ವಿಷಯಕ್ಕೆ ಹೋಗು

ಪುಟ:ಕನ್ನಡ ರಾಮಾಯಣ ಕಿಷ್ಕಿಂಧಾಕಾಂಡ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಿ ೩ ೦ ಧಾ ಕಾ ೦ ಡ೩೪ ನೇ ಅ ಧ್ಯಾ ಯ .

ಜಾತಿಯಲ್ಲಿ ಕಪಿಯಾಗಿ ಚಪಲನಾದದ್ದರಿಂದ ವಿಷಯಸುಖಾನುಭವಗಳನ್ನು ಬಿಡದೆಯ ನೀತಿಮಾರ್ಗವನ್ನು ಕಾಣ ದೆಯ ಇದ್ದಾನೆ” ಎಂದು ಸಂತಮನ್ನ ವಚನಗಳನ್ನು ನುಡಿದು ಅಕ್ಷಣನ ಮೃದುಹೃದಯವನ್ನು ಕಂಡು ತನ್ನ ಪತಿಗೆ ಹಿತವಾದ ಕಾರೈವನ್ನು ಚಿಂತಿಸುತ ಮತ್ತು ಆತನನ್ನು ಕುರಿತು “ ಎಲೈ ಲಕ್ಷಣ, ಸುಗ್ರೀವನು ಕಾವು ಕನಾಗಿ ಸ್ತ್ರೀಲೋಲನಾಗಿದ್ದರೂ ನೀನು ಬರುವದಕ್ಕೆ ಮೊದಲೆ ಹನುಮಂತನು ಶರತ್ಕಾಲವು ಬಂತೆಂದೂ ಶ್ರೀರಾಮನ ಕಾರವನ್ನು ಸಾಧ್ಯವಾಡಿಕೊಡುವದಕ್ಕೆ ಸಮಯವಾದ್ದರಿಂದ ಸುಮ್ಮನಿರಕೂಡದೆಂದೂ ತಿಳುಹಿಸಲು ಆಗಲೆ ತನ್ನ ಗುರಿಕಾರರನ್ನು ಕರೆಕಳುಹಿಸಿ ಸಮಸ್ತ ಸೇನೆಯನ್ನೂ ಎಳ್ಳಸಬೇಕೆಂದು ಕಟ್ಟುಮಾಡಿದನು ; ಈಗ ನಾನಾದಿ ಕುಗಳಲ್ಲಿಯೂ ಪರ್ವತಗಳಲ್ಲಿ ಇದ್ದ ಮರುಕೋಟಿ ವಾನರರು ಬಂದಿದ್ದಾರೆ ; ನೀನು ಸುಗ್ರೀವನ ಅಭಿಮಾ ನವನ್ನು ಕಾದು ಪರಿಪಾಲಿಸು ; ನಿನ್ನ ಮಿತ್ರನಾದ ಸುಗ್ರೀವನ ಮನೆಯನ್ನೂ ಸಂಪತ್ತನ್ನೂ ನೋಡು; ಅಂತಃಪುರದ ಒಳಗೆ ಬಾ ” ಎಂದು ಕರೆದಳು. -- ಲಕ್ಷಣನು ಆ ಆಂತಃಸ್ರರಕ್ಕೆ ಹೋಗಿ ರತ್ನ ಖಚಿತವಾದ ಸಿಂಹಾಸನದಲ್ಲಿ ಅರ್ನ ವಾದ ಹಾಸಿಗೆಯಮೇಲೆ ಕುಳಿತುಕೊಂಡು ಬಾಲಸೂರೈನಿಗೆ ಸಮಾನವಾದ ದಿವ್ಯಸ್ವರೂಪವುಳ್ಳವನಾಗಿ ದಿವ್ಯಾಭರಣಭೂಷಿತವಾಗಿ ದಿವ್ಯಮಾ ಲೈಾಲಂಕೃತರಾಗಿ ದಿವ್ಯಗಂಧಾನುಲೇಪನವುಳ್ಳವರಾಗಿ ದೇವತಾಸ್ತ್ರಿಯರ ಮರದೆಯಲ್ಲಿದ್ದ ಸ್ತ್ರೀಯರ ಮಧ್ಯದಲ್ಲಿ ರುಮಾದೇವಿಯನ್ನು ಎಡತೊಡೆಯಮೇಲೆ ಕುಳ್ಳಿರಿಸಿಕೊಂಡು ತಬ್ಬಿಕೊಂಡಿದ್ದ ಸುಗ್ರೀವನನ್ನು ಕಂಡು ಕೋಪ ಕೆರಳ ಕಣ್ಣುಗಳನ್ನು ಕೆಂಪುಮಾಡಿಕೊಂಡು ಪ್ರಳಯಕಾಲದ ಯಮನಂತೆ ಭಯಂಕರವಾಗಿ ತೋರುತ್ತಿದ್ದನು. m - ---- ೩೪ ನೆ ಅ ಧ್ಯಾ ಯು . ಲ ಕ್ಷ ಣ ನು ಸು | ವ ನ ನ್ನು ನಿ ೨ ದಿ ಸಿ ದ್ದು , ಆ ಬಳಿಕ ಅಶೃಂತ ಕೋಪಯುಕ್ತವಾಗಿ ನಿಟ್ಟುಸುರುಬಿಡುತ ತನ್ನ ಪರಾಕ್ರಮದಿಂದ ಆಗ್ನಿ ದೇವನು ತನ್ನ ಜ್ವಾಲೆಯಿಂದ ಪ್ರಜ್ವಲಿಸುತ್ತಿದ್ದಾನೆಯೋ ಎಂಬಂತೆ ಕಣ್ಣುಗಳನ್ನು ಕೆಂಪುಮಾಡಿಕೊಂಡಿದ್ದ ಲಕ್ಷ್ಮಣನನ್ನು ಕಂಡು ಸುಗ್ರೀವನು ಕಂಗೆಟ್ಟು ತಾನು ಕುಳಿತಿದ್ದ ಸಿಂಹಪೀಠದಿಂದಿಳಿದು ಅಲಂಕರಿಸಲ್ಪಟ್ಟ ದೇವೇಂದ್ರನ ಧ್ವಜವೋ ಎಂಬಂತೆ ಯ ಅಂತರಿಕ್ಷಮಾರ್ಗದಲ್ಲಿ ಸಮಸ್ಯೆ ನಕ್ಷತ್ರಗಳ ಪುರ್ಣಚಂದ್ರನನ್ನು ಸುತ್ತಿಕೊಂಡಿರುವಂತೆಯು ತನ್ನ ಸ್ತ್ರೀ ಯರು ಸುತ್ತುವರಿದು ಹಿಂದುಗೊಂಡು ಬರುತ್ತಿರಲು ತನ್ನ ಅರಮನೆಯಿಂದ ಹೊರಟುಬಂದು ಲಕ್ಷ್ಮಣನನ್ನು ಕಂಡು ಭಯಪಟ್ಟು ಕಲ್ಪಲತೆಗಳಿಂದ ಸುತ್ತುವರಿಯಲ್ಪಟ್ಟ ಕಲ್ಪವೃಕ್ಷವೋ ಎಂಬಂತೆ ಲಕ್ಷ್ಮಣನ ಮುಂದೆ ಬಂದು ನಿಂ ತನು ; ಆಗ ಜಿತೇಂದ್ರಿಯನಾಗಿ ಧೈಕೃದಯಗಳುಳ್ಳವನಾಗಿ ಸತ್ಯಸಂಧನಾದ ಲಕ್ಷಣನು ಕಪಯುಕ್ತನಾಗಿ ನ ತ್ರಗಳೊಡನೆ ಕೂಡಿದ ಚಂದ್ರನ ಮರಾದೆ ಯಲ್ಲಿದ್ದ ಸುಗ್ರೀವನನ್ನು ಕುರಿತು ಎಲೈ ಸುಗ್ರೀವನೆ, ಲೋಕದಲ್ಲಿ ಸದಣಸಂಪನ್ನರಾದ ಮಹಾತ್ಮರಲ್ಲಿ ವಿಶ್ವಾಸವುಳ್ಳವನಾಗಿ ಮಾಡಿದ ಉಪಕಾರವನ್ನು ಸ್ಮರಿಸುವಂಥವನಾಗಿ ಸಕ್ಕ ವಾದಿಯಾಗಿ ಜಿತೇಂದ್ರಿಯನಾದ ಅರಸನು ಜಗತ್ತಿನಲ್ಲಿ ಮಜಾ ಕೀರ್ತಿಯನ್ನು ಪಡೆಯುವನು ; ತನಗೆ ಉಪಕಾರ ವನ್ನು ಮಾಡಿದ ಮಿತ್ರರಿಗೆ ಪ್ರತ್ಯುಪಕಾರವನ್ನು ಮಾಡುವದಾಗಿ ಮಾತುಕೊಟ್ಟು ತಪ್ಪುವ ಅರಸನಿಗಿಂತಲೂ ಲೋ ಕದಲ್ಲಿ ಅಧರ್ಮನಿಲ್ಲ; ಒಂದು ಕುದುರೆಯನ್ನು ಕೊಡುವದಾಗಿ ನುಡಿದು ಅದಕ್ಕೆ ತಪ್ಪಿದವನಿಗೆ ನರುಕುದುರೆಗಳು ಲಯವಾಗುವವು ; ಒಂದು ಹಸವನ್ನು ಕೊಡುವದಾಗಿ ಹೇಳಿ ಕೊಡದಿದ್ದವನಿಗೆ ಸಾವಿರ ಗೋವುಗಳು ನಮ್ಮವಾ ಗುವವು; ತನ್ನನ್ನೇ ಕೊಡುವದಾಗಿ ನುಡಿದು ಅದಕ್ಕೆ ತಪ್ಪಿದವನ ಕುಲವೇ ಕ್ಷಯವಾಗುವದು ! ಸಮಸ್ತ ದೇವ ತೆಗಳಿಗೂ ಪುಚ್ಛವಾದ ಬ್ರಹ್ಮದೇವನು ಲೋಕದಲ್ಲಿ ಯಾವನಾನೊಬ್ಬನು ಮಿತ್ರರಿಂದ ಉಪಕಾರವನ್ನು ಪಡೆದು