ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೮೪ ವೈಶಾಖ ತರ ಕುಂತುಬುಟ್ಟ, ಏಟೋ ವೊತ್ತಾದಮ್ಯಾಲೆ ನಮ್ಮಯ್ಯನ ಕುಟ್ಟೆ “ಕ್ವಾಡಿದೇನ್ದ ನಿಂಗ, ನನ್ನ ಹೈದ ಮಾಡ್ಡ ಆಗರಣಾವ?” ಅಂದು, ವಸಿ ವೊತ್ತು ಕಣ್ಣು ಮುಚ್ಚಂಡಿದ್ದು ಆಮ್ಯಾಕೆ ನಿದಾನ್ವಾಗಿ ಕಣ್ಣ ತೆರೆದು” ಇನ್ನು ನಂಗೂ ಆವಂಗೂ ಬುಟ್ಟೋಯ್ತು... ಈಗೇನ ಸೂರೋದು - ಅವನು ನಂಗೇ ಉಟ್ಟನೇ ಇಲ್ಲ ಅಂತಾವ ಎದೆಮ್ಯಾಲೆ ಕಲ್ಲು ಆಕ್ಕಂಡು ತೆಪ್ಪಗಿದ್ದು ಬುಡ್ತೀನಿ” ಅಂದ..ಸ - ಆಮ್ಯಾಕೆ ಯಾವಾಗಲಾರುವೆ, ಗಾಳಿ ಬೀಸಿದಂಗೆ ನಮ್ಮ ಪುಟ್ಟಾರಿ ಸಂತೇಲಿ ನಂಗೆ ಸಿಕ್ಕೋನು. ವಸಿ ಜಿನ, ಆ ಎಣ್ಣಿನ ಸಂಗದಲ್ಲಿ ಅವು ಕುಸಾಮತ್ನಲ್ಲೆ ಇರೂವಂಗೆ ಕಂಡ್ರು. ಆದ್ರೆ ಇನ್ನೊಂದು ತಿಂಗಳೊಪ್ಪತ್ನಲ್ಲಿ ಆ ಕುಸಾಮತ್ತೆ ಮಂಗರ ಮಾಯ ಆಯ್ತು... ಒಂದು ಬೆಸ್ತವಾರ ಹುಣಸೂರು ಸಂತಿಂದ ಯಾವೊ ಸಾಮಾನ ತರೇಳಿದ್ದಂತೆ ಲೂಸಿ. ಅದು ಮರತೂಗಿ ಪುನಾ ಅಣ್ಣ ಅದೆನ ನೀ ಯೋಳಿದ್ದದ್ದು ಅಂತ ಎಡತಿ ಕ್ಯಾಲಿಕಂಬರಕ್ಕೆ ಕಿರಿಸ್ತಾನ ದೊಡ್ಡಿಗೆ ಇಮ್ಮರಳೊಗಿದ್ದ. ಅವ್ರು ಇಂಗೋಗಿ ಮನೆ ಕದವ ತಟ್ಟಿದಗ, ವಳು ಯಾರೊ ಗುಬ್ಬಲು ಪರದಡುತ ಇದ್ದುದು ಕೇಳುಸ್ತಂತೆ!... ಸೂಸಾನಮ್ಮ ಅಂಗಡಿ ಸಾಮಾನು ತರಕ್ಕೆ ವೊತ್ತಿಗೆ ಮುಂಚೇಯ ವೊಂಟೋಗಿದ್ಧಲ್ಲ, ಇನ್ನು ವಳುಗಿರಾರು ಯಾರು?- ಸಂದೇಯ ಆಯ್ತಂತೆ. ಅಣ್ಣ ಜೋರುಜೋರಾಗಿ ಕದ ತಟ್ಟುತಿದ್ದರೂವೆ, ಭಗ್ಗನೆ ಯಾರೂ ಬಂದು ತಗೀನಿಲ್ವಂತೆ. ಸುಮಾರು ಸಮಯ ಕಳುದ ಆಯಿತ್ತೂ, ಲೂಸಿ ಮೆಕ್ಕನಂಗೆ ಬಂದು ಕದ ತೆಗದ್ದಂತೆ... “ವಳುಗೆ ಯಾರೋ ಇದ್ದಂಗಿಲ್ವ?”- ಪುಟ್ಟಾರಿ ಕ್ಯಾಳುದಂತೆ. - “ಯಲ್ಲೆ? - ನಾನು ಅಡುಗೆ ಕಾಣೇಲಿ ಪಾತ್ರೆ ಜೋಡುತ್ತಿದ್ದೆ, ಪೀಟರು... ನೀವು ಸಂತಿಂದ ಈಟು ಭಗ್ಗನ ಆದ್ಯಾಕ ಇಂದುಕೆ ಬಂದದು?” -ಎಡತಿ ಯೋಳಿದ್ದರೂನುವೆ, ಯಾಕೊ ಅನುಮನಸಾಗಿ ಮನೆ ವಳಗೆಲ್ಲ ಸುತ್ತಾಡಿ, ಕಡೀಕೆ ಯಾರೂ ಕಾಣದೇಯ, “ನೀನು ಸಂತ್ಯಂದ ಯೇನೇನೊ ತರಬೇಕು ಅಂತ ಅಂದ್ಯಲ್ಲ?... ನಂಗೆ ಸೀನೆಯಿತಗಾರು ಸಿಕ್ಕಿ ಮರೆತೋಗದೆ... ನೀ ಯೋಳ ಸುಮಾರು ಸಾಮಾನು ಗೆಪ್ತಿ ಆಯ್ತು, ಪೌಡರು, ಲಂಗದ ಬಟ್ಟೆ, ಯೇರ್‌ಪಿನ್ನು- ಈಟು ಸಾಮಾನು ಗೆಪ್ತಿ ಅದೆ. ಇನ್ಯಾನೊ ಒಂದ ನೀ ಯೋಳದು ಮರತೋಗಿ ಕ್ಯಾಳಿ ವೋಗೋವ ಅಂತ ಬಂದೆ. ನಡಕಂಬದ್ರೆ ಪುನಾ ವೋಗಿ ಬರದು ವೊತ್ತಾಯ್ತದೆ ಅಂತ ಬಾಥ್ ಸೈಕೋಲು ತಕ್ಕಬಂದಿಮ್ಮಿ... ಅದ್ಯಾನ ಇನ್ನೊಂದು ಸಾಮಾನು,