ವಿಷಯಕ್ಕೆ ಹೋಗು

ಪುಟ:ಕನ್ನಡ ರಾಮಾಯಣ ಕಿಷ್ಕಿಂಧಾಕಾಂಡ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಚಾಮರಾಜೋಕ್ತಿವಿಲಾಸವೆಂಬ ಕನ್ನಡ ರಾಮಾಯಣ, ತಾರಾದೇವಿಯು ಮಧುವಿನ ಆಲಸ್ಯದಿಂದ ಎಡೆಹತ ಕಾಂಚೀದಾನವನ್ನು ಧ್ವನಿಮಾಡುತ ಯವನದೇಳಿಗೆ ಯಿಂದ ಕಿಂಚಿನ್ನಾತ್ರ ಮುಂಬಾಗವುಳ ಶರೀರವುಳ್ಳವಳಾಗಿ ಲಕ್ಷ್ಮಣನ ಸವಿಾಪಕ್ಕೆ ಹೋಗಿ ನಿಲ್ಲಲು ಮಹಾತ್ಮನಾದ ಲಕ್ಷಣನು ಉದಾಸೀನ ಬುದ್ಧಿಯಿಂದ ತಾರಾದೇವಿಯನ್ನು ನೋಡದೆ ನೆಲವನ್ನು ನೋಡುತ ಸುಗ್ರೀವನ ,ಯೇ ತನ್ನ ಸಖಾರಕ್ಕೆ ಬಂದಳಲ್ಲವೆಂದು ಕೋಪವನ್ನು ಕ್ಷಮಿಸಿದನು; ಆಗ ಮಧುಪಾನವನ್ನು ಮಾಡಿದ್ದ ತಾರಾದೇವಿಯು ಅಜ್ಜೆಗೊಂದು ದೃಷ್ಟಿಗಳಿಂದ ಲಕ್ಷ್ಮಣನನ್ನು ನೋಡಿ ಆತನನ್ನು ಕುರಿತು ಸ್ನೇಹದಿಂದಲೂ ಗಾಢತ್ರದಿಂದಲೂ ಸಂತಮನ್ನಣೆ ಪೂರ್ವಕವಾಗಿಯೂ ( ಎಲೈ ಲಕ್ಷಣ, ನಿನಗೆ ಕೋಪವು ಬರುವದಕ್ಕೆ ಕಾರಣವೇನು ! ಸುಗ್ರೀವ ನು ನೀನು ಹೇಳಿದ ಮಾತ.ಗಳನ್ನು ಮೀರಲಿಲ್ಲ ; ನೀನು ಹೀಗೆ ಕೋಪಿಸಿದರೆ ಒಣಮರಗಳುಳ್ಳ ವನದಲ್ಲಿ ಹತ್ತಿ ಬರು ತಿರುವ ಕಾಡುಗಿಚ್ಚಿಗೆದಿರುಗಿ ಬರುವವರಿಲ್ಲದಂತೆ ನಿನ್ನ ಎದಿರಲ್ಲಿ ಶಂಕಾತಂಕವಿಲ್ಲದೆ ನಿಲ್ಲುವವರಾರು ! ” ಎಂದು ಕೇಳಿದಳು. ಸಂತಮನ್ನಣೆ ಪೂರ್ವಕವಾಗಿ ಸ್ನೇಹವೆರಸಿದ ತಾರಾದೇವಿಯ ಮಾತನ್ನು ಕೇಳಿದ ಲಕ್ಷ್ಮಣನು ಅಕ್ಕಂತ ಹರ್ಷಯುಕ್ತನಾಗಿ ತಾನೂ ಸ್ನೇಹಪುರ್ವಕವಾಗಿ ತಾರಾದೇವಿಯನ್ನು ಕುರಿತು " ಎಲೇ ತಾರಾದೇವಿಯೇ, ನಿನ್ನ ಪತಿಯಾದ ಸುಗ್ರಿವನು ಕಾಮುಕನಾಗಿ ಧರ್ಮಾರ್ಥಗಳನ್ನು ಕೆಡಿಸಿಕೊಂಡನು ; ತನ್ನ ಒಡೆಯನಿಗೆ ಹಿತವಾದ ಕಾರವನ್ನರಿಯದೆಯ ರಾಜಧರ್ಮವನ್ನರಿಯದೆಯ ದುಃಖಿತರಾದ ನಮ್ಮನ್ನು ವಿಚಾರಿಸದೆ ತನ್ನ ಮಂತ್ರಿಗಳ ನ್ನು ಕೂಡಿಕೊಂಡು ಮಧುಪಾನವನ್ನು ಮಾಡುತ್ತಿದ್ದಾನೆ ; ಮೊದಲು ನಾಲ್ಕು ತಿಂಗಳವರಿಗೂ ನಳಕಾಲವನ್ನು ಸಹಿ ಸಿಕೊಂಡಿರಹೇಳಿ ಆ ಕಾಲಮಿತಿಯನ್ನು ಮಾಡಿದನು ; ಆ ನಾಲ್ಕು ತಿಂಗಳುಗಳು ಕಳೆದಮೇಲೂ ಸ್ತ್ರೀಲೋಲನಾಗಿ ನನ್ನನ್ನು ಮರೆತನು ; ಮದ್ಯಪಾನವು ಧರ್ಮಾ ರ್ಥಗಳನ್ನು ಕೆಡಿಸುವಂಥಾದ್ದು ; ಆತನು ಉಪಕಾರಮಾಡಿದವರಿಗೆ ಪ್ರತ್ಯುಪಕಾರವನ್ನು ಮಾಡದೆ ಧರ್ಮವನ್ನು ಕೆಡಿಸಿದನು; ದಂಡಯಾತ್ರೆ ಹೊರಡುವ ಕಾಲದಲ್ಲಿ ಶತ್ರುಗಳ ಮೇಲೆ ಯಾತ್ರೆ ಹೊರಡದಂತೆ ಮಾಡಿ ನಮ್ಮ ಕಾರ್ಯವನ್ನು ಕಡಿಸಿ ಧರ್ಮಾರ್ಥಗಳೆರಡನ್ನೂ ಕೆಡಿಸಿದನು ! ಎಳೇ ತಾರಾ ದೇವಿಯೇ, ನೀನು ಸಮಸ್ತ ಕಾರೈರಹಸ್ಯವನ್ನು ಬಲ್ಲವಳು ; ನಮ್ಮ ಕಾಠ್ಯವು ಕೆಟ್ಟ ಮೇಲೆ ಅದಕ್ಕೆ ತಕ್ಕ ಪ್ರತಿಕಾ ದೃವಾಗಿ ನಾವು ಏನುಮಾಡಬೇಕ ಅದನ್ನು ನೀನೇ ವಿಚಾರಿಸಿ ಹೇಳು ಎಂದು ನುಡಿದನು. ಧರ್ಮಾರ್ಥಯುಕ್ತವಾಗಿ ನೀತಿಯೊಡಗೂಡಿದ ಲಕ್ಷ್ಮಣನ ವಾಕ್ಯವನ್ನು ಕೇಳಿ ತಾರಾದೇವಿಯು ಶ್ರೀರಾಮ ನ ಕಾರ್ಯದಲ್ಲಿ ವಿಶ್ವಾಸಯಕವಾದ ಮಾತುಗಳಿಂದ ಆತನನ್ನು ಕುರಿತು “ ಎಲೈ ಲಕ್ಷಣ, ನಿಮ್ಮ ಕಾರವನ್ನು ಮಾಡುವದಕ್ಕೆ ತಕ್ಕ ಕಲವು ಮಾರಿತಂದೆಣಿಸಬೇಡ ; ಹಾಗೆ ಮಾರಿದರೂ ನಿನ್ನ ಸೇವಕನಾದ ಸುಗ್ರೀವನಲ್ಲಿ ಕಪ ಮಾಡಸಲ್ಲದು ; ಯಾವಾಗಲೂ ನಿಮ್ಮ ಸೇವೆಯನ್ನೇ ಮಾಡಬೇಕೆಂದು ಯತ್ನ ಮಾಡಿಕೊಂಡಿರುವವನು ಒಂದುಬಾರಿ ತಪ್ಪಿದರೂ ನೀವು ಸಹಿಸಿಕೊಳ್ಳಬೇಕು ; ರಾಜಕುಮಾರರಲ್ಲಿ ಉತ್ತಮನಾದ ನೀನು ಈ ಕುದ್ರಾಣಿಗಳಲ್ಲಿ ಕೆ ಪಮಾಡುವದು ನೀತಿಯಲ್ಲ; ಸತ್ಯಸಂಧನಾಗಿ ತಪಸ್ವಿಯಾದ ನಿನ್ನಂಥಾ ಪರಮಪುರುಷನು ಕೋಪಮಾಡಬಹುದೆ ! ಎಲೈ ಕ್ಷಣ, ನಿಮ್ಮ ಕಾರ್ಯವನ್ನು ತೊಡಗುವ ಕಾಲವನ್ನೂ ನಿನ್ನ ರೋಷವನ್ನೂ ಬಲ್ಲೆನು ; ನೀವು ಮೊದ ಲು ಸುಗ್ರೀವನಿಗೆ ಮಾಡಿದ ಉಪಕಾರವನ್ನೂ ಬಲ್ಲೆನು; ನೀವು ಮಾಡಿದ ಉಪಕಾರಕ್ಕೆ ನಾವು ಮಾಡಬೇಕಾದ ಪ್ರತ್ಯುಪಕಾರವನ್ನೂ ನಿಮ್ಮ ಬಲವನ್ನ ಸ್ನೇಹಿತರಲ್ಲಿ ಹಿತವನ್ನು ಬಯಸುವ ನಿಮ್ಮ ಅಂತರಂಗವನ್ನೂ ಬಲ್ಲೆನು ; ಸುಗ್ರೀವನು ಕಾಮಾಸಕ್ತನಾಗಿ ನಿಮ್ಮ ಕಾರ್ಯದಲ್ಲಿ ಅಲಸ್ಕವುಳ್ಳವನಾಗಿರುವದನ್ನ 'ಶ್ರೀರಾಮನು ವಿರಹತೋಕ ದಿಂದ ಕಂಗೆಟ್ಟು ವಿಪಯಾದಿ ಸಮಸ್ತ ಸುಖಗಳನ್ನು ಬಿಟ್ಟಿರುವದನ ಬಲ್ಲೆನು ; ಕಾಮಾತುರನಾದ ಪುರುಷನು ಧವಾರ್ಥಗಳನ್ನು ಸಂಪಾದಿಸುವ ಕಾಲವನ್ನ ರಿಯನು ; ಸುಗ್ರೀವನು ನನ್ನಲ್ಲಿ ಲೋಲುಪ್ತಿಯುಳ್ಳವನಾಗಿ ಉಜ್ಜಿ ಯನ್ನು ತೊರೆದು ಕಾರೈಗತಿಯನ್ನರಿಯದಿದ್ದನು ! ಎಲೈ ಅಕ್ಷಣ, ನಿನ್ನ ಒಡಹುಟ್ಟಿದವನಾದ ಸುಗ್ರೀವನ ಅವರು ಧವನ್ನು ಸಹಿಸು ; ಲೋಕದಲ್ಲಿ ತಪಸ್ಸಿಗಳೂ ಮಗಳ ಧರ್ಮ ಮಾರ್ಗವನ್ನೇ ಬಯಸುವರು ; ಸುಗ್ರೀವನು