ಆಸ್ತಿಯೂ ಇರಲಿಲ್ಲ. ಆದರೆ ವರ್ತಕನು ಧನಿಕನೂ ಶ್ರೀಮಂತನೂ ಇದ್ದರೂ ಆತನಿಗೆ ಸಮಾಜದಲ್ಲಿ
ವಿಶೇಷ ಗೌರವವೂ ಇರಲಿಲ್ಲ.
ಜನತೆಯಲ್ಲಿ ಬಹುಸಂಖ್ಯಾಕರು ವ್ಯವಸಾಯಗಾರರಾಗಿದ್ದರು. ಜಮೀನುದಾರಿಯೂ ಇರಲಿಲ್ಲ.
ರೈತನು ಹೊಲದ ಮಾಲಿಕನೂ ಆಗಿರಲಿಲ್ಲ. ಶಾಸನವಿಧಿಯ೦ತೆ ಭೂಮಿಯ ಒಡೆತನ ಯಾರದೆಂದು
ಹೇಳುವುದು ಕಷ್ಟ. ಈಗಿನ ಭೂಮಿಯ ಒಡೆತನದ ಭಾವನೆ ಆಗ ಇರಲಿಲ್ಲ. ವ್ಯವಸಾಯಗಾರನಿಗೆ
ತನ್ನ ಭೂಮಿಯಲ್ಲಿ ಬೆಳೆ ತೆಗೆಯಲು ಅಧಿಕಾರವಿತ್ತು. ಬೆಳೆಯನ್ನು ಹೇಗೆ ಹಂಚಬೇಕೆಂಬುದೇ
ಮುಖ್ಯಪ್ರಶ್ನೆಯಾಗಿತ್ತು. ಬಹುಭಾಗ ರೈತನದಾಗಿತ್ತು. ದೊರೆಗೆ ಅಥವ ರಾಜ್ಯಕ್ಕೆ 1/6ನೆ ಭಾಗ
ಸೇರುತ್ತಿತ್ತು. ಗ್ರಾಮದ ಸೇವೆ ಮಾಡುತ್ತಿದ್ದ ಪ್ರತಿಯೊಂದು ಪಂಗಡಕ್ಕೂ ಒಂದೊಂದು
ಪಾಲು ಇತ್ತು. ವಿದ್ಯೆಕಲಿಸಿ ಧರ್ಮೋಪದೇಶಮಾಡುತ್ತಿದ್ದ ಬ್ರಾಹ್ಮಣ, ವರ್ತಕ, ಕಮ್ಮಾರ,
ಬಡಗಿ, ಚಮ್ಮಾರ, ಕುಂಬಾರ, ಮನೆಕಟ್ಟುವವ, ನಾಯಿಂದ, ಭಂಗಿ ಎಲ್ಲರಿಗೂ ಒಂದೊಂದು
ಪಾಲು. ಈ ರೀತಿ ರಾಜನಿಂದ ಭಂಗಿಯವರೆಗೂ ಬೆಳೆಯಲ್ಲಿ ಪಾಲುಗಾರರು.
ಹಾಗಾದರೆ ದಳಿತರೂ, ಅಸ್ಪೃಶ್ಯರೂ ಯಾರು? ದಳಿತರು ಎನ್ನುವ ಶಬ್ದವು ಈಗ ಸಮಾಜದ ಕೆಳ
ಮಟ್ಟದಲ್ಲಿರುವ ಅನೇಕ ಪಂಗಡಗಳಿಗೆ ಅನ್ವಯಿಸುವ ಹೊಸ ಪ್ರಯೋಗ. ಹೀಗೇ ಎಂದು ಒಂದು
ಗೆರೆ ಎಳೆಯಲು ಸಾಧ್ಯವಿಲ್ಲ. ಅಸ್ಪೃಶ್ಯರೆಂದರೆ ಹೆಚ್ಚು ಸ್ಪಷ್ಟವಿದೆ. ಉತ್ತರ ಹಿಂದೂಸ್ಥಾನದಲ್ಲಿ ಭಂಗಿ
ಕೆಲಸಮಾಡುವ ಕೆಲವು ಜನರನ್ನು ಮಾತ್ರ ಅಸ್ಪೃಶ್ಯರೆನ್ನುತ್ತಾರೆ. ತಾನು ಭಾರತಕ್ಕೆ ಬಂದಾಗ ಭಂಗಿ
ಗಳು ಮಾತ್ರ ಅಸ್ಪೃಶ್ಯರಾಗಿದ್ದರು ಎಂದು ಫಾಹಿಯಾನ್ ಹೇಳುತ್ತಾನೆ. ದಕ್ಷಿಣ ಭಾರತದಲ್ಲಿ ಇವರ
ಸಂಖ್ಯೆಯು ಹೆಚ್ಚು. ಅವರು ಹೇಗೆ ಅಸ್ಪೃಶ್ಯರಾದರು, ಅವರ ಸಂಖ್ಯೆ ಹೇಗೆ ಬೆಳೆಯಿತು ಎಂದು
ಹೇಳುವುದು ಕಷ್ಟ. ಪ್ರಾಯಶಃ ಶ್ವಪಚಕೆಲಸದಲ್ಲಿ ತೊಡಗಿದವರನ್ನು ಆ ರೀತಿ ಕಂಡಿರಬಹುದು.
ಆಮೇಲೆ ಭೂಮಿ ಕಾಣಿ ಇಲ್ಲದ ಕೂಲಿಯವರೂ ಅವರ ಸಂಖ್ಯೆಗೆ ಸೇರಿರಬಹುದು.
ನಿತ್ಯವಿಧಿಗಳನ್ನು ಮಾಡುವಾಗ ಶುದ್ದರಿರಬೇಕೆಂಬ ನಿಯಮವು ಹಿಂದೂಗಳಲ್ಲಿ ಬಹಳ ಕಠಿನ
ವಿದೆ. ಇದರಿಂದ ಒಳ್ಳೆಯ ಪರಿಣಾಮವೂ ಆಗಿದೆ ಕೆಟ್ಟದೂ ಆಗಿದೆ. ದೇಹ ನೈರ್ಮಲ್ಯವು ಒಂದು
ಒಳ್ಳೆಯ ಪರಿಣಾಮ. ಅನೇಕ ನಿಮ್ನಜಾತಿಯವರೂ ಸೇರಿ ಹಿಂದೂಗಳಿಗೆಲ್ಲ ಸ್ನಾನವು ಒ೦ದು
ನಿತ್ಯ ವಿಧಿ. ಈ ಅಭ್ಯಾಸ ಇಂಗ್ಲೆಂಡ್ ಮತ್ತು ಇತರ ದೇಶಗಳಿಗೆ ಹರಡಿದ್ದು ಹಿಂದೂಸ್ಥಾನದಿಂದ.
ಎಷ್ಟೇ ಬಡವನಾದ ರೈತನಿರಲಿ ಸಾಮಾನ್ಯ ಹಿಂದೂವಿಗೆ ತನ್ನ ಅಡಿಗೆ ಊಟದ ಪಾತ್ರೆಗಳು ಶುಭ್ರವಾಗಿ
ಹೊಳೆಯುತ್ತಿರಬೇಕು. ಈ ಶುಭ್ರಭಾವನೆಯು ವಿಜ್ಞಾನದಿಂದ ಬಂದುದಲ್ಲ. ದಿನಕ್ಕೆ ಎರಡು ಬಾರಿ
ಸ್ನಾನಮಾಡುವವನೂ ಕ್ರಿಮಿಪೂರಿತ ಕೊಳಚೆ ನೀರನ್ನು ಯಾವ ಸಂಕೋಚವೂ ಇಲ್ಲದೆ ಕುಡಿದುಬಿಡು
ತ್ತಾನೆ. ಈ ಭಾವನೆಯು ಈಗಂತೂ ಸಾಮೂಹಿಕವೂ ಇಲ್ಲ. ತನ್ನ ಮನೆಯನ್ನು ಬಹಳ ಶುಭ್ರವಿಟ್ಟು
ಕೊಂಡರೂ ಮನೆಯ ಕೊಳಕನ್ನೆಲ್ಲ ನೆರೆಮನೆಯ ಮುಂದೆ ಬೀದಿಗೆಸೆಯುತ್ತಾನೆ. ಗ್ರಾಮಗಳಂತೂ
ತಿಪ್ಪೆಗುಂಡಿಯಿಂದ ಕೊಳೆತು ನಾರುತ್ತವೆ. ಅದೂ ಅಲ್ಲದೆ ಈ ನೈರ್ಮಲ್ಯವು ನೈರ್ಮಲ್ಯದ ದೃಷ್ಟಿ
ಯಿಂದಲೇ ಅಲ್ಲ, ಧರ್ಮದ ದೃಷ್ಟಿಯಿಂದ. ಆ ಧರ್ಮದೃಷ್ಟಿಯು ಮಾಯವಾದರೆ ನೈರ್ಮಲ್ಯ
ದೃಷ್ಟಿಯೂ ಮಾಯವಾಗುತ್ತದೆ.
ಈ ಆಚಾರಶೀಲದ ನೈರ್ಮಲ್ಯದಿಂದ ಒಂದು ಬಗೆಯ ಪ್ರತ್ಯೇಕ ಮನೋಭಾವ, ಮುಟ್ಟಬಾರದೆಂಬ
ಮಡಿವಂತಿಕೆ, ಇತರ ಜಾತಿಯವರೊಂದಿಗೆ ಆಹಾರ ಪಾನೀಯಗಳನ್ನು ತೆಗೆದುಕೊಳ್ಳಬಾರದೆಂಬ
ದುಷ್ಟ ಸಂಪ್ರದಾಯವೂ ಬೆಳೆಯಿತು. ಇತರ ಯಾವ ದೇಶಗಳಲ್ಲೂ ಕಾಣದಷ್ಟರಮಟ್ಟಿಗೆ ಈ ಕೆಟ್ಟ
ಪದ್ದತಿಯು ಬೇರು ಬಿಟ್ಟಿತು. ಕೆಲವು ಜನರು ಅತ್ಯುಪಯುಕ್ತ ಕೆಲಸಮಾಡಿದರೂ ಆ ಕೆಲಸ ಕೊಳ
ಕೆಂಬ ನೆಪದಿಂದ ಅಸ್ಪೃಶ್ಯರಾಗಬೇಕಾಯಿತು. ತನ್ನ ಜಾತಿಯವರೊಂದಿಗೆ ಮಾತ್ರ ಊಟಮಾಡ
ಬೇಕೆಂಬ ಭಾವನೆಯು ಎಲ್ಲ ಜಾತಿಯವರಲ್ಲೂ ಸಾಮಾನ್ಯವಾಯಿತು. ಸಮಾಜದ ಅಂತಸ್ತಿಗೊಂದು
ಹೆಗ್ಗುರುತಾಯಿತು. ಕೆಲವು ಉತ್ತಮ ಜಾತಿಯವರಿಗಿಂತ ಕೆಳಜಾತಿಯವರಲ್ಲೇ ಈ ಭಾವನೆ ಹೆಚ್ಚು
ಪುಟ:ಭಾರತ ದರ್ಶನ.djvu/೨೨೯
ಗೋಚರ
ಈ ಪುಟವನ್ನು ಪರಿಶೀಲಿಸಲಾಗಿದೆ
೨೨೪
ಭಾರತ ದರ್ಶನ