ಪುಟ:ಭಾರತ ದರ್ಶನ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಯುಗಾಂತರಗಳು

೧೨೩

ಪಾರಸಿ ಚಕ್ರಾಧಿಪತ್ಯ ಸಿಂಧೂದೇಶ ಮತ್ತು ಪಶ್ಚಿಮ ಪಂಜಾಬ್ ಪ್ರಾಂತ್ಯವನ್ನೊಳಗೊಂಡು ವಾಯವ್ಯ ಭಾರತದವರೆಗೆ ಹಬ್ಬಿತ್ತು. ಭಾರತೀಯ ಇತಿಹಾಸದಲ್ಲಿ ಈ ಕಾಲಕ್ಕೆ ಜೊರಾಷ್ಟರಕಾಲ ಎಂದು ಹೆಸರಿದೆ. ಪ್ರಾಯಶಃ ಅದರ ಪ್ರಭಾವವೂ ವಿಶಾಲವಾಗಿದ್ದಿರಬೇಕು. ಸೂಯ್ಯಾರಾಧನೆಗೆ ಪ್ರೋತ್ಸಾಹವಿತ್ತು.

ಡೇರಿಯಸ್‌ನ ಭಾರತದ ಪ್ರಾಂತ್ಯ ಅವನ ಚಕ್ರಾಧಿಪತ್ಯದಲ್ಲೆಲ್ಲ ಬಹುಫಲವತ್ತಾದುದೂ, ಜನನಿಬಿಡವಾದುದೂ ಆಗಿತ್ತು, ಈಗಿನಕಾಲದ ನಿರ್ಜಲ ಮರಳಾಡಾಗಿರುವ ಸಿಂಧೂದೇಶವು ಆಗ ಬಹಳ ಫಲವತ್ತಾಗಿರಬೇಕು. ಹೆರೊಡೋಟಸ್ ನು ಭಾರತೀಯರ ಐಶ್ವರ್ಯ ಮತ್ತು ಜನಸಾಂದ್ರತೆಯನ್ನೂ ಭಾರತೀಯರು ಡೇರಿಯಸ್‌ಗೆ ತೋರಿಸುತ್ತಿದ್ದ ಗೌರವವನ್ನೂ ವರ್ಣಿಸಿದ್ದಾನೆ. “ ನಮಗೆ ಗೊತ್ತಿರುವ ಇತರ ಎಲ್ಲ ಜನರಿಗಿಂತ ಭಾರತೀಯರ ಜನಸಂಖ್ಯೆಯೇ ಬಹಳ ಹೆಚ್ಚಿನದು. ಇತರರೆಲ್ಲರ ಕಾಣಿಕೆಗಿಂತ ಹೆಚ್ಚು ಕಾಣಿಕೆ ಕೊಡುತ್ತಿದ್ದರು. ಮೂವತ್ತು ಲಕ್ಷ ಪೌಂಡು ಸ್ಟರ್ಲಿ೦ಗ್ ಬೆಲೆಯಾಗುವಷ್ಟು, ಚಿನ್ನದ ಗಟ್ಟಿಗಳನ್ನು ಕೊಡುತ್ತಿದ್ದರು.” ಪಾರಸಿ ಸೈನ್ಯದಲ್ಲಿ ಭಾರತೀಯ ಕಾಲಾಳು, ಅಶ್ವದಳ, ರಥದಳಗಳೂ ಅನಂತರ ಹಸ್ತಿದಳಗಳೂ ಇದ್ದುವೆಂದು ತಿಳಿಸುತ್ತಾನೆ.

ಕ್ರಿಸ್ತಪೂರ್ವ ಏಳನೆಯ ಶತಮಾನಕ್ಕೆ ಪೂರ್ವದಿಂದ ಮತ್ತು ಆಮೇಲೆ ಅನೇಕ ಶತಮಾನಗಳ ಕಾಲ ಪರ್ಷಿಯ ಮತ್ತು ಭಾರತಗಳ ಮಧ್ಯೆ ವ್ಯಾಪಾರದ ಮೂಲಕ ಸಂಬಂಧವಿತ್ತೆಂಬುದಕ್ಕೆ ಬೇಕಾ ದಷ್ಟು ಸಾಕ್ಷದೊರೆತಿದೆ. ಅದರಲ್ಲೂ ಮುಖ್ಯವಾಗಿ ಅತಿ ಪೂರ್ವದಲ್ಲಿ ಇಂಡಿಯ ಮತ್ತು ಬೇಬಿಲಾನ್ ಮಧ್ಯೆ ನಡೆಯುತ್ತಿದ್ದ ವ್ಯಾಪಾರ ಪರ್ಷಿಯಕೊಲ್ಲಿಯ ಮೂಲಕ ನಡೆಯುತ್ತಿತ್ತೆಂದು ನಂಬಲಾಗಿದೆ. ೬ನೆಯ ಶತಮಾನದಿಂದೀಚೆ ಸೈರಸ್ ಮತ್ತು ಡೇರಿಯಸ್ಸನ ದಂಡಯಾತ್ರೆಗಳಿಂದ ಪ್ರತ್ಯಕ್ಷ ಸಂಬಂಧವೇ ಬೆಳೆಯಿತು. ಅಲೆಕ್ಸಾಂಡರನ ವಿಜಯದಿಂದ ಅನೇಕ ಶತಮಾನಗಳ ಕಾಲ ಪರ್ಷಿಯ ಗ್ರೀಕರ ರಾಜ್ಯಭಾರಕ್ಕೆ ಅಧೀನವಾಗಿತ್ತು. ಭಾರತದೊಂದಿಗೆ ಸಂಬಂಧ ಇದ್ದೇ ಇತ್ತು. ಅಶೋಕನ ಕಟ್ಟಡಗಳ ಶಿಲ್ಪ ಕಲೆ ಪರ್ಸಿಪೊಲೀಸ್ ಶಿಲ್ಪ ಕಲೆಯ ಮಾದರಿಯನ್ನು ಅನುಸರಿಸಿತಂತೆ. ವಾಯವ್ಯ ಭಾರತ ಮತ್ತು ಆಫ್ಘಾನಿಸ್ಥಾನಗಳಲ್ಲಿ ಬೆಳೆದ ಗ್ರೀಕ್-ಬೌದ್ಧ ಕಲೆಯಲ್ಲಿ ಇರಾಣಿ ಕಲೆಯ ಛಾಯೆಇತ್ತು. ಕಲೆ ಮತ್ತು ಸಂಸ್ಕೃತಿಯ ಚಟುವಟಿಕೆಗಳಿಗೆ ಹೆಸರಾದ ಕ್ರಿಸ್ತಶಕ ೪ ಮತ್ತು ೫ನೆಯ ಶತಮಾನಗಳಲ್ಲಿ ಗುಪ್ತರ ಕಾಲದಲ್ಲಿ ಭಾರತಕ್ಕೂ ಇರಾಣಕ್ಕೂ ಪರಸ್ಪರ ವ್ಯವಹಾರ ಬೆಳೆಯಿತು.

ಗಡಿ ಪ್ರದೇಶದ ಕಾಬೂಲ್, ಕಾಂದಹಾರ ಮತ್ತು ಸೀಸ್ತಾನ್ಗಳು ಭಾರತೀಯರೂ ಇರಾಣಿ ಗಳೂ ಸೇರುತ್ತಿದ್ದ ಪ್ರದೇಶಗಳಾಗಿದ್ದವು. ಅನೇಕವೇಳೆ ರಾಜಕೀಯ ಕಾರಣಗಳಿಂದ ಅವು ಭಾರತದ ಗಡಿಯೊಳಗು ಇರುತ್ತಿದ್ದವು. ಈಚೆಗೆ ಪಾರ್ಥಿಯನರ ಕಾಲದಲ್ಲಿ ಆ ಪ್ರದೇಶಗಳನ್ನು “ ಶ್ವೇತಭಾರತ ಎಂದು ಕರೆಯುತ್ತಿದ್ದರು. ಈ ಭಾಗಗಳ ವಿಷಯದಲ್ಲಿ ಫ್ರೆಂಚ್ ವಿದ್ವಾಂಸನಾದ ಜೆಮ್ಸ್ ಡಾರ್ ಮೆಸ್ಲರ್ “ ಆ ಭಾಗಗಳಲ್ಲಿ ಹಿಂದೂ ನಾಗರಿಕತೆ ಹರಡಿತ್ತು. ಕ್ರಿಸ್ತ ಪೂರ್ವದ ಎರಡು ಮತ್ತು ಕ್ರಿಸ್ತ ಶಕೆಯ ಎರಡು ಶತಮಾನಗಳಲ್ಲಿ ಅವುಗಳನ್ನು ' ಶೇತಭಾರತ' ಎಂದು ಕರೆಯುತ್ತಿದ್ದರು. ಮುಸಲ್ಮಾನರು ಆ ಪ್ರದೇಶಗಳನ್ನು ಗೆಲ್ಲುವವರೆಗೆ ಅವು ಇರಾಣೀಯಕ್ಕಿಂತ ಹೆಚ್ಚಾಗಿ ಭಾರತೀಯ ಪ್ರದೇಶಗಳಾಗಿದ್ದವು.

ಉತ್ತರದಲ್ಲಿ ವ್ಯಾಪಾರಿಗಳೂ ಮತ್ತು ಪ್ರವಾಸಿಕರೂ ಭೂಮಾರ್ಗದಿಂದ ಭಾರತಕ್ಕೆ ಬರುತ್ತಿದ್ದರು. ದಕ್ಷಿಣ ಭಾರತವು ಸಮುದ್ರ ಮಾರ್ಗವನ್ನು ಅವಲಂಬಿಸಿತ್ತು. ಸಮುದ್ರ ವ್ಯಾಪಾರದಿಂದ ಪರದೇಶ ವ್ಯವಹಾರ ಬೆಳೆದಿತ್ತು. ಸಸ್ಸನಿದ್ರ ಪರ್ಷಿಯ ಮತ್ತು ದಕ್ಷಿಣ ಭಾರತದ ಒಂದು ರಾಜ್ಯ ಪರಸ್ಪರ ರಾಯಭಾರಿಗಳನ್ನು ಕಳುಹಿಸಿದ್ದಂತೆ ಸಾಕ್ಷ ದೊರೆತಿದೆ.

ತುರುಕರು, ಆಫ್ಘನರು, ಮೊಗಲರು ಭಾರತವನ್ನು ಗೆದ್ದ ಕಾರಣ ಮಧ್ಯ ಮತ್ತು ಪಶ್ಚಿಮ ಏಷ್ಯದ ರಾಜ್ಯಗಳಿಗೂ ಭಾರತಕ್ಕೂ ಬೇಗ ಬಾಂಧವ್ಯ ಬೆಳೆಯಲು ಅನುಕೂಲವಾಯಿತು. ಯುರೋಪಿನ ಪುನರುಜ್ಜಿವನ ಕಾಲದ ಹದಿನೈದನೆಯ ಶತಮಾನದಲ್ಲಿ ಸಾಮರಖಂಡ ಮತ್ತು ಬೊಖಾರದಲ್ಲಿ ಇರಾಣದ ಅದ್ಭುತ ಪ್ರಭಾವದಿಂದ ತೈಮೂರ್‌ ಯುಗದ ಪುನರುಜ್ಜಿವನವು ಪ್ರಫುಲ್ಲಿತವಾಗಿತ್ತು. ಅದೇ ತೈಮೂರ್ ವಂಶದ ರಾಜಕುಮಾರನಾದ ಬಾಬರ್ ಸಾಮಾಜಿಕ ಸನ್ನಿವೇಶದಿಂದ ಬಂದು ದೆಹಲಿಯ ಸಿಂಹಾಸನ