________________
ಶ್ರೀಚಾಮರಾಜೋಕ್ತಿವಿಲಾಸವೆಂಬ ಕನ್ನಡ ರಾಮಾಯಣ, M ಅವರಿಗೆ ಪ್ರತ್ಯುಪಕಾರವನ್ನು ಮಾಡದಿರುವನೋ ಆತನು ಕೃತಜ್ಞನೆನಿಸಿಕೊಂಡು ಸಮಸ್ತ ಪ್ರಾಣಿಗಳಿಂದ ಕೆ ಲೆಗೆ ಯೋಗ್ಯನಾಗುವನೆಂದು ಹೇಳಿದ್ದಾನೆ ; ನೀನು ಕೃತಘ್ನ ನಾದದ್ದರಿಂದ ಕೊಲೆಗೆ ಯೋಗ್ಯನಾದೆ ; ಕೃ೯ ನಂದರೆ ಮಾಡಿದ ಉಕಾರವನ್ನು ಮರೆತವನು; ಕೃತಘ್ನತೆಗೆ ಪ್ರಾಯಶ್ಚಿತ್ತವಿಲ್ಲ ! ಧರ್ಮಶಾಸ್ತ್ರದಲ್ಲಿ ಗೋಹತೃಮಾಡಿದವನಿ ಗೂ ಸುರಾಪಾನವನ್ನು ಮಾಡಿದವನಿಗೂ ಕಳಸಿಗೂ ವ್ರತವನ್ನು ಬಿಟ್ಟವನಿಗೂ ಪ್ರಾಯಶ್ಚಿತ್ತವುಂಟೆಂತಲೂ ಮಾಡಿದ ಉಪಕಾರವನ್ನು ಮರೆತವನಿಗೆ ಪ್ರಾಯಶ್ಚಿತ್ತವಿಲ್ಲವೆಂತಲೂ ಹೇಳರುವದು ! ಎಲೈ ಸುಗ್ರೀವನೆ, ನೀನು ಕೃತಜ್ಞನಾಗಿ ಸತೃವನ್ನು ಬಿಟ್ಟೆ ; ಮೊದಲು ಶ್ರೀರಾಮನಿಂದ ಉಪಕಾರವನ್ನು ಪಡೆದು ಆತನಿಗೆ ಪ್ರತ್ಯುಪಕಾರವನ್ನು ಮಾಡದಿದ್ದೀ; ಸೀತಾದೇವಿಯನ್ನರಸುವದಕ್ಕೆ ತಕ್ಕ ಯತ್ನವನ್ನು ಮಾಡಿ ಆತನಿಗೆ ಪ್ರತ್ಯುಪಕಾರವನ್ನು ಮಾಡದೆ ಸ್ತ್ರೀಲೋಲ ನಾಗಿ ಆಡಿದಮಾತಿಗೆ ತಪ್ಪಿದೆ; ಆದ್ದರಿಂದ ಶ್ರೀರಾಮನು ನಿನ್ನ ಮಾತುಗಳನ್ನು ಕಸೀನುಡಿಗಳಿಗೆ ಸರಿಯಾಗಣಿಸುವ ನು ; ಮಹಾತ್ಮನಾಗಿ ಕೃಪಾಸಿಂಧುವಾದ ಶ್ರೀರಾಮನು ದುರಾತ್ಮನಾದ ನಿನಗೆ ಕಪಿರಾಕ್ಸಪಟ್ಟವನ್ನು ಕಟ್ಟಿದನು ; ಆ ಮಹಾತ್ಮನು ಮಾಡಿದ ಉಪಕಾರವನ್ನು ಮರೆತೆಯಾದ್ದರಿಂದ ನೀನು ಈ ಕ್ಷಣದಲ್ಲೇ ಕೂರಲಗುಳ್ಳ ರಾಮಬಾಣ ಗಳಿಂದ ಹತನಾಗಿ ಸ್ವರ್ಗಸ್ಥನಾದ ವಾಲಿಯನ್ನು ಕಾಣವೆ ; ವಾಲಿಯು ಹೋದಮಾರ್ಗವು ಇನ್ನೂ ಮರೆಯಾಗೆ ಲಿಲ್ಲ! ಎಲೈ ಸುಗ್ರೀವನೆ, ನೀನು ವಾಲಿಯು ಹೋದ ಮಾರ್ಗಕ್ಕೆ ಹೋಗದಿರಬೇಕಾದರೆ ಶ್ರೀರಾಮನ ಸಮುಖವನ್ನು ಸೇರುವದು ಉಚಿತವು ; ನೋಡಿದರೆ ನೀನು ಶ್ರೀರಾಮನ ಕೂರಲಗುಳವಾಗಿ ವಜ್ರಾಯುಧಕ್ಕೆ ಸಮಾನವಾದ ಬಾಣಗಳನ್ನು ಅರಿಯದಿರುವಹಾಗೆ ನನ್ನ ಮನಸ್ಸಿಗೆ ತೋರುತ್ತದೆ; ಆದಕಾರಣ ಶ್ರೀರಾಮನ ಕಗ್ಗವನ್ನು ವಿಚಾ ರಿಸದೆ ಸ್ತ್ರೀಲೋಲನಾಗಿ ಸುಖಿಸಿಕೊಂಡಿದ್ದೀ?” ಎಂದು ನುಡಿದನು. ೩೫ ನ ಅ ಧ್ಯಾ ಯ . ತಾ ರಾ ದ ವಿ ಯು ಲ ಕ ಣ ನ ನ್ನು ಸ೦ ತ ವಿ ಟ್ಟಿ ದ್ದು , ಈ ಮಧ್ಯಾದೆಯಲ್ಲಿ ಸುಗ್ರೀವನನ್ನು ನಿಷ್ಠುರ ವಚನಗಳಿಂದ ಅದ್ದರಿಸಿ ನುಡಿಯುತ ತೇಜಸ್ಸಿನಿಂದ ಯಜ್ಞ ಪುರುಷನಂತೆ ಬೆಳಗುತ್ತಿದ್ದ ಲಕ್ಷ್ಮಣನನ್ನು ಕುರಿತು ಚಂದ್ರಮುಖಿಯಾದ ತಾರಾದೇವಿಯು ಈ ಎಲ್ಲ ಲಕ್ಷಣ, ಈ ಮರಾದೆಯಲ್ಲಿ ನಿಷ್ಠುರ ವಚನಗಳನ್ನು ನುಡಿಯುವದು ನಿನಗುಚಿತವಲ್ಲ ; ವಾನರಾಧಿಪತಿಯಾದ ಸುಗಿ ವನು ಇಂಥಾ ನಿಷ್ಠುರೋಕ್ತಿಗಳನ್ನು ಕೇಳುವದಕ್ಕೆ ಮತ್ತೊಬ್ಬರಹಾಗೆ ಮಾಡಿದ ಉಪಕಾರವನ್ನು ಮರೆಯುವ ವನಲ್ಲ ; ಮಿತ್ರರಲ್ಲಿ ಕಾಪಟ್ಯವನ್ನು ಮಾಡಿ ದ್ರೋಹವನ್ನೆಣಿಸುವವನಲ್ಲ ; ನಿಷ್ಟುರಗಾರನಲ್ಲ ; ಮಾಡುವಕಾರವನ್ನು ಮಾಡದಿರುವವನಲ್ಲ ; ಆಡಿದ ಮಾತನ್ನು ತಪ್ಪುವವನಲ್ಲ ; ಪರರು ಮಾಡಿದ ಉಪಕಾರವನ್ನು ಜರೆಯುವವನಲ್ಲ ; ಶ್ರೀ ರಾಮನು ಸುಗ್ರೀವನಿಗೆ ಯಾರಿಂದಲೂ ಸಾಧ್ಯವಾಗದ ಕಾರಣವನ್ನು ಮಾಡಿಕೊಟ್ಟನು; ಆತನ ಕೃಪೆಯಿಂದ ಕೀರ್ತಿ ಯನ್ನೂ ಎಂದಿಗೂ ಕೇಡಿಲ್ಲದ ರಾಜ್ಯಧಿಪತ್ಯವನ್ನೂ ಭೋಗಯೋಗ್ಯವಾದ ರುಮಾದೇವಿಯನ್ನೂ ನನ್ನನ್ನೂ ಪಡೆದನು ; ಮೊದಲು ಸುಗ್ರೀವನು ದುಃಖವನ್ನನುಭವಿಸಿಕೊಂಡಿದ್ದು ಈಗ ವಿಷಯಸುಖವನ್ನು ಪಡೆದು ಮೋ ಹಿಸಿ ಸ್ತ್ರೀಲೋಲನಾಗಿ ಶ್ರೀರಾಮನ ಕಾಠ್ಯವನ್ನು ಸಾಧಿಸುವ ಮಾರ್ಗವನ್ನರಿಯದಿದ್ದಾನೆ !-ಪುರ್ವದಲ್ಲಿ ವಿಶ್ವಾಮಿ ಪ್ರಮುನಿಯು ಅತ್ಯುಗ್ರವಾದ ತಪಸ್ಸನ್ನು ಮಾಡುತ್ತಿರಲು ಆತನ ತಪೋಜ್ವಾಲೆಯಿಂದ ಜಗತ್ತೆಲ್ಲವು ಕಂಗೆಟ್ಟು ದೇವತೆಗಳಿಗೆ ಮೊರೆಯಿಟ್ಟವು; ದೇವತೆಗಳು ಪ್ರಶಾಚಿಯೆಂಬ ದೇವಸ್ತಿಯನ್ನು ಕಳುಹಿಸಲು ಆ ದೇವಾಂಗನೆಯು ವಿಶ್ವಾಮಿತ್ರಮುನೀಶ್ವರನ ಆಶ್ರಮಕ್ಕೆ ಹೋಗಿ ಹಾವಭಾವ ವಿಲಾಸ ವಿಭ್ರಮಗಳಿಂದ ಆತನ ಮನಸ್ಸನ್ನು ಕರಗಿ ಸಿ ಮದನಬಾಣಗಳಿಗೋಳಗುಮಾಡಿದಳು; ಆ ಮುನಿಯು ಆ ಅಂಗನೆಯಲ್ಲಿ ಮನಸ್ಸಿಕ್ಕಿ ಆಕೆಯೊಡನೆ ಹತ್ತು ವರು