ಪುಟ:ಭಾರತ ದರ್ಶನ.djvu/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹೊಸ ಸಮಸ್ಯೆಗಳು ಬೇರೂರಿತು. ಉನ್ನತ ಜಾತಿಯವರಲ್ಲಿ ಈ ಭಾವನೆ ಈಗ ಕಡಮಯಾಗುತ್ತಿದೆ. ಆದರೆ ನಿಮ್ಮ ವರ್ಗದವರು ಮತ್ತು ಇತರ ಕೆಳಜಾತಿಯವರಲ್ಲಿ ಇನ್ನೂ ಕಡಿಮೆಯಾಗಿಲ್ಲ. ಊಟ ಉಪಚಾರವೇ ಇಲ್ಲದ ಮೇಲೆ ಅಂತರ್ಜಾತೀಯ ವಿವಾಹವಂತೂ ಸಾಧ್ಯವೇ ಇಲ್ಲ. ಕೆಲವು ಅಂತರ್ಜಾತೀಯ ವಿವಾಹಗಳೇನೋ ಆದವು. ಆದರೂ ಪ್ರತಿಯೊಂದು ಜಾತಿಯೂ ತನ್ನ ಜಾತಿ ಯಲ್ಲಿ ವಿವಾಹ ಬೆಳೆಸಿ ಜಾತಿಯನ್ನು ಬೆಳೆಸಿಕೊಂಡು ಬಂದಿತು. ಯುಗಾಂತರಗಳಲ್ಲಿ ಜನಾಂಗ ಪಾರಿ ಶುದ್ದತೆ ಎಂಬುದೊಂದು ಕನಸು. ಆದರೂ ಜಾತಿ ಪದ್ಧತಿಯಿಂದ ಭಾರತದಲ್ಲಿ, ಅದರಲ್ಲೂ ಉತ್ತಮ ಜಾತಿಯವರಲ್ಲಿ ಕುಲಶುದ್ದತೆ ಉಳಿದು ಬಂದಿದೆ. ಈ ಕೆಳಮಟ್ಟದ ಕೆಲವು ಜನರನ್ನು ಜಾತಿಬಾಹಿರರೆಂದು ಕರೆಯುತ್ತಾರೆ. ಆದರೆ ಅಸ್ಪೃಶ್ಯರು ಸಹ ಜಾತಿಬಾಹಿರರಲ್ಲ. ಅ೦ತಿಮರಲ್ಲಿ ಅಸ್ಪೃಶ್ಯರಲ್ಲಿ ಅವರದೇ ಪ್ರತ್ಯೇಕ ಜಾತಿಗಳಿವೆ. ಅವರವರ ವ್ಯಾಜ್ಯ ಗಳನ್ನು ಪರಿಹರಿಸಿಕೊಳ್ಳಲು ತಮ್ಮ ಪಂಚಾಯಿತಿಗಳನ್ನು ಮಾಡಿಕೊಂಡಿದಾರೆ. ಆದರೆ ಗ್ರಾಮಗಳ ಸಾಮಾನ್ಯ ಜೀವನದಿಂದ ಅವರನ್ನು ದೂರವಿಟ್ಟು, ಅವರಿಗೆ ಬಹಳ ಅನ್ಯಾಯ ಮಾಡಲಾಗಿದೆ. * ಈರೀತಿ ಸ್ವತಂತ್ರ ಗ್ರಾಮಜೀವನ ಮತ್ತು ಜಾತಿ ಪದ್ಧತಿಯು ಭಾರತೀಯ ಸಮಾಜ ರಚನೆಯ ಎರಡು ವೈಶಿಷ್ಟಗಳು, ಮೂರನೆಯದು ಕುಟುಂಬ ಜೀವನ. ಕುಟುಂಬದ ಆಸ್ತಿಯಲ್ಲಿ ಎಲ್ಲರಿಗೂ ಪಾಲು, ಕುಟುಂಬದ ಯಜಮಾನನು ತೀರಿಕೊಂಡರೆ ಆಗ ಉಳಿದ ವಾರಸುದಾರರೆಲ್ಲ ಹಕ್ಕುದಾರರು. ತ೦ದೆಯೋ ಅಣ್ಣನೋ ಯಜಮಾನನಾದರೂ ಅವನಿಗೆ ಇದ್ದುದು ಆಡಳಿತ ಸ್ವಾತಂತ್ರ ಮಾತ್ರ ; ಪ್ರಾಚೀನ ರೋಮನ್ ಯಜಮಾನನಂತೆ ಸರ್ವಾಧಿಕಾರಿಯಲ್ಲ. ಕೆಲವು ಸಂದರ್ಭಗಳಲ್ಲಿ ಮಾತ್ರ. ಅಥವ ಕುಟುಂಬಕ್ಕೆ ಸಂಬಂಧ ಪಟ್ಟವರೆಲ್ಲ ಒಪ್ಪಿದರೆ ಆಸ್ತಿಯನ್ನು ವಿಭಾಗಮಾಡಿಕೊಳ್ಳ ಬಹುದಾ ಗಿತ್ತು. ಒಟ್ಟು ಕುಟುಂಬದ ಆಸ್ತಿಯಿಂದ ಕೆಲಸ ಮಾಡಲಿ, ಮಾಡದಿರಲಿ ಕುಟುಂಬದ ಎಲ್ಲ ಜನರ ಜೀವನದ ಅವಶ್ಯಕತೆಯೂ ನಡೆಯಬೇಕು. ಇದರಿಂದ ಎಲ್ಲರಿಗೂ ಕನಿಷ್ಠ ಪ್ರಮಾಣದ ಸೌಲಭ್ಯ ಮಾತ್ರ ದೊರೆಯುತ್ತಿತ್ತು. ಯಾರೂ ವಿಶೇಷ ಲಾಭ ಪಡೆಯುವಂತೆ ಇರಲಿಲ್ಲ. ದೇಹಶಕ್ತಿಯಲ್ಲಿ ಬುದ್ದಿ ಶಕ್ತಿಯಲ್ಲಿ ಕಡಮೆಯಿದ್ದು, ಸ್ವಲ್ಪ ಊನನಿದ್ದರೂ ಎಲ್ಲರಿಗೂ ಒಂದು ಬಗೆಯ ಸಮಾಜರಕ್ಷಣೆ ಇತ್ತು. ಈ ರೀತಿ ಒಂದು ಬಗೆಯ ಸಮಾಜರಕ್ಷಣೆಯಿದ್ದರೂ ವ್ಯಕ್ತಿ ಜೀವನದ ಮಟ್ಟವು ಕಡಮೆಯಾ ಯಿತು, ಶ್ರಮಕ್ಕೆ ತಕ್ಕ ಫಲವೂ ಕಡಮೆಯಾಯಿತು. ವೈಯಕ್ತಿಕ ಆಶೆ ಅಥವ ಅವಶ್ಯಕತೆಗೆ ಪ್ರಾಮುಖ್ಯತೆ ಕೊಡದೆ ಕುಟುಂಬಕ್ಕೆ ಹೆಚ್ಚು ಪ್ರಾಧಾನ್ಯದೊರೆಯಿತು. ದೊಡ್ಡ ಕುಟುಂಬದಲ್ಲಿ ಬೆಳೆ ಯುತ್ತ, ಬೆಳೆದು ಜೀವಿಸುತ್ತ ಬಂದುದರಿಂದ ಮಕ್ಕಳಲ್ಲಿ ಸ್ವಾರ್ಥಭಾವನೆ ಬೆಳೆಯಲು ಹೆಚ್ಚು ಅವಕಾಶ ನಾಗದೆ ಸಾಮಾಜಿಕ ಜೀವನವೇ ಮೇಲೆಂಬ ಭಾವನೆಯು ಬೆಳೆಯಿತು. ವಿಶೇಷ ವ್ಯಕ್ತಿ ಪ್ರಾಧಾನ್ಯತೆಯ ಪಾಶ್ಚಿಮಾತ್ಯ ನಾಗರೀಕತೆಯಲ್ಲಿ ಕಂಡುಬರುವ ಆಚರಣೆಗೆ ಇದೆಲ್ಲ ತೀರ ನವೀನವಾದುದು. ಅದರಲ್ಲೂ ವೈಯಕ್ತಿಕ ಆಶೆಗೆ ಪ್ರೋತ್ಸಾಹವೀಯುವ, ಸ್ವಂತ ಲಾಭವೇ ಎಲ್ಲರ ಗುರಿಯಾಗಿರುವ, ನುಗ್ಗಿ ನಡೆಯುವವನಿಗೆ ಗೌರವತೋರುವ, ಅ೦ಜುಬುರುಕರಿಗೆ ಅವಕಾಶವೇ ಕೊಡದ ಅಮೆರಿಕೆಗಂತೂ ಇದು ಅರ್ಥವೇ ಆಗುವುದಿಲ್ಲ. ಭಾರತದಲ್ಲಿ ಒಟ್ಟು ಕುಟುಂಬ ಜೀವನವು ಈಗ ಸಡಿಲುತ್ತಿದೆ ; ವ್ಯಕ್ತಿಜೀವನ ಬೆಳೆಯುತ್ತಿದೆ. ಇದರಿಂದ ಜನಜೀವನದ ಆರ್ಥಿಕ ಹಿನ್ನೆಲೆ ವಿಶೇಷಮಾರ್ಪಾಟಾಗಿ ಹೊಸ ಸಂಪ್ರದಾಯದ ಸಮಸ್ಯೆಗಳೂ ಏಳುತ್ತಿವೆ. ಭಾರತೀಯ ಸಮಾಜಜೀವನದ ಮೂರು ಆಧಾರಸ್ಥಂಬಗಳೂ ಸಮಷ್ಟಿಯಲ್ಲಿ, ವ್ಯಕ್ತಿಯಲ್ಲಿಲ್ಲ. ಸಮಾಜರಕ್ಷಣೆ, ಭದ್ರತೆ, ಸಮಷ್ಟಿ ಜೀವನದ ನಿತ್ಯತೆಯೇ ಗುರಿಯಾಗಿದ್ದವು. ಪ್ರಗತಿಯು ಗುರಿ ಯಾಗಿರಲಿಲ್ಲದ ಕಾರಣ ಪ್ರಗತಿಯ ಕೊಲೆಯಾಯಿತು. ಗ್ರಾಮಜೀವನದಲ್ಲಾಗಲಿ, ಜಾತಿಯಲ್ಲಾಗಲಿ ದೊಡ್ಡ ಅವಿಭಕ್ತ ಕುಟುಂಬದಲ್ಲಾಗಲಿ ತಮ್ಮ ತಮ್ಮೊಳಗೆ ಸಮಷ್ಟಿ ಜೀವನವೂ, ಸಮಾನಭಾವನೆಯೂ ಪ್ರಜಾಪ್ರಭುತ್ವನೀತಿಯೂ ಇದ್ದವು. ಈಗಲೂ ಜಾತಿಯ ಪಂಚಾಯಿತಿಗಳಲ್ಲಿ ಈ ಪ್ರಜಾಪ್ರತಿನಿಧಿ ಪ್ರಭುತ್ವ ನೀತಿಯು ಆಚರಣೆಯಲ್ಲಿದೆ. ನಿರಕ್ಷರಕುಕ್ಷಿಗಳಾದರೂ ರಾಜಕೀಯ ಅಥವ ಇತರ ಕಾರಣ 15