ಆ !!
-26-
ರೆಪ್ಪೆಗೂ ಬಿಳೇ ಆಲಿಗೂ 1, ಬಿಳೇ ಆಲಿಗೂ ಕರೇ ಆಲೆಗೂ 1, ಕರೇ ಆಲಿಗೂ ದೃಷ್ಟಿಗೂ 1, ಒಳ ಮೂಲೆಯಲ್ಲಿ (ಮೂಗಿನ ಕಡೆ) 1, ಹೊರ ಮೂಲೆಯಲ್ಲಿ (ಕಡೆಗಣ್ಣಿನಲ್ಲಿ) 1, ಹೀಗೆ 6 ಸಂಧಿಗಳ. ರೆಪ್ಪೆಪಟಲಗಳು 2, ಕಣ್ಣಿನೊಳಗೆ ಬಹು ಕರಿಣವಾದ ತಿಮಿರ, (ಕುರುಡುತನ), ಎಂಬ ವ್ಯಾಧಿಗೆ ಸ್ಥಾನವಾದ ಬೇರೆ 4, ಹೀಗೆ 6 ಪಟಲಗಳು (ಆವರಣ ಗಳು) ಇವೆ. ಆ ನಾಲ್ಕರಲ್ಲಿ ಹೊರಗಿನ 1 ನೇದು ತೇಜಸ್ಸು (ರಕ್ತ) ಮತ್ತು ಜಲಗಳನ್ನೂ, 2ನೇದು ಮಾಂಸವನ್ನೂ, 3ನೇದು ಮೇದಸ್ಸನ್ನೂ, 4ನೇದು ಎಲುಬನ್ನೂ ಆಶ್ರಯಿಸಿರುತ್ತವೆ. ಆ 4 ಪಟಲಗಳ ದಪ್ಪವು ದೃಷ್ಟಿಯ 5ನೇ 1 ಅಂಶದಷ್ಟು ಇದೆ. ಸಿರಾನಾಳಗಳು ಕಂಡರೆ ಗಳು, ಮೇದಸ್ಸು, ಕಪ್ಪು (ಕಾಲಕ ಎಂಬ ಎಲುಬು ಎಂತ ಕೆಲವರು) ಮತ್ತು ಆ ಕಪ್ಪಿನ ನಂತರ ಇರುವ ಸಿರಾನಾಳಗಳಿಂದ ಕೂಡಿದ ಶ್ಲೇಷ್ಮವು, ಕಣ್ಣನ್ನು ಹಿಡಿದು ನಿಲ್ಲಿಸುವ ಹಗ್ಗ ಗಳಾಗಿರುತ್ತವೆ. ಸಿರಾನಾಳಗಳನ್ನನುಸರಿಸಿ ಮೇಲಕ್ಕೆ ಬಂದ ವಾತಾದಿದೋಷಗಳು ವಿಕಾರ ಹೊಂದಿದಾಗ್ಗೆ ನೇತ್ರಭಾಗಗಳಲ್ಲಿ ಅತಿ ಕರಿನವಾದ ರೋಗಗಳು ಹುಟ್ಟುತ್ತವೆ.
ಷರಾ ಉಪಾಂತ್ಯ ಶ್ಲೋಕಕ್ಕೆ 'ಕೃಷ್ಣ ಮಂಡಲವು ಸಿರಾ-ಕಂಡರಾ-ಮೇದಸ್ಸುಗಳಿಂದ ಮತ್ತು ಅದರ ಹೊರಗಿನ ಬಿಳೇ ಗುಡ್ಡೆಯು ಸಿರಾಯುತವಾದ ಕವದಿಂದ ಆಧರಿಸಲ್ಪಟ್ಟಿವೆ' ಎಂತ ಕೆಲವರು ಅರ್ಥ ಬರೆದಿರುವದು ಮಾತ್ರವಲ್ಲದೆ, 'ಕಾಲ ಕಸ್ಯಚ' ಎಂಬಲ್ಲಿ 'ಕೃಷ್ಣಬಂಧನೆ(' ಎಂತಲೂ 'ಗುಣಾಃ' ಎಂಬಲ್ಲಿ 'ಗುಣಃ' ಎಂತಲೂ ಪಾರವಿಟ್ಟಿದ್ದಾರಾಗಿ ನಿ ಸಂ ವ್ಯಾ ಹೇಳುತ್ತದೆ
61. ಹೃದಯ,ಪ್ಲೀಹ,ಫುಪ್ಫುಸ, ಯಕೃತ್ ,ಕ್ಲೋಮಗಳ ಸ್ಥಾನಗಳು ಶೋಣಿತಕಫಪ್ರಸಾದಜಂ ಹೃದಯಂ ಯದಾಶ್ರಯಾ ಹಿಧಮನ್ಯಃ ಪ್ರಾಣವಹಾಃ | ತಸ್ಯಾಧೋ ವಾಮತಃ ಪ್ಲೀಹಾ ಸ್ಥಾನಗಳು ಫುಪ್ಫುಸಶ್ಚ ದಕ್ಷಿಣತೋ ಯಕೃತ್ ಕ್ಲೋಮ ಚ | (ಸು. 321.)
ಶೋಣಿತಕಫಗಳ ಪ್ರಸಾದದಿಂದ ಹೃದಯ ಉಂಟಾಗುವದಾಗಿರುತ್ತದೆ. ಧಮನೀ ಎಂಬ ಪ್ರಾಣನಾಡಿಗಳು ಆ ಹೃದಯವನ್ನು ಆಶ್ರಯಿಸಿಕೊಂಡಿರುತ್ತವೆ. ಅದರ ಕೆಳಗೆ ಎಡ ಭಾಗದಲ್ಲಿ ಪ್ಲೇಹವೂ ಪುಪ್ಪುಸ ಎಂಬ ಎಡ ಶ್ವಾಸಕೋಶವೂ, ಬಲ ಭಾಗದಲ್ಲಿ ಪಿತ್ತಕೋಶವೂ, ಮತ್ತು ಕ್ಲೋಮ ಎಂಬ ಬಲ ಶ್ವಾಸಕೋಶವೂ ಇರುತ್ತವೆ.
62. ಯಕೃತ್, ಸ್ಲೀಹ ,ಫುಪ್ಫುಸ,ಉಂಡುಕಗಳ ಉತ್ಪತ್ತಿ ಗರ್ಭಸ್ಯ ಯಕೃತ್ ಪ್ಲೀಹಾನೌ ಶೋಣಿತಜ್ | ಶೋಣಿತ ಫೇನಪ್ರಭಾವಃ ಫುಪ್ಫುಸ ಶೋಣಿತಕಿಟ್ಟಪ್ರಭವ ಉಂಡುಕಃ (ಸು. 320.)
ಗರ್ಭದಲ್ಲಿ ಶೋಣಿತದಿಂದ ಯಕೃತ್ ಪ್ಲೇಹಗಳೂ, ಶೋಣಿತದ ನೊರೆಯಿಂದ ಫುಪ್ಫುಸವೂ, ಶೋಣಿತದ ಮಡ್ಡಿಯಿಂದ ಉಂಡುಕವೂ ಉಂಟಾಗುತ್ತವೆ
63. ಹೃದಯ ವರ್ಣನ ತದ್ಧೃಯಂ ವಿಶೇಷೇಣ ಚೇತನಾಸಾದ್ಧನಮತಸ್ತಸ್ಮಿನ್ ತಮಸಾವೃತೇ ಸರ್ವಪ್ರಾಣಿನಃ ಸ್ವಪಂತಿ | (ಸು. 321.)
ಆ ಹೃದಯವು ಚೇತನಕ್ಕೆ ಮುಖ್ಯಸ್ಥಾನವಾಗಿರುತ್ತದೆ. ಅದರಲ್ಲಿ ತಮಸ್ಸಿನ ಆವರಣ ಉಂಟಾದರೆ ಸರ್ವ ಪ್ರಾಣಿಗಳು ನಿದ್ರೆ ಹೋಗುತ್ತವೆ.