತು.
ಭಾರತೀಯ ಸಮಾಜದೃಷ್ಟಿಯಲ್ಲಿ ವ್ಯಕ್ತಿಯು ಪಂಗಡದ ಅಥವ ಸಮಾಜದ ಅಧೀನನಾದರೂ
ಧರ್ಮಾನ್ವೇಷಣೆಯಲ್ಲಿ ಆತ್ಮಜ್ಞಾನದಲ್ಲಿ, ವ್ಯಕ್ತಿಗೇ ಪ್ರಾಧಾನ್ಯವಿತ್ತೆಂಬುದನ್ನು ಮರೆಯಲಾಗದು.
ಉಚ್ಚನಿರಲಿ, ನೀಚನಿರಲಿ ಯಾವ ಜಾತಿಯವನೇ ಇರಲಿ, ಪ್ರತಿಯೊಬ್ಬ ವ್ಯಕ್ತಿಗೂ ಮುಕ್ತಿ ಮತ್ತು
ಸತ್ಯಾನ್ವೇಷಣೆಯಲ್ಲಿ ಸಮಾನ ಅವಕಾಶವಿತ್ತು. ಮುಕ್ತಿ ಮತ್ತು ಆತ್ಮಾನ್ವೇಷಣೆ ಯಾವ ಒಂದು
ಪಂಗಡದ ಸ್ವತ್ತೂ ಆಗಿರಲಿಲ್ಲ; ಅದು ಕೇವಲ ವೈಯಕ್ತಿಕವಿತ್ತು. ಈ ಅನ್ವೇಷಣೆಯ ಮಾರ್ಗ
ದಲ್ಲಿಯೂ ಯಾವ ನಿಯತಮಾರ್ಗವೂ ಇರಲಿಲ್ಲ. ಎಲ್ಲ ಮಾರ್ಗಗಳೂ ಒಂದೇ ಗುರಿಯ ಸಾಧನೆಗೆ
ಎಂಬ ಭಾವನೆ ಇತ್ತು.
ಸಮಾಜರಚನೆಯಲ್ಲಿ ಪಂಗಡದ ಪ್ರಾಮುಖ್ಯತೆ ಇದ್ದು ಜಾತಿ ಮತಗಳಿಗೆ ಅವಕಾಶಕೊಟ್ಟರೂ
ಭಾರತದಲ್ಲಿ ವ್ಯಕ್ತಿಪ್ರಾಧಾನ್ಯತೆ ಯಾವಾಗಲೂ ಇದೆ. ಎರಡು ಮಾರ್ಗಗಳ ಘರ್ಷಣೆಯನ್ನು ಅನೇಕ
ಸಂದರ್ಭಗಳಲ್ಲಿ ನೋಡಬಹುದು. ವ್ಯಕ್ತಿಪ್ರಾಧಾನ್ಯತೆಗೆ ಅವಕಾಶಕೊಟ್ಟ ಧಾರ್ಮಿಕ ತತ್ವವೇ ಆ
ವ್ಯಕ್ತಿವಾದಕ್ಕೆ ಬಹುಮಟ್ಟಿಗೆ ಕಾರಣವಾಯಿತು. ಜಾತಿಪದ್ಧತಿಯನ್ನು ಖಂಡಿಸಿ ದೂಷಿಸಿದ ಸಮಾಜ
ಸುಧಾರಕರೆಲ್ಲ ಸಾಮಾನ್ಯವಾಗಿ ಧರ್ಮಸುಧಾರಕರು. ಧರ್ಮವು ಸಾರುವ ಆತ್ಮೋನ್ನತಿ ಮತ್ತು ವ್ಯಕ್ತಿ
ವಿಕಾಸಕ್ಕೆ ಜಾತಿಪದ್ಧತಿಗಳು ಅಡ್ಡ ಬರುತ್ತವೆ ಎಂದೇ ಅವರ ವಾದ. ಜಾತಿಪದ್ದತಿಯನ್ನು ನಿರ್ಮೂಲ
ಮಾಡಿ ಒಂದು ಬಗೆಯ ವ್ಯಕ್ತಿವಿಕಾಸ ಮತ್ತು ವಿಶ್ವಧರ್ಮವನ್ನು ಬೋಧಿಸಲೆಂದೇ ಬೌದ್ಧಧರ್ಮವು
ಹುಟ್ಟಿತು. ಆದರೆ ಈ ವ್ಯಕ್ತಿವಾದವು ಸಾಮಾನ್ಯ ಸಾಮಾಜಿಕ ವ್ಯವಹಾರದಿಂದ ದೂರವಾಯಿತು.
ಜಾತಿಪದ್ಧತಿಗೆ ಪ್ರತಿಯಾಗಿ ಬೇರೊಂದು ಸಮಾಜರಚನೆಯನ್ನು ತೋರಿಸಲಿಲ್ಲ. ಆದ್ದರಿಂದ ಆಗಲೂ
ಅನಂತರವೂ ಜಾತಿ ಪದ್ಧತಿಯು ಅಳಿಯದೆ ಉಳಿಯಿತು.
ಮುಖ್ಯ ಜಾತಿಗಳು ಯಾವುವು? ಜಾತಿಬಾಹಿರರಾದ ಅಸ್ಪೃಶ್ಯರನ್ನು ಬಿಟ್ಟರೆ ಆಚಾರ್ಯರೂ
ಗುರುಗಳೂ ಜ್ಞಾನಿಗಳೂ ಆದವರು ಬ್ರಾಹ್ಮಣರು, ಅರಸರು ಯೋಧರು ಆದವರು ಕ್ಷತ್ರಿಯರು,
ವಣಿಕರು, ವ್ಯಾಪಾರಿಗಳು, ಧನಿಕರು ಆದವರು ವೈಶ್ಯರು, ವ್ಯವಸಾಯಗಾರರು ಮತ್ತು ಇತರ ಕಸಬಿ
ನವರು ಶೂದ್ರರು. ಪರಸಂಪರ್ಕವಿಲ್ಲದೆ ಶಿಷ್ಟಾಚಾರಬದ್ದರಾದವರೆಂದರೆ ಬ್ರಾಹ್ಮಣರು ಮಾತ್ರ.
ಕ್ಷತ್ರಿಯರು ವಿದೇಶದಿಂದ ಬಂದು ನೆಲಸುವವರನ್ನೂ, ಸ್ವಸಾಮರ್ಥ್ಯದಿಂದ ಅಧಿಕಾರಕ್ಕೆ ಬಂದವರನ್ನೂ
ತಮ್ಮ ಗುಂಪಿಗೆ ಸೇರಿಸಿಕೊಳ್ಳುತ್ತಿದ್ದರು. ವೈಶ್ಯರು ವ್ಯಾಪಾರ, ಧನಕೋಠಿಗಳ ವ್ಯವಹಾರ ಮತ್ತು
ಇನ್ನೂ ಇತರ ವೃತ್ತಿಗಳನ್ನು ಕೈಗೊಳ್ಳುತ್ತಿದ್ದರು. ಶೂದ್ರರ ಮುಖ್ಯ ಕಸಬು ವ್ಯವಸಾಯ ಮತ್ತು
ಮನೆಯಾಳುತನ. ಹೊಸವೃತ್ತಿಗಳು ಬೆಳೆದಂತೆ ಹೊಸ ಜಾತಿಗಳೂ ಬೆಳೆದವು. ಹಳೆಯ ಜಾತಿಗಳು
ಹೊಸ ಜಾತಿಗಳಿಗಿಂತ ಶ್ರೇಷ್ಠತೆ ಪಡೆದವು. ಈ ಪರ೦ಪರೆ ಈಗಲೂ ನಡೆದುಬರುತ್ತಿದೆ. ಜನಿವಾರ
ವನ್ನು ಹಾಕಿಕೊಂಡರೆ ಉತ್ತಮರಾಗುತ್ತೇವೆಂದು ಕೆಳಗಿನ ಜಾತಿಗಳವರು ಕೆಲವರು ಜನಿವಾರ
ಹಾಕಲು ಆರಂಭಿಸಿದ್ದಾರೆ. ಆದರೆ ಪ್ರತಿಯೊಂದು ಜಾತಿಯೂ ತನ್ನ ಆಯಕಟ್ಟಿನಲ್ಲಿ ತನ್ನ ಕಸಬನ್ನು
ನಿರ್ವಹಿಸುತ್ತ ಬಂದುದರಿಂದ ಇದಾವುದೂ ಹೆಚ್ಚು ಪರಿಣಾಮಕಾರಿಯಾಗಲಿಲ್ಲ. ಆತ್ಮಗೌರವದ
ಪ್ರಶ್ನೆಮಾತ್ರವಾಯಿತು. ಕೆಲವು ವೇಳೆ ಕೆಳಜಾತಿಯವರು ಕೇವಲ ತಮ್ಮ ಸ್ವಸಾಮರ್ಥ್ಯದಿಂದ
ರಾಜ್ಯದ ಉನ್ನತಪದವಿಗೇರಿ ಅಧಿಕಾರ ನಡೆಸುತ್ತಿದ್ದರು. ಆದರೆ ಆ ಸಂಧರ್ಭಗಳು ಬಹಳ ವಿರಳ.
ಸಮಾಜರಚನೆಯಲ್ಲಿ ಸಾಮಾನ್ಯವಾಗಿ ಪೈಪೋಟ ಮತ್ತು ಸಂಪಾದನೆ ಇಲ್ಲದೆ ಇದ್ದುದರಿಂದ
ಈ ಜಾತಿಭೇದಗಳಿಂದ ಹೆಚ್ಚು ಕೆಡುಕಾಗಲಿಲ್ಲ. ತನ್ನ ಜ್ಞಾನಸಂಪತ್ತು ಮತ್ತು ಬುದ್ದಿಶಕ್ತಿಗಾಗಿ
ಹೆಮ್ಮೆ ಪಡುತ್ತಿದ್ದ ಉತ್ತಮಜಾತಿಯ ಬ್ರಾಹ್ಮಣನಿಗೆ ಸಮಾಜದಲ್ಲಿ ಗೌರವವಿದ್ದರೂ ಆತನಿಗೆ ಯಾವ
ಪುಟ:ಭಾರತ ದರ್ಶನ.djvu/೨೨೮
ಗೋಚರ
ಈ ಪುಟವನ್ನು ಪರಿಶೀಲಿಸಲಾಗಿದೆ
ಹೊಸ ಸಮಸ್ಯೆಗಳು
೨೨೩