ಪುಟ:ಭಾರತ ದರ್ಶನ.djvu/೩೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೦೮

ಭಾರತ ದರ್ಶನ

ರೂಪುಗೊಳ್ಳುತ್ತಿರುವ ಪ್ರತಿಯೊಂದು ದೇಶದಲ್ಲೂ ಧಾರ್ಮಿಕ ಜಾಗ್ರತಯಲ್ಲದ ಪ್ರಾಚೀನ ಪರಾಕಾಷ್ಟ್ರತೆಯ ಕಡೆ ತಿರುಗುವುದನ್ನೂ ಕಾಣುತ್ತೇವೆ. ಇರಾಣದ ಜನರು ತಮ್ಮ ಧರ್ಮಶ್ರದ್ದೆಯಲ್ಲಿ ಸ್ವಲ್ಪವೂ ಹಿಂದೆಗೆಯದೆ ಇಸ್ಲಾಂ ಧರ್ಮಕ್ಕೆ ಮುಂಚಿನ ತನ್ನ ಔನ್ನತ್ಯದ ಕಡೆಗೆ ತಿರುಗಿ ಅದರ ಸ್ಮರಣೆಯಿಂದ ತಮ್ಮ ಇಂದಿನ ರಾಷ್ಟ್ರೀಯ ಭಾವನೆಯನ್ನು ಪುಷ್ಟಿಕರಿಸಿಕೊಂಡಿದ್ದಾರೆ. ಇತರ ದೇಶಗಳಲ್ಲೂ ಇದೇ ರೀತಿ ನಡೆದಿದೆ. ಪ್ರಾಚೀನ ಭಾರತದಲ್ಲಿ ಅದರ ಸಂಸ್ಕೃತಿ ಬಹುಮುಖವಿತ್ತು ಮತ್ತು ಅತ್ಯುನ್ನತ ವಿತ್ತು. ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನರು ಮತ್ತು ಇತರರು ತಲೆತಲಾಂತರದಿಂದ ಸಾರ್ವತ್ರಿಕವಾದ ಒಂದು ಸಮನ್ವಯ ಸಂಸ್ಕೃತಿ ಕಟ್ಟಿದರು. ಗ್ರೀಕರು ಕ್ರೈಸ್ತರಾದ ಮಾತ್ರದಿಂದ ತಮ್ಮ ಹಿರಿಯರ ಮಹೋನ್ನತ ಪ್ರಾಚೀನ ಸಂಸ್ಕೃತಿಯ ಅಭಿಮಾನ ಕಳೆದುಕೊಳ್ಳದಂತ, ಇಟಾಲಿ ಯನರು ಕ್ರೈಸ್ತರಾದ ಮಾತ್ರದಿಂದ ರೋಮನ್ ಗಣರಾಜ್ಯದ ಮತ್ತು ಅದಕ್ಕೂ ಮುಂಚಿನ ರೋಮನ್ ಚಕ್ರಾಧಿಪತ್ಯದ ಸಾಧನೆಗಳ ಪ್ರೇಮ ಕಳೆದುಕೊಳ್ಳದಂತೆ, ಭಾರತೀಯರು ಸಹ ಅನೇಕರು ಪರಮತಾವಲಂಬಿಗಳಾದರೂ ತಮ್ಮ ಹಿರಿಯರ ಈ ಸಂಸ್ಕೃತಿಯಿಂದ ದೂರವಾಗಲಿಲ್ಲ. ಭಾರತೀಯ ರೆಲ್ಲರೂ ಮುಸಲ್ಮಾನರೋ, ಕ್ರೈಸ್ತರೋ ಆಗಿದ್ದರೂ ಸಹ ಜನಜೀವನದ ಸಮಸ್ಯೆಗಳ ಪರಿಹಾರಕ್ಕಾಗಿ ನಡೆದ ನಾಗರಿಕ ಜೀವನದ ಮಾನಸಿಕ ಹೋರಾಟಗಳ ಬಹುಕಾಲದ ಇತಿಹಾಸದಿಂದ ದೊರೆಯುವ ಒಂದು ನಿಲವು ಮತ್ತು ಗಾಂಭೀರ್ಯ ಕೊಡಲು ಮತ್ತು ಜನತೆಯಲ್ಲಿ ಒಂದು ಉತ್ಸಾಹವನ್ನು ಪ್ರಚೋದಿಸಲು ಆ ಸಂಸ್ಕೃತಿಯು ಇದ್ದೇ ಇರುತ್ತಿತ್ತು.

ನಾವು ಒಂದು ಸ್ವತಂತ್ರರಾಷ್ಟ್ರವಾಗಿದ್ದಿದ್ದರೆ ಇಂದು ಸಹ ಎಲ್ಲರ ಭವಿಷ್ಯ ಸುಖಕ್ಕಾಗಿ ಎಲ್ಲರೂ ಒಟ್ಟಿನಲ್ಲಿ ದುಡಿದು ನಮ್ಮೆಲ್ಲರ ಪೂರ್ವೇತಿಹಾಸವನ್ನು ಸಮಾನ ಗೌರವದಿಂದ ಕಾಣುತ್ತಿದ್ದೆವು. ಮೊಗಲರ ಕಾಲದಲ್ಲಿ ಮೊಗಲ್ ಚಕ್ರವರ್ತಿಗಳು ಮತ್ತು ಅವರ ಸಹೋದ್ಯೋಗಿಗಳು ಪರಕೀಯರಾಗಿ ದ್ದರೂ, ಈ ಪ್ರಾಚೀನ ಸಂಸ್ಕೃತಿಯಲ್ಲಿ ಏಕೀಭವಿಸಿ ಇತರರೊಂದಿಗೆ ತಾವೂ ಭಾಗಿಗಳಾಗಲ ಬಯಸಿ ದರು. ಆದರೆ ಐತಿಹಾಸಿಕ ಆಕಸ್ಮಿಕಗಳು ಮತ್ತು ವಿಧಾನಗಳು ಮಾನವ ನೀತಿ ಮತ್ತು ದೌರ್ಬಲ್ಯ ಗಳಿಂದ ಪುಷ್ಟಿಗೊಂಡು ಬೇರೊಂದು ಪರಿಣಾಮ ಮಾಡಿದವು. ಆ ವ್ಯತ್ಯಾಸಗಳಿಂದ ಸಾಮಾನ್ಯ ಬೆಳವಣಿಗೆ ಕುಂಠಿತವಾಯಿತು. ಪಾಶ್ಚಿಮಾತ್ಯದ ಪ್ರಭಾವ, ಔದ್ಯೋಗಿಕ ಮತ್ತು ಆರ್ಥಿಕ ಪರಿವರ್ತನೆ ಗಳ ಪ್ರಭಾವದಿಂದ ರೂಪುಗೊಂಡ ಹೊಸ ಮಧ್ಯಮ ವರ್ಗದ ಹಿಂದೂ ಮುಸ್ಲಿಮರಿಬ್ಬರಲ್ಲ ಒಂದು ಸಾಮಾನ್ಯ ಹಿನ್ನೆಲೆ ದೊರೆಯಬಹುದಾಗಿತ್ತು. ಸ್ವಲ್ಪಮಟ್ಟಿಗೆ ಅದು ಸಾಧ್ಯವೂ ಆಯಿತು. ಆದರೆ ಅದುವರೆಗೆ ಕಾಣದ ಅಂತರವೂ ಹೆಚ್ಚಾಯಿತು. ಶ್ರೀಮಂತರು ಮತ್ತು ಅರೆ ಶ್ರೀಮಂತರಿಗೂ ಜನ ಸಾಮಾನ್ಯಕ್ಕೂ ಬಹುಮಟ್ಟಿಗೆ ಕಡಮೆ ಇದ್ದ ಅಂತರ ಇನ್ನೂ ಆಳವಾಯಿತು. ಜನಸಾಮಾನ್ಯರಲ್ಲಿ ಹಿಂದೂ ಮುಸ್ಲಿಮರಲ್ಲಿ ಯಾವ ವಿಶೇಷ ವ್ಯತ್ಯಾಸವೂ ಇರಲಿಲ್ಲ. ಹಿಂದಿನ ಆಳರಸರು ಒಂದು ಸಾಮಾನ್ಯ ಜೀವನರೀತಿಯನ್ನೂ ಮಟ್ಟವನ್ನೂ ಏರ್ಪಡಿಸಿದ್ದರು, ಆದರೂ ಒಂದೇ ಸಂಸ್ಕೃತಿ, ಒಂದೇ ಬಗೆಯ ಆಚಾರವ್ಯವಹಾರಗಳು, ಹಬ್ಬ ಹುಣ್ಣಿಮೆಗಳು ಸರ್ವಸಾಮಾನ್ಯವಿದ್ದವು. ಹೊಸ ಮಧ್ಯಮ ವರ್ಗದ ಮಾನಸಿಕ ಭಾವನೆಯು ಮಾತ್ರ ಬೇರೆಯಾಯಿತು ; ಕ್ರಮೇಣ ಇನ್ನೂ ಅನೇಕ ವಿಧದಲ್ಲಿ ಅವರ ಮಾರ್ಗಗಳು ಬೇರೆಯಾದವು.

ಆರಂಭದಲ್ಲಿ ಮುಸ್ಲಿಮರಲ್ಲಿ ಈ ಮಧ್ಯಮ ವರ್ಗವೇ ಇರಲಿಲ್ಲ. ಮುಸ್ಲಿಮರು ಪಾಶ್ಚಿಮಾತ್ಯ ವಿದ್ಯಾಭ್ಯಾಸದಿಂದ ದೂರನಿಂತುದೂ ವ್ಯಾಪಾರ ಮತ್ತು ಕೈಗಾರಿಕೆಯಲ್ಲಿ ಹಿಂದುಳಿದುದೂ, ಹಳೆಯ ನವಾಬಗಿರಿ ಪದ್ದತಿಯನ್ನೇ ಅವಲಂಬಿಸಿದುದೂ, ಮುಂತಾದ ಕಾರಣಗಳಿಂದ ಹಿಂದೂಗಳು ಮುಂದು ವರಿಯಲು ಒಂದು ಅವಕಾಶದೊರೆತು, ಅದರಿಂದ ಹಿಂದುಗಳಿಗೆ ಲಾಭ ಪಡೆಯುವದಕ್ಕೂ, ಆ ಲಾಭ ವನ್ನು ಭದ್ರಪಡಿಸಿಕೊಳ್ಳುವುದಕ್ಕೂ ಅವಕಾಶ ದೊರೆಯಿತು. ಮುಸ್ಲಿಮರು ಇತರ ಕಡೆಗಳಿಗಿಂತ ಪಂಜಾಬಿನಲ್ಲಿ ಹೆಚ್ಚಾಗಿ ಪಾಶ್ಚಾತ್ಯ ವಿದ್ಯಾಭ್ಯಾಸದ ಕಡೆ ಗಮನ ಕೊಟ್ಟು ದರಿಂದ ಪಂಜಾಬ್ ಒಂದು ಬಿಟ್ಟು ಉಳಿದೆಲ್ಲ ಕಡೆ ಬ್ರಿಟಿಷರ ನೀತಿಯು ಹಿಂದೂಗಳ ಪರವಾಗಿತ್ತು ಮತ್ತು ಮುಸ್ಲಿಮ