ಪುಟ:ಭಾರತ ದರ್ಶನ.djvu/೩೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ಅಂಕ

೩೦೯

ಮುಸ್ಲಿಮರಿಗೆ ವಿರೋಧವಾಗಿತ್ತು. ಆದರೆ ಬ್ರಿಟಿಷರು ಪಂಜಾಬನ್ನು ಆಕ್ರಮಣ ಮಾಡುವ ಮೊದಲೇ ಹಿಂದೂಗಳು ಇತರ ಕಡೆಗಳಲ್ಲಿ ಪ್ರಬಲರಾಗಿದ್ದರು. ಪಂಜಾಬಿನಲ್ಲಿ ಹಿಂದೂಗಳಿಗೂ ಮುಸ್ಲಿಮರಿಗೂ ಸಮಾನ ಅವಕಾಶವಿದ್ದರೂ ಹಿಂದೂಗಳ ಆರ್ಥಿಕ ಸ್ಥಿತಿ ಉತ್ತಮವಿತ್ತು. ಹಿಂದೂಗಳಲ್ಲಿ, ಮುಸ್ಲಿಮರ ಶ್ರೀಮಂತರಲ್ಲಿ ಮತ್ತು ಜನಸಾಮಾನ್ಯರಲ್ಲಿ ಎಲ್ಲರಲ್ಲೂ ವಿದೇಶೀಯರ ಮೇಲೆ ವಿರೋಧಭಾವನೆಯು ಸಾಮಾನ್ಯವಾಗಿತ್ತು. ೧೮೫೭ ನೆಯ ದಂಗೆಯಲ್ಲಿ ಎಲ್ಲರೂ ಭಾಗಿಗಳಾದರೂ ಬ್ರಿಟಿಷರು ಅದನ್ನು ಅಡ ಗಿಸಿದಾಗ ಹಿಂದೂಗಳಿಗಿಂತ ತಾವೇ ಹೆಚ್ಚು ಕಷ್ಟಕ್ಕೊಳಗಾದವರೆಂಬ ಭಾವನೆ ಮುಸ್ಲಿಮರಲ್ಲಿ ಹುಟ್ಟಿತು. ಅದಕ್ಕೆ ಸ್ವಲ್ಪ ನ್ಯಾಯವಾದ ಕಾರಣವೂ ಇತ್ತು. ದೆಹಲಿಯ ಚಕ್ರಾಧಿಪತ್ಯವನ್ನು ಪುನಃ ಸ್ಥಾಪಿ ಸುವ ಎಲ್ಲ ಕಲ್ಪನೆ ಅಥವ ಕನಸುಗಳು ಈ ದಂಗೆಯಿಂದ ಮಾಯವಾದವು. ಬ್ರಿಟಿಷರು ಭಾರತದಲ್ಲಿ ಕಾಲಿಡುವ ಮೊದಲೇ ಅನೇಕ ವರ್ಷಗಳ ಮುಂಚೆ ಆ ಚಕ್ರಾಧಿಪತ್ಯವು ನಾಶವಾಗಿತ್ತು. ಮರಾಠರು ಅದನ್ನು ನುಚ್ಚುನೂರು ಮಾಡಿ ದೆಹಲಿಯ ಹತೋಟಿಯನ್ನು ತಮ್ಮ ಕೈಲಿಟ್ಟಿದ್ದರು. ರಣಜತಸಿಂಗ್ ಪಂಜಾಬದಲ್ಲಿ ಆಳುತ್ತಿದ್ದನು, ಬ್ರಿಟಿಷರ ಯಾವ ಮಧ್ಯಸ್ಥಿಕೆಯೂ ಇಲ್ಲದೆ ಉತ್ತರದಲ್ಲಿ ಮೊಗಲರ ಆಡಳಿತ ಮುಗಿದಿತ್ತು. ದಕ್ಷಿಣದಲ್ಲೂ ಅದು ಒಡೆದಿತ್ತು. ಆದರೂ ದೆಹಲಿಯ ಅರಮನೆಯಲ್ಲಿ ಮಾತ್ರ ಆಟದ ಬೊಂಬೆಯಾಗಿ ಒಬ್ಬ ಚಕ್ರವರ್ತಿ ಇದ್ದನು. ಮೊದಲು ಮರಾಠರ ಅನಂತರ ಬ್ರಿಟಿಷರ ಅಧೀನನಾಗಿ ಅವರಿಂದ ಮಾಸಾಶನ ಪಡೆಯುತ್ತಿದ್ದರೂ ಒಂದು ದೊಡ್ಡ ರಾಜವಂಶದ ಸಂಕೇತವಾಗಿದ್ದನು. ಆತನ ಅಸಹಾಯಕತೆ ಅಥವ ಇಷ್ಟ ಯಾವುದನ್ನೂ ಲೆಕ್ಕಿಸದೆ ದಂಗೆಕಾರರು ಆತನ ಹೆಸರನ್ನು ಉಪಯೋಗಿಸಿಕೊಂಡರು. ದಂಗೆ ಅಡಗುವುದೆಂದರೆ ಈ ಸಂಕೇತವೂ ನಾಶವಾದಂತೆ.

ಈ ದಂಗೆಯ ಘೋರದಿನಗಳಿಂದ ಜನರು ನಿಧಾನವಾಗಿ ಚೇತರಿಸಿಕೊಂಡಾಗ ಅವರ ಮನಸ್ಸು ಶೂನ್ಯವಾಗಿತ್ತು, ಆ ಶೂನ್ಯತೆಯನ್ನು ಹೇಗಾದರೂ ಸರಿತುಂಬೋಣವೆಂದು ಮನಸ್ಸು ಹಾತೊರೆಯುತ್ತಿತ್ತು. ಬ್ರಿಟಿಷರ ಆಳ್ವಿಕೆಯು ಅನಿವಾರ್ಯವಾಯಿತು. ಆದರೆ ಹಿಂದಿನ ಸಂಪರ್ಕ ಪೂರ್ಣ ಕಡಿದು ಹೊಸ ಆಡಳಿತ ಬಂದುದು ಮಾತ್ರವಲ್ಲದೆ ಸಂಶಯ, ಮನೋವಿಕಾರ, ಮತ್ತು ಆತ್ಮ ವಿಶ್ವಾಸದ ಪೂರ್ಣನಾಶ ಪ್ರಾಪ್ತವಾದವು. ದಂಗೆಗೆ ಮುಂಚೆ ಅನೇಕ ವರ್ಷಗಳ ಮೊದಲೇ ಈ ಸಂಪರ್ಕ ಕಡಿದು ಹೋಗಿ ಬಂಗಾಲ ಮತ್ತು ಇತರ ಕಡೆಗಳಲ್ಲಿ ಈ ಮೊದಲೇ ತಿಳಿಸಿರು ವಂತೆ ಅನೇಕ ಮಾನಸಿಕ ಕ್ರಾಂತಿ ಎದ್ದಿದ್ದವು. ಆದರೆ ಮುಸ್ಲಿಮರು ಹಿಂದೂಗಳಿಗಿಂತ ಹೆಚ್ಚು ಸಂಕುಚಿತ ಮನೋಭಾವದವರಾಗಿ ಪಾಶ್ಚಾತ್ಯ ವಿದ್ಯೆಯಿಂದ ದೂರಸರಿದು ಇನ್ನೂ ತಮ್ಮ ನವಾಬಗಿರಿ ಸ್ಥಾಪಿಸುವ ಕನಸಿನ ಪ್ರಪಂಚದಲ್ಲಿ ಇದ್ದರು. ಈಗ ಆ ಕನಸಿನ ಕನ್ನಡಿ ಒಡೆದು ಹೋಯಿತು. ಆದರೂ ಏನಾದರೂ ಒಂದು ಆಸರೆ ಅವಶ್ಯವಿತ್ತು. ನೂತನ ವಿದ್ಯಾಭ್ಯಾಸದಿಂದ ದೂರನಿಂತರು. ಕ್ರಮೇಣ ಸರ್ ಸೈಯದ್ ಅಹಮದ್ ರ್ಖಾ ದೀರ್ಘ ಚರ್ಚೆಮಾಡಿ, ಬಹುಕಷ್ಟದಿಂದ ಅವರನ್ನು ಇಂಗ್ಲೀಷ್ ವಿದ್ಯಾಭ್ಯಾಸದ ಕಡೆ ತಿರುಗಿಸಿ ಅಲಿಘಡದ ಕಾಲೇಜನ್ನು ಆರಂಭಿಸಿದನು. ಸರಕಾರಿ ನೌಕರಿಗೆ ಸೇರಲು ಅದೊಂದೇ ಮಾರ್ಗವಾಯಿತು. ಪ್ರಬಲ ಅಧಿಕಾರದ ಆಸೆಯಿಂದ ಹಿಂದಿನ ಕಹಿನೆನಪು ಮತ್ತು ವಿರೋಧ ಮರೆತವು. ಹಿಂದೂಗಳು ವಿದ್ಯಾಭ್ಯಾಸದಲ್ಲಿ ಬಹಳ ಮುಂದುವರಿ ದಿದ್ದು ದೂ ಮತ್ತು ಸರಕಾರಿ ನೌಕರಿಯನ್ನು ಹೀಯಾಳಿಸುತ್ತಿದ್ದು ದೂ ಹಿಂದುಗಳಂತೆ ತಾವೂ ಮುಂದುವರಿಯಬೇಕೆಂಬ ಬಲವತ್ತರ ಆಸೆಗೆ ಕಾರಣವಾಯಿತು. ಪಾರಸಿಗಳೂ ಹಿಂದೂಗಳೂ ಕೈಗಾರಿಕೆಯಲ್ಲಿ ತುಂಬ ಪ್ರಾಮುಖ್ಯತೆ ಗಳಿಸಿದರು. ಆದರೆ ಮುಸ್ಲಿಮರ ದೃಷ್ಟಿ ಎಲ್ಲ ಸರಕಾರದ ಅಧಿಕಾರದ ಕಡೆ ತಿರುಗಿತು. ಆದರೆ ಬಹಳ ಸ್ವಲ್ಪ ಜನರಲ್ಲಿದ್ದ ಈ ಹೊಸ ದೃಷ್ಟಿಯಿಂದ ಸಹ ಅವರ ಸಂಶಯ ನಿವಾರಣೆಯಾಗಿ ಮನಸ್ಸು ತಿಳಿಗಟ್ಟಲಿಲ್ಲ. ಹಿಂದೂಗಳು ಅಂಥ ಸಂದಿಗ್ಧ ಸನ್ನಿವೇಶಗಳಲ್ಲಿ ತಮ್ಮ ಪ್ರಾಚೀನ ಸಂಸ್ಕೃತಿಯ ಕಡೆಗೆ ತಿರುಗಿ ಅದರಿಂದ ಸಂಘಟಿತರಾದರು, ಸನಾತನ ದರ್ಶನ ಸಾಹಿತ್ಯ, ಕಲೆ ಮತ್ತು ಇತಿಹಾಸಗಳಿಂದ ಸಮಾಧಾನ ಪಡೆದರು, ರಾಮಮೋಹನರಾಯ,