________________
ಶ್ರೀಚಾಮರಾಜೋಕ್ತಿವಿಲಾಸವೆಂಬ ಕನ್ನಡ ರಾಮಾಯಣ, ಸೂರಪ್ರಭೆಯನ್ನು ಕಾಣಕೋಡದಂತೆ ಆ ರೇವಿಯನ್ನು ಕಾಣದೆಹೋದೆವು ; ಈ ಮರದೆಯಲ್ಲಿ ದಂಡಕಾರಣ್ಯ ಮೊದಲಾದ ವನಗಳಲ್ಲಿಯೂ ಮಿಕ್ಕ ಪ್ರದೇಶಗಳಲ್ಲಿಯ ಆ ದೇವಿಯನ್ನು ಕಾಣದೆ ಮಯನೆಂಬ ದೇವಶಿಲ್ಪಿಯಿಂದ ನಿರ್ಮಿಸಲ್ಪಟ್ಟ ಒಂದು ಮಾಯಾಬಿಲವನ್ನು ಅಜ್ಞಾನದಿಂದ ಹೊಕ್ಕು ನೋಡಿ ಅಲ್ಲಿಯೂ ಕಾಣದೆ ಕಂಗೆಟ್ಟೆನು; ಅಷ ರೊಳಗೆ ಸುಗ್ರೀವನು ನೇಮಿಸಿದ ಒಂದು ತಿಂಗಳ ಮಿತಿಯು ಕಳೆಯಿತು ; ಸುಗ್ರೀವನು ನಾವು ಹೊರಡುವಾಗ ಒಂ ದು ತಿಂಗಳೊಳಗಾಗಿ ಸೀತಾದೇವಿಯನ್ನ ರಸಿಕೊಂಡು ಬಂದವರಿಗೆ ಶರೀರಾಂತವಾದ ಆಜ್ಞೆಯನ್ನು ಮಾಡಿಸುವದಾಗಿ ಹೇಳಿಕಳುಹಿಸಿದನು ; ನಾವು ಬಂದ ಕಾರವನ್ನು ಸಾಧ್ಯವಾಡಗೆಯ ಸುಗ್ರೀವನು ಕಟ್ಟಳೆ ಮಾಡಿದ ಮಿತಿಯು ತುಂಬಿದಮೇಲೆಯೂ ಅಪರಾಧಿಗಳಾಗಿ ಕಿಂಧಾಪಟ್ಟಣಕ್ಕೆ ಹೋದರೆ ಆತನೂ ರಾಮಲಕ್ಷ್ಮಣರೂ ಕೆಪಿಸಿ ಕೊಂಡು ನಮಗೆಲ್ಲರಿಗೂ ಮರಣಾಂತವಾದ ಆಜ್ಞೆಯನ್ನು ಮಾಡುವರು ; ಆದಕಾರಣ ನಾವು ಅವರ ಆಜ್ಞೆಗೊಳ ಗಾಗಿ ಶರೀರವನ್ನು ಬಿಡುವದಕ್ಕಿಂತಲು ಈ ಪುಣ್ಯಕ್ಷೇತ್ರವಾದ ಸಮುದ್ರ ತೀರದಲ್ಲಿ ಶರೀರವನ್ನು ಬಿಡುವದೇ ಕಾರ ವೆಂದು ನಿಶ್ಚಯಿಸಿಕೊಂಡು ಇಲ್ಲಿ ಪ್ರಾಯೋಪವೇಶಕ್ಕೆ ಕುಳಿತೆವು ” ಎಂದು ಹೇಳಿದನು. HV ನ ಅ ಧ್ಯಾ ಯ . ಸ೦ ನಾ ತಿ ಯು ಸಿ ತಾ ದೆ ವಿ ಯಿ ರು ವ ಸ್ಥ ಳ ವ ನ್ನು ಅ೦ ಗ ದ ನಿ ಗ ಹ ೪ ದ್ದು , ಆ ಬಳಿಕ ಗಂಭೀರಧ್ವನಿಯುಳ್ಳ ಸಂಪಾತಿಯು ಆ ಕವಿನಾಯಕರ ದೈನ್ಯವನ್ನು ಕಂಡು ನನಗರಗಿ ಕಣ್ಣೀರು ತುಂಬಲು ಅವರನ್ನು ಕುರಿತು ಪ್ರೀತಿವಚನಗಳನ್ನು ನುಡಿಯುತ ಆ ಎಲೆ ಕಪಿನಾಯಕರುಗಳರ, ನನ್ನ ತಮ್ಮನಾದ ಜಟಾಯುವು ರಾವಣನಕಡೆ ಯುದ್ಧವನ್ನು ಮಾಡಿ ಶರೀರವನ್ನು ಬಿಟ್ಟನೆಂಬ ಸುದ್ದಿಯನ್ನು ಕೇಳಲು ಆತನನ್ನು ಕೊಂದ ವೈರಿಯಾದ ರಾವಣನನ್ನು ಕೊಲ್ಲುವದಕ್ಕೆ ನನ್ನ ಗರಿ ಸೇದಿರುವದರಿಂದಲೂ ನನ್ನ ವೃದ್ದಾಪ್ಲದಿಂದಲೂ ಶ ಕ್ರಿಯಿಲ್ಲದೆ ಸುಮ್ಮನೆ ಇರಬೇಕಾಗಿದೆ ! ಜಟಾಯುವು ನಾನೂ ಅಣ್ಣ ತಮ್ಮಂದರು ; ನಾವು ಒಬ್ಬರನ್ನೊಬ್ಬರು ಅತಿಶಯಿಸಬೇಕೆಂಬ ಪಂಥದಿಂದ ಮೇಲಕ್ಕೆ ಹೋಗುತ ನಮ್ಮ ರೆಕ್ಕೆಗಳಿಂದ ಆಕಾಶಮಂಡಲವನ್ನು ವ್ಯಾಪಿಸಿಕೊಂ ಡು ಸೂಮಂಡಲಕ್ಕೆ ಹಾರಿಹೋದೆವು ; ಮಧ್ಯಾನ್ಸಮಯವಾಗಲು ಸೂಕಿರಣಗಳಿಂದ ನನ್ನ ತಮ್ಮನಾದ ಜಟಾಯುವು ನೀದುಹೋಗುವನೆಂಬ ದಯೆಯಿಂದ ನಮ್ಮ ಸ್ನೇಹಭಾವವನ್ನು ನೆನೆದು ನಾನು ಜಟಾಯುವಿಗೆ ಮೇ ಲುಭಾಗದಲ್ಲಿ ಸೂTಕಿರಣಗಳು ಆತನ ಮೇಲೆ ಸೋಕದಹಾಗೆ ಮರೆಯಾಗಿ ನಿಲ್ಲಲು ಆ ಕಿರಣಗಳ ಜ್ವಾಲೆಯಿಂದ ದಹಿಸಲ್ಪಟ್ಟು ಗರಿಸೀದು ಈ ವಿಂಧ್ಯಪರ್ವತದಲ್ಲಿ ಬಿದ್ದೆನು ; ಅದುಮೊದಲಾಗಿ ನಾನು ಈ ವಿಂಧ್ಯಪರ್ವತದಲ್ಲೇ ಇದು ಯಾವ ದಿಕ್ಕಿಗೆ ಹೋಗಲಾರದೆ ಜಟಾಯುವಿನ ವೃತ್ತಾಂತವನ್ನರಿಯದಿದ್ದೆನು” ಎಂದು ನುಡಿದನು. ಆ ಮಾತನ್ನು ಕೇಳಿ ಅಂಗದನು ಸಂಪಾತಿಯನ್ನು ಕುರಿತು - ಎಲೈ ಸಂಪಾತಿಯೆ, ನೀನು ಬಹುಕಾಲದಿಂದ ಅರಿಯದಿದ್ದ ಜಟಾಯುವಿನ ವೃತ್ತಾಂತವನ್ನು ನಾನು ಹೇಳಿದೆನಾದ್ದರಿಂದ ನೀನು ರಾವಣನಿರುವ ಸ್ಥಳವನ್ನು ತಿಳದಿ ದ್ದರೆ ಹೇಳು; ರಾಕ್ಷಸಾಧಮನಾದ ರಾವಣನು ಮುಂದರಿಯದೆ ಸೀತಾದೇವಿಯನ್ನ ಪಹರಿಸಿಕೊಂಡು ಹೋದನು ; ಆತನಿರುವ ಸ್ಥಾನವು ಇಲ್ಲಿಗೆ ಸವಿಾಪಿ ದೂರವೊ ಹೇಳು?” ಎಂದು ಕೇಳಿದನು. ಮಹಾತ್ಮನಾದ ಸಂಗತಿಯು ಆ ಕವಿನಾಯಕರಿಗೆ ಸಂತೋಷಹುಟ್ಟುವಹಾಗೆ ತಾನರಿತವರಿಗೂ ರಾವಣನಿರು ವ ಸ್ಥಳವನ್ನು ಹೇಳಬೇಕೆಂದೆಣಿಸಿ ಅಂಗದಾದಿಗಳನ್ನು ಕುರಿತು “ ಎಲೈ ಕಪಿ ನಾಯಕರುಗಳರಾ, ನಾನು ಮಾತು ಮಾತ್ರದಿಂದಲಾದರೂ ಶ್ರೀರಾಮನಿಗೆ ಪ್ರಿಯೋಪಕಾರವನ್ನು ಮಾಡುತ್ತೇನೆ; ನಾನು ಈ ಉದಕದಲ್ಲಿರುವ ವರುಣ ಲೋಕವನ್ನು ಬಲ್ಲೆನು ; ವಾಮನಾವತಾರನಾಗಿ ಪರಮಪುರುಷನು ಬಲಿಚಕ್ರವರ್ತಿಯಿಂದ ಭೂದಾನವನ್ನು ಪಡೆ