- 429 - ಅ. XXII ಪರಾ ಅಂಕಪಾದ ಎಂದರೆ ಆಡು, ಜಿಂಕೆ ಮೊದಲಾದವುಗಳ ಒಂದು ಅವಯವ ಭೇದ ಎಂತ ಆರುಣದತ್ತ. ( ಅಂಕ ಎಂಬದು ಶರೀರಕ, ಸೊಂಟಕ್ಕೂ ಬರುತ್ತದೆಂತ ನಿಘಂಟುಗಳು ಹೇಳುತ್ತವೆ 7. ವಸ್ತಿಂ ತತಃ ಸವ್ಯಕರೇ ನಿಧಾಯ ಸುಬದ್ಧ ಮುಚ್ಚಾಸ್ಯ ಚ ನಿರ್ವಲೀಕಂ | ಅಂಗುಷ್ಠ ಮಧ್ಯೆನ ಮುಖಂ ವಿಧಾಯ ನೇತ್ರಾಗ್ರಸಂಸ್ಥಾಮಸನೀಯ ವರ್ತಿ೦ 11 ತೈಲಾಗಾತ್ರಂ ಕೃತಮೂತ್ರವಿಟ್ಟಂ ನಾತಿಕ್ಷುಧಾರ್ತಂ ಶಯನೇ ಮನುಷ್ಯಂ | ಸಮೇಧವೇಷನ್ನತಶೈರಸೇ ವಾ ನಾತ್ಯಿತೇ ಸ್ವಾಸ್ತರಣೋಪವನ್ನೇ || ವಯನ್ನು ಸತ್ಯೇನ ಪಾರ್ಶ್ವನ ಸುಖಂ ಶಯಾನಂ ಕೃತರ್ಜುದೇಹಂ ಸ್ವಭುಜೋಪಧಾನಂ || ಕೊಡುವ ವಿಧಾನ ನಿಕುಂಚ್ಯ ಸವೈತರದಸ್ಯ ಸಕ್ತಿ ವಾಮಂ ಪ್ರಸಾರ್ಯ ಪ್ರಣಯೇತಸ್ತಂ || ಸ್ನಿಗ್ಧ ಗುದೇ ನೇತ್ರಚತುರ್ಧಭಾಗಂ ಸಿಗ್ಧಂ ಶನೈರ್ಮದ್ಯಜುಸೃಷ್ಣ ವಂಶಂ | ಅಕಂಪನಾವೇಪನಲಾಘವಾದೀನ್ ಪಾಕ್ಕೊರ್ಗುಣಾಂಶ್ಚಾಪಿಹಿ ದರ್ಶಯಂಸ್ಕ೦|| ಪ್ರಪೀಡ್ಯ ಚೈಕಗ್ರಹಣೇನ ದತ್ತಂ ನೇತ್ರಂ ಶನೈರೇವ ತತೋSಪಕರ್ಷತ್ | (ಚ, 876 ) ವಸ್ತಿಯನ್ನು ಉಪಯೋಗಿಸಿಕೊಳ್ಳತಕ್ಕ ಮನುಷ್ಯನು ಮೈಗೆ ತೈಲ ಹಚ್ಚಿಕೊಂಡು, ಮಲ ಮೂತ್ರಗಳ ವಿಸರ್ಜನೆ ಮಾಡಿ, ಅತಿಹಸಿವು ಇಲ್ಲದ ವೇಳೆ, ಅತಿಎತ್ತರವಲ್ಲದ ಮತ್ತು ಸಮ ವಾದ ಅಧವಾ ತಲೆಭಾಗ ಅಲ್ಪ ಸ್ವಲ್ಪ ತಗ್ಗಿದ ಹಾಸಿಗೆಯ ಮೇಲೆ, ಒಳ್ಳೆ ವಸ್ತ್ರ ಹಾಸಿಕೊಂಡು, ಎಡದ ಕಾಲನ್ನು ಚಾಚಿ, ಬಲದ ಕಾಲನ್ನು ಮಡಚಿಕೊಂಡು, ಎಡದ ಮಗ್ಗಲ ಮೇಲೆ, ತನ್ನ ಭುಜವನ್ನೇ ತಲೆಗಿಂಬು ಮಾಡಿಕೊಂಡು, ದೇಹವನ್ನು ನೆಟ್ಟಗೆ ಮಾಡಿಕೊಂಡು, ಸುಖವಾಗಿ ಮಲಗಿಕೊಳ್ಳಬೇಕು. (ಮೊದಲು ಹೇಳಿದ ರೀತಿಯಲ್ಲಿ ವಸ್ತಿಯನ್ನು ಕಟ್ಟಿರುವ) ನಳಿಗೆಯ ತುದಿಬಾಯನ್ನು ಬತ್ತಿಯಿಂದ ಮುಚ್ಚಿಕೊಂಡು, ವಸ್ತಿಗೆ ಸ್ನೇಹವನ್ನೋ, ಕಷಾಯವನ್ನೋ ತುಂಬಿಸಿ, ಸರಿಯಾಗಿ ಬಾಯಿ ಬಿಗಿದು, ವಸ್ತಿಯನ್ನು ಎಡದ ಕೈಯಲ್ಲಿ ಹಿಡಕೊಂಡು, ನಳಿಗೆಯ ತುದಿಯ ಬತ್ತಿಯನ್ನು ತೆಗೆದುಬಿಟ್ಟು, ಆ ಬಾಯಿಯನ್ನು ಹೆಬ್ಬೆಟ್ಟಿನ ಮಧ್ಯದಿಂದ ಮುಚ್ಚಿ , ಆಸ ನಕ್ಕೂ, ನಳಿಗೆಗೂ, ಸ್ನೇಹ ಹಚ್ಚಿದ ಮೇಲೆ, ನಳಿಗೆಯ ಕಾಲಂಶವು ಒಳಗೆ ಸೇರುವ ಹಾಗೆ ಗುದದೊಳಗೆ ಅದನ್ನು ಮೃದುವಾಗಿ ಮತ್ತು ಬೆನ್ನ ಕೂಲಿಗೆ ಸರಿ ನೆಟ್ಟಗಾಗಿ, ಅಲ್ಲಾಡದಿರು ವಿಕೆ, ನಡುಗದಿರುವಿಕೆ, ಇತ್ಯಾದಿ ಕೈಲಾಘವ ಗುಣಗಳನ್ನು ಉಪಯೋಗಿಸಿ, ಮೆಲ್ಲಗೆ ನಡಿಸ ಬೇಕು; ಮತ್ತು ವಸ್ತಿಯನ್ನು ಒಂದೇ ಸರ್ತಿ ಬಲದ ಕೈಯಿಂದ ಮೆಲ್ಲನೆ ಹಿಂಡಬೇಕು. ಆ ಮೇಲೆ ನಳಿಗೆಯನ್ನು ಹಾಗೆಯೇ ಮೆಲ್ಲಗೆ ಹೊರಗೆ ಎಳೆದು ತೆಗೆಯಬೇಕು. 8, ಯಃ ಸ್ನೇಹೃರ್ದೀಯತೇ ಸ ಸ್ವಾದನುವಾಸನನಾಮಕಃ | ಅನುವಾಸನ ಕಷಾಯಕ್ಷೀರತ್ಕಲೈರ್ಯೋ ನಿರೂಹಃ ಸ ನಿಗದ್ಯತೇ || ನಿರೂಹ ಎಂಬ (ಶಾ. 148.) ವಸ್ತಿಭೇದ. ಸ್ನೇಹಗಳಿಂದ ಕೊಡಲ್ಪಡುವ ವಸ್ತಿ ಯಾವದೋ, ಅದಕ್ಕೆ ಅನುವಾಸನ ಎಂತಲೂ, ಕಷಾಯ, ಹಾಲು, ಮತ್ತು ತೈಲಗಳಿಂದ ಕೊಡಲ್ಪಡುವಂಥಾದ್ದು ಯಾವದೋ, ಅದಕ್ಕೆ ನಿರೂಹ ಎಂತಲೂ ಹೆಸರು ಆಗಿರುತ್ತದೆ.
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೧೯
ಗೋಚರ