೬ || -28-
ತ್ತದೆ. ಮತ್ತು ಆಕಾಶದ ಅಮೃತವನ್ನು ಕುಡಿದು ಬೇಗನೇ ಹಿಂತಿರುಗಿ ಬಂದು, ಜರರಾಗ್ನಿ ಯನ್ನು ವರ್ಧಿಸಿ, ಇಡೀ ದೇಹವನ್ನು ತೃಪ್ತಿಗೊಳಿಸುತ್ತದೆ.
68. ಸ್ರೋತಸ್ಸುಗಳು ಸ್ರೋತಾಂಸಿ ಖಲು ಪರಿಣಾಮಮಾಪದ್ಯಮಾನಾನಾಂ ಎಂಬದರ ಸಾಮಾನ್ಯ ಅರ್ಥ ಧಾತೂನಾಮಭಿವಾಹೀನಿ ಭವಂತಿ | (ಚ. 259.)
ಸ್ರೋತಸ್ಸುಗಳು ಧಾತುಗಳನ್ನು ಪಾಕವಾದ (ತಯಾರಾದ) ಹಾಗೆ ಸಾಗಿಸಿಕೊಂಡು ಹೋಗುವ ನಾಳಗಳಾಗಿರುತ್ತವೆ
ಸ್ರೋತಾಂಸಿ ಸಿರಾ ಧವನ್ಯೋ ರಸವಾಹಿನ್ಯೋ ನಾಡ್ಯಃ ಪಂಧಾನೋ ಮಾರ್ಗಾ ಶರೀರಛಿದ್ರಾಣಿ ಸಂವೃತಾಸಂವೃತಾನಿ ಸ್ಥಾನಾನಿ ಆಶಯಾಃ ಆಲಯಾಃ ನಿಕೇತಾಶ್ವೇತಿ ಶರೀರಧಾತ್ವವಕಾಶಾನಾಂ ಲಕ್ಷ್ಯಾಲಕ್ಷ್ಯಾಣಾಂ ನಾಮಾನಿ | (ಚ 261.)
ಸ್ರೋತಸ್ಸು, ಸಿರೆ, ಧಮನೀ, ರಸವಾಹಿನೀ, ನಾಡೀ, ಪಂಧಾ, ಮಾರ್ಗ, ಮುಚ್ಚಿರುವ ಅಧವಾ ತೆರೆದಿರುವ ಶರೀರಛಿದ್ರ, ಸ್ಧಾನ, ಆಶಯ, ಆಲಯ, ನಿಕೇತ, ಇವುಗಳೆಲ್ಲ ಶರೀರ ಧಾತುಗಳ ದೃಶ್ಯಾದೃಶ್ಯವಾದ ಎಡೆಗಳ ಹೆಸರುಗಳು.
ಷರಾ ಈ ಅಭಿಪ್ರಾಯದಿಂದ ಚರಕಸಂಹಿತೆಯಲ್ಲಿ ಪ್ರಾಣ, ಸೀರು, ಅನ್ನ, ರಸ, ರಕ್ತ, ಮಾಂಸ, ಮೇದಸ್ಸು, ಎಲುಬು, ಮಜ್ಜೆ, ಶುಕ್ರ, ಮೂತ್ರ, ವುರೀಷ, ಬೆವರು, ಇವುಗಳ ಆಶ್ರಯಸ್ಥಾನಗಳಿಗೆಲ್ಲ ಸ್ರೋತಸ್ಸುಗಳೆಂತಲೇ ಬರೆದು, ಪ್ರಾಣಸ್ರೋತಸ್ಸುಗಳಿಗೆ ಹೃದಯವು ಮೂಲವೆಂತಲೂ, ನೀರಿನ ಸ್ರೋತಸ್ಸಿಗೆ ತಾ ಮತ್ತು ಸ್ಧಾಮ ಮೂಲ ವೆಂತಲೂ, ಅನ್ನದ ಸ್ರೋತಸ್ಸಿಗೆ ಆಮಾಶಯವೂ, ಎಡಪಕ್ಕವೂ, ಮೂಲವೆಂತಲೂ, ರಸದ ಸ್ರೋತಸ್ಸಿಗೆ ಹೃದಯ ಮತ್ತು 10 ಧಮಸೀನಾಡಿಗಳು, ರಕ್ತದ ಸ್ರೋರಸ್ಸಿಗೆ ಯಕೃತ್ತು ಮತ್ತು ಪ್ಲೇಹ, ಮಾಂಸವಾಹಿನೀ ಸ್ರೋತಸ್ಸಿಗೆ ನರ ಮತ್ತು ತೊಗಲು ಮಚ್ಛಾವಾಹಿನೀ ಸ್ರೋತಸ್ಸಿಗೆ ಎಲುಬುಗಳು ಮತ್ತು ತೊಡೆಗಳು, ಶುಕ್ರವಾಹಿನೀ ಸ್ರೋತಸ್ಸಿಗೆ ಅಂಡ ಗಳು ಮತ್ತು ಮೇಢ್ರ, ಮೂತ್ರವಾಹಿನೀ ಸೋತಸ್ಸಿಗೆ ವಸ್ತಿ ಮತ್ತು ಸೊಂಟದ ಕೆಳಬದಿ ಪಕ್ಕಗಳು, ಪುರೀಪವಾಹಿಸೀ ಸ್ರೋತಸ್ಸಿಗೆ ಪಕ್ವಾಶಯ ಮತ್ತು ದೊಡ್ಡ ಗುದ, ಮತ್ತು ಬೆವರಿನ ಸ್ರೋತಸ್ಸಿಗೆ ಮೇದಸ್ಸು ಮತ್ತು ರೋಮಕೂಪಗಳು ಮೂಲಗಳೆಂತ ಸಹ ಕಾಣಿಸಿಯದೆ (ಚ 260-261) ಆದರೆ ಸುಶ್ರುತನ ಮತದಲ್ಲಿ ಧಮನೀ, ಸಿರಾ, ಸ್ರೋತಸ್ಸು ಗಳೆಂಬವು ಬೇರೆ ಬೇರೆ (ಮುಂದಿನ 69 ಮತ್ತು 76 ನೇ ಸಂಖ್ಯೆಗಳನ್ನು ನೋದು )
69.ಧಮನೀ ಸಿರಾ ಅನ್ಯಾ ಏವ ಹಿ ಧಮನ್ಯಃ ಸೋತಾಂಸಿ ಚ ಸಿರಾಭ್ಯಃ ಕಸ್ಮಾ ಸ್ರೋತಸ್ಸು ಗಳ ಭೇದ ದ್ವ್ಯಂಜನಾನ್ಯಾತ್ವಾನ್ಮೂಲಸನ್ನಿಯಮಾತ ಕರ್ಮವೈಶೇಷ್ಯಾ ದಾಗಮಾಚ್ಚ| (ಸು. 355.)
ಧಮನಿಗಳು,ಸ್ರೋತಸ್ಸುಗಳು, ಮತ್ತು ಸಿರಾ ಎಂಬವು ಬೇರೆಬೇರೆಯೇ. ಯಾಕೆಂದರೆ: ಕುರುಹು ಬೇರೆ, ಮೂಲ ಬೇರೆ, ಕೆಲಸ ಬೇರೆ ಸಹ ಇರುವದರಿಂದ, ಮತ್ತು ಶಾಸ್ತ್ರಾಧಾರ ಇರುವದರಿಂದ.
ಷರಾ ಮುಂದೆ ನಂ 78 ನೋಡು
70.ನಾಫಿಯಿಂದ ಚತುರ್ವಿಂಶತಿರ್ಧಮನ್ಯೋ ನಾಭಿಪ್ರಭವಾ ಅಭಿಹಿತಾಃ || ಹೊರಟ ಧಮ ಸಿಗಳ ಸಂಖ್ಯೆ (ಸು.355.)