________________
ಸಮಗ್ರ ಕಾದಂಬರಿಗಳು ೧೮೩ ಅಂದನಂತೆ. ಆ ಪಂಚಾತಿದಾರು. “ನಾಕು ತಿಂಗಳೊ ಮೂರೆ ತಿಂಗಳೊ- ಅದೇಟಾದ್ರೂ ಆಗ್ಲಿ ಲೂಸಿ, ಪೋಲಿ ಪಂಕಾಳಿ ಎಣ್ಣಲ್ಲ. ಈಚಲು ಪ್ಯಾಟೇಲಿ ಕುಡುದು ಬಂದು, ನೀನು ಅವುಳ ಸಾವಾಸ ಬೆಳುಸಿರೋ ಇಸ್ಯ ನಿನ್ನ ಮಾತ್ನಿಂದಲೆ ರುಜ್ವಾತು ಆಯ್ತ ಅದೆ. ಆದ ನೀನೆ ಕುದ್ದಾಗಿ ವಷ್ಣುಕತ್ತಿದ್ದೀ... ಈಗ ತಪ್ಪಿಸಿಕಳಾದೆ ನೀನು ಯಾವ ದೊಂಬರ ಲಾಗ ಅಕಿದ್ರೂವೆ, ಅದು ನಮ್ಮ ತಾವ ಬೇಯಕ್ಕಿಲ್ಲ”- ಕಡಾಕಂಡಾಗಿ ಅಂದುಬುಟ್ರಂತೆ. ಪುಟ್ಟಾರಿಗೆ ಮಂಕು ಕವುದಂಗಾಗಿ, “ನಮ್ಮಯ್ಯಾ ಒಂದು ಮಾತ ಕ್ಯಾಳಬೇಕು” ಅಂತ ತೊದಲಿದ್ದಂತೆ. ಆದೆ “ನಡಿ, ಅವುನ ತಾವಿಕೇ ವೋಗಾನ, ನಿಮ್ಮಯ್ಯಂಗೇ ನ್ಯಾಯ ಕ್ವಡಾನ”ರೋಸಯ್ಯ ಗುರು ಅನ್ತಾ ಇರೋನೂವೆ ಅಣ್ಣಂಗೆ “ಮುನಾ ನೀ ಇಂಗೇನಾರ ಅನಾವುತ ಮಾಡ್ಕಂಡು ಆ ಕಿರಿಸ್ತಾನ ರಂಡೆ ತಾವಿಕೆ ಯಾನಾರ ವೋದೆ, ಆಮ್ಯಾಕೆ ನನ್ನ ಗುತ್ತಿಗೆ ಮಾತ್ರ ನೀ ಕಾಲು ಆಕಾಬಾರದು”- ಅಂದಿದ್ದ ಅವ್ರ ಅಯ್ಯನ ಮಾತು ಗೆಪ್ತಿಯಾಗಿ ಕಯ್ಯಕಾಲ್ನಲ್ಲಿ ಮದುರು ಅತ್ತಕತಂತೆ... ಯಾನು ಮಾಡಕ್ಕು ತಿಳಿದೇಯ, ಮಾತು ಮುಗುದೋಗಿ ಸುಮ್ಮೆ ಕುಂತುಬುಟ್ನಂತೆ! - ರೋಸಯ್ಯ ಗುರುಗೋಳು, ಕಿರಿಸ್ತಾನ ದೊಡ್ಡ ಆ ಮೂರು ನಾಕು ಮುಕ್ಕಸ್ತರ ಕಡೀಕೆ ತಿರುಗಿ, - “ಕ್ವಾಡಿದರೇನಪ್ಪ ಇವ ಆಟವೆ?- ಇವಂಗೆ ಇನ್ನ ಅಯ್ಯನತ್ರ ವೋಗಕ್ಕೂ ಭಯ! ಅಂಗಿದ್ರೆ ನಾಯೋಳೋದಿಷ್ಟು, ಫಲಾತನೇ ವೋಗಿ ಯೋಳಿದೂವೆ ಇವುನಯ್ಯ ಈ ಲಗ್ನಕ್ಕೆ ವಪ್ಪಕ್ಕಿಲ್ಲ ಅನ್ನಾದು, ಯಾರಿಗಾದ್ರೂ ತಿಳೀತದೆ. ಈಗ ನಾವು ಇಂಗೆ ಮಾಡಾವ. ನಾಳೀಕೆ ಇವರಿಬ್ಬರೂ ಲಗ್ಗ ಮಾಡಿಸಿಬುಡಾವ. ಆಮ್ಯಾಕೆ ಜಿನ ಕಳುದಂಗೆ, ಇವನ ಅಯ್ಯನನೂವೆ ನಡದು ಹ್ವಾದ್ದಕೆ ವೊಂದಿಕಂಡೆ ವೋಂದಿಕತ್ತಾನೆ!... ಇದ್ರೆ ನಮ್ಮ ದೊಡ್ಡಿ ಯಜಮಾನರಾದ ನೀವು ಯಾನ ಯೋದ್ದೀರಿ?” - ಪ್ರಶ್ನೆ ಆಕಿದರಂತೆ. - ಆ ಮಾತ್ತೆ ಅಲ್ಲಿದ್ದ ಮೂರು ನಾಕು ಕುಳ ಒಪ್ಪಿ ತಲೆ ವಗೆದರಂತೆ... ಸರಿ. ಮಾರನೆ ಜಿನವೆ ನಮ್ಮ ಪುಟ್ಟಾರಿಗೆ ಪೀಟರು ಅಂತ ಹೊಸದಾಗಿ ಎಸರಿಟ್ಟು ಲಗ್ಲ ಮಾಡೇಬುಟ್ರಂತೆ!... ದೊಡ್ಡಯಂಗೆ ಈ ಸುದ್ದಿ ಸ್ವತ್ತಾದಾಗ, ಮಂಕಾಗಿ, ಕಲ್ಲಿನ ಪ್ರತುಮೆ