ಪುಟ:ಕ್ರಾಂತಿ ಕಲ್ಯಾಣ.pdf/೪೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೮೫ ಕಡೆಯ ನಾಲ್ಕು ಮಾತು ಬಿಜ್ಜಳ ಬಸವೇಶ್ವರರನ್ನು ಕುರಿತ ಕಾದಂಬರೀ ಮಾಲಿಕೆಯ ಕೊನೆಯ ಭಾಗವಾದ ಈ ಆರನೆಯ ಹೊತ್ತಿಗೆ, “ಕ್ರಾಂತಿ ಕಲ್ಯಾಣ'ವು ಈಗ ಮಾನ್ಯ ವಾಚಕರ ಮುಂದಿರುತ್ತದೆ. ಈ ಮಾಲಿಕೆಯ ಮೊದಲ ಕಾದಂಬರಿ “ಉದಯ ರವಿ” ಯಲ್ಲಿ ಬಸವೇಶ್ವರನ ಬಾಲ್ಯ ವಿವಾಹ, ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ ನೇಮಕ, ನಿಧಿಶೋಧನೆ, ಈ ಪ್ರಸಂಗಗಳೂ ; ಎರಡನೆಯದಾದ "ರಾಜ್ಯಪಾಲ”ದಲ್ಲಿ, ತೈಲಪ ಬಿಜ್ಜಳರ ನಡುವೆ ನಡೆಯಲಿದ್ದ ಅಂತರ್ಯುದ್ದವನ್ನು ನಿಲ್ಲಿಸಲು ಬಸವೇಶ್ವರನು ನಡೆಸಿದ ಸಂಧಾನ, ಬನವಾಸಿಯ ರಾಜಪ್ರತಿನಿಧಿಯಾಗಿ ನೇಮಕ, ರಾಜ್ಯಾಪಹಾರವೇ ಬಿಜ್ಜಳನ ಉದ್ದೇಶವೆಂದು ತಿಳಿದಾಗ ಬಸವೇಶ್ವರನ ಪ್ರತಿಭಟನೆ ಮತ್ತು ಅಧಿಕಾರ ನಿವೃತ್ತಿ, ಈ ವಿಚಾರಗಳೂ ; ಮೂರನೆಯದಾದ “ಕಲ್ಯಾಣೇಶ್ವರ”ದಲ್ಲಿ, ಬಸವೇಶ್ವರನಿಂದ ಅನುಭವ ಮಂಟಪದ ಸ್ಥಾಪನೆ, ಅದರ ಅಧ್ಯಕ್ಷ ಸ್ಥಾನಕ್ಕೆ ಅಲ್ಲಮಪ್ರಭುದೇವರ ಆಯ್ಕೆ ಮತ್ತು ಶೂನ್ಯ ಸಿಂಹಾಸನಾರೋಹಣ, ಬಸವೇಶ್ವರನು ಆಚರಣೆಗೆ ತಂದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಣೆಗಳು-ಇವು ವರ್ಣಿಸಲ್ಪಟ್ಟಿವೆ. ಇದರೊಡನೆ ಈ ಬೃಹತ್ ಕಾದಂಬರಿಯ ಪೂರ್ವಾರ್ಧ ಮುಗಿಯುತ್ತದೆ. ಐದು ವರ್ಷಗಳ ಅನಂತರ, ಚಾಲುಕ್ಯ ಅರಸೊತ್ತಿಗೆಯ ಪುನರ್‌ಪ್ರತಿಷ್ಠೆಗಾಗಿ ತೈಲಪನ ವಿಧವಾರಾಣೀ ಕಾಮೇಶ್ವರಿಯು ಹೂಡುವ ರಾಜಕೀಯ ಒಳಸಂಚಿನಿಂದ ಮಾಲಿಕೆಯ ನಾಲ್ಕನೆಯ ಭಾಗ, “ನಾಗಬಂಧ” ಪ್ರಾರಂಭವಾಗುತ್ತದೆ. ಈ ಸಂಚಿನ ನಿಜಸ್ವರೂಪ, ಚೆನ್ನಬಸವಣ್ಣನ ನೇತೃತ್ವದಲ್ಲಿ ಶರಣರ ದೇವಗಿರಿ ಯಾತ್ರೆ ಅಲ್ಲಿಯ ಗುಹೆಯೊಂದರಲ್ಲಿ ಕುಸುಮಾವಳಿಯ ಬಲಿದಾನ, ರಾಷ್ಟ್ರಕೂಟ ಅರಸು ದಂತಿದುರ್ಗನಿಂದ ಕೈಲಾಸನಾಥ ಗುಹಾಲಯದ ರಚನೆಯನ್ನು ಕುರಿತ ಐತಿಹ್ಯ ಈ ವಿಚಾರಗಳು ಅದರಲ್ಲಿ ನಿರೂಪಿತವಾಗಿವೆ. ಐದನೆಯ ಭಾಗವಾದ “ಮುಗಿಯದ ಕನಸು” ಕಾದಂಬರಿಯಲ್ಲಿ ಸರ್ಪದ್ರಷ್ಟನಾಗಿ ಕಲ್ಯಾಣಕ್ಕೆ ಹಿಂದಿರುಗಿದ ಶೀಲವಂತನನ್ನು ಮರವೆಯಿಂದ ಎಚ್ಚರಿಸಲು ಮಧುವರಸನ ಮಗಳು ಲಾವಣ್ಯವತಿ ಅನುಸರಿಸುವ