ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೧೨೩ ಇಲ್ಲಿ ಆಸ್ತಿ ಕ್ವಂಡಿದ್ದು, ಆ ಅಸ್ತ್ರ ಇವರಯ್ಯ ರುದ್ದಿ ಮಾಡಿದಂತೆ. ಈಗ ಆ ಯವಾರವೆಲ್ಲ ಹಳೆಮರಸೋಗಿ ತಲಕಾಡೂ ಈಗಿನ ತಲೆಯೋರು ನಮ್ಮ ದರುಮನಳ್ಳಿಗೆ, ಇಲ್ಲಿಯೋರು ತಲಕಾಡಿಗೆ, ವೋಗಿ ಬತ್ತಾ ಇಂದ ಸುಮ್ಮಂದವ ಮತ್ತೆ ರೂಡಿ ಮಾಡಿಕಂಡವೆ, ಇಂಗಿರುವಾಗ, ಒಂದು ಜಿನ ತಲಕಾಡ್ನಿಂದ ಒಂದು ಕಾಗಜ ಬಂದಿತ್ತಂತೆ. ಇವರ ನಂತರ ಉಡುಗೀದು ಲಗ್ನ ಯೇರ್ಪಾಡಾಗಿ, ಈಳ್ಯದ ಸಾಸ್ತ್ರಕ್ಕೆ ಬರಬೇಕು ಅಂತಾ... ಕೆಂಗಣ್ಣಪ್ಪ ಈಳ್ಯದ ಸಾಸ್ತ್ರಕ್ಕೆ ವೋಗೋದು ಅಸಂದರ್ಭಾಗಿ ದಾರಾಮೂರ್ತಕೆ ವೊಂಟೋನು, ನಮ್ಮ ಗೆಜ್ಜಗಣ್ಣನ ಕರದು

  • ಗೆಜ್ಜುಗ, ತಲಕಾಡ್ಲೆ ಮದುವೆಗೆ ವೊಂಟಿ ಕನೆ. ನನ್ನ ಜ್ವತೆ ನೀನೂ ಬಾಗ್ಲ. ನಂಗೊಬ್ಬಂಗೇ ವೋಗಕ್ಕೆ ಸಿಬಿ” ಅಂದು, ಗೆಜ್ಜುಗಣ್ಣ ತೆಪ್ಪಾಕಕ್ಕೆ ಯೇಟೇಟು ಪರ್ಯತ್ನ ಮಾಡಿದ್ರೂ ಬುಡದೆ, ವಂದಿಗೇ ಕರಕಂಡು ನಡುದಿದ್ದ!...

ಈಗ ನಮ್ಮಯ್ಯ ಗುಡ್ಲು ವಳು ಮುಲುಕಾಡಿದ್ದ: “ಇದೇನ ಈವಯ್ಯ ಕೇವು?... ಲಗ್ಲಾಗೋ ಉಡುಗ್ನ ಅವನ ಪಾಡಿಗೆ ಬುಡದೆ, ಕಾಸಿ ರಾಮೇಶ್ವರಕೆ ವೊಂಟೋರಂಗೆ ಊರೂರ ಸುತ್ತಿಸಾದು?... ಈ ವಯ್ಯಂಗೆ ಕೇಮಿದ್ರೆ, ಅವನೊಬ್ಬನೇ ವೊಗಲೇಳು. ಅಣ ಈಸುಗಂಡಾಕ್ಷಣ ಈಗ್ಗೆ ಜೀತಕೆ ಕ್ವಿಟ್ಟೆವಾ ಹೈ?... ಇನ್ನೇನ ತಿಂಗಳೊಪ್ಪತ್ನಲ್ಲಿ ಲಗ್ಗಯದ್ದೇಯೇಳ್ತದೆ. ಅಮ್ಮಾಕೆ ಮಾರಾಯನಂಗೆ ಕರಕಂಡೋಗ್ಲಿ ಯಾರು ಬ್ಯಾಡ ಅನ್ನಾರು?”... ಆದ್ರೆ ಕೆಂಗಣ್ಣಪ್ಪ ನಮ್ಮ ಗೆಜ್ಜುಗಣ್ಣನ ಕರಕಂಡೋದ ಕಾರಣವೆ ಬ್ಯಾರೆ. ಅದು ಊರಿನೋರಿಗೂ ತಿಳುದಿದ್ದ ಇಸ್ಕಾನೆ-ಗೆಪ್ತಿ ಆಯ್ತಿದ್ದಂಗೆ, ಕತ್ತಲೇಲೆ ನಾನು ನಗಾಡ್ಡೆ... ಕೆಂಗಣ್ಣಪ್ಪಂಗೆ ದೊಡ್ಡ ದೊಡ್ಡ ಗುಳ್ಳೆ ಇರೊ ಕೆಂಜರಗಣ್ಣು. ಅವನು ಕಣ್ಣ ಮೆಡರಿಸಿದಾಗ, ಯೆಂಝ ಎದೆ ಜಲ್ ಅನ್ನುದೆ ಇರಕ್ಕಿಲ್ಲ. ಆದ್ರೆ ವಳಾಗಡೆ ಅವನು ಪುಕ್ಕಲ ಅಂದ್ರೆ ಪುಕ್ಕಲ!...ಕಿವ್ಯಾಗೆ ಬಿಳಿ ಅಳ್ಳು ಮೆಟ್ಟಿರೊ ಅತ್ತಗಡಕು, ಕಯ್ಲಿ ಬಂಗಾರದ ಕಪ್ಪ-ಇವು ಅಮ್ಮು ಬೆಳುಕ್ಕಲ್ಲಿ ನಡದಾಗ ಫಳಾರ್ ಫಳಾರ್ ವೋಳೀತಿರವೆ. ಇವ್ರ ಆಕ್ಕಂಡು ದೂರದ ಸೀಮೆಗೆ ಒಬ್ಬೊಂಟ್ಯಾಗಿ ಪಯ್ದು ವೋದಾಗ ಅಲ್ಲಿ ಯಾರಾರು ದಾರೀಲಿ ಅಡ್ಡಾಕಿ, ನಾಕು ಜಡ್ಡು ಇನ್ನೂ ಕಿತ್ತುಗಂದ್ರೆಅನ್ನಾ ಬಯ!... ಅದುಕೆ, ಪರವೂರಿಗೆ ವೊಂಟಾಗ, ಜತೆ ಯಾರಾರ ಇರಲೇಬೇಕು... ಅದೇ ಕಾರಣಕ್ಕೆ ನಮ್ಮ ಗೆಜ್ಜುಗಣ್ಣನ ಇಕ್‌ ಮತ್ತು ಮಾಡಿ ತನ್ನೊಂದಿಗೆ ವಯ್ದಿದ್ದ... ಉಣಸೂನರಿವನ್ನೂ ಎತ್ತಿನ ಗಾಡಿ ಪಯ್ದ. ಅಲ್ಲಿಂದಾಚೆ ಮಯಸೂರು, ಮೈಸುರಿಂದ ತಲಕಾಡಿಗೆ ಬಸ್ಸಿನಲ್ಲೆ ಮುಟ್ಟಿದ್ದರು....