ಪುಟ:ಭಾರತ ದರ್ಶನ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೪

ಭಾರತ ದರ್ಶನ

ನಿರ್ನಾಮವಾಗಿರುವುದು ಪ್ರಸಿದ್ಧ ವಿದೆ, ಅಥವ ದೇಶದ ವಾಯುಗುಣದ ವ್ಯತ್ಯಾಸದಿಂದ ಫಲವತ್ತಾದ ಭೂಮಿ ಕ್ರಮೇಣ ನಿರ್ಜಲ ಪ್ರದೇಶವಾಗಿ, ಹೊಲ ಗದ್ದೆಗಳಿಂದ ನಲಿವ ಕೃಷಿವಲನಾಡು ಮರುಭೂಮಿಯಾಗಬಹುದು. ಮೊಹೆಂಜೊದಾರೊ ಅವಶೇಷಗಳು ಪದರು ಪದರಾದ ಮರಳು ಮಡಿಕೆಗಳ ಮೇಲೆ ದೊರೆತಿವೆ. ನಗರದ ತಳಪಾಯ ಮೇಲೆ ಮೇಲೆ ಬರುತ್ತಿದೆ, ಜನ ತಮ್ಮ ವಾಸದ ಮನೆಗಳನ್ನು ಮೊದಲಿನ ತಳಪಾಯಗಳಿಗಿಂತ ಹೆಚ್ಚು ಹೆಚ್ಚು ಎತ್ತರದಲ್ಲಿ ಕಟ್ಟಿದ್ದಾರೆ. ಭೂಗರ್ಭದಿಂದ ಅಗೆದು ತೆಗೆದ ಕೆಲವು ಮನೆಗಳಿಗೆ ಎರಡು ಮೂರು ಅಂತಸ್ತುಗಳಿವೆ. ಆದರೂ ನೆಲಮಟ್ಟ ಮೇಲೆ ಮೇಲೆ ಬಂದಂತೆ ಕ್ರಮೇಣ ಹೊಸ ಅಂತಸ್ತನ್ನು ಕಟ್ಟಿದಂತೆ ಇದೆ, ಬಹು ಪೂರ್ವದಲ್ಲಿ ಸಿಂಧೂ ದೇಶ ಸಂಪತ್ಸಮೃದ್ಧ ಫಲವತ್ತಾದ ದೇಶವಾಗಿತ್ತು ; ಮಧ್ಯಕಾಲದಿಂದ ಅದರ ಬಹುಭಾಗ ಬರಡು ಮರು ಭೂಮಿಯಾಯಿತು,

ಆದ್ದರಿಂದ ಈ ವಾಯುಗುಣ ವ್ಯತ್ಯಾಸಗಳು ಆ ಭಾಗಗಳ ಜನರ ಮೇಲೆ, ಅವರ ಜೀವನವಿಧಾನದ ಮೇಲೆ ಮಹತ್ಪರಿಣಾಮವನ್ನು ಂಟುಮಾಡಿರಬೇಕು. ಆದರೆ ಆ ಪರಿಣಾಮ ಆಕಸ್ಮಿಕವಾದ ದುರಂತವಲ್ಲ, ಕ್ರಮೇಣದ್ದಾಗಿರಬೇಕು. ಹೇಗೇ ಆಗಲಿ ಈ ವಾಯುಗುಣ ವ್ಯತ್ಯಾಸವು ಈ ನಗರ ನಾಗರಿ ಕತೆ ಹರಡಿದ್ದ ವಿಶಾಲ ಕ್ಷೇತ್ರದ ಒಂದು ಸಣ್ಣ ಭಾಗದಲ್ಲಿ ಮಾತ್ರ ಪರಿಣಾಮಕಾರಿಯಾಗಿರಬೇಕು. ಈಗ ತಿಳಿದು ಬಂದ ಮಟ್ಟಿಗೆ ಈ ನಾಗರಿಕತೆ ಗಂಗಾನದಿ ಕಣಿವೆಯಲ್ಲಿ ಮತ್ತು ಪ್ರಾಯಶಃ ಇನ್ನೂ ಮುಂದೆ ಹರಡಿತ್ತೆಂದು ಗೊತ್ತಾಗಿದೆ. ಒಂದು ನಿರ್ಧಾರಕ್ಕೆ ಬರಲು ತಕ್ಕಷ್ಟು ಸಾಕ್ಷ, ಪ್ರಮಾಣಗಳಿಲ್ಲ. ಪ್ರಾಯಶಃ ಮರಳು ಬಂದು ಈ ಪುರಾತನ ನಗರಗಳ ಮೇಲೆ ಹರಿದು ಮುಚ್ಚಿ ಹೂತಿಟ್ಟಿರಬೇಕು ; ಇತರ ನಗರಗಳು ಮತ್ತು ಈ ನಾಗರೀಕತೆಯ ಉಳಿದ ಸಾಕ್ಷ್ಯಗಳು ಕ್ರಮವಾಗಿ ಖಿಲವಾಗಿ ಕಾಲಾನು ಕ್ರಮದಲ್ಲಿ ನಾಶವಾಗಿರಬೇಕು. ಪ್ರಾಯಶಃ ಮುಂದೆ ದೊರೆಯುವ ಭೂಶೋಧನೆಗಳಿಂದ ಅನಂತರದ ಸಂಬಂಧಗಳು ದೊರೆತರೂ ದೊರೆಯಬಹುದು,

ಸಿಂಧೂ ಕಣಿವೆಯ ನಾಗರಿಕತೆ ಮತ್ತು ಮುಂದಿನ ಕಾಲದ ನಾಗರಿಕತೆಯಲ್ಲಿ ಒಂದು ವಿಧವಾದ ಅವಿಚ್ಛಿನ್ನತೆ ಕಂಡುಬಂದರೂ ಕಾಲದೃಷ್ಟಿಯಿಂದ ಮತ್ತೂ ಈ ನಾಗರಿಕತೆಯ ಹಿಂದೆಯೇ ಬಂದ ನಾಗರಿಕತೆ ಯಾವುದು ಎಂಬ ದೃಷ್ಟಿಯಿಂದ ಒಂದು ವಿಧವಾದ ಭಗ್ನತೆ ನ್ಯೂನತೆ ಕಂಡು ಬರುತ್ತದೆ. ಈ ಮುಂದಿನ ನಾಗರಿಕತೆಯಲ್ಲಿ ನಗರಗಳು, ನಗರ ಜೀವನ ಸ್ವಲ್ಪ ಮಟ್ಟಿಗೆ ಇದ್ದರೂ ಪ್ರಾಯಶಃ ಆರಂಭದಲ್ಲಿ ಅದು ಕೃಷಿಕ ನಾಗರಿಕತೆಯಾಗಿ ಇರಬೇಕು, ವಾಯವ್ಯ ಮೂಲೆಯಿಂದ ಆ ಮೇಲೆ ಬಂದು ನೆಲಸಿದ ಆರ್ಯರು ಪ್ರಾಯಶಃ ಈ ಕೃಷಿಕ ಜೀವನಕ್ಕೆ ಬಹಳ ಪ್ರಾಮುಖ್ಯತೆ ಕೊಟ್ಟಿರ ಬೇಕು.

ಆರ್ಯರು ಈ ರೀತಿ ವಲಸೆ ಬಂದುದು ಸಿಂಧೂ ಕಣಿವೆಯ ನಾಗರಿಕತೆಯ ಕಾಲದಿಂದ ಸಾವಿರ ವರ್ಷಗಳ ನಂತರ ಎಂದು ತಿಳಿದು ಬಂದಿದೆ. ಆದರೂ ಇಷ್ಟು ಸಹ ಅಂತರ ಇಲ್ಲದೆ ಇರಬಹುದು. ಆಗಿಂದಾಗ್ಗೆ ವಾಯವ್ಯ ಮೂಲೆಯಿಂದ ವಲಸೆಗಾರರ ಪಂಗಡಗಳು, ತಂಡಗಳು ಬಂದು ನೆಲಸಿ ಇತ್ತೀಚೆಗೆ ಬಂದವರಂತೆ ಅವರೂ ಇ೦ಡಿಯದ ಜನರೊಂದಿಗೆ ಬೆರೆತು ಹೋಗಿರಬಹುದು. ಸಿಂಧೂ ಕಣಿವೆಯ ನಾಗರಿಕತೆಯ ಪ್ರತಿನಿಧಿಗಳು ಪ್ರಾಯಶಃ ದ್ರಾವಿಡರೇ ಇರಬೇಕು ಮತ್ತು ಮೊದಲನೆಯ ಮಹಾಸಾಂಸ್ಕೃತಿಕ ಸಂಯೋಜನೆ, ಬೆಸುಗೆ ಈ ದ್ರಾವಿಡ ಆರ್ಯರ ಮಧ್ಯೆ ನಡೆದಿರಬೇಕು. ಈ ಸಂಯೋಜನೆ ಮತ್ತು ಒಕ್ಕೂಟದ ಫಲವಾಗಿ, ಎರಡೂ ನಾಗರಿಕತೆಗಳ ವೈಶಿಷ್ಟಗಳನ್ನುಳ್ಳ ಇಂಡಿಯದ ಬುಡಕಟ್ಟುಗಳು ಮತ್ತು ಮೂಲಸಂಸ್ಕೃತಿ ಉತ್ಪನ್ನ ವಾಯಿತು. ಮುಂದಿನ ಕಾಲಗಳಲ್ಲಿ ಇರಾಣಿಗಳು, ಗ್ರೀಕರು, ಪಾರ್ಥಿಯನ್ನರು, ಬ್ಯಾಕ್ಟಿಯನರು, ಸಿಥಿಯನರು, ಹೂಣರು, ತುರ್ಕಿ ಜನರು (ಇಸ್ಲಾಂಗೆ ಮೊದಲು), ಪುರಾತನ ಕ್ರೈಸ್ತರು, ಯೆಹೂದಿಗಳು, ಜೊರೊಸ್ಪಿಯನರು ಮುಂತಾಗಿ ಎಷ್ಟೋ ಜನ ಬಂದರು. ಆದರೆ ಇವರು ಸ್ವಲ್ಪ ಅಲೆ ಎಬ್ಬಿಸಿ ತಣ್ಣಗಾಗಿ ಸ್ವಲ್ಪ ಕಾಲದಲ್ಲಿ ಭಾರತದ ಜನಕೋಟಿ ಯಲ್ಲಿ ಸೇರಿಹೋದರು. ಡಾಡ್ ವೆಲ್ ಹೇಳುವಂತೆ “ಇಂಡಿಯ ಎಲ್ಲವನ್ನೂ ಆಪೋಶನ ತೆಗೆದುಕೊಳ್ಳುವ