________________
ಶ್ರೀಚಾಮರಾಜೋಕ್ತಿವಿಲಾಸವೆಂಬ ಕನ್ನಡ ರಾಮಾಯಣ, MMMMMMMMMMMMMMMMMMMMMMMMMMMMMMMMMMM ಡನೆ ಕೂಡಿಕೊಂಡು ಬಂದು ಕಾಣಿಸಿಕೊಂಡನು ; ಮಹಾ ಕ್ಷರ್ಯವಂತನಾದ ದಧಿಮುಖನು ಹತ್ತು ಕೋಟಿ ಕಪಿಗಳೊಡನೆ ಬಂದು ಕಾಣಿಸಿಕೊಂಡನು ! ಮತ್ತು ಸುಗ್ರೀವನ ಸಾಪದಲ್ಲಿ ಕಾಮರೂಪಿಗಳಾಗಿ ಮಹಾತ್ಮರಾ ಗಿದ್ದ ಶರಭನು ಕುಮುದನು ವ ಯು ರಂಭನು ಮೊದಲಾದ ಅನೇಕ ಮಂದಿ ಕವಿನಾಯಕರು ತಮ್ಮ ತಮ್ಮ ಸೇನೆ ಗಳನ್ನು ಕೂಡಿಕೊಂಡು ಸಮಸ್ತ ಭೂಮಂಡಲವನ್ನೂ ವ್ಯಾಪಿಸಿಕೊಂಡು ಬೊಬ್ಬಿಡುತ ಕುಪ್ಪಳಿಸುತ ಸೂರ್ಯ ನನ್ನು ಮೇಘಸಮೂಹಗಳು ಸುತ್ತಿ ಬರುವಂತೆ ಸುಗ್ರೀವನ ಸುತ್ತಲು ನಿಂತಿರಲು ಸಕಲ ಸೇನಾಪತಿಗಳ ಆತನ ಸವಿಾಪದಲ್ಲಿ ಕೈಮುಗಿದುಕೊಂಡು ನಿಂತಿದ್ದರು ! ಅವರ ಲೆಕ್ಕವನ್ನು ಹೇಳುವದಕ್ಕೆ ಶವಲ್ಲ ! ಆ ಬಳಿಕ ಸುಗ್ರೀ ವನು ಆ ಕಪಿನಾಯಕರನ್ನು ಶ್ರೀರಾಮನಿಗೆ ತೋರಿಸುತ ಅವರ ದೇಶಗಳನ್ನೂ ಪರಾಕ್ರಮಗಳನ್ನೂ ಹೆಸರುಗಳ ನ್ಯೂ ಹೇಳಿ ಆತನ ಅಪ್ಪಣೆಯಿಂದ ಅವರನ್ನು ಪರ್ವತ ತಪ್ಪಲುಗಳಲ್ಲಿ ಪಾಳಯವಿಲ್ಲಸಿ ಶ್ರೀರಾಮನಕೊಡೆ ಆ ವೃತ್ತಾಂತವನ್ನು ಹೇಳಿದನು. ೪೦ ನೆ ಅ ಧ್ಯಾ ಯು . ಸು ಗಿ 2 ವ ನು ನಿ ತಾ ದೆ ವಿ ಯ ನ್ನು ಡು ಕು ವ ದ ಕ ಗಿ ಸ ನ ಗ ಳ ನ್ನು ಕ ಳು ಹಿ ಸಿ ದ್ದು , ಆಮೇಲೆ ಸುಗ್ರೀವನು ಅಶ್ಚಂತ ಹರ್ಷಯುಕ್ತನಾಗಿ ಪರಬಲಾಂತಕನಾಗಿ ಪುರುಷೋತ್ತಮನಾದ ಶ್ರೀರಾಮ ನನ್ನು ಕುರಿತು ಎಲೈ ಶ್ರೀರಾಮನೆ, ಮಹಾ ಬಲವಂತರಾಗಿ ಕಾಮರೂಪಿಗಳಾಗಿ ದೇವೇಂದ್ರನ ಪರಾಕ್ರಮಕ್ಕೆ ಸಮಾನವಾದ ಪರಾಕ್ರಮವುಳ್ಳವರಾಗಿ ದೇವದಾನವರಿಗೆ ಸಮಾನರಾದ ಕಪಿನಾಯಕರು ತಮ್ಮ ಸೇವೆಗಳನ್ನು ಕೂಡಿ ಕೊಂಡು ಬಂದಿದ್ದಾರೆ ; ಇವರು ಮಹಾಬಲವಂತರು ; ಪರಾಕ್ರಮದಲ್ಲಿ ಮಹಾ ಪ್ರಸಿದ್ದರು ; ಸಮಸ್ತ ಕಾರ್ಯಗಳ ಸಂಧಿಸುವದರಲ್ಲಿ ಮಹಾಪ್ರವೀಣರು ; ಇವರಲ್ಲಿ ಕೆಲವರು ಭೂಮಿಯಲ್ಲಿ ಸಂಚರಿಸುವವರು ; ಕೆಲವರು ಉದಕ ದಲ್ಲಿ ಸಂಚರಿಸುವವರು ; ಕೆಲವರು ಪರ್ವತಗಳಲ್ಲಿ ಸಂಚರಿಸುವವರು ! ನಾನಾದೇಶಗಳಲ್ಲಿದ್ದ ಈ ಕವಿನಾಯಕರೆಲ್ಲ ರೂ ನಿನ್ನ ಸೇವೆಗಾಗಿ ಬಂದದ್ದರಿಂದ ನಿನ್ನ ಆಜ್ಞೆಯಲ್ಲಿದ್ದು ನಿನ್ನ ಕಾಲ್ಬವನ್ನು ಸಾಧ್ಯವಾಡುವರು ; ಇನ್ನು ನಿನ್ನ ಮನ ಸ್ಪಿನಲ್ಲಣಿಸಿರುವ ಕಾರ್ಯವನ್ನು ಈ ಕವಿನಾಯಕರಿಗೆ ತಿಳುಹಿಸು; ನಿನ್ನ ಕಾರ್ಯವನ್ನು ನಾನು ಬಲ್ಲವನಾದರು ಅವರಿಗೆ ನೀನೆ ಬುದ್ದಿ ಕಲಿಸು ಎಂದು ನುಡಿದನು, ಆ ಮಾತನ್ನು ಕೇಳಿ ಶ್ರೀರಾಮನು ಸುಗ್ರೀವನನ್ನು ತಬ್ಬಿಕೊಂಡು " ಎಲೈ ಸುಗ್ರೀವನೆ, ಸೀತಾದೇವಿಯು ಜೀವಸಹಿತವಾಗಿ ಇದ್ದಾಳ ಇಲ್ಲವೋ ಎಂಬ ವೃತ್ತಾಂತವನ್ನು ತಿಳಿಯಬೇಕು ; ರಾವಣನಿರುವ ದೇಶವನ್ನು ಕಂ ಡದ್ದಿಲ್ಲ; ಆದ್ದರಿಂದ ಮೊದಲು ಆತನಿರುವ ದೇಶವನ್ನೂ ಅಲ್ಲಿ ಸೀತಾದೇವಿಯು ಇರುವದನ್ನೂ ತಿಳಿದು ಆಮೇಲೆ ನಿನ್ನ ಸಹಾಯದಿಂದ ಕಾಲೋಚಿತವಾದ ಕಾರ್ಯವನ್ನು ಮಾಡಬೇಕು ; ರಾವಣನಿರುವ ಸ್ಥಳವನ್ನು ಕಾಣುವದ ನನ್ನಿಂದಲಾದರೂ ಕ್ಷಣನಿಂದಲಾದರೂ ಆಗದು ; ಈ ಕಾರ್ಯವನ್ನು ನಿಶ್ಚಯಿಸುವದಕ್ಕೆ ನೀನೇ ಸಮರ್ಥನು ಎಲೈ ಸುಗ್ರೀವನೆ, ನನಗೆ ನೀನೇ ಸಖನಲ್ಲರೆ ಮತ್ತೊಬ್ಬರಿಲ್ಲ ; ನೀನು ಮಹಾಪಾನು ; ಕಾಲೋಚಿತವನ್ನು ಬಲ್ಲವನು ; ನನ್ನ ಕಾರ್ಯಸ್ಥಿತಿಯನ್ನು ನೀನು ಬಲ್ಲೆಯಾದ್ದರಿಂದ ನೀನು ಈ ಕಾರ್ಯವನ್ನು ನಿಶ್ಚಯಿಸುವದಕ್ಕೆ ಸಮರ್ಥರಾದ ಆಪಿನಾಯಕರನ್ನು ಆಜ್ಞಾಪಿಸು ; ನೀನು ಯಾವಾಗಲು ನನಗೆ ಹಿತವಾದ ಕಾರ್ಯದಲ್ಲಿ ಪ್ರೀತಿಯುಳ್ಳ ವನು ; ಮಹಾ ಕೃತಾರ್ಥನು ” ಎಂದು ನುಡಿದನು. ಸುಗ್ರಿವನು ಮಹಾಪ್ರಸಾದವೆಂದು ಅಂಗೀಕರಿಸಿ ರಾಮಲಕ್ಷ ಣರ ಸಮುಖದಲ್ಲಿ ಮೇಘದ ಗುಡುಗಿನಂತೆ ಗಂಭೀರವಾದ ಧ್ವನಿಯುಳ್ಳ ಶೈಲಾಭನೆಂಬ ಕಪಿನಾಯಕನನ್ನು ಕರೆದು “ ಎಲೈ ಆಪಿನಾಯಕನೆ, ನೀನು ಚಂದ)