ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೧೨೪
ಭಾರತ ದರ್ಶನ

ವನ್ನು ಆಕ್ರಮಿಸಿದನು. ಇದು ನಡೆದ ೧೬ನೆಯ ಶತಮಾನವು ಇರಾಣದಲ್ಲಿ ಸಘಾವಿಸ್ ಆಳ್ವಿಕೆಯಲ್ಲಿ ಒಂದು ಅದ್ಭುತ ಕಲಾ ಪುನರುಜ್ಜಿವನ ಕಾಲ, ಪರ್ಷಿಯನ್ ಕಲೆಯ ಸ್ವರ್ಣಯುಗ ಎನ್ನುತ್ತಾರೆ ಆ ಕಾಲವನ್ನು , ಬಾಬರನ ಮಗನಾದ ಹುಮಾಯೂನ್ ಆಶ್ರಯ ಪಡೆದದ್ದು ಸಘಾವಿ ದೊರೆಯಲ್ಲಿ ಮತ್ತು ಅವನ ಸಹಾಯದಿಂದಲೇ ಪುನಃ ಇ೦ಡಿಯಕ್ಕೆ ಬಂದದ್ದು. ಇ೦ಡಿಯದ ಮೊಗಲ್ ಚಕ್ರವರ್ತಿಗಳು ಇರಾನದೊಂದಿಗೆ ನಿಕಟ ಬಾಂಧವ್ಯ ಬೆಳೆಸಿದ್ದರು. ಮೊಗಲ್ ಚಕ್ರವರ್ತಿಗಳ ರಾಜ ಸಭೆಯಲ್ಲಿ ಕೀರ್ತಿಯನ್ನೂ ಬಹುಮಾನವನ್ನೂ ಪಡೆಯಬೇಕೆಂದು ವಿದ್ವಾಂಸರು ಮತ್ತು ಕಲಾವಿದರು ತಂಡೋಪತಂಡವಾಗಿ ಗಡಿಯನ್ನು ದಾಟಿ ಬರುತ್ತಿದ್ದರು,

ಭಾರತೀಯ ಆದರ್ಶಗಳ ಮತ್ತು ಪಾರಸಿ ಭಾವನೆಗಳ ಮಿಳನದಿಂದ ಒಂದು ಹೊಸ ಶಿಲ್ಪ ಕಲೆಯೂ ಭಾರತದಲ್ಲಿ ಬೆಳೆಯಿತು. ದೆಹಲಿ ಮತ್ತು ಆಗ್ರ ನಗರಗಳ ಗಂಭೀರ ಸರ್ವಸುಂದರ ಸೌಧಗಳು ಆ ಕಲೆಯ ಮುಕ್ತಾ ಫಲಗಳು. ಇವುಗಳಲ್ಲಿ ಅತಿ ಮುಖ್ಯವಾದ ತಾಜ್‌ಮಹಲನ್ನು ಕಂಡು ಫ್ರೆಂಚ್ ವಿದ್ವಾಂಸ ನಾದ ಸೆ “ ಇರಾನದ ಆತ್ಮವು ಭಾರತೀಯ ದೇಹದಲ್ಲಿ ಅವತಾರ ಮಾಡಿದೆ” ಎಂದಿದ್ದಾನೆ.

ತಮ್ಮ ಬುಡಕಟ್ಟಿನಲ್ಲಿ ಮತ್ತು ಇತಿಹಾಸ ಪರಂಪರೆಯಲ್ಲಿ ಭಾರತೀಯರಿಗೂ ಇರಾಣದ ಜನ ರಿಗೂ ಇರುವಷ್ಟು ಸಮಾಜ ಬಾಂಧವ್ಯ ಬೇರೆ ಯಾರಲ್ಲೂ ಕಾಣದು. ಈ ನಿರರ್ಗಳ, ಮೈತ್ರಿಯುತ, ಗೌರವಯುತ ಬಾಂಧವ್ಯವು ಬಹುಕಾಲ ನಡೆಯಿತು. ಕೊನೆಯ ನೆನಪು ಮಾತ್ರ ಅತ್ಯಲ್ಪ ಕಾಲದ್ದಾ ದರೂ ಅತಿ ಭಯಂಕರವಾಗಿತ್ತು. ಎರಡು ನೂರು ವರ್ಷಗಳ ಹಿಂದೆ ನಾದಿರ್ ಷಹನು ದಂಡಯಾತ್ರೆ ಬಂದು ದೆಹಲಿಯನ್ನು ಕೊಳ್ಳೆ ಹೊಡೆದುದು ಒಂದು ದುರ್ದೈವ.

ಅನಂತರದ ಬ್ರಿಟಿಷರ ಆಗಮನದಿಂದ ಏಷ್ಯದ ನಮ್ಮ ನೆರೆಹೊರೆಯ ಜನರಿಗೂ ನಮಗೂ ಇದ್ದ ಬಾಂಧವ್ಯ ಮಾರ್ಗಗಳೆಲ್ಲ ಮುಚ್ಚಿದವು. ಕಪಟ ಬಂಧನ ಮಾಡಿದರು. ನಮ್ಮನ್ನು ಯೂರೋಪಿನ ಸಮಾಸಕ್ಕೆ ಅದರಲ್ಲೂ ಇಂಗ್ಲೆಂಡಿನ ಸಮಾಜಕ್ಕೆ ಕರೆದೊಯ್ಯುವ ಹೊಸ ಸಮುದ್ರ ಮಾರ್ಗಗಳನ್ನು ತೋರಿಸಿದರು. ಇಂಡಿಯ, ಇರಾಣ, ಮಧ್ಯ ಏಷ್ಯ, ಚೀನಗಳಿಗೆ ಆಧುನಿಕ ಯುಗದ ವಿಮಾನ ಸೌಕಯ್ಯ ಒದಗುವವರೆಗೆ ನಮ್ಮ ಹಿಂದಿನ ಸ್ನೇಹಸಂಪರ್ಕದ ಭೂಮಾರ್ಗಗಳೆಲ್ಲ ಅಂದಿನಿಂದ ಮಾಯ ವಾದವು. ಈ ರೀತಿ ಆಕಸ್ಮಿಕವಾಗಿ ಇದ್ದಕ್ಕಿದ್ದಂತೆ ಭಾರತವು ಏಷ್ಯದ ಇತರ ರಾಷ್ಟ್ರಗಳಿಂದ ಬೇರೆ ಯಾದದ್ದು ಬ್ರಿಟಿಷರ ಆಳ್ವಿಕೆಯ ಒಂದು ಅತಿ ವಿಚಿತ್ರದುಷ್ಪರಿಣಾಮ.* ಆ ದರೆ ಕಡಿಯದ ಬಾಂಧವ್ಯ ಒಂದು ಇನ್ನೂ ಉಳಿದಿದೆ. ಅದು ಇಂದಿನದಲ್ಲ ; ಪುರಾತನ ಇರಾಣದೊಂದಿನದು. ಹದಿಮೂರು ಶತಮಾನಗಳ ಹಿಂದೆ ಇಸ್ಲಾಂ ಧರ್ಮವು ಇರಾಣ ದೇಶಕ್ಕೆ ಬ೦ದಾಗ ಸನಾತನ ಜೊರಾಷ್ಟಧರ್ಮದ ಅನುಯಾಯಿಗಳು ಕೆಲವರು ಭಾರತಕ್ಕೆ ಬಂದು ನೆಲಸಿದರು. ಇಲ್ಲಿ ಅವರಿಗೆ ಆಶ್ರಯ ದೊರೆತು ಪಶ್ಚಿಮ ತೀರದಲ್ಲಿ ನೆಲೆಸಿದರು ಅವರ ಧರ್ಮ ಮತ್ತು ನಡೆನುಡಿ ಗಳಿಗೆ ಯಾವ ಆತಂಕವೂ ಬರಲಿಲ್ಲ. ಅವರೂ ಇನ್ನೊಬ್ಬರ ಗೋಜಿಗೆ ಹೋಗಲಿಲ್ಲ. ಈ ಪಾರ್ಸಿ ಜನರು ಸದ್ದಿಲ್ಲದೆ ಯಾವ ಆಡಂಬರವೂ ಇಲ್ಲದೆ ಭಾರತೀಯರಾಗಿ ಭಾರತದಲ್ಲಿ ಮನೆಮಾಡಿಕೊಂಡರೂ

——————

* ಪ್ರೊಫೆಸರ್ ಇ, ಜೆ, ಕ್ಯಾಪ್ಟನ್ ರು ಕೇಂಬ್ರಿಜ್ ಭಾರತೀಯ ಇತಿಹಾಸದಲ್ಲಿ “ ಸಣ್ಣ ಪುಟ್ಟ ರಾಜ್ಯಗಳನ್ನು ಒಂದು ದೊಡ್ಡ ರಾಜ್ಯವನ್ನಾಗಿ ಒಂದುಗೂಡಿಸಿದ ಶಕ್ತಿಯು ಮುಖ್ಯವಾಗಿ ನೌಕಾಶಕ್ತಿ ; ಸಮುದ್ರ ಮಾರ್ಗಗಳೆಲ್ಲ ತನ್ನ ಅಧೀನದಲ್ಲಿದ್ದುದರಿಂದ ರಕ್ಷಣಾದೃಷ್ಟಿಯಿಂದ ಭೂಮಾರ್ಗಗಳನ್ನು ಮುಚ್ಚುವುದು ಅತ್ಯವಶ್ಯಕವಾಯಿತು, ಇ೦ಡಿಯ ಚಕ್ರಾಧಿಪತ್ಯದ ಗಡಿಯ ರಾಷ್ಟ್ರಗಳ ವಿಚಾರದಲ್ಲಿ ಇದೇ ಬ್ರಿಟಿಷರ ರಾಜನೀತಿ, ಆಫ್ಘಾನಿಸ್ಥಾನ, ಬೆಲೂಚಿಸ್ಥಾನ ಮತ್ತು ಬ್ರಹ್ಮದೇಶಗಳು ಆದೇಕಾರಣದಿಂದ ಭಾರತದಿಂದ ದೂರವಾದವು. ಒಳಗಿನ ರಾಜಕೀಯ ಐಕ್ಯಮದ ಜೊತೆಗೆ ಹಿಂದೆಯೇ ಹೊರಗೆ ರಾಜಕೀಯ ಪ್ರತ್ಯೇಕತೆಯೂ ಬೆಳೆಯಿತು. ಆದರೆ ಈ ರಾಜಕೀಯ ಪ್ರತ್ಯೇಕತೆಯು ಬಹಳ ಇತ್ತೀಚಿನದು ಮತ್ತು ಭಾರತೀಯ ಇತಿಹಾಸಕ್ಕೆ ತೀರ ಹೊಸದು, ಪ್ರಸ್ತು ತಕಾಲವನ್ನು ಪ್ರಾಚೀನಕಾಲದಿಂದ ಕಡಿದು ಹಾಕಿರುವ ಒಂದು ಮಹಾ ಘಟನೆ,