________________
GOD ಶ್ರೀಚಾಮರಾಜೋಕ್ತಿವಿಲಾಸವೆಂಬ ಕನ್ನಡ ರಾಮಾಯಣ, ವಿಯು ವೃತ್ತಾಂತವನ್ನರಿತು ಬಂದು ಇಷ್ಟು ಮಂದಿ ಕವಿನಾಯಕರ ಕಂಗೆಡಿಕೆಯನ್ನು ಬಿಡಿಸುವ ಸಮರ್ಥರಾರಾದ ರಿದ್ದರೆ ಅವರ ಕೃಪೆಯಿಂದ ನಾವೆಲ್ಲರು ಕಾರಸಾಧನೆ ಮಾಡಿಕೊಂಡು ಕಿಂಧಾಪಟ್ಟಣಕ್ಕೆ ಹೋಗಿ ಸುಗ್ರೀ ವನನ್ನು ಕಾಣಿಸಿಕೊಂಡು ನಮ್ಮ ನಮ್ಮ ಸ್ತ್ರೀಯರನ್ನೂ ಮಕ್ಕಳನ್ನೂ ಕೂಡಿಕೊಂಡು ಸುಖವಾಗಿರುವವು ; ಅಥಾ ಪುಣ್ಯಾತ್ಮರಾದ ಕಪಿನಾಯಕರಾರಿದ್ದಾರೆ; ಸಮುದ್ರವನ್ನು ದಾಟಿ ಲಂಕಾದ್ವೀಪಕ್ಕೆ ಹೋಗಿ ಸೀತಾದೇವಿಯ ಪರಿಣಾ ಮಸ್ಥಿತಿಯನ್ನರಿತು ತಿರಿಗಿ ಬಂದು ನಾವೆಲ್ಲರು ಮಹಾಬಲವಂತರಾದ ರಾಮಲಕ್ಷ್ಮಣರನ್ನು ಕಾಣುವಹಾಗೆ ಮಾಡುವಂ ಥಾ ಸಮರ್ಥರಿದ್ದ ಪಕ್ಷದಲ್ಲಿ ನನಗೆ ಅಂಜದೇ ಅಭಯನನ್ನು ಕಡಲೀ” ಎಂದು ನುಡಿದನು. ಅದನ್ನು ಕೇಳಿ ಆ ಕವಿನಾಯಕರು ಪ್ರತ್ಯುತ್ತರವನ್ನು ನುಡಿಯದೆ ವನಸ್ಥರಾಗಿದ್ದರು ; ಅಂಗದಕುಮಾ ರನು ಆ ಕಪಿ ನಾಯಕರನ್ನು ಕುರಿತು ಎಲೈ ಆಪಿನಾಯಕರುಗಳಿರಾ, ನೀವೆಲ್ಲರು ಲೋಕದಲ್ಲಿ ಮಹಾಬಲವಂತ ರಾಗಿ ಪರಾಕ್ರಮಿಗಳಾಗಿ ಉತ್ತಮಕುಲದಲ್ಲಿ ಜನಿಸಿದವರಾಗಿ ಅತಿ ಪುರಾದವರು ; ನೀವು ಸುಮ್ಮನಿದ್ದರೆ ಇನ್ನೆ೦ ದಿಗೂ ಕಿಂಧಾಪಟ್ಟಣಕ್ಕೆ ಹೋಗುವದೆಂಬ ಆಕೆಯನ್ನು ಬಿಡೀ ; ನಿಮ್ಮ ವ್ಯಮಂದಿಯಲ್ಲಿ ಯಾರಿಗೆ ಸಮುದ್ರವ ನ್ನು ದಾಟುವದಕ್ಕೆ ಸಾಮರ್ಥ್ಯವುಂಟೋ ಆತನು ಈಗಲೇ ಪ್ರೀತಿವಚನವನ್ನು ನುಡಿಯಲೀ ” ಎಂದು ನುಡಿದನು. ಆ ಮಾತನ್ನು ಕೇಳಿ ಗಜನು ಗವನು ಗವಾಕ್ಷನು ಶರಭನು ಗಂಧಮಾದನನು ಮೈಂದನು ದ್ವಿವಿದನು ಸುಷೇಣನು ಜಾಂಬವಂತನು ಮೊದಲಾದ ಕಪಿನಾಯಕರು ತಮ್ಮ ತಮ್ಮ ಉತ್ಸಾಹಶಕ್ತಿಗಳಿಗೆ ತಕ್ಕ ಕಾರ್ಯಸ್ಥಿತಿ ಯನ್ನು ಹೇಳಿದರು ; ಮೊದಲು ಗಜನು ತಾನು ಹತ್ತು ಗಾವುದ ದಾರಿ ದಾಟುವ ಸಾಮರ್ಥ್ಯವಳವನೆಂದು ನುಡಿದನು ; ಗವಾಕ್ಷನು ಇಪ್ಪತ್ತುಗಾವುದ ದಾರಿಯನ್ನು ದಾಟುವದಾಗಿ ನುಡಿದನು ; ಶರಭನು ಮೂವತ್ತು ಗಾವುದ ದಾರಿಯನ್ನು ದಾಟುವದಾಗಿ ನುಡಿದನು ; ವೃಷಭನು ನಲವತ್ತು ಗಾವುದ ದಾರಿಯನ್ನು ದಾಟುವದಾಗಿಯ ಗಂಧಮಾದನನು ಐವ ತುಗಾವುದ ದಾರಿಯನ್ನು ದಾಟುವದಾಗಿ ಯೂ ಮೈಂದನು ಅರವತ್ತು ಗಾವುದ ದಾರಿಯನ್ನು ದಾಟುವದಾಗಿಯೂ ದೀವಿದನು ಎಪ್ಪತ್ತುಗಾವುದ ದಾರಿಯನ್ನು ದಾಟುವದಾಗಿಯ ಸುಷೇಣನು ಎಂಭತ್ತು ಗಾವುದ ದಾರಿಯನ್ನು ದಾಟು ವದಾಗಿಯೂ ಹೇಳದರು; ಆಮೇಲೆ ಅತಿ ವೃದ್ಧನಾದ ಜಾಂಬವಂತನು “ ಎಲೈ ಕಪಿನಾಯಕಮಕ್ಕಳಿರಾ, ಈಗ ನನ ಗೆ ವೃದ್ಧಾಸ್ಥವಾಗಿ ಪರಾಕ್ರಮಗುಂದಿತು; ನನಗೆ ಈಗ ಮೊದಲಿದ್ದ ಮರಾದೆಯಲ್ಲಿ ಸಾಮರ್ಥ್ಯವಿಲ್ಲ; ಹಾಗಾದರೂ ಸುಗ್ರೀವನ ಮಾತನ್ನು ಮಾರಲು ಶಕ್ಯವಲ್ಲ; ಮಹಾತ್ಮನಾದ ಶ್ರೀರಾಮನ ಕಗ್ಗವನ್ನು ಉಪೇಕ್ಷೆಮಾಡಸಲ್ಲದು; ಆದ ಕಾರಣ ಈಗಲೂ ನಾನು ತೊಂಭತ್ತು ಗಾವುದ ದಾರಿಯನ್ನು ಸಂಶಯವಿಲ್ಲದೆ ದಾಟುವನು ; ಆದರೆ ಅಷ್ಟು ಮಾತ್ರ ದಿಂದ ಕಾರ್ಯಸಾಧ್ಯವಾಗಲಾರದು; ನಾನು ಪುರ್ವದಲ್ಲಿ ಬಲಿಚಕ್ರವರ್ತಿಯ ಯಾಗದಲ್ಲಿ ನಾರಾಯಣನು ವಾಮ ನಾವತಾರನಾಗಿ ಬಂದು ಬಲಿಚಕ್ರವರ್ತಿಯಿಂದ ಮೂರಡಿ ಭೂಮಿಯನ್ನು ಪಡೆದು ಸ್ವರ್ಗ ಮರ್ತ್ಯ ಪಾತಾಳಗ ಳಂಬ ಮೂರು ಲೋಕಗಳನ್ನೂ ತನ್ನ ಹೆಜ್ಜೆಗಳಿಂದ ಆವರಿಸಿಕೊಂಡಿದ್ದ ಸಮಯದಲ್ಲಿ ಆ ತ್ರಿವಿಕ್ರಮಾವತಾರ ನಾದ ಸ್ವಾಮಿಯನ್ನು ಪ್ರದಕ್ಷಿಣಮಾಡಿದೆನು ; ಈಗ ಅಂಥಾ ಸಾಮರ್ಥ್ಯವು ಶರೀರಬಲವು ಉತ್ಸಾಹಶಕ್ತಿಯ ಇಲ್ಲ; ಈಗ ನಾನು ತೊಂಭತ್ತುಗಾವುದದಾರಿ ದಾಟಿದರೂ ಕಾರೈಸಿದ್ದಿಯಾಗದು” ಎಂದು ನುಡಿದನು. ಆ ಮಾತನ್ನು ಕೇಳಿ ಅಂಗದಕುಮಾರನು ಜಾಂಬವಂತನನ್ನು ಸತ್ಕರಿಸಿ ಎಲೈ ಜಾಂಬವಂತನೇ, ನಾನು ನೂರು ಗಾವುದದಾರಿ ದಾಟಿಹೋಗುವೆನು ; ಆದರೆ ಅಲ್ಲಿಂದ ತಿರಿಗಿ ದಾಟಿಬರುವದಕ್ಕೆ ಸಮರ್ಥ ಉಂಟೋ ಇಲ್ಲವೋ ತಿಳಿ ಯಲಿಲ್ಲ ” ಅಂದನು. ಆ ಮಾತನ್ನು ಕೇಳಿ ಜಾಂಬವಂತನು " ಎಲೈ ಅಂಗದಕುಮಾರನೆ, ನಿನ್ನ ಸಾಮರ್ಥ್ಯವನ್ನು ನಾನು ಬಲ್ಲೆನು; ನಿನು ನೂರುಗಾವುದ ದಾರಿಯನ್ನಾದರೂ ಸಾವಿರಗಾವುದ ದಾರಿಯನ್ನಾದರೂ ವಾಟಿಬರುವದಕ್ಕೆ ಸಮರ್ಥನು ; ಹಾಗಾದರು ನೀನು ನಮಗೆಲ್ಲರಿಗೂ ಒಡೆಯನು ; ನಿನ್ನನ್ನು ಈ ಕಾರ್ಯಕ್ಕೆ ಕಳುಹಿಸಿ ನಾವು ಇಲ್ಲಿರುವದು ಕಾರ್ ವಲ್ಲ; ನಮಗೆಲ್ಲರಿಗೂ ನೀನೇ ಆಧಾರವು ; ಸಮಸ್ತ ಕಾರ್ಯಕ್ಕೂ ನೀನೇ ಪ್ರಧಾನನು ; ಆದಕಾರಣ ನಿನ್ನನ್ನಿರಿಸಿ