ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
ದೌ ಪದೀ ಸತ್ಯಭಾಮಾ ಸಂವಾದಪರ್ವ 251
ಹದಿನೆಏಳನೆಯ ಸ೦ಧಿ
ಸೂಚನೆ:
ವಿಪಿನದಲಿ ಪಾಂಚಾಲಿ ಭಕುತಿಯ
ತಪದಿರೆ ದೂರ್ವಾಸನುಗ್ರವ
ನಪಹರಿಸಲಸುರಾರಿ ಬಂದನು ಪಾಂಡವರ ಬಳಿಗೆ ||
- ಪಾಂಡವರು ದೈತವನದಲ್ಲಿ ವಾಸಮಾಡಿದುದು,
ಚಿತ್ತವಿಸು ಜನಮೇಜಯ ಕ್ಷಿತಿ
ಪೋತ್ತಮನೆ ನಿನ್ನವರು ಬನದಲಿ
ಹತ್ತುವರುಷವನಿಂತು ನೂಕಿದರಿರದೆ ಲೀಲೆಯಲಿ |
ಉತ್ತಮೋತ್ತಮಯಾಮುನಾನದಿ
ತೀರ್ಥಸೇವಾಶೀಲದಿದ್ದರು
ಮತ್ತೆ ಮುನಿಸನಸಹಿತ ಹರುಷದಿ ದೈತಕಾನನದಿ ||೧||
- ದೂರ್ವಾಸರ ಆಗಮನ
ಆಸುಯೋಧನನೇಕಛತ್ರವಿ
ಲಾಸದುರ್ವಿರಾಜಪದವಿ
ನ್ಯಾಸವಿಭವದ ಸುಲಭಸಾಖ್ಯವನನುಭವಿಸುತಿರಲು |
ಭೂಸುರವ್ರಜವೆರಸಿ ವರದಿ
ನ್ಯಾಸಮುನಿಜನಸಹಿತಲಾದೂ
ರ್ವಾಸಮುನಿಪತಿ ಬಂದು ಪೊಕ್ಕನು ಹಸ್ತಿನಾಪುರವ |
-
- ಈ ಸಂಧಿ ಬಹು ಪುಸ್ತಕಗಳಲ್ಲಿ ಇರುವದಿಲ್ಲ