ಪುಟ:ಭಾರತ ದರ್ಶನ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಭಾರತ ಸಂಶೋಧನೆ

೮೫

ಕೆಲಸ ಮಾತ್ರ ಇನ್ನೂ ಮುಗಿದಿಲ್ಲ. ಪ್ರಪಂಚವನ್ನೇ ಆವರಿಸಿರುವ ಈ ಘೋರಯುದ್ದ ಸಮಯದಲ್ಲಿ ಸಹ ರಷ್ಯದ ಪ್ರಾಚ್ಯ ವಿದ್ವಾಂಸರು ಮಹಾಭಾರತವನ್ನು ರಷ್ಯನ್ ಭಾಷೆಗೆ ಅನುವಾದ ಮಾಡಿದ್ದಾರೆ.

ಪ್ರಾಯಶಃ ಈ ಕಾಲದಲ್ಲಿ ವಿದೇಶೀಯರು ಭಾರತಕ್ಕೆ ಬಂದು ನೆಲಸಿ ತಮ್ಮ ಆಚಾರ ವ್ಯವ ಹಾರಗಳನ್ನು ಭಾರತದಲ್ಲಿ ಹರಡುತ್ತಿದ್ದರು. ಈ ಅನೇಕ ಆಚಾರಗಳು ಆರ್ಯಪದ್ಧತಿಗೆ ತೀರ ಭಿನ್ನ ವಾದವು. ಆದ್ದರಿಂದ ವಿರುದ್ಧ ಸಂಪ್ರದಾಯಗಳ ಮತ್ತು ಭಾವನೆಗಳ ಮಿಶ್ರಣವನ್ನು ಇಲ್ಲಿ ಕಾಣು ತೇವೆ. ಆರರಲ್ಲಿ ಬಹುಪತ್ನಿತ್ವ ಇರಲಿಲ್ಲ. ಆದರೂ ಮಹಾಭಾರತ ಕಥೆಯ ನಾಯಕಿಯೊಬ್ಬಳು ಐವರು ಸಹೋದರರಿಗೆ ಪತ್ನಿ, ಕ್ರಮಕ್ರಮವಾಗಿ ಪೂರ್ವನಿವಾಸಿಗಳು ಮತ್ತು ಅನಂತರ ಬಂದು ನೆಲಸಿದ ವಿದೇಶೀಯರು ಆರ್ಯರೊಂದಿಗೆ ಮಿಳಿತವಾದರು. ವೈದಿಕ ಮತವೂ ಅದರಂತೆಯೇ ಮಾರ್ಪಾಡಾಗುತ್ತ ಬಂದಿತು ; ಇಂದಿನ ಹಿಂದೂ ಧರ್ಮದ ಸರ್ವವ್ಯಾಪಕ ರೂಪವನ್ನು ಪಡೆಯುತ್ತ ಇತ್ತು. ಸತ್ಯವೆಂಬುದು ಯಾರೊಬ್ಬರ ಮೀಸಲು ಆಸ್ತಿಯಲ್ಲ, ಅದರ ಅನ್ವೇಷಣೆ ಮತ್ತು ದರ್ಶನಕ್ಕೆ ಅನೇಕ ಮಾರ್ಗಗಳಿವೆ ಎಂಬ ಮೂಲ ತತ್ವವನ್ನು ಒಪ್ಪಿದ್ದರಿಂದ ಇದು ಸಾಧ್ಯವಾಯಿತು. ಆದ್ದರಿಂದ ಭಾರತದಲ್ಲಿ ಎಲ್ಲ ಭಿನ್ನ ಧರ್ಮಗಳಿಗೆ ವಿರೋಧ ಧರ್ಮಗಳಿಗೆ ಸಹನೆ ದೊರೆಯಿತು.

ಇಂಡಿಯದ ಅಥವ ಭಾರತೀಯರ ಐತಿಹಾಸಿಕ ಮೂಲಪುರುಷನೆಂದು ಹೆಸರಾದ ಭರತನಿಂದ ಹೆಸರು ಪಡೆದ ಭಾರತವರ್ಷದ ಮೂಲ ಐಕ್ಯತೆಗೆ ಪ್ರಾಧಾನ್ಯ ಕೊಡುವ ಮಹಾ ಪ್ರಯತ್ನ ವು ನಿರ್ದಿಷ್ಟ ವಾಗಿ ಮೊದಲು ನಡೆದಿರುವುದು ಮಹಾಭಾರತದಲ್ಲಿ ಮೊಟ್ಟ ಮೊದಲ ಹೆಸರು - ಆಲ್ಯಾವರ್ತ' ಅಥವ ಆರರ ದೇಶ ಎಂದಿತ್ತು ; ಆದರೆ ಅದು ಭಾರತದ ಮಧ್ಯೆ ಇರುವ ವಿಂಧ್ಯ ಪರ್ವತದ ಉತ್ತರಕ್ಕಿರುವ ದೇಶಕ್ಕೆ ಮಾತ್ರ ಅನ್ವಯಿಸುತ್ತ ಇತ್ತು. ಪ್ರಾಯಶಃ ಆ ಕಾಲದಲ್ಲಿ ಆರ್ಯರು ವಿಂಧ್ಯ ಪರ್ವತವನ್ನು ದಾಟಿ ಬಂದಿರಲಿಲ್ಲ. ರಾಮಾಯಣದ ಕಥೆ ಆರ್ಯರ ದಕ್ಷಿಣಭಾರತದ ದಿಗ್ವಿಜಯದ ಕಥೆ, ಮಹಾಭಾ ರತದಲ್ಲಿ ವರ್ಣಿತವಾಗಿರುವುದು ಅನಂತರ ದೇಶದಲ್ಲಿ ನಡೆದ ಒಳದಂಗೆಯ ವರ್ಣನೆ. ಕ್ರಿಸ್ತಪೂರ್ವ ನಾಲ್ಕನೆಯ ಶತಮಾನದಲ್ಲಿ ಭಾರತದ ಪ್ರಾಯಶಃ ಉತ್ತರ ಭಾರತದ ಒಡೆತನಕ್ಕಾಗಿ ಇದು ನಡೆದಿರಬೇಕು, ಇ೦ಡಿಯದೇಶ ಅಥವ ಭಾರತವರ್ಷವು ಒಂದು ಎಂಬ ಭಾವನೆ ಇಲ್ಲಿಂದ ಆರಂಭವಾಗುತ್ತದೆ. ಈ ಭಾವನೆಯಲ್ಲಿ ಗಾಂಧಾರ ದೇಶವಾದ ಆಫ್ಘಾನಿ ಸ್ಥಾನವೂ ಸೇರಿದೆ. ಕಾಂದಹಾರ ಪಟ್ಟಣದ ಹೆಸರು ಬಂದಿರುವುದು ಗಾಂಧಾರದಿಂದ, ಗಾಂಧಾರ ಆಗ ಭಾರತ ವರ್ಷದ ಒಂದು ಮುಖ್ಯ ಭಾಗವಾಗಿತ್ತು. ಮಹಾರಾಣಿಯು ಗಾಂಧಾರದಿಂದ ಬಂದ ಗಾಂಧಾರಿ, ಈಗಿನ ನಗರದ ಹತ್ತಿರವಿದ್ದ ಡಿಳ್ಳಿ ಅಥವ ದೆಹಲಿ ಆಗಿನ ಹಸ್ತಿನಾಪುರ ಅಥವ ಇಂದ್ರಪ್ರಸ್ಥವಾಗಿ ಭಾರತದ ರಾಜಧಾನಿಯಾಗಿತ್ತು.

ಸಹೋದರಿ ನಿವೇದಿತ (ಮಾರ್ಗರೆಟ್ ನೋಬಲ್) ಮಹಾಭಾರತದ ವಿಷಯ ಬರೆಯುತ್ತ “ವಿದೇಶೀಯನಿಗೆ ಮುಖ್ಯವಾಗಿ ಹೊಳೆಯುವ ವಿಷಯಗಳು ಎರಡು. ವೈವಿಧ್ಯತೆಯಲ್ಲಿ ಕಾಣುವ ಒಗ್ಗಟ್ಟು ಮೊದಲನೆಯದು; ತನ್ನ ದೇ ಆದ ಸಮಾವೇಶ, ಸಂಘಟನಶಕ್ತಿ, ಮತ್ತು ಒಂದು ಧೀರೋದಾತ್ತ ಶಿಷ್ಟಾ ಚಾರವುಳ್ಳ ಸಮಗ್ರ, ಕೇಂದ್ರೀಕ್ರತ ಭಾರತದ ಭಾವನೆಯನ್ನು ಓದುಗರ ಮನಸ್ಸಿನ ಮೇಲೆ ಸತತವಾಗಿ ಒತ್ತಿ ಒತ್ತಿ ಹೇಳುವ ಪ್ರಯತ್ನ ಎರಡನೆಯದು ” ಎಂದಿದಾಳೆ.

ಮಹಾಭಾರತದಲ್ಲಿ ಕೃಷ್ಣನ ಕತೆಗಳೂ ಮತ್ತು ಭಗವದ್ಗೀತಾ ಮಹಾಕಾವ್ಯವೂ ಸೇರಿವೆ. ಗೀತಾದರ್ಶನವನ್ನು ಬಿಟ್ಟ ರೂ ಮಹಾಭಾರತವು ರಾಜ್ಯ ನಿರ್ವಹಣದ ಮತ್ತು ಜೀವನದ ನೀತಿ ಮತ್ತು ಧರ್ಮಕ್ಕೆ ಸಾಮಾನ್ಯವಾಗಿ ಮಹತ್ವ ಕೊಟ್ಟಿದೆ. ಧರ್ಮದ ಈ ತಳಹದಿ ಇಲ್ಲದೆ ನಿಜವಾದ ಸುಖವಿಲ್ಲ; ಮತ್ತು ಸಮಾಜ ಭದ್ರತೆಯೂ ಇಲ್ಲ. ಮುಖ್ಯ ಗುರಿ ಸಾಮಾಜಿಕ ಸೌಖ್ಯ; ಯಾವ ಒಂದು ಪಂಗಡದ ಸೌಖ್ಯವಲ್ಲ; ಇಡೀ ಪ್ರಪಂಚದ ಸುಖ ; ಕಾರಣ, ಇಡೀ ಮಾನವ ಪ್ರಪಂಚದ ರಚನೆಯೇ ಪರಸ್ಪರ ಅವಲಂಬಿತ. ಆದರೂ ಧರ್ಮವು ಸಾಪೇಕ್ಷವಾದುದು. ಸತ್ಯ, ಅಹಿಂಸೆ ಮುಂತಾದ ಕೆಲವು ಮೂಲ ತತ್ವಗಳಲ್ಲದೆ ಕಾಲ ಮತ್ತು ಸನ್ನಿವೇಶಗಳನ್ನೂ ಅವಲಂಭಿಸಿದೆ. ಈ ಮೂಲ ತತ್ವಗಳು ಶಾಶ್ವತವಾ