________________
+ ೩ ೦ ಧಾ ಕು೦ಡ44 ನೇ ಆ ದ್ಧ ಯು , ೬.೫ MMMMMMMMMMMMMMMMMMMMMMMM ಜಗಳು ರಮಿಸಿಕೊಂಡು ಸಂಧ್ಯಾವಂದನೆ ಜಪ ಹೋಮಾದಿಗಳನ್ನು ಕಾಲಕಾಲಗಳಲ್ಲಿ ಮಾಡದೆ ಮೈಮರತಿದ್ದನು ; ಅಂಥಾ ಮಹಿಮೆಯುಳ್ಳವನಿಗೂ ಕಾಮಗ್ರಹವು ಸಿಕ್ಕಿ ಮರವೆಯನ್ನುಟ್ಟಿಸಿದಬಳಕ ಬಹು ದಿನಗಳು ಭೋ ಗವನ್ನು ಕಾಣದಿದ್ದ ಹುಲು ಕಪಿಯ ವೃತ್ತಾಂತವೇನು ! ಸುಗ್ರಿವನು ಮೊದಲೆ ವನದಲ್ಲಿ ಸಂಚರಿಸುವ ಪಶುವು ; ಆದ್ದರಿಂದ ಕಾಮವಶನಾಗಿ ಕಾಲವನ್ನ ರಿಯದಿದ್ದರೂ ನೀವು ಕವಿಸಬೇಕು ! ಎಲೆ ಅಕ್ಷಣ, ನೀನು ಸುಗ್ರೀವನು ನಿಶ್ಚಯಿಸಿಕೊಂಡಿದ್ದ ಕಾರಸ್ಥಿತಿಯನ್ನು ವಿಚಾರಿಸದೆ ಪಾಕೃತಜನರಂತೆ ಕೋಪವನ್ನು ಮಾಡಿಸಲ್ಲದು ; ಸತ್ವಗುಣ ಸಂಪನ್ನರಾದ ಪುರುಷೆ ಮರು ಒಂದು ಕಾರ್ಯವನ್ನು ವಿಚಾರಿಸಿ ನಿಶ್ಚಯಿಸದೆ ಕೋಪವನ್ನು ಮಾಡರು ; ನಾನು ಸುಗ್ರೀವನ ನಿಮಿತ್ಯವಾಗಿ ಬೇಡಿಕೊಳ್ಳುತಲಿರೇನೆ ; ನೀನು ಅವಶ್ಯವಾಗಿ ಈ ಕಪಾಟೋಪವನ್ನು ಬಿಡು ; ನಿನ್ನ ನಿಮಿತೃವಾಗಿ ಸುಗ್ರೀವನು ಸಮಸ್ತ ರಾಷ್ಟ್ರವನ ಧನಧಾನ್ಯ ಭಂಡ ರ ಮೊದಲಾದ ವಸ್ತುಗಳನ್ನೂ ಅಂಗದ ನನ್ನ ರಮಾದೇವಿಯನ್ನೂ ನನ್ನನ್ನೂ ಬಿಡಹೇಳಿದರೂ ಬಿಡುವನೆಂದು ನನ್ನ ಮನಸ್ಸಿಗೆ ತೋರುತ್ತಿದೆ ; ಸುಗ್ರೀವ ನೋಬ್ಬನೆ ರಣರಂಗದಲ್ಲಿ ರಾವಣನನ್ನು ಕೊಂದು ಸೀತಾದೇವಿಯನ್ನು ಕರೆದುಕೊಂಡು ಬಂದು ಶ್ರೀರಾಮನಿಗೆ ಒಪ್ಪಿ ಸುವನು; ಆದರೂ ಅಂಕಪಟ್ಟಣದಲ್ಲಿ ಅನೇಕ ಕೊಟಮಂದಿ ಕಾಮರೂಪಿಗಳಾದ ರಾಕ್ಷಸರಿದ್ದಾರೆ; ಅವರೆಲ್ಲರನ್ನು ಕಂದಲ್ಲದೆ ರಾವಣನನ್ನು ಜಯಿಸಲಾಗದು; ಸಹಾಯವಿಲ್ಲದಂಥಾವರಿಗೆ ರಾವಣನು ಸಾಧ್ಯವಾಗುವವನಲ್ಲವೆಂದು ಪುನ ರ್ವದಲ್ಲಿ ಕವಿನಾಯಕನಾದ ವಾಲಿಯು ಹೇಳುತ್ತಿದ್ದನು ; ನಾನು ಆ ಮಾತನ್ನು ಸುಗ್ರೀವನಕಡೆ ಹೇಳದೆನು ; ಆದ ಕಾರಣ ಸುಗ್ರೀವನು ತನಗೆ ಸಹಾಯಾರ್ಥವಾಗಿ ನಾನಾದಿಕ್ಕುಗಳಿಂದ ಅನೇಕವಂದಿ ಕಪಿ ನಾಯಕರನ್ನು ಕರೆಕಳು ಹಿಸಿ ಅವರು ಬರುವವರಂತರ ಹೊರಡದೆ ಸುಮ್ಮನಿದ್ದಾನೆ ; ನೀನು ಬರುವದಕ್ಕೆ ಮೊದಲೇ ಸುಗ್ರೀವನು ಅನೇಕ ಬಲವಂತರಾದ ಕಪಿನಾಯಕರನ್ನು ಸಹಾಯಮಾಡಿಕೊಂಡು ಶ್ರೀರಾಮನ ಕಾರ್ಯವನ್ನು ಸಾಧ್ಯವಾಡಿಕೊಂಡ ಬೇಕೆಂದು ಯತ್ನ ಮಾಡಿಕೊಂಡಿದ್ದನು ; ಬಂದರ್ಬದ ಕರಡಿಗಳ ನೂರುಕೋಟಿ ಮುಸುವುಗಳ ಅನೇಕ ಟಿ ಆಪಿನಾಯಕರೂ ಇಂದು ಬಂದು ನಿನ್ನನ್ನು ಕಾಣಿಸಿಕೊಳ್ಳುವರು ; ನೀನು ಕೋಪವನ್ನು ಬಿಡು ; ಕೆಂಪಾದ ಕಣ್ಣುಗಳುಳ್ಳ ಕೊಪರಸಭರಿತವಾದ ನಿನ್ನ ಮುಖವನ್ನು ನೋಡಿ ಸುಗ್ರೀವನ ಅರಮನೆಯಲ್ಲಿರುವ ವಾನರ ಯರು ಮೊದಲಾದವರ ಭಯಪಡುತ್ತಿದ್ದಾರೆ; ನಿನ್ನ ಕಪಾಟಪವನ್ನು ಕವಿಸಿಕೊ” ಎಂದು ಸಂತಮ ನ್ನಣೆಪುರ್ವಕವಾಗಿ ಹೇಳುತ್ತಿದ್ದಳು. ೩೬ ನೆ ಅ ಧ್ಯಾ ಯ , ಆ ಕ್ಷ ಣ ನು ಸು | ವ ನ ನ್ನು ಶ್ರೀ ರಾ ಮ ನ ಬ ೪ಗೆ ಕ ರ ದ ದ . ಎಲೈ ಕುಶಲವರುಗಳಿರಾ, ಈ ಮಯ್ಯಾದೆಯಲ್ಲಿ ಲಕ್ಷ್ಮಣನು ತಾರಾದೇವಿಯಿಂದ ಧರ್ಮರಹಸ್ಯದೊಡಗೂಡಿದ ಸಂತಮನ್ನಣೇ ವಾಕ್ಯಗಳಿಂದ ಸಂತವಿಡಲ್ಪಟ್ಟ ಆ ದೇವಿಯ ಮಾತುಗಳನ್ನ೦ಗೀಕರಿಸಿ ಸುಗ್ರೀವನವೆಲೆ ಕೋಪ ವನ್ನು ಬಿಟ್ಟು ಶಾಂತವುಳ್ಳವನಾಗಲು ಸುಗ್ರೀವನು ಭಯವನ್ನು ಬಿಟ್ಟು ವಸ್ತ್ರವನ್ನು ಪರಿತ್ಯಾಗಮಾಡುವಂತೆ ತಾನು ಅಲಂಕರಿಸಿಕೊಂಡಿದ್ದ ಪುಪ್ಪಸರಗಳನ್ನು ತೆಗೆದುಹಾಕಿ ಗರ್ವವನ್ನು ಬಿಟ್ಟು ಲಕ್ಷಣನ ಸವಿಾಪಕ್ಕ ಹೋ ಗಿ ಅತ್ಯಂತ ವಿನಯಗುಣಸಂಪತ್ತಿಯುಳ್ಳವನಾಗಿ ಆತನಿಗೆ ಹರ್ಷವನ್ನುಂಟುಮಾಡುತ ಆತನನ್ನು ಕುರಿತು * ಎಲೈ ಲಕ್ಷಣ, ಹೋದ ರಾಜ್ಯಾಧಿಪತೃವು ಸಮಸ್ತವಾದ ಐಶ್ವವು ಎಂದಿಗೂ ಕೇಡಿಲ್ಲದ ಕೀರ್ತಿಯ ಶ್ರೀರಾಮನ ಕೃಪೆಯಿಂದ ತಿರಿಗಿ ಬಂದವು ; ಲೋಕದಲ್ಲಿ ಸಕಲ ಸಚ್ಚರಿತ್ರಗಳಿಂದ ಪ್ರಖ್ಯಾತಿಪಡೆದ ಆ ಸ್ವಾಮಿಯು ಪರಾಕ್ರಮಕ್ಕೆ ಸರಿಯಾದ ಪರಾಕ್ರಮವುಳ್ಳವರಾರು ! ಮಹಾಮಹಿಮೆಯುಳ್ಳವನಾಗಿ ಧರ್ಮಾತ್ಮನಾದ ಶ್ರೀರಾಮನು ತನ್ನ ಭುಜ ಬಲ ಪರಾಕ್ರಮಗಳಿಂದ ನನ್ನ ಸಹಾಯವೆಂಬ ನೆವಮಾತ್ರದಿಂದ ಸಮರದಲ್ಲಿ ರಾವಣನನ್ನು ಕೊಂದು ಸೀತಾದೇವಿ 17