ಪುಟ:ಭಾರತ ದರ್ಶನ.djvu/೩೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೦೬

ಭಾರತ ದರ್ಶನ

ದಕ್ಷಿಣದಲ್ಲಿ ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ ಈ ರೀತಿ ವಿವೇಕಾನಂದನ ಸಿಂಹ ಗರ್ಜನೆಯಾಯಿತು. ಈ ಪ್ರವಾಸದಲ್ಲಿಯೇ ಆಯಾಸಗೊಂಡು ತನ್ನ ೩೯ನೆಯ ವಯಸ್ಸಿನಲ್ಲಿಯೇ ೧೯೦೨ ರಲ್ಲಿ ಸ್ವಾಮಿ ವಿವೇಕಾನಂದ ಅಸ್ತಂಗತನಾದನು.

ರವೀಂದ್ರನಾಥ ಠಾಕೂರ್ ಸ್ವಾಮಿ ವಿವೇಕಾನಂದನ ಸಮಕಾಲೀನರಾದರೂ ಒಂದು ಪೀಳಿಗೆ ಮುಂದಿನವರು, ೧೯ನೆಯ ಶತಮಾನದಲ್ಲಿ ಬಂಗಾಲದ ಸಮಾಜ ಸುಧಾರಣಾ ಚಳುವಳಿಗಳಲ್ಲಿ ಠಾಕೂರ ಮನೆತನವು ಪ್ರಮುಖ ಪಾತ್ರ ವಹಿಸಿತ್ತು. ಶ್ರೇಷ್ಠ ತತ್ವ ಜ್ಞಾನಿಗಳೂ, ಲೇಖಕರೂ, ಕಲಾವಿದರೂ ಅದರಲ್ಲಿ ಇದ್ದರು. ಆದರೆ ರವೀಂದ್ರನಾಥ ಠಾಕೂರರು ಅವರೆಲ್ಲರನ್ನೂ ಮೀರಿಸಿದರು. ಅಲ್ಲದೆ ಭಾರತದಲ್ಲೆಲ್ಲ ಕ್ರಮೇಣ ಅವರು ಅದ್ವಿತೀಯ ಉನ್ನತ ಸ್ಥಾನ ಪಡೆದರು ಎರಡು ದಶಕಗಳ ಕಾಲ ಅವರು ಅಸಾಧಾರಣ ಕಾವ್ಯಸೃಷ್ಟಿ ಮಾಡಿ ನಮ್ಮಂತೆಯೇ ಅತ್ಯಾಧುನಿಕರಾದರು. ಅವರು ರಾಜಕೀಯದಲ್ಲಿ ಪ್ರವೇಶಿಸಲಿಲ್ಲ. ಆದರೆ ಕೇವಲ ತಮ್ಮ ಕಾವ್ಯ ಮತ್ತು ಗಾನಗಳ ಕನಸಿನ ಪ್ರಪಂಚ ದಲ್ಲಿಯೇ ಉಳಿಯದೆ ಭಾರತದ ಸ್ವಾತಂತ್ರಾಭಿಲಾಷೆಯಲ್ಲಿಯೂ ತೀವ್ರ ಆಸಕರಿದ್ದು ಸಹಾನುಭೂತಿ ತೋರಿಸಿದರು. ಪದೇ ಪದೇ ತಮ್ಮ ಕಾವ್ಯ ಪ್ರಪಂಚದಿಂದ ಹೊರಬಿದ್ದು ಯಾವುದಾದರೂ ಸಮಸ್ಯೆ ಅಸಹನೀಯವಾದಾಗ ಬ್ರಿಟಿಷರನ್ನಾಗಲಿ, ತಮ್ಮ ಜನರನ್ನೇ ಆಗಲಿ ತಮ್ಮ ಅಧಿಕಾರವಾಣಿಯಿಂದ ಎಚ್ಚರಿಸಲು ಹಿಂಜರಿಯುತ್ತಿರಲಿಲ್ಲ, ಇಪ್ಪತ್ತನೆಯ ಶತಮಾನದ ಮೊದಲ ದಶಕದಲ್ಲಿ ಬಂಗಾಲದಲ್ಲಿ ವ್ಯಾಪಿಸಿದ ಸ್ವದೇಶಿ ಚಳವಳಿಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಅಲ್ಲದೆ ಅಮೃತಸರದ ಕೋಲೆ ಯನ್ನು ವಿರೋಧಿಸಿ ತಮ್ಮ ನೈಟ್ ಹುಡ್' ಪದವಿಯನ್ನು ಕಿತ್ತೊಗೆದರು, ಶಿಕ್ಷಣ ಕ್ರಮದಲ್ಲಿ ಆಡಂಬರ ವಿಲ್ಲದೆ ಆರಂಭಿಸಿದ ರಚನಾತ್ಮಕ ಕಾರದ ಫಲವಾಗಿ ಅವರು ಸ್ಥಾಪಿಸಿದ ಶಾಂತಿನಿಕೇತನ ಇಂದು ಭಾರತೀಯ ಸಂಸ್ಕೃತಿಗೆ ಒಂದು ಕೇಂದ್ರಸ್ಥಾನವಾಗಿದೆ. ಭಾರತದ ಜನಮನದ ಮೇಲೆ ಮುಖ್ಯವಾಗಿ ಯುವಕರಮೇಲೆ ಅವರ ಪ್ರಭಾವವು ಅದ್ಭುತವಾಯಿತು. ಅವರು ಸ್ವತಃ ಬರೆದ ಬಂಗಾಲಿಯಲ್ಲದೆ ಭಾರತದ ಇತರ ಎಲ್ಲ ಭಾಷೆಗಳ ಮೇಲೂ ಅವರ ಕೃತಿಗಳು ನವಚೈತನ್ಯವನ್ನುಂಟುಮಾಡಿವೆ. ಪೌರ್ವಾತ್ಯ ಮತ್ತು ಪಾಶ್ಚಿಮಾತ್ಯ ಆದರ್ಶಗಳನ್ನು ಸಮನ್ವಯಗೊಳಿಸಿ ಭಾರತೀಯರ ರಾಷ್ಟ್ರೀಯ ಭಾವನೆಯ ತಳಹದಿಯನ್ನು ವಿಶಾಲಗೊಳಿಸುವುದರಲ್ಲಿ ಬೇರಾವ ಭಾರತೀಯನಿಗೂ ಅವರಷ್ಟು ಸಾಧ್ಯ ವಾಗಲಿಲ್ಲ. ಅಂತರ ರಾಷ್ಟ್ರೀಯ ಸಹಕಾರದಲ್ಲಿ ಭರವಸೆಯಿಟ್ಟು ದುಡಿದು, ಇತರ ದೇಶಗಳಿಗೆ ಭಾರತದ ಸಂದೇಶ ಸಾರಿ, ಇತರ ದೇಶಗಳ ಸಂದೇಶವನ್ನು ತನ್ನ ಜನರಿಗೆ ತಂದು ಭಾರತದ ಶ್ರೇಷ್ಠ ಅಂತರರಾಷ್ಟ್ರೀಯ ರಾಯಭಾರಿಯಾದರು. ಇಷ್ಟೆಲ್ಲ ಅಂತರರಾಷ್ಟ್ರೀಯ ದೃಷ್ಟಿ ಇದ್ದರೂ ಆತನ ನಿಲುವುಮಾತ್ರ ಭಾರತದಲ್ಲಿ ಭದ್ರವಾಗಿ ನೆಲೆಸಿತ್ತು. ಆತನ ಮನಸ್ಸು ಉಪನಿಷತ್ತುಗಳ ಅಮೃತ ವಾಣಿಯಿಂದ ತುಂಬಿತ್ತು. ಸಾಮಾನ್ಯವಾಗಿ ವಯಸ್ಸಾಗುತ್ತ ಬಂದಂತೆ ಎಲ್ಲರೂ ಮಂದಗಾಮಿ ಗಳಾದರೆ ರವೀಂದ್ರರು ವಯಸ್ಸಾಗುತ್ತ ಬಂದಂತೆ ತಮ್ಮ ದೃಷ್ಟಿಯಲ್ಲಿ, ಭಾವನೆಗಳಲ್ಲಿ ಹೆಚ್ಚು ಹೆಚ್ಚು ಪ್ರಗತಿ ಪರರಾದರು. ವ್ಯಕ್ತಿ ಪ್ರಾಧಾನ್ಯತೆಗೆ ವಿಶೇಷ ಬೆಲೆಕೊಟ್ಟರೂ, ರಷ್ಯದ ಕ್ರಾಂತಿಯ ಮಹ
——————
ಭಾವನೆಯ ಆಚರಣೆಯ ಹಿಂದುಗಳೆಲ್ಲರಲ್ಲೂ ಇನ್ನೂ ಬೆಳೆಯಬೇಕಾಗಿದೆ. ಆದರೆ ಅನುಭವದಿಂದ ನೋಡುವುದಾದರೆ ದೈನಂದಿನ ಸಾಮಾನ್ಯ ದಿನಚರಿಯಲ್ಲಿ ಹೆಚ್ಚು, ಸಮಾನದೃಷ್ಟಿಯನ್ನು ತೋರುವ ಜನರೆಂದರೆ ಇಸ್ಲಾಂ ಧರ್ಮೀಯರು, ಆ ನಡತೆಯ ಮೂಲತತ್ವ ಆಥವ ಒಳಗುಟ್ಟು ಸಾಮಾನ್ಯವಾಗಿ ಅವರಿಗೆ ತಿಳಿಯದ ಇರಬಹುದು, ಹಿಂದೂಗಳು ಅದನ್ನು ಸಾಮಾನ್ಯವಾಗಿ ಗ್ರಹಿಸಲೂ ಬಹುದು; ಆದರೆ ಆ ಉದಾರ ಆಚರಣೆಯನ್ನು ಕಾಣುವುದು ಇಸ್ಲಾಂ ಧರ್ಮದಲ್ಲಿ ಮಾತ್ರ. ನಮ್ಮ ತಾಯಿನಾಡಿಗೆ ಈ ಎರಡು ದರ್ಶನಗಳ ಸಮನ್ವಯವೇ ಇಸ್ಲಾಂ ದೇಹದಲ್ಲಿ ವೇದಾಂತದ ಜ್ಞಾನ-ಮುಕ್ತಿಮಾರ್ಗ, ಈ ಕೋಭೆ ಮತ್ತು ಅಂತಃಕಲಹದಿಂದ ಇಸ್ಲಾಂ ದೇಹದಲ್ಲಿ ವೇದಾಂತ ಮನಸ್ಸಿನ ತೇಜಃಪುಂಜ ಅಜೇಯ ಭಾರತವು ಉದಯವಾಗುತ್ತಿರುವ ದೃಶ್ಯವು ನನ್ನ ಕಣ್ಣಿನದುರು ಸುಳಿಯುತ್ತಿದೆ,” ಎಂದು ಬರೆದಿದ್ದಾರೆ. ಈ ಪತ್ರ ಬರೆದುದು ೧೮೯೮ ನೇ ಜೂನ್ ೧೦ ರಲ್ಲಿ.