ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬೦ ವೈಶಾಖ ಅವನ್ನು ಹೇಗೆ ಉಪಯೋಗಿಸಬೇಕೆಂಬುದನ್ನು ಹೇಳಿಕೊಟ್ಟು, ಅವನ ಇಷ್ಟಾರ್ಥ ಸಿದ್ದಿಯಾಗುವುದೆಂದು ಆಭಯವಿಟ್ಟು ಅಂತರ್ಧಾನಳಾಗುತ್ತಾಳೆ... - ದೇವಿಯ ಸೂಚನೆಗಳನ್ನು ಅನುಸರಿಸಿ ಒಂದೊಂದು ಸಾಗರದ ಮೇಲೂ ಆ ರಾಜಕುಮಾರನು ಒಂದೊಂದು ಪಟ್ಟಣದಿಂದ ಭಸ್ಮವನ್ನು ಎರಚಿದಂತೆ, ಒಂದೊಂದು ಸಾಗರದ ನಡುವೆಯೂ ಸರಾಗವಾಗಿ ನಡೆದುಕೊಗುವಂತೆ ದಾರಿ ನಿರ್ಮಾಣವಾಗುತ್ತದೆ. ಅವನು ದ್ವೀಪಕ್ಕೆ ಕಾಲಿಟ್ರೊಡನೆಯೆ ಏಳು ಹೆಡೆಯ ಘಟಸರ್ಪವೊಂದು ಮೇಲೇರಿ ಬರುತ್ತದೆ. ಮಂತ್ರಾಕ್ಷತೆಯ ಸ್ವಲ್ಪ ಭಾಗವನ್ನು ಅದರ ಮೇಲೆ ಎಸೆಯುತ್ತಾನೆ. ತಟ್ಟನೆ ಆ ಸರ್ಪಕ್ಕೆ ಗಾಢನಿದ್ರೆ ಬಂದು ಮಲಗಿಬಿಡುತ್ತರದೆ. ಅಲ್ಲಿಂದ ಮುಂದೆ ಸಾಗಿದಂತೆ ಮುಗಿಲೆತ್ತ ಉರಿಯುವ ಅಗ್ನಿಯ ಜ್ವಾಲೆಗಳು ಅವನಿಗೆ ಅಡ್ಡವಾಗುತ್ತವೆ. ಧೈರ್ಯಗೆಡದೆ ಉಳಿದಿದ್ದ ಮಂತ್ರಾಕ್ಷತೆಯನ್ನು ಆ ಜ್ವಾಲೆಗಳ ಮೇಲೆ ಸುರಿಯುತ್ತಾನೆ. ತಕ್ಷಣ ಜ್ವಾಲೆಗಳು ಶಮನವಾದಂತೆ ಬುಡವೆಲ್ಲ ಬೆಳ್ಳಿಯಾಗಿ ನಡುವೆಲ್ಲ ಚಿನ್ನವಾಗಿ ಎಲೆಯೆಲ್ಲ ಪಟ್ಟೆಯಾಗೊ, ಗೊನೆ ಮುತ್ತಾಗಿ ಥಳ ಥಳಿಸುವ ಬಾಳೆಯ ಕಂಬ ಕಣ್ಣಿಗೆ ಬೀಳುತ್ತದೆ... ಅನವಶ್ಯಕವಾಗಿ ಕಾಲ ವಿಳಂಬಮಾಡದೆ ಅವನು ಬಾಳೆಯ ಕಂಬವನ್ನು ಖಡ್ಗದಿಂದ ಬುಡಸಹಿತ ಕತ್ತರಿಸಿ, ಅದರೊಡನೆ ಸರಸರನೆ ಹಿಂದೆ ನಿರ್ಮಾಣವಾದ ಮಾರ್ಗದಲ್ಲಿ ದಾರಿ ಕ್ರಮಿಸಿ, ಭೂಸ್ಪರ್ಶ ಮಾಡುತ್ತಾನೆ... ರಾಜಕುಮಾರ ಹಿಂದಿರುಗಿ ಭೂಸ್ಪರ್ಶ ಮಾಡಿದ ಕೂಡಲೆ, ಸಹಸ್ರಾರು ಸಿಡಿಲುಗಳು ಏಕಕಾಲದಲ್ಲಿ ಎರಗಿದ ಹಾಗೆ ಭೀಕರವಾಗಿ ಅಬ್ಬರಿಸುತ್ತ, “ಮೊಸವಾಯ್ತು... ಮೋಸಹೋದೆ...' ಎಂದು ಮೊರೆಯುತ್ತ 'ಆದರೂ ನಿನ್ನನ್ನ ಸುಮ್ಮನೆ ಬಿಡುತ್ತೀನೇನೊ' ಎಂದು ಘುಡುಮುಡಿಸುತ್ತ, ಆ ರಾಕ್ಷಸ ಏರೇರಿ ಬಂದ... ಸರಸಿ ಬೆದರಿ 'ಅಮ್ಮಾ...' ಎಂದು ಚೀರಿದ್ದಳು. ರುಕ್ಕಿಣಿಯು ಅವಳನ್ನು ಸಂತೈಸುತ್ತ, “ಆಗ ಆ ರಾಜಕುಮಾರನು ಕೊಂಚವೂ ಅಧೀರನಾಗದೆ ದೇವಿಯು ಹೇಳಿಕೊಟ್ಟಿದ್ದ ಪ್ರಕಾರ, ಪಚ್ಚೆಯ ಎಲೆಗಳನ್ನು ಮೊದಲು ಕತ್ತರಿಸಿದ. ಆಗ ರಾಕ್ಷಸನ ಕೈಗಳು ಕತ್ತರಿಸಿಬಿದ್ದವು. ಕೈಗಳು ಬಿದ್ದ ಆ ರಾಕ್ಷಸ ಹೋ ಎಂದು ಎಬ್ಬಿಸಿದ ಹುಯಿಲಿನಿಂದ ಧೈರ್ಯವಂತನಾದ ರಾಜಕುಮಾರನ ಎದೆಯೂ ಸಹ ತಲ್ಲಣಗೊಂಡಿತ್ತು. ಹೇಗೋ ಚೇತರಿಸಿಕೊಂಡು, ಬಿರುಗಾಳಿಯ ಹಾಗೆ ಮುನ್ನುಗ್ಗಿ ಬರುತ್ತಿದ್ದ ಆ ದೈತ್ಯನನ್ನು ಇನ್ನೂ ಹತ್ತಿರ ಬರಲು ಬಿಡಬಾರದೆಂದು