ಅನೇಕ ವಿಷಯಗಳು ಸಾಮಾನ್ಯವಾಗಿವೆ. ವೇದ ಭಾಷೆಯಾದ ಸಂಸ್ಕೃತಕ್ಕೂ 'ಅವೆಸ್ಟ' ದ ಭಾಷೆಯಾದ ಪುರಾತನ ಪಕ್ಷವಿ ಭಾಷೆಗೂ ಬಹಳ ಹೋಲಿಕೆ ಇದೆ. ಮಹಾಕಾವ್ಯಗಳ ಸಂಸ್ಕೃತ ಮತ್ತು ಪಹ್ಲವಿ ಬೇರೆ ಬೇರೆಯಾಗಿ ಬೆಳೆದವು, ಆದರೆ ಇತರ ಆರ್ಯ ಭಾಷೆಗಿರುವಂತೆ ಅವುಗಳ ಮೂಲ ಶಬ್ಬಗಳು ಎರಡು ಭಾಷೆಗಳಿಗೂ ಒಂದೇ, ಎರಡು ಭಾಷೆಗಳೂ ಮತ್ತು ಎಲ್ಲಕ್ಕೂ ಹೆಚ್ಚಾಗಿ ಅವುಗಳ ಕಲೆ ಮತ್ತು ಸಂಸ್ಕೃತಿಗಳು ತಮ್ಮ ತಮ್ಮ ಸನ್ನಿವೇಶಗಳಿಗನುಗುಣವಾಗಿ ವ್ಯತ್ಯಾಸ ಗೊಂಡವು. ಪರ್ಷಿಯಾ ದೇಶದ ಕಲೆ ಪರ್ಷಿಯಾ ದೇಶದ ಭೂಗುಣ ಮತ್ತು ಪ್ರಕೃತಿ ಸೌಂದಯ್ಯಕ್ಕೆ ನಿಕಟವಾಗಿ ಅಂಟಿಕೊಂಡಿದೆ. ಪ್ರಾಯಶಃ ಇರಾಣಿ ಕಲಾ ಸಂಪ್ರದಾಯದ ಅವಿಚ್ಛಿನ್ನತೆಗೆ ಕಾರಣ ಇದೇ ಇರಬಹುದು. ಅದೇ ರೀತಿಯಾಗಿ ಸಿಂಧೂ ಆರ್ಯರ ಕಲಾ ಸಂಪ್ರದಾಯ ಹಿಮ ಆಚ್ಛಾದಿತ ಪರ್ವತಶ್ರೇಣಿಗಳ, ನಿಬಿಡವಾದ ಕಾನನ ಪಂಜಗಳ, ಉತ್ತರ ಹಿಂದೂಸ್ಥಾನದ ಮಹಾನದಿಗಳ ಸುತ್ತ ಬೆಳೆದು ಬಂದಿದೆ,
ಭಾರತದಂತೆ ಇರಾಣ ಸಂಸ್ಕೃತಿಯು ಸಹ ದಂಡೆತ್ತಿ ಬಂದ ಪರಕೀಯರನ್ನು ತನ್ನ ಪ್ರಭಾವಕ್ಕೆ ಅಧೀನ ಮಾಡಿಕೊಂಡಿತು. ತನ್ನೊಳಗೇ ಐಕ್ಯಮಾಡಿಕೊಳ್ಳುವಷ್ಟು ಪ್ರಬಲವಾಗಿತ್ತು ಅದರ ಸಾಂಸ್ಕೃತಿಕ ತಳಹದಿಯ ಶಕ್ತಿ. ಏಳನೆಯ ಶತಮಾನದಲ್ಲಿ ಇರಾಣರನ್ನು ಗೆದ್ದ ಅರಬ್ಬಿ ಜನರು ಅತ್ಯಲ್ಪ ಕಾಲ ದಲ್ಲೆ ಇರಾಣಿ ಸಂಸ್ಕೃತಿಗೆ ಮಾರು ಹೋದರು. ತಮ್ಮ ಮರುಭೂಮಿಯ ಸರಳ ಜೀವನವನ್ನು ಬಿಟ್ಟು ಇರಾಣಿ ಸಂಸ್ಕೃತಿಯ ಕೃತಕ ಜೀವನವನ್ನು ಆರಂಭಿಸಿದರು. ಯೂರೋಪಿನಲ್ಲಿ ಫ್ರೆಂಚ್ ಭಾಷೆ ಯಂತ ವಿಶಾಲ ಏಷ್ಯದ ಬಹುಭಾಗದಲ್ಲಿ ಪಾರ್ಸಿ ಭಾಷೆ ಸುಸಂಸ್ಕೃತ ಜನರ ಭಾಷೆಯಾಯಿತು. ಇರಾಣಿ ಕಲೆ ಮತ್ತು ಸಂಸ್ಕೃತಿ ಪಶ್ಚಿಮದಲ್ಲಿ ಕಾನ್‌ಸ್ಟೆಂಟಿನೋಪಲ್ ನಿಂದ ಗೋಬಿ ಮರುಭೂಮಿಯ ಸೆರಗಿನವರೆಗೆ ಹಬ್ಬಿತ್ತು.
ಭಾರತದಲ್ಲಿ ಈ ಇಲಾಣಿ ಪ್ರಭಾವ ನಿರರ್ಗಳವಾಗಿತ್ತು. ಆಫ್ಘನರ ಮತ್ತು ಮೊಗಲರ ಕಾಲಗಳಲ್ಲಿ ಭಾರತದಲ್ಲಿ ಪರ್ಷಿಯ್ರ ರಾಜಭಾಷೆಯಾಗಿತ್ತು. ಬ್ರಿಟಿಷರ ಕಾಲದ ಆರಂಭದವರೆಗೂ ಇದೇ ಪರಿಸ್ಥಿತಿ ಇತ್ತು. ಇಂದಿನ ಭಾರತೀಯ ಭಾಷೆಗಳಲ್ಲೆಲ್ಲ ಅನೇಕ ಪಾರಸಿ ಶಬ್ದಗಳು ತುಂಬಿವೆ. ಈ ಭಾಷೆಗಳೆಲ್ಲ ಸಂಸ್ಕೃತ ಜನ್ಯವಾದುದರಿಂದ ಇದು ಸ್ವಾಭಾವಿಕ, ಅದರಲ್ಲೂ ಮುಖ್ಯವಾಗಿ ಹಿಂದೂಸ್ತಾನಿಯಂತೂ ಮಿಶ್ರಭಾಷೆ ; ದಕ್ಷಿಣ ಭಾರತದ ದ್ರಾವಿಡಭಾಷೆಗಳು ಸಹ ಪಾರಸಿ ಭಾಷೆಯ ಪ್ರಭಾವದಿಂದ ಪಾರಾಗ ಲಿಲ್ಲ. ಭಾರತದಲ್ಲಿ ಹಲವು ಪ್ರಖ್ಯಾತ ಪಾರಸಿ ಕವಿಗಳೂ ಇದ್ದರು. ಇಂದಿಗೂ ಹಿಂದೂ ಮುಸ್ಲಿಮರಲ್ಲಿ ಪಾರ್ಸಿ ಭಾಷೆಯಲ್ಲಿ ಪ್ರಸಿದ್ದರಾದ ಪಂಡಿತರಿದ್ದಾರೆ.
ಸಿಂಧೂ ಕಣಿವೆಯ ನಾಗರಿಕತೆಗೂ ಮತ್ತು ಆಗಿನ ಕಾಲದಲ್ಲಿ ಇರಾಣ ಮತ್ತು ಮೆಸೊಪೊಟೋ ಮಿಯದಲ್ಲಿದ್ದ ನಾಗರಿಕರಿಗೂ ಯಾವುದೇ ಸಂಬಂಧವಿದ್ದಿರಬೇಕೆಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಕೆಲವು ರೇಖಾಚಿತ್ರಗಳಲ್ಲಿ ಮತ್ತು ಮುದ್ರೆಗಳಲ್ಲಿ ಕಂಡುಬರುವ ಸಾಮ್ಯವು ಅತಿ ವಿಸ್ಮಯಕಾರಕ ವಿವೆ. ಅಕೀಮಿರ್ಯ ಕಾಲಕ್ಕೆ ಪೂರ್ವದಲ್ಲಿ ಇರಾಣ ಮತ್ತು ಇಂಡಿಯ ದೇಶಗಳಿಗೆ ವ್ಯವಹಾರ ಸಂಬಂಧವಿತ್ತೆಂಬುದಕ್ಕೆ ಸಾಕ್ಷವೂ ದೊರೆತಿದೆ, ಅವೆಸ್ಟದಲ್ಲಿ ಇಂಡಿಯದ ಉಲ್ಲೇಖವಿದೆ ಮತ್ತು ಉತ್ತರ ಭಾರತದ ಒಂದು ವರ್ಣನೆಯೂ ಇದೆ. ಋಗೈದದಲ್ಲಿ ಪರ್ಷಿಯಕ್ಕೆ ಸಂಬಂಧಿಸಿದ ಉಲೇಖ ಗಳಿವೆ. ಪಾರ್ಸಿ ಜನರಿಗೆ ಈ 'ಪಾರ್ಶವರು ' ಎಂದೂ ಅನಂತರ 'ಪಾರಸಿಕರು' ಎಂದೂ ಕರೆದಿದ್ದಾರೆ. ಪಾರಸಿ ಎಂಬುದು ' ಪಾರಸಿಕ' ಎಂಬುದರಿಂದ ಹುಟ್ಟಿದ್ದು, ಪಾರ್ಥಿಯನರನ್ನು ' ಪಾರ್ಥನ' ರೆಂದು ಕರೆದಿದ್ದಾರೆ. ಈ ರೀತಿ ಭಾರತ ಮತ್ತು ಇರಾಣ ದೇಶಗಳೆರಡು ಅಕೀಮಿರ್ಯ ಸಂತತಿಯ ಕುಲಕ್ಕೂ ಮೊದಲಿನಿಂದ ಅತಿ ಪ್ರಾಚೀನ ಕಾಲದಿಂದ ಪರಸ್ಪರ ಸಾಂಸ್ಕೃತಿಕ ಮೈತ್ರಿಯನ್ನು ಬೆಳೆಸಿ ಕೊಂಡು ಬಂದಿವೆ. ರಾಜಾಧಿರಾಜನಾದ ಸೈರಸ್ ಮಹಾರಾಜನ ಕಾಲದಲ್ಲಿ ಇನ್ನೂ ಹೆಚ್ಚಿನ ಬಾಂಧ ವ್ಯದ ಸಾಕ್ಷ ದೊರೆಯುತ್ತದೆ. ಸೈರಸ್ ಪ್ರಾಯಶಃ ಕಾಬೂಲ್ ಮತ್ತು ಬೆಲೂಚಿಸ್ಥಾನದವರೆಗೆ ಭಾರತದ ಗಡಿಯವರೆಗೆ ಬಂದಿದ್ದನು. ಕ್ರಿಸ್ತ ಪೂರ್ವ ಆರನೆಯ ಶತಮಾನದಲ್ಲಿ ಡೇರಿಯಸ್ ಕಾಲದಲ್ಲಿ