ವಿಷಯಕ್ಕೆ ಹೋಗು

ಪುಟ:ಕನ್ನಡ ರಾಮಾಯಣ ಕಿಷ್ಕಿಂಧಾಕಾಂಡ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಚಾಮರಾಜೋಕ್ತಿವಿಲಾಸವೆಂಬ ಕನ್ನಡ ರಾಮಾಯಣ, MMMMMMMMMMMMMMMMMMMMM ನ್ನು ದಾಟಿಹೋಗುವ ಉಪಾಯವನ್ನು ಕಾಣಿರಿ; ನೀವು ಅವಶ್ಯವಾಗಿ ನೀತಾದೇವಿಯನ್ನು ಕಂಡು ನಿಮ್ಮ ಅಪ್ಪಟ ರ್ಥವನ್ನು ಪಡೆಯುವಿರಿ ; ಈ ಅರ್ಥದಲ್ಲಿ ಸಂಶಯವಿಲ್ಲ; ನನ್ನನ್ನು ನೀವು ಸಮುದ್ರ ತೀರಕ್ಕೆ ಕರೆದುಕೊಂಡು ಹೋದರೆ ನಾನು ಸ್ವರ್ಗಸ್ಥನಾದ ಜಟಾಯುವಿಗೆ ತಿಲತರ್ಪಣಗಳನ್ನು ಕೊಡುತ್ತೇನೆ” ಎಂದು ನುಡಿದನು. ಆ ಮಾತನ್ನು ಕೇಳದಂಥಾ ಕಪಿ ನಾಯಕರು ಸರಕಿರಣಗಳಿಂದ ಗರಿದ ಸಂಪಾತಿಯನ್ನು ಸಮುದ್ರ ತೀರ ಕೈ ಹೊತ್ತುಕೊಂಡು ಹೋಗಿ ಆತನು ತನ್ನ ತಮ್ಮನಾದ ಜಟಾಯುವಿಗೆ ಉದಕಕ್ರಿಯೆಯನ್ನು ಮಾಡಿದ ಬಳಿಕ ತಿರಿಗಿ ಹೊತ್ತುಕೊಂಡು ಒಂದು ಮೊದಲಿದ್ದ ಸ್ಥಳದಲ್ಲಿ ಬಿಟ್ಟು ಆತನ ಮುಖವಾರ್ತೆಯಿಂದ ಸೀತಾದೇವಿಯ ವ್ಯ ತಾಂತವನ್ನು ಕೇಳಿ ಅತ್ಯಂತ ಸಂತುಹ್ಮಚಿತ್ತರಾಗಿದ್ದರು, ೯ ನೆ ಅ ಧ ಯು - ಸ೦ ಪಾ ಪಿ ಯು ಆ ೦ ಗ ದಾ ದಿ ಗ ೪ ಗೆ ಶ್ರೀ ರಾಮ ನ ಕಾ ಈ ವ ನ್ನು ಮಾ ಡ ಬೆ ಕ ೦ ದು ಹೆ ೪ ದ್ದು : ಈ ಮರಾದೆಯಲ್ಲಿ ಸಂಗಾತಿಯಿಂದ ನುಡಿಯಲ್ಪಟ್ಟ ಅಮೃತೋಪಮಾನವಾದ ವಾಕ್ಯವನ್ನು ಕೇಳಿ ಅಂಗದ ಕುವಾರನು ಮೊದಲಾದ ಕಪಿನಾಯಕರು ಅತ್ಯಂತ ಸಂತುಷ್ಮಚಿತ್ತರಾಗಿದ್ದರು ; ಆಗ ಜಾಂಬವನು ಸಮಸ್ತ ಆಪಿನಾಯಕರೊಡನೆದ್ದು ನಿಂತುಕೊಂಡು ಸಂಪಾತಿಯನ್ನು ಕುರಿತು 'ಎಲೈ ಸಂಪಾತಿಯ ಇನ್ನೊಂದು ಬಾರಿ ಸೀತಾದೇವಿಯ ವೃತ್ತಾಂತವನ ಸವಿಸ್ತಾರವಾಗಿ ಹೇಳು ; ಆ ದೇವಿಯು ಎಲ್ಲಿದ್ದಾಳೆ ? ಆಕೆಯನ್ನು ಎತ್ತಿ ಕೊಂಡು ಹೋದವನ್ಯಾರು ? ಅವರು ಹೋಗುವ ಸಮಯದಲ್ಲಿ ಕಂಡವರಾರು ? ಈ ವೃತ್ತಾಂತಗಳನ್ನು ಸವಿಸ್ತಾ ರವಾಗಿ ಹೇಳಿದರೆ ನಮ್ಮಿಷ್ಟುಮಂದಿ ಆಪಿನಾಯಕರಿಗೂ ನೀನೇ ರಕ್ಷಕನಾಗಿ ಜೀವಗಳನ್ನು ಳುಹಿಸಿದವನಾಗುವೆ ; ನೀತಾದೇವಿಯನ್ನು ಹಿಡಿದುಕೊಂಡು ಹೋದವನ್ಯಾರು ? ಅವನು ವಜ್ರಾಯುಧಕ್ಕೆ ಸಮಾನವಾದ ರಾಮಲಕ್ಷ್ಮಣ ರ ಬಾಣಸಾಮರ್ಥ್ಯವನ್ನರಿತವನಲ್ಲವೆ?' ಎಂದು ಕೇಳಿದನು. ಆ ಮಾತನ್ನು ಕೇಳಿ ಸಂಗಾತಿಯು ಸಮಸ್ತ ಕವಿನಾಯಕರೂ ಅಂಜದಿರುವಹಾಗೆ ಅಭಯವನ್ನು ಕೊಟ್ಟು ಸಂತೈಸಿ ಆ ಕಪಿ ನಾಯಕರನ್ನು ಕುರಿತು ' ಎಲೈ ಕಪಿನಾಯಕರುಗಳಿರಾ, ನಾನು ಸೀತಾದೇವಿಯನ್ನು ರಾವಣನು ಎತ್ತಿಕೊಂಡುಹೋದ ವೃತ್ತಾಂತವನ್ನು ಹೇಳುತ್ತೇನೆ ಕೇಳಿ ; ಆ ದೇವಿಯಿರುವ ಸ್ಥಾನವನ್ನು ನಾನು ತಿಳಿದ ವ್ಯ ತಾಂತವನ್ನೂ ಹೇಳುತ್ತೇನೆ ಕೇ೪ ; ನಾನು ನೂರುಗಾವುದದಾರಿ ವಿಶಾಲವುಳ್ಳ ಈ ಪರ್ವತದಲ್ಲಿ ಬಿದ್ದು ವೃದ್ಧನಾಗಿ ಶರೀರಸತ್ವಗುಂದಿ ಪರಾಕ್ರಮಗುಂದಿರಲು ನನ್ನ ಮಗನಾದ ಸುಪಾರ್ಶ್ವನು ನನಗೆ ವೇಳೆ ವೇಳೆಗೆ ಆಹಾರವನ್ನು ತಂದು ಕೊಟ್ಟು ರಕ್ಷಿಸಿಕೊಂಡಿದ್ದನು ; ಪಕ್ಷಿಜಾತಿಗಳಿಗೆ ಯಾವಾಗಲೂ ಆಹಾರವು ಹೇರಳವಾಗಿರಬೇಕು ; ಅದು ಸ್ಥಾಗಂ ದರೆ : ಗಂಧರ್ವರು ಯಾವಾಗಲೂ ಅತಿ ಕಾಮಿಗಳಾಗಿರುವರು ; ಸರ್ಪಗಳು ಯಾವಾಗಲೂ ಅತಿ ಕೋಪವುಳ್ಳವಾಗಿ ರುವವು ; ಮೃಗಗಳು ಯಾವಾಗಲೂ ಅತಿ ಭಯವುಳ್ಳವಾಗಿರುವವು ; ಪಕ್ಷಿಗಳು ಯಾವಾಗಲೂ ಕ್ಷುಧೆಯುಳ್ಳವಾಗಿ ರುವವು ; ನಾವು ಪಕ್ಷಿಗಳಾದಕಾರಣ ಅತ್ಯಂತ ಕ್ಷುಧೆಯುಳ್ಳವರು ; ನನ್ನ ಮಗನಾದ ಸುಪಾರ್ಶ್ವನು ಪ್ರತಿ ದಿನದ ಲ್ಲಿಯ ಪ್ರಾತಃಕಾಲದಲ್ಲಿದ್ದು ಹೋಗಿ ಸಾಯಂಕಾಲದ ಹೊತ್ತಿಗೆ ಆಹಾರವನ್ನು ಹೇರಳವಾಗಿ ತಂದುಕೊಡುವನು ; ಈ ಮರಾದೆಯಲ್ಲಿರಲು ಒಂದುದಿನ ಆತನು ಮಾಂಸಾದಿ ಆಹಾರಗಳನ್ನೂ ತರದೆ ಸುಮ್ಮನೇ ಬಂದನು ; ನಾನು ನನ್ನ ವೃದ್ದಾಪ್ತ ಕೋಪದಿಂದಲೂ ಹಸಿದಿದ್ದದ್ದರಿಂದಲೂ ಆತನನ್ನು ನಿಷ್ಠುರ ವಚನಗಳಿಂದ ಬೆದರಿಸಿದೆನು ; ಆ ಕುಮಾ ರನು ನನಗೆ ಆಹಾರವನ್ನು ತಂದುಕೊಡದೆ ಹೋದದ್ದಕ್ಕಾಗಿ ಪಶ್ಚಾತ್ತಾಪಪಟ್ಟು ನನ್ನ ಮೇಲಣ ಪ್ರೀತಿಯಿಂದ ಸಂಕೋಚಪಡುತ ನನ್ನನ್ನು ಕುರಿತು 'ಎಲೈ ತಂದೆಯೇ, ನಾನು ನಿನಗೆ ಆಹಾರವನ್ನು ತರಬೇಕೆಂದು ಅಂತರಿಕ್ಷ ಮಾರ್ಗಕ್ಕೆ ಹೋಗಿ ಮಹೇಂದ್ರ ಪರ್ವತದ ಬಾಗಲನ್ನಡಗಟ್ಟಿಕೊಂಡಿದ್ದೆನು ; ಮಹೇಂದ್ರ ಪರ್ವತದ ಗುಹೆಗೆ