ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨೪ ವೈಶಾಖ ಇವರು ವೋದ ಮಾರನೆ ಜಿನಕೆ ಧಾರೆ. ಮೂರ್ತ ಮದ್ದಿನ ಒಂದೂವರೆ ಗಂಟೆಗೆ ಅಂದಿದ್ರಂತೆ. ಗೆಜ್ಜುಗಣ್ಣ ಯೋಚೆ ಮಾಡಿರಬೇಕು... ಈ ಸುಭ ಕಾರ್ಯವೆಲ್ಲ ಮುಗುದು, ಈ ಉತುಮರಿಗೆಲ್ಲ ಗಂಡಸರ ಪಂಕ್ತಿ ಎಂಗಸರ ಪಂಕ್ತಿ ಊಟ ಮುಗುದು, ನಮಗೆ ವೊರಗಿನೋದ್ದೆ ಉಣ್ಣಕ್ಕೆ ಇಕ್ಕಬೇಕಾದ್ರೆ ಮುಚ್ಚಂಜೆಗೆ ಮುಂಚೆ ಅಂತೂ ಸಾದ್ಯವೇ ಇಲ್ಲ. ಅಲ್ಲೀಗಂಟ ತಾನ್ಯಾಕೆ ಗುರುತು ಪರಿಚಿತ ಇಲ್ಲದಿರೋ ಈ ಊರಿನಾಗೆ ಒಬ್ಬೆ ಲಗ್ಗದ ಅಟ್ಟಿ ಮುಂಬೈ ವಾಲಗದೋರ ತಾವು ಮೂಗುದೆವ್ವದಂಗೆ ಕುಂತಿರಾನೆ? – ಅನ್ನುಸಿರಬೇಕು. ಅಂಗೇ ತಿರುಗಾಡಿಕಂಡು ಬರಾನೆ ಅಂತ ವೊಂಟನಂತೆ. ವೈದ್ಯಸ್ವರ ಸ್ವಾಮಿ ಗುಡಿ ಇಂದುಗಡೇಲಿ ಉದ್ದಕ್ಕೂ ಬೆಟ್ಟದಂಗೆ ಹೇರಿಕಂಡಿದ್ದ ದಪ್ಪ ದಪ್ಪ ಗುಡ್ಡೆ ಮರಳು ರಾಸೀಲಿ ಊರಿನ ಹೈಕಳು ಗುಂಪುಗುಂಪಾಗಿ ಮರಳು ರಾಸಿ ಮ್ಯಾಗ್ನಿಂದ ಕೆಳಕ್ಕೆ ಜಾರಾದು ಪುನಾ ಆ ಮರಳು ಗುತ್ತೇನೆ ಅತ್ತೋಗಿ ಕೆಳಕ್ಕೆ ಜಾರಾದು-ಇಂಗೇ ಆಡ್ತಾ ಇದ್ವಂತೆ!... ನಮ್ಮಣ್ಣಂಗೂ ಆ ಹೈಕಳ ಆಟ ಕ್ವಾಡಿ ಆಸ್ಯಾಗಿ, ಅವನೂ ವಸಿ ವ್ಯಾಳ್ಯ ಅಲ್ಲೆ ಅವರೊಂದಿಗೆ ಮರಳಿನಲ್ಲಿ ಜಾರಿ ಜಾರಿ ಕುಸಪಟ್ಟಂತೆ!... ಆಗ ಪೂಜೆ ಮುಗುಸಿ ವೊರೀಕೆ ಬಂದ ಗುಡಿ ಪುರೋಯಿತರು, ಚಿಕ್ಕ ಚಿಕ್ಕ ಹೈಕಳ ಜ್ವತೆ ಜಾರತಿ ನಮ್ಮ ಧಾಂಡಿಗ ಅಣ್ಣನ ಕ್ವಾಡಿ, “ಯೇನೊ, ಮೀಸೆ ಬಂದ ಗಣ್ಯ-ಮರಳಿನಲ್ಲಿ ಜಾರಕ್ಕೆ ನಿಂಗೂ ಆಸೆ ಆಯೇನೊ?... ನಮ್ಮೂರೆ ವೊಸನಂಗೆ ಕಾಳೇ, ಯಾವು ನಿಮೂರು?” - ಕ್ಯಾಲಿದರಂತೆ “ನಮ್ಮೂರು ದರುಮನಳ್ಳಿ, ಸೋಮಿ, ಇಲ್ಲಿ ನಡೀತಿರೋ ಮದ್ಯೆಗೆ ಬಂದಿರೋ ನೆಂಟರ ಜ್ವಕ್ಕೆ ಬಂದಿದ್ದಿ” ಅಂದೋನು, ಪರೋಯಿತರು “ಸರಿ, ಸರಿ”ಅಂತ ಎಜ್ಜೆ ಕೀಳಿರಬೇಕಾದರೆ, “ಸೋಮಿ, ಸೋಮಿ, ಈ ಮರಳು ದಿಬ್ಬ ದಾಟಿ ವೋದರೆ, ಆಚೆ ಇರಾದೇನು - ವಸಿ ಯೋಳಿ-ಸೋಮಿ” ಅಂತ ಬೇಡಿದ್ರಂತೆ. “ಈ ಮರಳು ದಿಣ್ಣೆ ಆಚೆ ಇರೋದು ನದಿ. ಕಾವೇರಿ ನದಿ. ಈ ನದಿಯ ಆಚೆ ದಡದಾಗಿರೋ ಊರೇ ಮಾಲಂಗಿ...” ಪರೋಯಿತರು ಇನ್ನೂವೆ ಮಾತ ಮುಗಿಸ್ತೇ ಇಲ್ಲ. ನದಿ ಅದೆ, ಅನ್ನಾ ಸುದ್ದ ಕರ್ನಕೆ ತಲುಪ್ಪ ಕೂಡ್ಲಿ, ಬಿದ್ದಂ ಬೀಳ ಅಲ್ಲಿಂದ ವಾಟ ವೋಡದಂತೆ ನಮ್ಮಣ್ಣ... ಹೊಳೆ ತಲುಪತ್ತೂ ನೀರು ಕಂಡು ಅಣ್ಣ ಕುಣುದಾಡಿದನಂತೆ... ನೀರು