- 29 - ಆ 11 24 ಧಮನಿಗಳು ನಾಭಿಯಿಂದ ಹೊರಡುವವಾಗಿ ಹೇಳಲ್ಪಟ್ಟಿವೆ. ತಾಸಾಂ ತು ನಾಭಿಪ್ರಭವಾಣಾಂ ಧಮನೀನಾಮೂರ್ಧ್ವಗಾ ದಶ ದಶ ಚಾ ಧೋಗಾಮಿನ್ಯಶ್ವತಸ್ರಸ್ತಿರಗ್ಗಾಃ | (ಸು 355 ) ಆ ಧಮನಿಗಳಲ್ಲಿ ಮೇಲಕ್ಕೆ ಹೋಗುವವು 10, ಕೆಳಕ್ಕೆ ಹೋಗುವವು 10, ಮತ್ತು ಅಡ್ಡ ಹೋಗುವವು 4.
71. ಊರ್ಧ್ವಗಾಃ ಶಬ್ದ -ಸ್ಪರ್ಶ-ರೂಪ-ರಸ-ಗಂಧ-ಪ್ರಶ್ವಾಸೋಚ್ಛ್ವಾಸ-ಜೃಂ ಭಿತ- ಕ್ಷುದ್ಧಸಿತ-ಕಧಿತ ರುದಿತಾದೀನ್ ವಿಶೇಷಾನಭಿವಹಂತ್ಯಃ ಶರೀರಂ ಧಾರಯಂತಿ | ತಾಸ್ತು ಹೃದಯಮಭಿಪ್ರಪನ್ನಾ ಸ್ತ್ರಿಧಾ ಜಾಯಂತೇ ತಾಸ್ತ್ರಿಂಶತ್ | ತಾಸಾಂ ತು ವಾತಪಿತ್ತಕಫಶೋಣಿತರಸಾನ್ ದ್ವೇ ದ್ವೇ ವಹತಸ್ತಾದಶ ಶಬ್ದರೂಪರಸಗಂಧಾನಷ್ಟಾಭಿರ್ಗೃಹ್ಣೀತೇ| ದ್ವಾಭ್ಯಾಂ ಭಾಷತೇ ಚ ದ್ವಾಭ್ಯಾಂ ಘೋಷಂ ಕರೋತಿ ದ್ವಾಭ್ಯಾಂ ಸ್ವ ಪಿತಿ ದ್ವಾಭ್ಯಾಂ ಪ್ರತಿಬುಧ್ಯತೇ | ದ್ವೇ ಚಾಶ್ರುವಾನ್ಯೌ | ದ್ವೇಸ್ತನ್ಯಂ ಸ್ತ್ರಿಯಾ ವಹತಃ ಸ್ತನಸಂಶ್ರಿತೇ | ತೇ ಏವ ಶುಕ್ರಂ ನರಸ್ಯ ಸ್ತನಾಭ್ಯಾ ಮಭಿವಹತಃ | ತಾಸ್ತ್ವೇತಾಸ್ತ್ರಿಂಶತ್ ಸವಿಭಾಗಾ ವ್ಯಾಖ್ಯಾತಾ ಏತಾಭಿ ರೂರ್ಧ್ವಂ ನಾಭೇರುದರಪಾರ್ಶ್ವಪೃಷ್ಠೋರಃಸ್ಕಂಧ ಗ್ರೀವಾ ಬಾಹ ವೋ ಧಾರ್ಯಂತೇ ಯಾಪ್ಯಂತೇ ಚ | (ಸು. 355-56.)
ಮೇಲೆ ಹೋಗುವ ಧಮನಿಗಳು ಶಬ್ದ, ಸ್ಪರ್ಶ, ರೂಪ, ರಸ, ಗಂಧ (ಕಿವಿ, ಚರ್ಮ, ಕಣ್ಣು, ನಾಲಿಗೆ, ಮೂಗು) ಇವುಗಳ ಜ್ಞಾನ, ಉಸುರು ಎಳೆಯುವದು, ಉಸುರು ಬಿಡುವದು, ಆಕಳಿಕೆ, ಹಸಿವು, ನಗೆ, ಮಾತು, ಅಳುವಿಕೆ, ಇವೇ ಮೊದಲಾದ ವಿಶೇಷಗಳನ್ನು ನಡಿಸುತ್ತಾ, ಶರೀರವನ್ನು ಆಧರಿಸುತ್ತವೆ. ಮತ್ತು ಅವು ಹೃದಯವನ್ನು ಸೇರಿದ ಮೇಲೆ, ಮೂರು ಮೂರಾಗಿ ಹೊರಟು ಮೂವತ್ತಾಗುತ್ತವೆ. ಆ ಮೂವತ್ತರಲ್ಲಿ ವಾತ ಪಿತ್ತ, ಕಫ, ರಕ್ತ, ರಸ, ಇವುಗಳನ್ನು ವಹಿಸುವಂಧವು ಎರಡೆರಡರಂತೆ 10. ಶಬ್ದ, ರೂಪ, ರಸ, ಗಂಧಗಳನ್ನು ಒಂದ ಕ್ಕೆರಡರ ಪ್ರಕಾರ, ಎಂಟು ಧಮನಿಗಳು ಹಿಡಿಯುತ್ತವೆ. ಎರಡರಿಂದ ಮಾತಾಡುವದು, ಎರಡರಿಂದ ಶಬ್ದಮಾಡುವದು, ಎರಡರಿಂದ ನಿದ್ದೆಹೋಗುವದು, ಎರಡರಿಂದ ಎಚ್ಚರವಾಗುವದು, ಎರಡು ಕಣ್ಣನೀರು ಸುರಿಸುವವು, ಎರಡು ಸ್ತ್ರೀಯರ ಮೊಲೆಗಳಲ್ಲಿ ನಿಂತು ಹಾಲು ಉಂಟುಮಾಡುವವು, ಅದೇ ಎರಡು ಗಂಡಸರ ಸ್ತನಗಳಿಂದ ಶುಕ್ರವನ್ನು ಸಾಗಿಸುತ್ತವೆ. ಹೀಗೆ 30 ಮತ್ತು ಅವುಗಳ ಭೇದಗಳು. ಈ 30ರಿಂದ ನಾಭಿಯ ಮೇಲ್ಗಡೆಯ ಹೊಟ್ಟೆ, ಪಕ್ಕಗಳು, ಬೆನ್ನು, ಎದೆ, ಮುಂಡ, ಕೊರಳು ಮತ್ತು ಕೈಗಳು, ಇವುಗಳ ಧಾರಣೆ (ನಿಲ್ಲುವಿಕೆ) ಮತ್ತು ಪ್ರವರ್ತನೆ, ಅಂದರೆ ಸ್ಥಿತಿಗತಿಗಳು ಉಂಟಾಗುತ್ತವೆ
72.ಅಧೋಗತಾಸ್ತು ವಾತಮೂತ್ರಪುರೀಷಶುಕ್ರಾರ್ತವಾದೀನ್ಯಧೋ ವಹಂತಿ | ತಾಸ್ತು ಪಿತ್ತಾಶಯಮಭಿ ಪ್ರತಿಪನ್ನಾಸ್ತತ್ರಸ್ಧಮೇವಾನ್ನ