-27-
64, ಹೃದಯದ ಪುಂಡರೀಕೇಣ ಸದೃಶಂ ಹೃದಯಂ ಸ್ಯಾದಧೋಮುಖಂ | ಆಕಾರ ಜಾಗ್ರತಸ್ತದ್ವಿಕಸತಿ ಸ್ವಪತಶ್ಚ ನಿಮಾಲತಿ | (ಸು. 321.)
ಹೃದಯವು ಕೆಳಮುಖವುಳ್ಳ ತಾವರೆಮೊಗ್ಗೆಯಂತೆ ಇರುವದು. ಎಚ್ಚರವಾಗಿರುವಾಗ್ಗೆ ಅದು ಅರಳಿಕೊಂಡೂ,ನಿದ್ರಾಸ್ಧಿತಿಯಲ್ಲಿ ಮುಚ್ಚಿಕೊಂಡೂ ಇರುತ್ತದೆ.
65 ಹೃದಯದ ಸ್ತನಯೋರ್ಮಧ್ಯಮಧಿಷ್ಟಾಯೋರಸ್ಯಾಮಾಶಯದ್ವಾರಂ ಸ್ಥಾನ ಸತ್ವರಜಸ್ತಮಸಾಮಧಿಷ್ಠಾನಂ ಹೃದಯಂ ನಾಮ |(ಸು. 341)
ಎದೆಯಲ್ಲಿ ಎರಡು ಸ್ತನಗಳಿಗೆ ಮಧ್ಯ, ಆಮಾಶಯದ ಬಾಗಿಲಲ್ಲಿ, ನಿಂತಿರುವ ಸತ್ವರ ಜಸ್ತಮೋಗುಣಗಳ ಮನೆಯು ಹೃದಯ ಎಂಬದು.
66. ತಸ್ಯೋಪಘಾತಾನ್ಮೂರ್ಛಾಯಂ ಭೇದಾನ್ಮರಣಮೃಚ್ಛತಿ ಯದ್ಧಿ ತತ್ಸ್ಪರ್ಶವಿಜ್ಞಾನಂ ಧಾರಿ ತತ್ತತ್ರ ಸಂಶ್ರಿತಂ ||ತತ್ಪರಸೌಯಜಸಃ ಸ್ಧಾನಂ ತತ್ರ ಚೈತನ್ಯಸಂಗ್ರಹಃ | ಹೃದಯಂ ಮಹದರ್ಧಶ್ಚ ತಸ್ಮಾ ಹೃದಯದ ದುಕ್ತಂ ಚಿಕಿತ್ಸಕೈಃ || ತೇನ ಮೂಲೇನ ಮಹತಾ ಮಹಾಮೂಲಾ ಪ್ರಾಮುಖ್ಯ ಮತಾ ದಶ | ಓಟೋವಹಾಃ ಶರೀರೇ ವಾ ವಿಧಮ್ಯಂತೇ ಸಮಂತತಃ || ಯೇನೋಜಸಾ ವರ್ತಯಂತಿ ಪ್ರೀಣಿತಾಃ ಸರ್ವದೇಹಿನಃ | ಯದೃತೇ ಸರ್ವಭೂತಾನಾಂ ಜೀವಿತಂ ನಾವತಿಷ್ಠತೇ || (ಚ. 192-93.)
ಹೃದಯಕ್ಕೆ ಸಮೀಪ ಪೆಟ್ಟು ತಗಲಿದರೆ ಮೂರ್ಛಯೂ, ಕಡಿದರೆ ಮರಣವೂ ಸಂಭ ವಿಸುತ್ತವೆ. ಯಾಕಂದರೆ ಅದನ್ನು ಸ್ಪರ್ಶಜ್ಞಾನವೆಂಬದೂ, ಧಾರಣಶಕ್ತಿಯೆಂಬದೂ, ಆಶ್ರ ಯಿಸಿಕೊಂಡಿರುತ್ತವೆ, ಅದು ಉತ್ಕೃಷ್ಟವಾದ ಓಜಸ್ಸಿನ ಸ್ದಾನ; ಅದರಲ್ಲಿ ಚೇತನಾಶಕ್ತಿ ಗಳು ಸಂಗ್ರಹವಾಗಿರುತ್ತವೆ. ಆದ್ದರಿಂದ ಹೃದಯಕ್ಕೆ ಮಹದರ್ಧ (ಮಹದ್ಧನ)ವೆಂತ ವೈದ್ಯರು ಹೇಳುತ್ತಾರೆ. ಆ ಮಹಾಮೂಲದಿಂದ ಹೊರಡುವ ಹತ್ತು ನಾಡಿಗಳಿಗೆ ಮಹಾ ಮೂಲಗಳೆಂದು ಕರೆಯುತ್ತಾರೆ. ಶರೀರದಲ್ಲೆಲ್ಲಾ ಓಜಸ್ಸನ್ನು (ಅಂದರೆ ಓಜೋಮಯ ವಾದ ರಕ್ತವನ್ನು) ಸಂಚಾರ ಪಡಿಸುವ ಆ ನಾಡಿಗಳನ್ನು ಹೃದಯವು ತಿದಿಯೋಪಾದಿಯಲ್ಲಿ ವಿಶೇಷವಾಗಿ ಊದುತ್ತದೆ. ಆ ಓಜಸ್ಸೆಂಬ ರಕ್ತದಿಂದ ಸರ್ವ ಪ್ರಾಣಿಗಳು ಬಲಗೊಂಡು ಬದುಕುತ್ತವೆ. ಆ ಹೃದಯವಿಲ್ಲದೆ ಯಾವ ಜಂತುವಿಗಾದರೂ ಜೀವವು ನಿಲ್ಲಲಾರದು.
67, ನಾಭಿಸ್ಧಃ ಪ್ರಾಣಪವನಃ ಸ್ಪೃಷ್ಟ್ವಾ, ಹೃತ್ಕಮಲಾಂತರಂ | ಕಂರಾ ಉಚ್ಛ್ವಾಸ ದ್ಬಹಿರ್ವಿನಿರ್ಯಾತಿ ಪಾತುಂ ವಿಷ್ಣುಪದಾಮೃತಂ || ಪೀತ್ವಾ ಚಾಂಬರ ನಿಃಶ್ವಾಸ ಪೀಯೂಷಂ ಪುನರಾಯಾತಿ ವೇಗತಃ | ಪ್ರೀಣಯನ್ ದೇಹಮಖಿ ಲಂ ಜೀವಯನ್ ಜರರಾನಲಂ | (ಶಾ. 16-7.)
ನಾಭಿಸ್ಥಾನವಾಗಿರುವ ಪ್ರಾಣವಾಯುವು ಹೃತ್ಕಮಲದ ಭಾಗವನ್ನು ಮುಟ್ಟಿಕೊಂಡು, ಕಂರದ್ವಾರವಾಗಿ ವಿಷ್ಣುಪಾದಾಮೃತವನ್ನು ಪಾನಮಾಡುವದಕ್ಕೋಸ್ಕರ ಹೊರಗೆ ಹೋಗು