ವಿಷಯಕ್ಕೆ ಹೋಗು

ಪುಟ:ಕನ್ನಡ ರಾಮಾಯಣ ಕಿಷ್ಕಿಂಧಾಕಾಂಡ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಿ ವಿ ೦ ಧಾ ಕಾ ೦ ಡ೫೯ ನೆ ಅ ಧ್ಯಾ ಯ , FH ದು ಭೂಮಿಯನ್ನಳೆಯುವದಕ್ಕಾಗಿ ತ್ರಿವಿಕ್ರಮನಾಗಿ ಅಡಿಯಿಟ್ಟ ಮರುಪಾದಗಳನ್ನೂ ನೋಡಿದೆನು ; ಅಸುರರ ಬಾಧೆಯನ್ನು ತಾಳಿಕೊಂಡು ಸಮುದ್ರ ಮಥನವನ್ನು ಮಾಡಿ ಅಮೃತವನ್ನು ಪಡೆದಂತೆ ಯಾವಪ್ರಕಾರದಲ್ಲಾದರೂ ಶ್ರೀರಾಮನ ಕಾರ್ಯವನ್ನು ಸಾಧ್ಯವಾಡಬೇಕು ; ನನಗೆ ವೃದ್ಧಾಪದಿಂದ ತನುಕಾಂತಿ ಗುಂದಿ ಪ್ರಣಗಳು ಶಿಥಿಲ ವಾದವು ; ನಾನು ರಾವಣನು ಎತ್ತಿಕೊಂಡು ಹೋಗುತ್ತಿದ್ದ ರೂಪಲಾವಣ್ಯ ಸಂದರವತಿಯಾಗಿ ಸರ್ವಾಭರಣ ಭೂವಿತೆಯಾಗಿ ನವಯವನ ಕೋಮಲಾಂಗಿಯಾದ ಒಬ್ಬ ಸ್ತ್ರೀಯು ' ಹಾ ರಾಮಾ ಹಾ ಲಕ್ಷಣಾ' ಎಂದು ಮೊರೆಯಿಡುತ ಹೋಗುತ್ತಿದ್ದದ್ದನ್ನು ಕಂಡೆನು ; ಆ ದೇವಿಯು ಮೈ ಮುರಿದು ಕಾಲುಗಳನ್ನು ನೀಡಿ ತನ್ನ ಆಭರಣ ಗಳನ್ನು ಈಡಾಡುತ್ತಿರಲು ಆಕೆಯು ಉಟ್ಟಿದ್ದ ಪೀತಾಂಬರದ ಕರಗು ಪರ್ವತಾಗ್ರದಲ್ಲಿರುವ ಸೂರಪ್ರಭೆಯಂತೆ ಕಾಣುತಿತ್ತು ; ಆ ದೇವಿಯು ಕಾರ್ಮುಗಿಲುಗಳೊಡ್ಡುಗಳಲ್ಲಿ ಅಂತರಿಕ್ಷವಾರ್ಗದಲ್ಲೂ ಪ್ರತಿರುವ ಮಿಂಚಿನಂತೆ ಕಪದ ರಾವಣನ ಸಮಿಾಪದಲ್ಲಿ ಒಪ್ಪುತ್ತಿದ್ದಳು ! ' ರಾಮರಾಮಾ' ಎಂದು ಮೊರೆಯಿಡುತ್ತಿದ್ದಾಗಲೇ ಆಕೆಯು ನೀತಾದೇವಿಯಾಗಿರಬೇಕು ! ಎಳ್ಳೆ ಕಪಿನಾಯಕರುಗಳರ, ರಾವಣನಿರುವ ಸ್ಥಾನವನ್ನು ಹೇಳುತ್ತೇನೆ ಕೇಳೀ : ರಾ ವಣನು ವಿಶ್ರವಸುವಿನ ಮಗನು ; ಕುಬೇರನ ತಮ್ಮನು ; ಲಂಕಾಪಟ್ಟಣದಲ್ಲಿರುವನು ; ಲಂಕಾದ್ವೀಪವು ಸಮುದ್ರ ಮಧ್ಯದಲ್ಲಿ ಇಲ್ಲಿಗೆ ನೂರುಗಾವುದದಾರಿಯಲ್ಲಿರುವದೆ ; ಆ ದ್ವೀಪದಲ್ಲಿ ದೇವಶಿಲ್ಪಿಯಾದ ವಿಕ್ಷಕರ್ಮನು ಮತ್ತು ಸುವರ್ಣಮಯವಾದ ಉಾರುಬಾಗಲುಗಳಿಂದಲೂ ಸವರ್ಣಮಯವಾದ ಚಾವಡಿಗಳಿಂದಲ೧ ಸುವರ್ಣ ಮದುವಾದ ಉಪ್ಪರಿಗೆಗಳಿಂದಲೂ ಅತಿ ರಮಣೀಯವಾದ ಲಂಕಾಪಟ್ಟಣವನ್ನು ನಿರ್ಮಿಸಿದನು ; ಆ ಪಟ್ಟಣದಲ್ಲಿ ರಾವಣನ ವಕ ದಲ್ಲಿ ಸೀತಾದೇವಿಯು ಹೊಂಬಟ್ಟೆ ತೀರೆಯನ್ನುಟ್ಟುಕೊಂಡು ಮುಖಕಾಂತಿ ಗುಂದಿ ದೈನ್ಯಭಾವದಿಂದ ರಾಕ್ಷಸ ಯರ ಕಾವಲಲ್ಲಿ ಸೆರೆಯಾಗಿದ್ದಾಳೆ; ಸಮುದ್ರದಿಂದ ಸುತ್ತುವರಿಯಲ್ಪಟ್ಟ ಲಂಕಾದ್ವೀಪದಲ್ಲಿ ಜನಕರಾಯನ ಮಗಳಾ ದ ಸೀತಾದೇವಿಯು ಇದ್ದಾಳೆ ; ನೀವು ನೂರುಗಾವುದದಾರಿ ಸಮುದ್ರವನ್ನು ದಾಟಿ ಈ ಸಮುದ್ರದ ತೆಂಕಣತೀರಕ್ಕೆ ಹೋಗಿ ಲಂಕಾಪಟ್ಟಣವನ್ನು ಹೊಕ್ಕು ಹೋದರೆ ರಾವಣನನ್ನು ಕಾಣುವಿರಿ; ಸೀತಾದೇವಿಯನ್ನೂ ಕಾಣುವಿರಿ ? ಎಲೈ ಆಪಿನಾಯಕರುಗಳರ, ನೀವು ಶಾಮಸಮಾಡದೆ ಅತಿ ವೇಗದಿಂದ ಸಮುದ್ರವನ್ನು ದಾಟಿ ಲಂಕಾಪಟ್ಟಣಕ್ಕೆ ಹೋದರೆ ಸೀತಾದೇವಿಯನ್ನು ಕಂಡು ತಿರಿಗಿ ಬರುವಿರಿ ; ಈ ಅರ್ಥದಲ್ಲಿ ಸಂಶಯವಿಲ್ಲ ! ನಾನು ಅಂತರಿಕ್ಷಲೋಕ ಪTಂತರ ಹೋಗಿ ನಾನಾದಿಕ್ಕುಗಳನ್ನೂ ಕಾಣುವೆನು ; ಅಂತರಿಕ್ಷಲೋಕಕ್ಕೆ ಪಕ್ಷಿಗಳೆಲ್ಲವು ಹೋಗುವವಾದರೂ ಅದಕ್ಕೂ ತಾರತಮೃವುಂಟು ; ಅಂತರಿಕ್ಷಮಾರ್ಗದಲ್ಲಿರುವ ಸಪ್ತ ಸ್ಕಂಧಗಳಲ್ಲಿ ಭೂಲೋಕಾರಭ್ಯವಾಗಿ ಮೊದಲಸ್ಕಂಧ ಪರ್ಯಂತರ ಧಾನೋಪಜೀವಿಗಳಾದ ಪಕ್ಷಿಗಳು ಸಂಚರಿಸುವವು ; ಎರಡನೇ ಸ್ಕಂದಪರ್ಯಂತರ ವಾಯಸಗಳಿಗೆ ಸಂಚಾರವುಂಟು ; ಮೂರನೇ ಸ್ಕಂದ ಪರ್ಯಂತರ ಹಂಗನಮಕ್ಕಿ ಕೌಂಚಪಕ್ಷಿ ತಿಟ್ಟ ಬಹಕ್ಕಿ ಮೊದಲಾದವುಗಳಿಗೆ ಸಂಚಾರವುಂಟು; ರಣಹದ್ದುಗಳಿಗೆ ನಾಲ್ಕನೇ ಸ್ಕಂದ ಪರ್ಯ೦ತರ ಸಂಚಾರವುಂಟು ; ಹದ್ದುಗಳಿಗೆ ಐದನೇ ಸ್ಕಂದದ ವರಿಗೂ ಸಂಚಾರವುಂಟು ; ರೂಪು ಯವನ ಪರಾಕ್ರಮವುಳ್ಳ ಹಂಸಪಕ್ಷಿಗಳಿಗೆ ಆರನೇ ಸ್ಕಂದಪರ್ಯಂತರ ಸಂಚಾ ರವುಂಟು ; ಗರುತ್ಮಂತನಿಗೆ ಸಪ್ತ ಸ್ಕಂದಪರ್ಯ೦ತರವು ಸಂಚರಿವುಂಟು ; ನಾವು ಗರುತ್ಮಂತನ ವಂಶದಲ್ಲಿ ಹುಟ್ಟಿದ ವರಾದಕಾರಣ ನಮಗೆ ಅಂತರಿಕ್ಷಲೋಕಪರ್ಯ೦ತರವು ಸಂಚಾರವುಂಟು ; ಆದಕಾರಣ ನಾನು ಎಲ್ಲಾದೇಶಗಳನ್ನೂ ಬಲ್ಲೆನು ; ಮಾಂಸಾಹಾರಿಯಾದ ರಾವಣನು ಲೋಕದಲ್ಲಿ ಮಹಾ ನಿಂದಿತವಾದ ದುಷ್ಕರ್ಮವನ್ನು ಮಾಡಿದನು ; ನೀವು ನನ್ನ ತಮ್ಮನಾದ ಜಟಾಯುವನ್ನು ರಾವಣನು ಕೊಂದನೆಂದು ಹೇಳಿದ್ದರಿಂದ ರಾವಣನು ನನಗೆ ಕತುವಾದ ನು; ನೀವು ಲಂಕಾಪಟ್ಟಣಕ್ಕೆ ಹೋಗಿ ಸೀತಾದೇವಿಯನ್ನು ಕಂಡುಬಂದರೆ ನಿಮ್ಮಿಂದ ರಾವಣನು ನಾಶವಾಗುವನು ; ಆಗ ನಾನು ನನ್ನ ವೈರಿಯಾದ ರಾವಣನ ಹಗೆಯನ್ನು ತೀರಿಸಿಕೊಂಡವನಾಗುವೆನು ! ನಾನು ಇಲ್ಲಿಂದಲೇ ಲಂಕಾದ ಟ್ಟಣದಲ್ಲಿರುವ ರಾವಣನನ್ನೂ ಸೀತಾದೇವಿಯನ್ನೂ ಕಾಣುತ್ತಿದ್ದೇನೆ ; ನನಗೆ ಗರುತ್ಮಂತನಂತ ದಿವ್ಯದೃಷ್ಟಿಯು ಟು ; ಅದರಿಂದಲೂ ಆಹಾರಬಲದಿಂದಲೂ ನನಗೆ ನೂರು ಜನಪರ್ಯಂತರ ಸಂಚಾರವು ಆ ನೂರುಗಾವುದ ದಾ ರಿಯೊಳಗಣ ವೃತ್ತಾಂತಗಳ ಕಾಣಿಸುವವು ! ಇದೀಗ ನನ್ನ ವೃತ್ತಾಂತವು ; ಇನ್ನು ಮುಂದೆ ನೀವು ಸಮುದ್ರವ