ಪುಟ:ಭಾರತ ದರ್ಶನ.djvu/೩೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ಅಂಕ

೩೦೭

ತ್ಸಾಧನೆಗಳಿಗೆ ಮುಖ್ಯವಾಗಿ ವಿದ್ಯ, ಸಂಸ್ಕೃತಿ, ಸಾರ್ವಜನಿಕ ಆರೋಗ್ಯ ಮತ್ತು ಸರ್ವಸಮಾನತ ಗಳಲ್ಲಿ ಅವರ ಸಾಧನೆಗಳನ್ನು ಕಂಡು ಮುಗ್ಧರಾದರು. ರಾಷ್ಟ್ರೀಯ ಭಾವನೆಯು ಒಂದು ಸಂಕುಚಿತ ಭಾವನೆ. ಆದರೆ ರಾಷ್ಟ್ರೀಯ ಭಾವನೆಗೂ ಸರ್ವವ್ಯಾಪಕ ಸಾಮ್ರಾಜ್ಯ ಭಾವನೆಗೂ ಘರ್ಷಣೆ ಯಾದರೆ ಎಲ್ಲ ಬಗೆಯ ನಿರಾಶೆಗಳಿಗೆ ಮನೋವಿಕಲತೆಗೆ ಅವಕಾಶವಾಗುತ್ತದೆ. ಬೇರೊಂದು ಮಟ್ಟದಲ್ಲಿ ಗಾಂಧೀಜಿ ಪ್ರಯತ್ನ ಪಟ್ಟ೦ತೆ ಠಾಕೂರರು ಸಹ ತಮ್ಮ ಜನ ಸಂಕುಚಿತ ಭಾವನೆಯ ಕೀಳುದಾರಿ ಬಿಟ್ಟು ದೊಡ್ಡ ಮಾನವೀಯ ವಿಷಯಗಳ ಕಡೆ ಗಮನಕೊಡುವಂತೆ ಮಾಡಿ ಭಾರತಕ್ಕೆ ಮಹದುಪಕಾರಮಾಡಿದರು, ಠಾಕೂರರು ಭಾರತದ ಒಬ್ಬ ಮಹಾ ಮಾನವ ಪ್ರೇಮಿಗಳು.

ಇಪ್ಪತ್ತನೆಯ ಶತಮಾನದ ಮೊದಲ ಅರ್ಧದಲ್ಲಿ ಠಾಕೂರ್ ಮತ್ತು ಗಾಂಧಿ ಇಬ್ಬರೂ ಭಾರತದ ಅತ್ಯುನ್ನತ ಪ್ರಭಾವಶಾಲಿ ವ್ಯಕ್ತಿಗಳು. ಅವರಿಬ್ಬರನ್ನೂ ಪರಸ್ಪರ ಹೋಲಿಸಿ ಅವರ ಪರಸ್ಪರ ವ್ಯತ್ಯಾಸ ಅರಿತುಕೊಳ್ಳುವುದರಲ್ಲಿ ಲಾಭವಿದೆ. ವ್ಯಕ್ತಿತ್ವದಲ್ಲಿ ಮತ್ತು ಸ್ವಭಾವದಲ್ಲಿ ಇಬ್ಬರ ಮಧ್ಯೆ ಇದ್ದ ವ್ಯತ್ಯಾಸವನ್ನು ಬೇರೆ ಯಾರಲ್ಲೂ ಕಾಣಲಾರೆವು. ಶ್ರೀಮಂತ ಕಲಾವಿದನಾದರೂ, ಜನ ಸಾಮಾನ್ಯರಲ್ಲಿ ಸಹಾನುಭೂತಿ ಇಟ್ಟು, ಪ್ರಜಾಪ್ರಭುತ್ವವಾದಿ ಠಾಕೂರರು ತುಂಬು ಜೀವನವನ್ನು ಒಪ್ಪಿ, ಗೀತ ನೃತ್ಯಗಳಿಂದ ಅದನ್ನು ಅನುಭವಿಸಬೇಕೆಂದು ಭಾರತೀಯ ಜೀವನಾಸಕ್ತ ಸಂಸ್ಕೃತಿ ಸಂಪ್ರದಾಯದ ಮುಖ್ಯ ಪ್ರತಿನಿಧಿಗಳಾಗಿದ್ದರು. ಭಾರತ ಜನಕೋಟಿಯಲ್ಲಿ ಜನ್ಮತಾಳಿ, ಭಾರತದ -ಬಡರೈತನ ಪ್ರತಿನಿಧಿಯಾಗಿ ಗಾಂಧಿಜಿ ತ್ಯಾಗ ಮತ್ತು ಯೋಗ ಜೀವನದ ಭಾರತೀಯರ ಇನ್ನೊಂದು ಸನಾತನ ಸಂಪ್ರದಾಯದ ಪ್ರತಿನಿಧಿಗಳಾದರು, ಮಾರ್ಗ ಬೇರೆಯಾದರೂ ಇಬ್ಬರದೂ ವಿಶಾಲ ವಿಶ್ವದೃಷ್ಟಿ ಮತ್ತು ಇಬ್ಬರೂ ಪೂರ್ಣ ಭಾರತೀಯರಿದ್ದರು. ಭಾರತದ ಈ ಇಬ್ಬರು ಮಹಾ ವ್ಯಕ್ತಿಗಳ ಸಮನ್ವಯ ಮತ್ತು ಸಹ ಪೋಷಕದೃಷ್ಟಿ ಬೇರೆಯಾದರೂ ಅವರು ಈ ಎರಡು ಪ್ರತ್ಯೇಕ ದೃಷ್ಟಿಗಳ ಪ್ರತಿನಿಧಿಗಳಾದರು.

ಠಾಕೂರ್ ಮತ್ತು ಗಾಂಧಿ ನಮ್ಮನ್ನು ಆಧುನಿಕ ಯುಗಕ್ಕೆ ಕರೆತರುತ್ತಾರೆ. ನಾವು ಯೋಚಿ ಸುತ್ತಾ ಇದ್ದುದು ಅದಕ್ಕೂ ಮೊದಲಿನ ಕಾಲ ವಿವೇಕಾನಂದ ಮತ್ತು ಇತರರು ಭಾರತದ ಶ್ರೇಷ್ಠ ಸನಾತನ ಸಂಸ್ಕೃತಿಯ ಔನ್ನತ್ಯವನ್ನು ತೋರಿಸಿಕೊಟ್ಟು, ಅದರಲ್ಲಿ ಒಂದು ವಿಶೇಷ ಅಭಿಮಾನ ಹುಟ್ಟಿ ಸಿದ್ದರಿಂದ ಭಾರತದ ಜನಮನದ ಮೇಲೆ ಮುಖ್ಯವಾಗಿ ಹಿಂದುಗಳ ಮೇಲೆ ಯಾವ ಪರಿಣಾಮ ವಾಯಿತನ್ನು ವುದನ್ನು ಯೋಚಿಸುತ್ತ ಇದ್ದೆವು. ವಿವೇಕಾನಂದನೇ ಹಿಂದಿನದನ್ನೇ ನಂಬಿ ಕುಳಿತು ಕೊಳ್ಳಬೇಡಿ ಮುಂದಿನ ಭವಿಷ್ಯದ ಕಡೆ ಗಮನಿಸಿ ಎಂದು ಎಚ್ಚರಿಸುತ್ತಿದ್ದನು. “ಅಯೊ, ದೇವರೇ ಸದಾ ಹಿಂದಿನದನ್ನೇ ನಂಬುವ ನಮ್ಮ ಜನರ ಸ್ವಭಾವದಿಂದ ಬಿಡುಗಡೆ ಎಂದು ?” ಎಂದು ಒಂದು ಪತ್ರದಲ್ಲಿ ಬರೆದಿದ್ದಾನೆ. ಆದರೆ ಹಿಂದಿನ ವೈಶಿಷ್ಟ್ಯ ತೋರಿಸಿದವರೂ ಆತ ಮತ್ತು ಆತನ ಸಮಕಾಲೀನರೇ, ಅದರಲ್ಲಿ ಒಂದು ಉಜ್ವಲ ಭಾವನೆ ಇತ್ತು; ತಪ್ಪಿಸಿಕೊಳ್ಳುವುದೂ ಸುಲಭವಿರಲಿಲ್ಲ.

ಈ ರೀತಿ ಪ್ರಾಚೀನತೆಯ ಕಡೆ ನೋಡಿ ಅದರಲ್ಲಿ ಒಂದು ಸಮಾಧಾನ ಪಡೆದು ಸಂತೃಪ್ತಿ ಗೊಳ್ಳಲು ಪ್ರಾಚೀನ ಸಾಹಿತ್ಯ ಮತ್ತು ಇತಿಹಾಸಗಳಲ್ಲಿ ನಡೆದ ಸಂಶೋಧನೆಗಳೂ, ಪೌರ್ವಾತ್ಯ ಸಮುದ್ರಗಳಲ್ಲಿನ ಭಾರತೀಯ ವಲಸೆ ರಾಜ್ಯಗಳ ಕಥೆಗಳ ಪರಿಚಯವೂ ತುಂಬ ಸಹಾಯಕ ವಾಯಿತು. ಹಿಂದೂ ಮಧ್ಯಮ ವರ್ಗದವರ ಧಾರ್ಮಿಕ ಮತ್ತು ರಾಷ್ಟ್ರೀಯ ಸಂಪತ್ತನ್ನು ತೋರಿಸಿ ಕೊಟ್ಟು, ಅವರಲ್ಲಿ ಒಂದು ಆತ್ಮವಿಶ್ವಾಸ ಹುಟ್ಟಿಸುವುದರಲ್ಲಿ ಶ್ರೀವೆ ಆನಿ ಬೆಸೆಂಟ್ ಉತ್ತಮ ಪ್ರಭಾವ ಬೀರಿದಳು. ಇದೆಲ್ಲದರಲ್ಲಿ ಒಂದು ತಾತ್ವಿಕ ಮತ್ತು ಧಾರ್ಮಿಕ ಭಾವನೆ ಇದ್ದರೂ ಅದರ ಹಿನ್ನೆಲೆಯು ರಾಜಕೀಯವಿತ್ತು, ಪ್ರಗತಿಪರ ಮಧ್ಯಮವರ್ಗದವರಿಗೆ ಧಾರ್ಮಿಕ ಭಾವನೆಗಿಂತ ಹೆಚ್ಚಾಗಿ ರಾಜಕೀಯ ಆಕಾಂಕ್ಷೆಯು ಬಲವಾಗಿತ್ತು; ಆದರೆ ಅವರಿಗೆ ಬೇಕಾಗಿದ್ದುದು ಒಂದು ಭದ್ರವಾದ ಬುಡ, ತಮ್ಮ ಕಾರ್ಯಶಕ್ತಿಯಲ್ಲಿ ಒಂದು ಆತ್ಮವಿಶ್ವಾಸ, ಪರದಾಸ್ಯದಿಂದ ಉಂಟಾದ ಅಪಮಾನ ಮತ್ತು ನಿರಾಶಾಭಾವನೆಯನ್ನು ನಾಶಮಾಡುವ ಒಂದು ನವ ಚೈತನ್ಯ, ರಾಷ್ಟ್ರೀಯ ಭಾವನೆಯು